ಪಾಕಿಸ್ತಾನ ಯಾರೊಬ್ಬರ ಯುದ್ಧದ ಭಾಗವಾಗುವುದಿಲ್ಲ: ಅಮೆರಿಕ-ಇರಾನ್ ಬಿಕ್ಕಟ್ಟು ಕುರಿತು ಇಮ್ರಾನ್ ಪ್ರತಿಕ್ರಿಯೆ

Source Credit Kannada Prabha

Source : UNI

ಇಸ್ಲಾಮಾಬಾದ್: ಅಮೆರಿಕ ಮತ್ತು ಇರಾನ್ ನಡುವಿನ ಬಿಕ್ಕಟ್ಟು ಪರಿಹಾರಕ್ಕೆ ಮಧ್ಯಸ್ಥಿಕೆ ವಹಿಸುವುದಾಗಿ ಹೇಳಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಪಾಕಿಸ್ತಾನ ಯಾರೊಬ್ಬರ ಯುದ್ಧದ ಭಾಗವಾಗದೆ ಎರಡೂ ದೇಶಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಪ್ರಯತ್ನಿಸುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.

‘ನಾವು ಇರಾನ್ ಮತ್ತು ಅಮೆರಿಕ ನಡುವೆ ಸ್ನೇಹ ಬಾಂಧವ್ಯ ಪುನರ್ ಸ್ಥಾಪಿಸಲು ಪ್ರಯತ್ನಿಸುತ್ತೇವೆ. ಅಮೆರಿಕ ಮತ್ತು ಇರಾನ್ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಯುವಂತಾಗಲು ಪಾಕಿಸ್ತಾನ ಮಧ್ಯಸ್ಥಿಕೆ ವಹಿಸಲು ಸಿದ್ಧವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ತಿಳಿಸಲಾಗಿದೆ.’ ಎಂದು ಇಮ್ರಾನ್ ಖಾನ್ ಹೇಳಿಕೆಯನ್ನು ಉಲ್ಲೇಖಿಸಿ ಡಾನ್ ಪತ್ರಿಕೆ ವರದಿ ಮಾಡಿದೆ.

‘ಪಾಕಿಸ್ತಾನ ಈ ಹಿಂದೆ ಮತ್ತೊಂದು ದೇಶದ ಯುದ್ಧದಲ್ಲಿ ಭಾಗಿಯಾಗಿ ತಪ್ಪು ಮಾಡಿರುವುದರಿಂದ ಮತ್ತೆ ಇನ್ನೊಂದು ದೇಶದ ಯುದ್ಧದಲ್ಲಿ ಭಾಗಿಯಾಗಲು ಇಚ್ಛಿಸುವುದಿಲ್ಲ.’ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

Source Credit Kannada Prabha

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಕೇವಲ 10 ದಿನದಲ್ಲಿ ತೂಕ ಹೆಚ್ಚಿಸಿಕೊಳ್ಳಲು ಇದೆರೆಡನ್ನು ತೆಹೆದುಕೊಳ್ಳಿ ಸಾಕು..

Sun Jan 12 , 2020
Source Credit RJ News Kannada ಕೇವಲ 10 ದಿನದಲ್ಲಿ ತೂಕ ಹೆಚ್ಚಿಸಿಕೊಳ್ಳಲು ಇದೆರೆಡನ್ನು ತೆಹೆದುಕೊಳ್ಳಿ ಸಾಕು.. ಈಗಿನ ಕಾಲದಲ್ಲಿ ದಪ್ಪಗೆ ತೂಕ ಹೆಚ್ಚಿರುವವರು ತೆಳ್ಳಗೆ ಆಗ್ಬೇಕು ಅಂತ ಏನೆಲ್ಲಾ ಕಷ್ಟ ಪಡ್ತಾರೆ.. ಅದೇ ರೀತಿ ತೆಳ್ಳಗೆ ಇರುವವರೂ ಕೂಡ ದಪ್ಪಗೆ ಆಗಬೇಕು ಅಂತ ಬಹಳ ಒದ್ದಾಡ್ತಾರೆ.. ಅಂತವರಿಗಾಗಿ ಈ ಮಾಹಿತಿ.. ಸಂಪೂರ್ಣವಾಗಿ ನೋಡಿ.. ತೆಳ್ಳಗಿರೋರು ಫ್ಯಾಟ್ ಐಟಂ ತಿಂದು ತೂಕ ಹೆಚ್ಚಿಸಿಕೊಳ್ಳಲು ಪ್ರಯತ್ನ ಪಡುತ್ತಾರೆ.. ಆದರೆ ಆ ರೀತಿ‌ ಮಾಡೋದ್ರಿಂದ ಹೊಟ್ಟೆಯಲ್ಲಿ‌ ಬೊಜ್ಜು ಹೆಚ್ಚಾಗುತ್ತದೆಯೇ ಹೊರತು ದಪ್ಪ ಆಗಲು ಸಾಧ್ಯವಿಲ್ಲ.. ತೆಳ್ಳಗಿದ್ದೀನಿ ಅಂತ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links