ನಾವು ಬಂಧನ ಕೇಂದ್ರಗಳಿಗೆ ಹೋಗಲು ಸಿದ್ಧ: ಹರ್ಷ ಮಂದರ್

Source Credit NewsKannada.com

ನಾವು ಬಂಧನ ಕೇಂದ್ರಗಳಿಗೆ ಹೋಗಲು ಸಿದ್ಧ: ಹರ್ಷ ಮಂದರ್


HSA
  ¦   


Jan 15, 2020 07:47:51 PM (IST)

ಮಂಗಳೂರು: ಕಣ್ಣೂರಿನ ಅಡ್ಯಾರ್ ಶಾ ಮೈದಾನದಲ್ಲಿ ಇಂದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಂ ಸೆಂಟ್ರಲ್ ಸಮಿತಿಯು ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ ಆರ್ ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್ ಪಿಆರ್) ವಿರುದ್ಧ ಬೃಹತ್ ಪ್ರತಿಭಟನೆ ಶಾಂತಿಯುತವಾಗಿ ನಡೆಯಿತು.

ಪ್ರತಿಭಟನಾ ಸಭೆಯ ಮುಖ್ಯ ಅತಿಥಿಯಾಗಿ ಮಾತನಾಡಿದ ಮಾಜಿ ಐಎಎಸ್ ಅಧಿಕಾರಿ ಹಾಗೂ ಸಾಮಾಜಿಕ ಕಾರ್ಯಕರ್ತ ಹರ್ಷ ಮಂದರ್, ಧರ್ಮದ ಆಧಾರದಲ್ಲಿ ಪ್ರಜೆಯೆಂದು ಸಾಬೀತು ಪಡಿಸಲು ಸರ್ಕಾರ ದಾಖಲೆ ಕೇಳಿದರೆ ನಾವು ಬಂಧನ ಕೇಂದ್ರಗಳಿಗೆ ಹೋಗಲು ತಯಾರಾಗಿದ್ದೇವೆ. ಸರ್ಕಾರವು ಎನ್ ಆರ್ ಸಿ ಜಾರಿ ಮಾಡುವಾಗ ಮುಸ್ಲಿಂ ಸಮುದಾಯದವರನ್ನು ಗುರಿ ಮಾಡಬಾರದು. ನಾನು ಇಂತಹ ಸಂದರ್ಭದಲ್ಲಿ ಯಾವುದೇ ದಾಖಲೆ ನೀಡಲಾರೆ ಮತ್ತು ಬಂಧನ ಕೇಂದ್ರಕ್ಕೆ ಹೋಗಲು ತಯಾರಾಗಿದ್ದೇನೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಭಿನ್ನ ಹೇಳಿಕೆ ನೀಡುತ್ತಾ ಜನರನ್ನು ಮೋಸ ಮಾಡುತ್ತಿದ್ದಾರೆ. ಮೋದಿ ಅವರು ಎನ್ ಆರ್ ಸಿ ಜಾರಿ ಮಾಡಲ್ಲವೆಂದರೆ, ಅಮಿತ್ ಶಾ ಇದನ್ನು ಖಂಡಿತವಾಗಿಯೂ ಜಾರಿ ಮಾಡಲಾಗುವುದು ಎನ್ನುತ್ತಾರೆ. ಎನ್ ಆರ್ ಸಿ ಜಾರಿ ಮಾಡುವ ಉದ್ದೇಶ ಹಿಂದೂ ಧರ್ಮದವರನ್ನು ರಕ್ಷಿಸುವುದು ಮತ್ತು ಮುಸ್ಲಿಮರನ್ನು ಓಡಿಸುವುದು ಎಂದು ಮಾನವ ಹಕ್ಕು ಹೋರಾಟಗಾರ ಶಿವಸುಂದರ್ ತಿಳಿಸಿದರು.

ನಿವೃತ್ತ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್, ವಕೀಲ ಸುಧೀರ್ ಕುಮಾರ್ ಮರೋಳಿ ಇದೇ ವೇಳೆ ಪ್ರತಿಭಟನೆ ವೇಳೆ ಮಾತನಾಡಿದರು.

ಸಾವಿರಾರು ಮಂದಿ ಪ್ರತಿಭಟನಾಕಾರರು ಸಭೆಯಲ್ಲಿ ಅಜಾದಿ ಎಂದು ಘೋಷಣೆ ಕೂಗುತ್ತಿದ್ದರು. ಇದೇ ವೇಳೆ ರಾಷ್ಟ್ರಧ್ವಜವನ್ನು ಕೈಯಲ್ಲಿ ಹಿಡಿದುಕೊಂಡು ಪ್ರಧಾನಿ ವಿರುದ್ಧ ಘೋಷಣೆ ಕೂಗಿದರು.

Source Credit NewsKannada.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಬಿಗ್ ಬಾಸ್ ಮನೆಯಿಂದ ಬಂದವರೆಲ್ಲಾ ಶೈನ್ ತಾಯಿನ ಭೇಟಿ ಮಾಡ್ತಾ ಇರೋದೇಕೆ ಗೊತ್ತಾ?

Wed Jan 15 , 2020
Source Credit RJ News Kannada ಬಿಗ್ ಬಾಸ್ ಮನೆಯಲ್ಲಿ ಸದ್ಯ ಫಿನಾಲೆ ಸ್ಪರ್ಧಿಗಳಲ್ಲಿ ಒಬ್ಬರು ಎನ್ನಲಾಗುತ್ತಿರುವ ಶೈನ್ ಶೆಟ್ಟಿ ಅವರ ತಾಯಿ ಬಿಗ್ ಬಾಸ್ ಮನೆಗೆ ಹೋಗಿ ಬಂದ ನಂತರ ಈಗಾಗಲೇ ಬಿಗ್ ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದಿರುವ ರಕ್ಷಾ ಸೋಮಶೇಖರ್, ಚಂದನ, ಚೈತ್ರಾ ಕೊಟ್ಟೂರ್ ಭೇಟಿ ಯಾಗಿದ್ದಾರೆ.. Pin it Email https://nirantharanews.com/%e0%b2%a8%e0%b2%be%e0%b2%b5%e0%b3%81-%e0%b2%ac%e0%b2%82%e0%b2%a7%e0%b2%a8-%e0%b2%95%e0%b3%87%e0%b2%82%e0%b2%a6%e0%b3%8d%e0%b2%b0%e0%b2%97%e0%b2%b3%e0%b2%bf%e0%b2%97%e0%b3%86-%e0%b2%b9%e0%b3%8b/#UGhvdG9HcmlkXzE ಹೌದು ಶೈನ್ ಅವರ ಅಭಿಮಾನಿಯೊಬ್ಬರು ಶೈನ್ ತಾಯಿ ಅವರನ್ನು ಊಟಕ್ಕೆ ಆಹ್ವಾನಿಸಿದ್ದರು.. ಆದರೆ ಶೈನ್ ಅವರ ತಾಯಿ ಚೈತ್ರಾ, ಚಂದನ ಹಾಗೂ ರಕ್ಷಾರಿಗೆ ಫೋನ್ ಮಾಡಿ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links