ನಮಗೆ ರೊಕ್ಕಾ ಕೊಟ್ಟಿಲ್ಲ, ನಾವ್ ವೋಟ್ ಹಾಕಲ್ಲ: ಇದಪ್ಪಾ ಡಿಮ್ಯಾಂಡ್!

Source Credit Oneindia.com

ವೋಟಿಗಿಂತ ನೋಟಿನ ಮೇಲೆ ಇವರಿಗೆ ಅನುರಾಗ!

ನಾವ್ ಮನೆಗೆ ಬರೋದಿಲ್ಲ, ನಮ್ಗೆ ಬಾಗಿಲು ತೆಗೆಯೋರಿಲ್ಲ ಎಂಬ ಯೋಗರಾಜ್ ಭಟ್ಟರ ಹಾಡು ಕೇಳಿದ್ದೀರಿ ಅಲ್ಲವೇ. ರಾಣೆಬೆನ್ನೂರಿನ ಕೆಲವು ಮತದಾರರದ್ದು ಇದಕ್ಕಿಂತ ಕೊಂಚ ಭಿನ್ನ ರಾಗ. ವಿಧಾನಸಭೆ ಮತದಾನದ ದಿನ, ಇಲ್ಲಿನ ಕೆಲ ಮತದಾರರು ನಮಗೆ ಕಾಸು ಕೊಟ್ಟಿಲ್ಲ, ನಾವು ವೋಟ್ ಹಾಕೋದಿಲ್ಲ ಅನ್ನೋ ಹಾಡು ಹೇಳುತ್ತಿದ್ದರು.

ಬಿಜೆಪಿ 1 ಸಾವಿರ ರೂಪಾಯಿ ಕೊಟ್ಟಿದೆ

ನೋಡಿ ರಾಣೆಬೆನ್ನೂರಿನಲ್ಲಿ ಕಾಂಗ್ರೆಸ್ ನವರು ಒಬ್ಬೊಬ್ಬರಿಗೆ ಸಾವಿರ ಸಾವಿರ ರೂಪಾಯಿ ಕೊಟ್ಟಿದ್ದಾರೆ. ಕಾಂಗ್ರೆಸ್ ನವರು 300 ರೂಪಾಯಿ ಕೊಟ್ಟಿದ್ದರೆ, ಬಿಜೆಪಿಯವರು 1 ಸಾವಿರ ರೂಪಾಯಿ ಕೊಟ್ಟಿದ್ದಾರೆ. ಪ್ರತಿಯೊಂದು ಮನೆಗೂ ಹಣ ನೀಡಿದ್ದಾರೆ. ಆದರೆ, ನಮಗೆ ಹಣ ಸಿಕ್ಕೇ ಇಲ್ಲ. ನಾವು ಅದಕ್ಕಾಗಿ ಹೋರಾಟ ಮಾಡುತ್ತಿದೇವೆ ಎನ್ನುವುದು ಮತದಾರರ ಆರೋಪ.

ನಾವ್ ಬೂತ್ ಬರೋದಿಲ್ಲ, ನಮ್ಗೆ ಕಾಸ್ ಕೊಟ್ಟಿಲ್ಲ!

ರಾಣೆಬೆನ್ನೂರಿನಲ್ಲಿ ಮತದಾರರು ವಿಶೇಷ ಕಾರಣಕ್ಕಾಗಿ ಪ್ರತಿಭಟನೆ ನಡೆಸಿದರು. 7ನೇ ವಾರ್ಡ್ ಹಾಗೂ 9ನೇ ವಾರ್ಡ್ ನಲ್ಲಿ ನಮಗೆ ಜನರು ಹಣವನ್ನು ಕೊಟ್ಟಿಲ್ಲ. ನಮ್ಮ ವಾರ್ಡ್ ನಲ್ಲಿ ಬಿಜೆಪಿಯವರು ಅಭಿವೃದ್ಧಿಯನ್ನೂ ಮಾಡಿಲ್ಲ. ಅದಕ್ಕಾಗಿ ನಮ್ಮ ಹೋರಾಟ ಎನ್ನುವುದು ಮತದಾರನ ವಾದ. ಅರೆ, ಬಿಜೆಪಿ ಅಷ್ಟೇ ಅಲ್ಲರೀ, ಕಾಂಗ್ರೆಸ್ ನವರನ್ನೂ ಮತದಾರರು ಬಿಟ್ಟಿಲ್ಲ. ಏಕೆಂದರೆ, ಕಾಂಗ್ರೆಸ್ ನವರೂ ಕೂಡಾ ಈ ವಾರ್ಡ್ ಗಳಲ್ಲಿ ಕಾಸು ಕೊಟ್ಟಿಲ್ಲವಂತೆ.

ನಾವು ಹಂಚಿದ ಹಾಗೆ ಅವರೂ ಬಂದು ಹಂಚಬೇಕು!

ಅರೆ, ಕಾರ್ಯಕರ್ತರ ಕೈಯಲ್ಲಿ ಹತ್ತೊತ್ತು ಸಾವಿರ ರೂಪಾಯಿಗಟ್ಟಲೇ ಹಣವನ್ನು ನೀಡಿರುತ್ತಾರೆ. ಅವರು ನಮ್ಮ ಏರಿಯಾದಲ್ಲಿ ಬಂತು ಹಣ ಹಂಚಿಲ್ಲ. ನಾವು ಬೇರೆ ಕಡೆಗಳಲ್ಲಿ ಹೋಗಿ ಹಂಚಿದ ಹಾಗೆ ಅವರೂ ನಮ್ಮ ಏರಿಯಾದಲ್ಲಿ ಬಂದು ಹಣ ಹಂಚಬೇಕು. ಇವರೇನು ಅವರಪ್ಪನ ಮನೆಯಿಂದ ತಂದು ಕೊಡುತ್ತಾರಾ. ಅವರು ಕೊಟ್ಟಿರುವ ಹಣವನ್ನು ನೀಡಲು ಇವರಿಗೇನು ಕಷ್ಟ ಎಂಬುದು ಮತದಾರರ ಪ್ರಶ್ನೆಯಾಗಿದೆ.

ಕುರುಬರಿಗೆ 500, ಲಿಂಗಾಯತರಿಗೆ 1000!

ನೋಡ್ರಿ ಇಲ್ಲಿ ಜಾತಿ ಲೆಕ್ಕಾಚಾರ ಹಾಕ್ತಾರಾ. ಕುರುಬರಿಗೆ ಒಂದು ಲಿಂಗಾಯತರಿಗೆ ಒಂದು, ಹಿಂದುಳಿದ ವರ್ಗದ ಜನರಿಗೆ ಇನ್ನೊಂದು. ಕುರುಬರಿಗೆ 500 ರೂಪಾಯಿ, ಲಿಂಗಾಯತರಿಗೆ 1 ಸಾವಿರ ರೂಪಾಯಿಯಂತೆ. ಬಿಜೆಪಿಯವರು ಬೇಕಿದ್ದಕ್ಕೆ ಮತದಾನ ಮಾಡಿ, ಇಲ್ಲದಿದ್ದರೆ ಬಿಡಿ ಎಂದು ಹೇಳುತ್ತಿದ್ದಾರೆ ಎನ್ನುವುದು ಇವರ ಆರೋಪ.

ಹತ್ತೇ ರೂಪಾಯಿ ಕೊಟ್ಟರೂ ಸರಿ ಎಲ್ಲರಿಗೂ ನೀಡಿ!

ಒಂದೊಂದು ಮನೆಗೆ ಒಂದು ಸಾವಿರ ರೂಪಾಯಿಗಿಂತ ಹೆಚ್ಚು ಹಣವನ್ನು ನೀಡಿದ್ದಾರೆ. ಇನ್ನು ಕೆಲವು ಮನೆಗಳಿಗೆ ಒಂದು ರೂಪಾಯಿಯನ್ನೂ ಕೊಟ್ಟಿಲ್ಲ. ಇದು ಅನ್ಯಾಯ ಸ್ವಾಮಿ. ನಾವು 200 ರೂಪಾಯಿ ದುಡಿಮೆ ಬಿಟ್ಟು ಬಂದಿದ್ದೇವೆ. ಹತ್ತೇ ರೂಪಾಯಿ ಬಂದರೂ ಸರಿ. ಎಲ್ಲರಿಗೂ ಸಮಾನವಾಗಿ ಹಂಚಿಕೆ ಆಗಬೇಕು. ನ್ಯಾಯಬದ್ಧವಾಗಿ ನಮಗೆ ನ್ಯಾಯ ಸಿಗಬೇಕು ಎಂಬುದು ಇಲ್ಲಿನ ಮಹಿಳಾ ಮತದಾರರ ಬೇಡಿಕೆ.

Source Credit Oneindia.com

Niranthara News

Leave a Reply

Your email address will not be published. Required fields are marked *

Next Post

ಯಡಿಯೂರಪ್ಪ ಕೈಸೇರಿರುವ ಗುಪ್ತಚರ ಸಮೀಕ್ಷೆಯ ಅಂತಿಮ ವರದಿ: ಯಾರಿಗೆ ಎಷ್ಟು?

Thu Dec 5 , 2019
Source Credit Oneindia.com Pin it Email https://nirantharanews.com/%e0%b2%a8%e0%b2%ae%e0%b2%97%e0%b3%86-%e0%b2%b0%e0%b3%8a%e0%b2%95%e0%b3%8d%e0%b2%95%e0%b2%be-%e0%b2%95%e0%b3%8a%e0%b2%9f%e0%b3%8d%e0%b2%9f%e0%b2%bf%e0%b2%b2%e0%b3%8d%e0%b2%b2-%e0%b2%a8%e0%b2%be/#eGdfYXJyb3cuanB Karnataka oi-Balaraj Tantri | Updated: Thursday, December 5, 2019, 22:06 [IST] ಬೆಂಗಳೂರು, ಡಿ : ರಾಜ್ಯದ ಜನತೆಯನ್ನು ತುದಿಗಾಲಿನಲ್ಲಿ ನಿಲ್ಲಿಸಿರುವ ಹದಿನೈದು ಕ್ಷೇತ್ರಗಳ ಉಪಚುನಾವಣೆಗೆ ಮತದಾನ ಇಂದು (ಡಿ 5) ಮುಕ್ತಾಯಗೊಂಡಿದೆ. ಒಟ್ಟಾರೆಯಾಗಿ, ಸರಾಸರಿ ಶೇ. 62.5 ಮತದಾನವಾಗಿದೆ. ಮತದಾನ ಮುಗಿದ ಕೂಡಲೇ ಕನ್ನಡದ ವಿವಿಧ ಮಾಧ್ಯಮಗಳು ಮತ್ತು ಸಿವೋಟರ್, ಮತಗಟ್ಟೆ ಸಮೀಕ್ಷೆಯನ್ನು ನಡೆಸಿದೆ. ಬಿಜೆಪಿ ‘ಉಸ್ಸಪ್ಪಾ’ ಎನ್ನುವ ವರದಿಗಳು ಸಮೀಕ್ಷೆಯಲ್ಲಿ ಬಂದಿದೆ. ಉಪಚುನಾವಣೆ ಎಕ್ಸಿಟ್ ಪೋಲ್ ಸಮೀಕ್ಷಾ ವರದಿ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links