ಪಾಕಿಸ್ತಾನದ ಮೊಟ್ಟ ಮೊದಲ ಸಿವಿಲ್ ಜಡ್ಜ್ ಆಗಿ ದಾಖಲೆ ಬರೆದ ಹಿಂದೂ ಯುವತಿ

Source Credit Kannada Prabha

Source : Online Desk

ಕರಾಚಿ: ಪಾಕಿಸ್ತಾನದಲ್ಲಿ ಮೊಟ್ಟ ಮೊದಲ ಸಿವಿಲ್ ಜಡ್ಜ್ ಆಗಿ ಹಿಂದೂ ಯುವತಿಯೊಬ್ಬಳು ನೇಮಕವಾಗುವ ಮೂಲಕ ದಾಖಲೆ ನಿರ್ಮಿಸಿದ್ದಾಳೆ.

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರುವ ಸುಮನ್ ಪವನ್ ಬೋಡಾನಿ ತನ್ನ ಸಮುದಾಯದ ಮೊಟ್ಟ ಮೊದಲ ಜಡ್ಜ್ ಆಗಿ ನೇಮಕಗೊಂಡಿದ್ದಾರೆ. ಸುಮನ್ ಸಿಂಧ್ ಪ್ರಾಂತ್ಯಕ್ಕೆ ಸೇರಿರುವ ಶಹದಾದ್ ಕೋಟ್ ನಿವಾಸಿಯಾಗಿದ್ದಾರೆ. ಸಿವಿಲ್ ಜಡ್ಜ್ ಗಳ ಶ್ರೇಯಾಂಕ ಪಟ್ಟಿಯಲ್ಲಿ ಸುಮನ್ 54ನೇ ಸ್ಥಾನ ಪಡೆದುಕೊಂಡಿದ್ದಾರೆ. 

ಸುಮನ್ ಅವರು ಭಾರತದ ಹೈದ್ರಾಬಾದ್ ನಲ್ಲಿ LLB ಪದವಿ ಪಡೆದಿದ್ದು, ಬಳಿಕ ಕರಾಚಿಯಲ್ಲಿ LLM ಪದವಿ ಪಡೆದುಕೊಂಡಿದ್ದರು. ಅಲ್ಲಿನ ಶಹೀದ್ ಜುಲ್ಫಿಕರ್ ಅಲಿ ಭುಟ್ಟೋ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಮತ್ತು ಟೆಕ್ನಾಲಾಜಿಯಲ್ಲಿ ತಮ್ಮ LLM ಪದವಿ ಮುಗಿಸಿದ್ದಾರೆ. ಬಳಿಕ ಲಾ ಸಂಸ್ಥೆಯೊಂದರಲ್ಲಿ ಎರಡು ವರ್ಷ ಪ್ರ್ಯಾಕ್ಟಿಸ್ ನಡೆಸಿದ್ದರು.

Source Credit Kannada Prabha

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಕರೋನಾ ವೈರಸ್ ಪೀಡಿತ ವುಹಾನ್ ನಿಂದ ಮಾಲ್ಡೀವ್ಸ್ ಪ್ರಜೆಗಳ ರಕ್ಷಣೆ; ಭಾರತಕ್ಕೆ ಧನ್ಯವಾದ ಹೇಳಿದ ಅಧ್ಯಕ್ಷ ಸೋಲಿಹ್

Mon Feb 3 , 2020
Source Credit Kannada Prabha Source : ANI ನವದೆಹಲಿ: ಮಾರಣಾಂತಿಕ ಕರೋನಾ ವೈರಸ್ ಪೀಡಿತ ಚೀನಾದ ವುಹಾನ್ ನಿಂದ ಮಾಲ್ಡೀವ್ಸ್ ಪ್ರಜೆಗಳನ್ನು ರಕ್ಷಿಸಿದ ಭಾರತಕ್ಕೆ ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮಹಮದ್ ಸೋಲಿಹ್ ಧನ್ಯವಾದ ಹೇಳಿದ್ದಾರೆ. ಇಂದು ವೈರಸ್ ಪೀಡಿತ ವುಹಾನ್ ನಿಂದ ಭಾರತದ ಏರ್ ಇಂಡಿಯಾದ ಬೋಯಿಂಗ್ 747 ವಿಮಾನ 324 ಮಂದಿಯನ್ನು ಸುರಕ್ಷಿತವಾಗಿ ಭಾರತಕ್ಕೆ ರವಾನೆ ಮಾಡಿತ್ತು. ಈ ಪೈಕಿ 7 ಮಂದಿ ಮಾಲ್ಡೀವ್ಸ್ ಪ್ರಜೆಗಳಾಗಿದ್ದರು. ಇದೀಗ ಇದೇ ಕಾರಣಕ್ಕೆ ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮಹಮದ್ ಸೋಲಿಹ್ ಭಾರತಕ್ಕೆ ಧನ್ಯವಾದ ಹೇಳಿದ್ದಾರೆ. […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links