ನಿಮಗೇಗೆ ಆ ಧರ್ಮದ ಮೇಲೆ ದ್ವೇಷ?: ಬಿಎಸ್‌ವೈ ವಿರುದ್ಧ ಸಿದ್ದು ಕಿಡಿ

Source Credit Oneindia.com

Bagalkot

oi-Amith

|

ಬಾದಾಮಿ, ಡಿಸೆಂಬರ್ 6: ಟಿಪ್ಪು ಜಯಂತಿಯನ್ನು ರದ್ದುಗೊಳಿಸಿದ ಬಿಜೆಪಿ ಸರ್ಕಾರ ಮತ್ತು ಮುಖ್ಯಮಂತ್ರಿ ವಿರುದ್ಧ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ತಾಲ್ಲೂಕಿನ ಹೊಸೂರಿನಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಸಾಮ್ರಾಟ ಅಶೋಕನ ರೀತಿಯೇ ಹೈದರಾಲಿ, ಟಿಪ್ಪು ಸುಲ್ತಾನ್ ಕೂಡ ಅರಸರು. ಟಿಪ್ಪು ಬ್ರಿಟಿಷರ ವಿರುದ್ಧ ನಾಲ್ಕು ಬಾರಿ ಯುದ್ಧ ಮಾಡಿದ್ದರು. ಅಂತಹವರ ಜಯಂತಿಯನ್ನೇ ನಿಲ್ಲಿಸಿಬಿಟ್ಟಿರಲ್ಲ ಯಡಿಯೂರಪ್ಪ. ಯಾಕ್ರೀ ನಿಮಗೆ ಆ ಧರ್ಮದ ಮೇಲೆ ದ್ವೇಷ. ಅವರು ಮನುಷ್ಯರಲ್ಲವಾ?’ ಎಂದು ಪ್ರಶ್ನಿಸಿದರು.

‘ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಮಾಡಿದ್ದು ನಾನು. ಏನು ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಮಾಡಿದ್ರಾ? ಕೆಂಪೇಗೌಡ ಜಯಂತಿ ಮಾಡಿದ್ದು ನಾನು. ದೇವೇಗೌಡ, ಕುಮಾರಸ್ವಾಮಿ ಮಾಡಿದ್ರಾ? ಹಾಗೆಯೇ ಟಿಪ್ಪು ಜಯಂತಿ ಮಾಡಿದ್ದೆ. ಆದರೆ ಯಡಿಯೂರಪ್ಪ ಬಂದು ಅದನ್ನು ನಿಲ್ಲಿಸಿಬಿಟ್ರು. ಆ ಸಮುದಾಯದವರು ಏನು ಮಾಡಿದ್ದಾರೆ ಪಾಪ’ ಎಂದು ಕಿಡಿಕಾರಿದರು.

ಇದೆಲ್ಲವೂ ಬಿಜೆಪಿಯವರ ರಾಜಕೀಯ ಗಿಮಿಕ್. ಏನ್ಮಾಡೋದು ಆದರೂ ಜನರು ಅವರಿಗೆ ವೋಟ್ ಹಾಕ್ತಾರೆ. ನನಗೆ ಇದು ಅರ್ಥ ಆಗ್ತಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಐದು ತಿಂಗಳಾದರೂ ಮೂರು ಕಾಸಿನ ಕೆಲಸ ಮಾಡಿದ್ದಾರಾ? ಶಾಸಕರನ್ನು ದೊಡ್ಡು ಕೊಟ್ಟು ಖರೀದಿ ಮಾಡೋದು ಬಿಟ್ಟು ಬೇರೇನೂ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ಇವರು ಪರ್ಮನೆಂಟ್ ಸಿಎಂ ಆಗಿರ್ತಾರಾ?

‘ಸಿದ್ದರಾಮಯ್ಯ ಪರ್ಮನೆಂಟ್ ವಿರೋಧಪಕ್ಷದ ನಾಯಕ ಎಂದು ಯಡಿಯೂರಪ್ಪ ಹೇಳ್ತಾರೆ. ಇವರೇನು ಪರ್ಮನೆಂಟ್ ಸಿಎಂ ಆಗಿರ್ತಾರಾ? ಜನರು ಬುದ್ಧಿವಂತರಾಗಬೇಕು. ಇಲ್ಲದಿದ್ದರೆ ಇಂತಹವರ ಕೈಗೆ ಅಧಿಕಾರ ಸಿಕ್ಕಿಬಿಡುತ್ತದೆ’ ಎಂದರು.

ನಾನು ಸಿಎಂ ಆಗುತ್ತೇನೆಂದು ಹೇಳಿಲ್ಲ

ನಾನೇ ಮುಂದಿನ ಸಿಎಂ ಆಗುತ್ತೇನೆ ಅಂತ ಹೇಳಿದ್ದೇನೆಂದು ಬಿಜೆಪಿಯವರು ನನ್ನ ವಿರುದ್ಧ ಸುಳ್ಳು ಹೇಳುತ್ತಿದ್ದಾರೆ. ಉಪಚುನಾವಣೆಯ ನಂತರ ಮುಖ್ಯಮಂತ್ರಿ ಆಗ್ತೇನೆ ಅಂತ ನಾನು ಎಲ್ಲೂ ಕೂಡ ಹೇಳಿಲ್ಲ. ಉಪಚುನಾವಣೆಯ ನಂತರ ಯಡಿಯೂರಪ್ಪ ರಾಜೀನಾಮೆ ಕೊಡಬೇಕಾಗುತ್ತದೆ ಎಂದಷ್ಟೇ ಹೇಳಿದ್ದು ಎಂದು ಹೇಳಿದರು.

ಕುರ್ಚಿಗೆ ಬಂದು ಕುಳಿತುಬಿಟ್ಟ ಗಿರಾಕಿ

ನಾನು ಅಧಿಕಾರದಲ್ಲಿದ್ದಾಗ ಎಲ್ಲಾ ಬಡವರಿಗೂ ಸಹಾಯ ಮಾಡಿದ್ದೆ. ಅನ್ನಭಾಗ್ಯ, ಕೃಷಿ ಭಾಗ್ಯ, ಸಾಲ ಮನ್ನಾ, ಕ್ಷೀರ ಧಾರೆ, ಶೂ ಭಾಗ್ಯ, ಶಾದಿ ಭಾಗ್ಯ ನೀಡಿದ್ದೆ. ಎಲ್ಲವನ್ನೂ ನಾನೇ ಮಾಡಿದ್ದು. ಇವನೇನು ಮಾಡಿದ್ದಾನೆ? ವೋಟ್ ಮಾತ್ರ ಬಿಜೆಪಿಗೆ ಹಾಕುತ್ತೀರಿ. ಇವ್ರೇನು (ಬಿಜೆಪಿ) 113 ಸೀಟು ಗೆದ್ದಿದ್ದರಾ? ಗೆದ್ದಿದ್ದು 104 ಸೀಟು ಮಾತ್ರ. ಆದರೂ ಸಿಎಂ ಕುರ್ಚಿಗೆ ಬಂದು ಕುಳಿತುಬಿಟ್ಟ ಗಿರಾಕಿ. ಹುಚ್ಚನ ಮದುವೆಯಲ್ಲಿ ಉಂಡವನೇ ಜಾಣ ಎಂಬಂತೆ ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.

ಸಮೀಕ್ಷೆ ಸತ್ಯವಾಗುವುದಿಲ್ಲ

ಉಪಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ ಸಿಗುತ್ತದೆ ಎಂಬ ಎಕ್ಸಿಟ್ ಪೋಲ್ ವರದಿಗಳನ್ನು ಅವರು ನಿರಾಕರಿಸಿದರು. ಹರಿಯಾಣ, ಮಹಾರಾಷ್ಟ್ರದಲ್ಲಿ ಸಮೀಕ್ಷೆಗಳು ಏನಾದವು? ಎಲ್ಲಾ ತಲೆಕೆಳಗಾಯಿತು. ಸಮೀಕ್ಷೆಗಳೆಲ್ಲಾ ಸತ್ಯವಾಗಿಬಿಟ್ಟಿದ್ದಾವಾ? ಅಂದಾಜು ಮಾಡಿ ಹೇಳುತ್ತಾರೆ ಅಷ್ಟೇ. ಆದ್ದರಿಂದ ನಾನು ಸಮೀಕ್ಷೆ ನಂಬುವುದಿಲ್ಲ. ಡಿ. 9ಕ್ಕೆ ಫಲಿತಾಂಶ ಪ್ರಕಟವಾಗುತ್ತದೆ. ಜನರು ಏನು ತೀರ್ಪು ಕೊಡುತ್ತಾರೆ ಗೊತ್ತಾಗುತ್ತದೆ ಎಂದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ – ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.

Allow Notifications

You have already subscribed

Source Credit Oneindia.com

Niranthara News

Leave a Reply

Your email address will not be published. Required fields are marked *

Next Post

ಪೊಲೀಸ್ ಪಾತ್ರಗಳಿಗೆ ಫೇಮಸ್ ಎಸ್ಕಾರ್ಟ್ ಶ್ರೀನಿವಾಸ್

Sat Dec 7 , 2019
Source Credit Filmibeat.com Pin it Email https://nirantharanews.com/%e0%b2%a8%e0%b2%bf%e0%b2%ae%e0%b2%97%e0%b3%87%e0%b2%97%e0%b3%86-%e0%b2%86-%e0%b2%a7%e0%b2%b0%e0%b3%8d%e0%b2%ae%e0%b2%a6-%e0%b2%ae%e0%b3%87%e0%b2%b2%e0%b3%86-%e0%b2%a6%e0%b3%8d%e0%b2%b5%e0%b3%87/#ZXNjb3J0LTEtMTU ಕಲಾರಂಗಕ್ಕೆ ನಿಮ್ಮ ಪ್ರವೇಶ ಹೇಗಾಯಿತು? ಕಾಲೇಜ್ ದಿನಗಳಿಂದಲೇ ಸಿನಿಮಾದಲ್ಲಿ ನಟಿಸುವ ಆಸೆಯಿತ್ತು. 1986ರಲ್ಲಿ ಗಂಗೇಗೌಡರ ಮೂಲಕ ಎ.ಎಸ್ ಮೂರ್ತಿಯವರ ಚೆಂದುಳ್ಳಿ ಚೆಲುವೆಯವರ ನಾಟಕದಲ್ಲಿ ನಾಯಕನಾದೆ. ಬಳಿಕ ಬೇರೆ ಬೇರೆ ನಾಟಕಗಳಲ್ಲಿ ಅವಕಾಶ ಸಿಗುತ್ತಿತ್ತು. ಆದರೆ ಮೊದಲ ಸಣ್ಣಪುಟ್ಟ ಪಾತ್ರಗಳನ್ನಷ್ಟೇ ನೀಡುತ್ತಿದ್ದರು. ಕೃಷ್ಣರಾಜೇಂದ್ರ ಕಲಾಸಂಘದಲ್ಲಿ ಒಂದಷ್ಟು ಹುಡುಗರಿದ್ದೆವು. ಕಲಾಪುಂಜ ತೇಜಸ್ವಿ ಕಲಾವಿದರು ಎನ್ನುವ ಸಂಸ್ಥೆಯೊಂದನ್ನುಸ್ಥಾಪಿಸಿದೆವು. ಹಾಸ್ಯಕ್ಕೆ ಸಂಬಂಧಿಸಿದ `ಮುದುಕನ ಮದುವೆ’ಯಂಥ ಹಲವಾರು ನಾಟಕಗಳನ್ನು ಮಾಡಿದೆವು. ಮಾಸ್ಟರ್ ಹಿರಣ್ಣಯ್ಯನವರು ಪೇಪರ್ ಓದಿ ಆಗಿನ ಸನ್ನಿವೇಶಗಳನ್ನು ನಾಟಕಗಳಲ್ಲಿ ಬಳಸುವಂತೆ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links