ನಾಳೆ ಅಪರೂಪದ ಕಂಕಣ ಸೂರ್ಯಗ್ರಹಣ; ನೋಡಬೇಕೋ? ಬೇಡವೋ?

Source Credit Oneindia.com

ನೋಡಬೇಕೋ ಬೇಡವೋ?

ಖಂಡಿತವಾಗಿಯೂ ಈ ಕಂಕಣ ಸೂರ್ಯಗ್ರಹಣವನ್ನು ನೋಡದೇ ಇರುವುದು ಒಳ್ಳೆಯದು. ಏಕೆಂದರೆ, ಇದು ಸೂರ್ಯಗ್ರಹಣವಾಗಿರುವುದರಿಂದ ಬರಿಗಣ್ಣಿನಿಂದ ನೊಡಿದರೆ ಕಣ್ಣಿನ ಮೇಲೆ ಗಂಭೀರವಾದ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಎಲ್ಲರಿಗೂ ಟೆಲಿಸ್ಕೂಪ್‌ನಿಂದ ನೋಡಲು ಆಗುದಿಲ್ಲವಾದ್ದರಿಂದ ನೋಡದೇ ಇರುವುದು ಒಳಿತು ಎಂಬುದು ತಜ್ಞರ ಅಭಿಪ್ರಾಯ.

ಹೇಗೆ ನೋಡುವುದು?

ವೈಜ್ಞಾನಿಕವಾಗಿ ಗ್ರಹಣಗಳನ್ನು ನೋಡುವುದರಲ್ಲಿ ಯಾವುದೇ ತೊಂದರೆ ಇಲ್ಲ. ಆದರೆ, ಗ್ರಹಣವನ್ನು ನೋಡಬಹುದು ಎಂದರೆ ಸಾಕಷ್ಟು ಜನ ಬರಿಗಣ್ಣಿನಿಂದಲೇ ನೋಡಲು ಪ್ರಯತ್ನಿಸುವುದುಂಟು. ಸೂರ್ಯಗ್ರಹಣ ಸಮಯದಲ್ಲಿ ಸೂರ್ಯನಿಂದ ಹೊರಹೊಮ್ಮುವ ಅತಿ ನೇರಳಾತಿತ ಕಿರಣಗಳು ಹತ್ತು ಪಟ್ಟು ಪರಿಣಾಮಕಾರಿಯಾಗಿರುವುದಿಂದ ಬರಿಗಣ್ಣಿನಲ್ಲಿ ನೋಡಲು ಆಗುವುದಿಲ್ಲ. ಅಷ್ಟಕ್ಕೂ ಈ ಗ್ರಹಣವನ್ನು ನೋಡಲೇಬೇಕು ಎನ್ನುವವರು ಟೆಲಿಸ್ಕೋಪ್‌ನಲ್ಲಿ ನೋಡಬಹುದು. ಬೆಂಗಳೂರಿನ ನೆಹರು ತಾರಾಲಯದಲ್ಲಿ ನಾಳಿನ ಸೂರ್ಯಗ್ರಹಣ ವಿಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

ಗ್ರಹಣ ಸಮಯ ಯಾವುದು?

ಬೆಳಿಗ್ಗೆ 8.6 ಕ್ಕೆ ಪ್ರಾರಂಭವಾಗುವ ಕಂಕಣ ಸೂರ್ಯಗ್ರಹಣ ಬೆಳಿಗ್ಗೆ 11.11 ಕ್ಕೆ ಮುಕ್ತಾಯವಾಗಲಿದೆ. ಬೆಳಿಗ್ಗೆ 9 ರ ಸುಮಾರು ಇದರ ಪೂರ್ಣ ದರ್ಶನವಾಗಲಿದೆ. ಕರ್ನಾಟಕದ ಕರಾವಳಿ ಭಾಗದಲ್ಲಿ ಶೇ 90 ರಷ್ಟು ಕಂಡರೆ, ಉಳಿದ ಭಾಗದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕಾಣಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

2010 ರಲ್ಲಿ ಕಂಡಿತ್ತು

ಸೂರ್ಯಗ್ರಹಣದಲ್ಲಿ ಖಗ್ರಾಸಗ್ರಹಣ (ಪೂರ್ಣ ಪ್ರಮಾಣದ ಗ್ರಹಣ) ಹಾಗೂ ಕಂಕಣಗ್ರಹಣ (ಭಾಗಶಃ ಗ್ರಹಣ) ಎಂಬ ಎರಡು ಬಗೆ ಇವೆ. ವರ್ಷಾಂತ್ಯಕ್ಕೆ ಕಾಣಿಸುತ್ತಿರುವುದು ಕಂಕಣ ಸೂರ್ಯಗ್ರಹಣ. ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ. 2010 ರಲ್ಲಿ ಭಾರತದಲ್ಲಿ ಈ ಹಿಂದೆ ಕಂಕಣ ಸೂರ್ಯಗ್ರಹಣ ಸಂಭವಿಸಿತ್ತು.

Source Credit Oneindia.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಸಹೋದರರಿಬ್ಬರ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯ  

Fri Dec 27 , 2019
Source Credit NewsKannada.com ಸಹೋದರರಿಬ್ಬರ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯ   MV   ¦    Dec 27, 2019 10:27:11 AM (IST) Pin it Email https://nirantharanews.com/%e0%b2%a8%e0%b2%be%e0%b2%b3%e0%b3%86-%e0%b2%85%e0%b2%aa%e0%b2%b0%e0%b3%82%e0%b2%aa%e0%b2%a6-%e0%b2%95%e0%b2%82%e0%b2%95%e0%b2%a3-%e0%b2%b8%e0%b3%82%e0%b2%b0%e0%b3%8d%e0%b2%af%e0%b2%97%e0%b3%8d/#YmFudHdhbF9tYWl ಬಂಟ್ವಾಳ: ಕ್ಷುಲ್ಲಕ ಕಾರಣಕ್ಕೆ ಅಣ್ಣ, ತಮ್ಮನ ಮಧ್ಯೆ ನಡೆದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಮೆಲ್ಕಾರ್ ಸಮೀಪದ ಬೋಳಂಗಡಿ ಎಂಬಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. ಪಾಣೆಮಂಗಳೂರು ಕಸಬಾ ಗ್ರಾಮದ ಬೋಳಂಗಡಿ ನಿವಾಸಿ ಮುಯ್ಯ ಯಾನೆ ಲಿಯೋ ಲೋಬೊ (50) ಎಂಬವರು ಕೊಲೆಯಾದವರು. ಲಿಯೋ ಅವರ ಅಣ್ಣ ಕಿಲ್ಲೆ ಯಾನೆ ಸೀರೀಲ್ ಲೋಬೊ (54) […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links