ನವೆಂಬರ್ ನಲ್ಲಿ ಜನಿಸಿದವರ ಗುಣ ಸ್ವಭಾವಗಳು ಹೇಗಿರುತ್ತದೆ ಗೊತ್ತೇ?

Source Credit Kannada.boldsky.com

1. ಏಕಾಂಗಿಯಾಗಿ ಸಮಯ ಕಳೆಯಲು ಇವರಿಗಿಷ್ಟ

ನವೆಂಬರ್ ನಲ್ಲಿ ಜನಿಸಿದ ವ್ಯಕ್ತಿಗಳು ತುಂಬಾ ಖಾಸಗಿಯಾಗಿ ಇರುವರು ಮತ್ತು ಇವರು ತಮ್ಮ ಖಾಸಗಿ ವಿಚಾರಗಳನ್ನು ಹೇಳಲು ಯಾರನ್ನೂ ನಂಬಲು ತುಂಬಾ ಕಷ್ಟಪಡುವರು. ಗುಂಪಿನ ನಡುವೆ ಇರುವ ಬದಲು ಇವರು ಏಕಾಂಗಿಯಾಗಿ ಇರಲು ಬಯಸುವರು. ಇವರು ಬೇರೆಯವರ ಜತೆಗೆ ಬೆರೆತರೂ ಅದು ತಮ್ಮದೇ ರೀತಿಯಲ್ಲಿ ಇರುವುದು. ಖಾಸಗಿತನದಲ್ಲೂ ಇವರು ತುಂಬಾ ಪ್ರಾಮಾಣಿಕ ಹಾಗೂ ಸತ್ಯವಂತರಾಗಿರುವರು.

2. ಅವರನ್ನು ಅರ್ಥ ಮಾಡಿಕೊಳ್ಳುವುದು ಕಠಿಣ

ಇವರು ತುಂಬಾ ಖಾಸಗಿ ವ್ಯಕ್ತಿಯಾಗಿರುವ ಕಾರಣದಿಂದಾಗಿ ಇವರನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಇವರು ಹೃದಯದಲ್ಲಿ ತುಂಬಾ ಮೃದು ಹಾಗೂ ಸಾಧು ಸ್ವಭಾವದವರು. ಇವರು ಉದ್ದೇಶಪೂರ್ವಕವಾಗಿ ಯಾರಿಗೂ ನೋವು ಉಂಟು ಮಾಡುವುದಿಲ್ಲ. ಆದರೆ ಸೌಹಾರ್ದತೆ ಬಗ್ಗೆ ಸಮಸ್ಯೆ ಇರುವವರಿಗೆ ಇವರು ಸರಿಯಾದ ಪಾಠ ಮಾಡುವರು. ಇವರು ಮುಗ್ಧರಾಗಿರುವ ಕಾರಣದಿಂದಾಗಿ ಹಲವಾರು ವಿಚಾರಗಳಿಗೆ ಇವರನ್ನು ದೂಷಿಸಲಾಗುತ್ತದೆ.

3. ಬೇರೆಯವರಿಗಿಂತ ತುಂಬಾ ಭಿನ್ನ ಆಲೋಚನೆ

ಇವರು ತುಂಬಾ ಕ್ರಿಯಾತ್ಮಕ ವ್ಯಕ್ತಿಗಳು. ಇವರು ಯಾವುದೇ ವಿಚಾರವಾಗಲಿ, ಅದರಲ್ಲಿ ನಾವಿನ್ಯತೆ ತುಂಬುವರು. ಇವರಂತೆ ಮತ್ತೊಂದು ಆತ್ಮವನ್ನು ಎಲ್ಲೂ ಸಿಗುವುದಿಲ್ಲ. ಯಾಕೆಂದರೆ ಇವರು ಆ ರೀತಿಯ ವ್ಯಕ್ತಿತ್ವದವರು. ಜೀವನದ ಬಗ್ಗೆ ಇವರು ಭಿನ್ನ ಆಲೋಚನೆ ಹೊಂದಿರುವರು. ತುಂಬಾ ವಿಶೇಷವಾಗಿ ಕಾಣಲು ವಿಭಿನ್ನ ವಿಧಾನದಿಂದ ಕೆಲಸ ಮಾಡುವರು.

4. ನಿಷ್ಠಾವಂತ ಸ್ನೇಹಿತರನ್ನು ಮಾಡಿಕೊಳ್ಳುವರು

ನವೆಂಬರ್ ನಲ್ಲಿ ಜನಿಸಿದವರು ನಂಬಿಕೆ ಹಾಗೂ ನಿಷ್ಠೆಗೆ ಮತ್ತೊಂದು ಹೆಸರು. ಇವರು ಒಬ್ಬರ ಮೇಲೆ ನಿಷ್ಠೆಯನ್ನಿಟ್ಟರೆ ಅದನ್ನು ಅವರು ಜೀವನಪರ್ಯಂತ ಉಳಿಸಿಕೊಳ್ಳುವರು. ನವೆಂಬರ್ ನಲ್ಲಿ ಜನಿಸಿದ ವ್ಯಕ್ತಿಗಳು ತಮ್ಮ ಸ್ನೇಹಿತರಿಗೆ ಮೋಸ ಮಾಡುವುದನ್ನು ನೀವು ಯಾವತ್ತಿಗೂ ನೋಡಲಾರಿರಿ. ತಮ್ಮ ಸ್ನೇಹಿತರನ್ನು ರಕ್ಷಿಸಲು ಇವರು ಏನು ಬೇಕಾದರೂ ಮಾಡುವರು ಮತ್ತು ಅವರ ಈ ಸ್ವಭಾವವನ್ನು ತುಂಬಾ ಶ್ಲಾಘಿಸುವರು ಮತ್ತು ಗೌರವಿಸುವರು.

5. ಅನ್ಯಾಯದ ಚಟುವಟಿಕೆಗಳನ್ನು ಅವರು ಯಾವತ್ತಿಗೂ ಸ್ವೀಕರಿಸಲ್ಲ

ತಮಗಾಗಲಿ ಅಥವಾ ತಮ್ಮ ಸ್ನೇಹಿತರಿಗಾಗಲಿ ಯಾವುದೇ ರೀತಿಯ ಅನ್ಯಾಯವನ್ನು ನೋಡಿದರೂ ಅದನ್ನು ವಿರೋಧಿಸುವ ಗುಣ ಹೊಂದಿರುವರು. ಸರಿ ಹಾಗೂ ತಪ್ಪಿನ ಬಗ್ಗೆ ಇವರು ತಮ್ಮ ಹೃದಯದಲ್ಲಿ ಕೆಲವೊಂದು ಕಠಿಣ ನಿಯಮಗಳನ್ನು ಇಟ್ಟುಕೊಂಡಿರುವರು. ಯಾವುದೇ ತಪ್ಪು ನಡೆದರೂ ಇವರು ಧ್ವನಿ ಎತ್ತುವರು. ಇವರನ್ನು ತಪ್ಪಾಗಿ ಅರ್ಥೈಸಿದರೂ ಇವರು ತಮ್ಮ ವಿರೋಧ ವ್ಯಕ್ತಪಡಿಸಲು ಸ್ವಲ್ಪವೂ ಹಿಂಜರಿಯಲ್ಲ.

6. ತುಂಬಾ ಆಕರ್ಷಣೀಯ

ಕೇವಲ ದೈಹಿಕವಾಗಿ ಮಾತ್ರವಲ್ಲದೆ, ವ್ಯಕ್ತಿತ್ವದಲ್ಲೂ ಇವರು ತುಂಬಾ ಆಕರ್ಷಣೀಯವಾಗಿ ಇರುವರು. ನವೆಂಬರ್ ನಲ್ಲಿ ಜನಿಸಿದ ವ್ಯಕ್ತಿಗಳತ್ತ ಜನರು ಆಕರ್ಷಿತರಾಗಲು ಇದು ಮುಖ್ಯ ಕಾರಣವಾಗಿದೆ. ಇವರ ಬಗ್ಗೆ ಹೆಚ್ಚಿನವರು ಅಸೂಯೆ ಪಡುವರು. ಯಾಕೆಂದರೆ ಇವರ ಜನಪ್ರಿಯತೆ ಮತ್ತು ಗುಣಗಳನ್ನು ಬೇರೆಯವರಿಗೆ ಸಹಿಸಲು ಆಗಲ್ಲ.

7. ಇವರು ತುಂಬಾ ಪರಿಶ್ರಮಿಗಳು

ಏನೇ ಕೆಲಸವಾದರೂ ಇವರು ತುಂಬಾ ಪರಿಶ್ರಮ ಹಾಗೂ ಜ್ಞಾನದಿಂದ ಮಾಡುವರು. ಇವರು ತಮಗೆ ನೀಡಿರುವಂತಹ ಪ್ರತಿಯೊಂದು ಕೆಲಸದಿಂದಲೂ ಒಳ್ಳೆಯ ಫಲಿತಾಂಶವನ್ನು ಬಯಸುವರು. ಪರಿಪೂರ್ಣತೆಯು ಇವರ ಕೆಲಸದಲ್ಲಿರುವುದು. ಕೆಲಸದಲ್ಲಿ ಶೇಕಡಾ ನೂರರಷ್ಟು ಶ್ರಮವಹಿಸದೆ ಇರುವ ಜನರನ್ನು ಇವರು ಖಂಡಿತವಾಗಿಯೂ ಕ್ಷಮಿಸಲ್ಲ. 7. ಇವರು ತುಂಬಾ ಪರಿಶ್ರಮಿಗಳು

ಏನೇ ಕೆಲಸವಾದರೂ ಇವರು ತುಂಬಾ ಪರಿಶ್ರಮ ಹಾಗೂ ಜ್ಞಾನದಿಂದ ಮಾಡುವರು. ಇವರು ತಮಗೆ ನೀಡಿರುವಂತಹ ಪ್ರತಿಯೊಂದು ಕೆಲಸದಿಂದಲೂ ಒಳ್ಳೆಯ ಫಲಿತಾಂಶವನ್ನು ಬಯಸುವರು. ಪರಿಪೂರ್ಣತೆಯು ಇವರ ಕೆಲಸದಲ್ಲಿರುವುದು. ಕೆಲಸದಲ್ಲಿ ಶೇಕಡಾ ನೂರರಷ್ಟು ಶ್ರಮವಹಿಸದೆ ಇರುವ ಜನರನ್ನು ಇವರು ಖಂಡಿತವಾಗಿಯೂ ಕ್ಷಮಿಸಲ್ಲ.

8. ಅಸಾಮಾನ್ಯ ರೀತಿ ಅನುಸರಿಸುವರು

ಇವರು ತಮ್ಮದೇ ಆಗಿರುವಂತಹ ವಿಶೇಷ ರೀತಿಯಲ್ಲಿ ಕೆಲಸಗಳನ್ನು ಮಾಡುವರು. ಇವರು ಹೊಸ ವಿಷಯಗಳ ಬಗ್ಗೆ ಆವಿಷ್ಕಾರ ಮಾಡುತ್ತಲಿರುವರು. ಇವರು ಕೆಲಸ ಮಾಡುವ ರೀತಿಯು ಬೇರೆಯವರಿಗೆ ಕೂಡ ತುಂಬಾ ಪ್ರೇರಣೆ ತುಂಬುವುದು. ಇವರು ತಮ್ಮ ಕೆಲಸದಲ್ಲಿ ಮುಳುಗಿ ಹೋದರೂ ಅವರು ಬೇರೆಯವರನ್ನು ಇದೇ ಮೌನದಿಂದ ಪ್ರೇರೇಪಿಸುವರು.

9. ಕೆಲವೊಮ್ಮೆ ಭಾವನಾತ್ಮಕವಾಗಿ ದುರ್ಬಲರು

ನವೆಂಬರ್ ನಲ್ಲಿ ಹುಟ್ಟಿದವರಿಗೆ ಇದು ಒಂದು ದುರ್ಬಲತೆಯಾಗಿದೆ. ಯಾವುದೇ ವಿಚಾರವು ಇವರ ಪರವಾಗಿ ಇಲ್ಲದೆ ಇದ್ದರೆ ಮತ್ತು ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗದೆ ಇದ್ದರೆ ಆಗ ಇವರ ಮನಸ್ಸಿಗೆ ನೋವಾಗುವುದು. ಭಾವನಾತ್ಮಕವಾಗಿ ಇರುವ ವೇಳೆ ಇವರು ತುಂಬಾ ದುರ್ಬಲರಾಗಿ ಇರುವರು ಮತ್ತು ಇದರ ಲಾಭವನ್ನು ಕೆಲವು ಜನರು ಪಡೆಯುವರು. ಇವರು ಒಳ್ಳೆಯ ಮನಸ್ಸು ಹೊಂದಿರುವರು ಮತ್ತು ತುಂಬಾ ಭಾವನಾತ್ಮಕವಾಗಿ ಇರುವ ವೇಳೆ ಪ್ರತಿಯೊಬ್ಬರೊಂದಿಗೆ ತಮ್ಮ ಮನಸ್ಸು ಬಿಚ್ಚಿಡುವರು.

10. ಸುಲಭವಾಗಿ ರೇಗುವರು

ನೀವು ಮೇಲೆ ಓದಿರುವಂತೆ ನವೆಂಬರ್ ತಿಂಗಳಲ್ಲಿ ಜನಿಸಿದವರು ಜಗಳ ಮತ್ತು ವಾಗ್ವಾದಗಳಿಂದ ದೂರ ಉಳಿಯುವರು. ಆದರೆ ಇವರನ್ನು ರೇಗಿಸಿದರೆ ಆಗ ನಿಜವಾಗಿಯೂ ಇವರು ಜಗಳವಾಡುವರು. ಇವರ ಕೋಪವನ್ನು ಯಾವತ್ತಿಗೂ ದೂರವಿಡಬೇಕು ಮತ್ತು ಇವರಲ್ಲಿ ಇರುವ ಕೋಪವನ್ನು ನೀವು ಎಬ್ಬಿಸಬಾರದು. ಇವರು ಸಿಟ್ಟುಗೊಂಡರೆ ಮತ್ತೆ ಶಾಂತರಾಗುವುದು ತುಂಬಾ ಕಷ್ಟ.

Source Credit Kannada.boldsky.com

Niranthara News

Leave a Reply

Your email address will not be published. Required fields are marked *

Next Post

ಕಣ್ಣಿನ ಅಂದ ಹೆಚ್ಚಿಸುವ ಬ್ರಷ್‌ಗಳ ಬಗ್ಗೆ ಗೊತ್ತಿದೆಯೇ?

Sun Nov 3 , 2019
Source Credit Kannada.boldsky.com Pin it Email https://nirantharanews.com/%e0%b2%a8%e0%b2%b5%e0%b3%86%e0%b2%82%e0%b2%ac%e0%b2%b0%e0%b3%8d-%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%9c%e0%b2%a8%e0%b2%bf%e0%b2%b8%e0%b2%bf%e0%b2%a6%e0%b2%b5%e0%b2%b0-%e0%b2%97/#Y3JlYXNlYnJ1c2g 1. ಕ್ರೀಸ್‌ ಬ್ರಷ್ ಕಣ್ಣಿನ ಕೆಳಗಡೆ ಕಾಡಿಗೆ ಸ್ವಲ್ಪ ಗಾಢವಾಗಿ ಕಾಣುವಂತೆ ಬಯಸುವುದಾದರೆ ಈ ಬ್ರಷ್ ಬಳಸುವುದು ಸೂಕ್ತ. ಈ ಬ್ರೆಷ್ ನಿಮ್ಮ ಕಣ್ಣಿಗೆ ನಿವು ಇಚ್ಛೆಪಟ್ಟ ರೀತಿ ಮೇಕಪ್ ಮಾಡುವಲ್ಲಿ ಸಹಕಾರಿ. ಇದನ್ನು ಕಾಡಿಗೆ ಮೇಲೆ ಮೆಲ್ಲನೆ ತಿಕ್ಕಿ, ಇದರಿಂದ ಕಾಡಿಗೆ ಗಾಢವಾಗಿ ಆಕರ್ಷಕವಾಗಿ ಕಾಣುವುದು. ಸ್ವಲ್ಪ ಚಿಕ್ಕ ಕಣ್ಣು ಇರುವವರು ತಮ್ಮ ಕಣ್ಣುಗಳು ಹೈಲೈಟ್ಸ್ ಮಾಡಲು ಈ ಬ್ರಷ್‌ ಸಹಾಯ ಮಾಡುತ್ತದೆ. ಪಾರ್ಟಿ-ಫಂಕ್ಷನ್‌ಗಳಿಗೆ ಹೋಗುವಾಗ ನಿಮ್ಮ ಚೆಲುವು ಅಧಿಕ ಮಾಡುವಲ್ಲಿ ಈ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links