ನನ್ ಲೈಫ್ ಬದಲಾವಣೆ ಆಗಿಲ್ಲ.. ಮೊದಲ ಬಾರಿಗೆ ಮಾದ್ಯಮದ ಮುಂದೆ ಬಿಗ್ ಬಾಸ್ ಬೇಸರದ ಬಗ್ಗೆ ಪ್ರತಿಕ್ರಿಯೆ ಕೊಟ್ಟ ಕುರಿ ಪ್ರತಾಪ್..

Source Credit RJ News Kannada

ಬಿಗ್ ಬಾಸ್ ಸೀಸನ್ 7 ರ ರನ್ನರ್ ಅಪ್, ಕಾಮಿಡಿ ಕಿಂಗ್ ಕುರಿ ಪ್ರತಾಪ್ ಅವರು ಅಂತೂ ಮಾದ್ಯಮದ ಮುಂದೆ ಬಂದಿದ್ದಾರೆ.. ಬಂದು ಬಿಗ್ ಬಾಸ್ ಸೋತ ಬೇಸರದ ಕುರಿತು ಪ್ರತಿಕ್ರಿಯೆ ಕೊಟ್ಟಿದ್ದಾರೆ..

ಹೌದು ಬಿಗ್ ಬಾಸ್ ಸೀಸನ್ 7 ರಲ್ಲಿ ಕುರಿ ಪ್ರತಾಪ್ ಶೈನ್ ಶೆಟ್ಟಿ ವಾಸುಕಿ ವೈಭವ್ ನಡುವೆ ಗೆಲುವಿಗೆ ಪೈಪೋಟಿ ಇದ್ದಂತೆ ಮೂವರೂ ಕೂಡ ಟಾಪ್ ಮೂರರಲ್ಲಿ ಬಂದು ನಿಂತರು.. ಆದರೆ ನೇರ ಹಣಾಹಣಿ ಇದ್ದದ್ದು ಮಾತ್ರ ಶೈನ್ ಶೆಟ್ಟಿ ಹಾಗೂ ಕುರಿ ಪ್ರತಾಪ್ ಅವರ ನಡುವೆ..

ಇಬ್ಬರ ನಡುವೆ ಪ್ರಬಲ ಸ್ಪರ್ಧೆಯೇ ಏರ್ಪಟ್ಟಿತ್ತು.. ಶೈನ್ ಗೆಲ್ಲಬಹುದು ಎಂದು ಬಹುತೇಕರು ಊಹಿಸಿದ್ದರೂ ಕೂಡ ಕೊನೆ ಕ್ಷಣದ ವರೆಗೆ ಏನನ್ನೂ ಹೇಳೋಕೆ ಸಾಧ್ಯವಿಲ್ಲವೆನ್ನುವಂತಾಗಿತ್ತು..

ಆದರೆ ಕೊನೆಗೆ ಗೆಲುವಿನ ಕಿರೀಟ ಶೈನ್ ಅವರ ಪಾಲಾಯಿತು.. ಕುರಿ ಪ್ರತಾಪ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.. ರನ್ನರ್ ಅಪ್ ಆದ ಕುರಿ ಪ್ರತಾಪ್ ಅವರಿಗೆ 6 ಲಕ್ಷ ಬಹುಮಾನದ ಹಣದ ಜೊತೆಗೆ ಸುಮಾರು 12 ಲಕ್ಷದಷ್ಟು ಸಂಭಾವನೆ ಕೈ ಸೇರಿತು ಎನ್ನಲಾಗಿದೆ..

ಆದರೆ ಬಿಗ್ ಬಾಸ್ ಫಿನಾಲೆ ಮುಗಿಯುತ್ತಿದ್ದಂತೆ ಕುರಿ ಪ್ರತಾಪ್ ನಾಪತ್ತೆಯಾಗಿದ್ದರು.. ಶೈನ್ ಸೇರಿದಂತೆ ಬಹುತೇಕ ಬಿಗ್ ಬಾಸ್ ಸ್ಪರ್ಧಿಗಳು ಒಂದರ ಹಿಂದೆ ಒಂದರಂತೆ ಮಾದ್ಯಮಗಳಲ್ಲಿ ಸಂದರ್ಶನ ನೀಡುತ್ತಲೇ ಇದ್ದರು. ಆದರೆ ರನ್ನರ್ ಅಪ್ ಆದ ಕುರಿ ಪ್ರತಾಪ್ ಅವರು ಮಾತ್ರ ಎಲ್ಲಿಯೂ ಕಾಣಿಸಿರಲಿಲ್ಲ..

ಇವೆಲ್ಲವನ್ನು ನೋಡಿ ಬಿಗ್ ಬಾಸ್ ಸೋತದ್ದಕ್ಕೆ ಕುರಿ ಪ್ರತಾಪ್ ಅವರಿಗೆ ಬೇಸರವಾಗಿದೆ ಎಂಬ ಸುದ್ದಿ ಹರಿದಾಡಿತ್ತು.. ಆದರೆ ವಾಸ್ತವ ಬೇರೆಯೇ ಇತ್ತು.. ಕುರಿ ಪ್ರತಾಪ್ ಅವರು ಬಿಗ್ ಬಾಸ್ ಹೋಗುವ ಮುನ್ನ ಮೂರು ಸಿನಿಮಾ ಕಮಿಟ್ ಆಗಿದ್ದರು.. ಅದೇ ಕಾರಣಕ್ಕೆ ಈಗ ಧೃವ ಸರ್ಜಾ ಅವರ ಪೊಗರು ಸಿನಿಮಾದ ಶೂಟಿಂಗ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ..

ಇದೇ ಶೂಟಿಂಗ್ ಸಮಯದಲ್ಲಿ ಮಾದ್ಯಮದವರ ಜೊತೆ ಮಾತನಾಡಿರುವ ಕುರಿ ಪ್ರತಾಪ್ ಅವರು ಬಿಗ್ ಬಾಸ್ ಸೋತ ಬೇಸರದ ಕುರಿತು ಮಾತನಾಡಿದ್ದಾರೆ.‌ “ಬಿಗ್ ಬಾಸ್ ಆದ್ಮೇಲೆ ಇದೇ ಸಿನಿಮಾ ಮೊದಲು ಶೂಟಿಂಗ್ ಮಾಡ್ತಾ ಇರೋದು.. ಒಂದು ಸಾಂಗ್ ಬ್ಯಾಲೆನ್ಸ್ ಇತ್ತು ಅದನ್ನ ಮುಗಿಸ್ತಾ ಇದ್ದೀವಿ… ಎಲ್ಲರು ಎಲ್ಲೋ ಹೊರ್ಟೋಗಿದ್ದಾನೆ.. ಬೇಜಾರ್ ಮಾಡ್ಕೊಂಡಿದ್ದಾನೆ.. ಅಂತೆಲ್ಲಾ ಹೇಳ್ತಿದ್ರು.. ಎಲ್ಲೂ ಹೋಗಿಲ್ಲ ನಾನ್ ಇಲ್ಲೇ ಇದೀನಿ.. ನಾನ್ ಯವ್ದನ್ನು ತಲೆ ಕೆಡ್ಸ್ಕೊಳೋನಲ್ಲ.. ನಾನ್ ಗೆಲ್ಲೇಬೇಕು ಅಂತ ಹೋಗಿರ್ಲಿಲ್ಲ… ಅಷ್ಟು ದಿನ ಇದ್ದದ್ದೇ ಹೆಚ್ಚು..
ಬಿಗ್ ಬಾಸ್ ನಿಂದ ಬಂದ ಮೇಲೆ ಅಂತಹ ಚೇಂಜಸ್ ಏನೂ ಆಗಿಲ್ಲ.. ಫಾಲೋವರ್ಸ್ ಸ್ವಲ್ಪ ಜಾಸ್ತಿ ಆಗಿದ್ದಾರೆ.. ಅದನ್ನ ಬಿಟ್ಟು ಎಲ್ಲಾ ಮಾಮೂಲಿ ಅಂತೆ ಇದೆ..

ಇನ್ನು ಯುವರತ್ನ ಮತ್ತೆ ಭಜರಂಗಿ 2 ಇದೆ ಅದನ್ನು ಮಾಡ್ಬೇಕು.. ಇದಿಷ್ಟು ಮುಗಿಸಿದ ಮೇಲೆ.. ಸುಮಾರ್ ಸಿನಿಮಾ ಕೇಳಿದಾರೆ.. ಎಲ್ಲಾ ಡೇಟ್ ಹೊಂದಿಸ್ಕೊಂಡು ಮಾಡ್ಬೇಕು ಎಂದರು..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಅನುಶ್ರೀ ನಿರೂಪಕಿಯಾಗಿ ಮಾತ್ರವಲ್ಲ ಬೇರೆ ಕೆಲಸವನ್ನೂ ಮಾಡ್ತಿದ್ದಾರೆ ಗೊತ್ತಾ?

Fri Feb 14 , 2020
Source Credit RJ News Kannada ಸದ್ಯ ಕನ್ನಡ ಕಿರುತೆರೆಯ ಪ್ರಖ್ಯಾತ ನಿರೂಪಕರು ಯಾರೆಂದರೆ ಬಹುಶಃ ಅನುಶ್ರೀ ಅವರು ಮೊದಲ ಒಂದೆರೆಡು ಸ್ಥಾನದಲ್ಲಿಯೇ ನಿಲ್ಲುವರು.. ಕ್ಲಾಸ್ ಆಗಲಿ ಮಾಸ್ ಆಗಲಿ ಸದ್ಯ ಅನುಶ್ರೀ ಅವರು ಸೈ ಎನಿಸಿಕೊಂಡಿದ್ದಾರೆನ್ನಬಹುದು.. ಜೀ ವಾಹಿನಿಯ ನಂಬರ್ 1 ನಿರೂಪಕಿಯಾಗಿ ಬಹಳಷ್ಟು ವರ್ಷಗಳಿಂದ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ.. ಆದರೆ ಅನುಶ್ರೀ ಅವರು ನಿರೂಪಣೆಯ ಜೊತೆಗೆ ಇನ್ನಷ್ಟು ಕೆಲಸಗಳನ್ನೂ ಕೂಡ ಮಾಡುತ್ತಿದ್ದಾರೆ.. Pin it Email https://nirantharanews.com/%e0%b2%a8%e0%b2%a8%e0%b3%8d-%e0%b2%b2%e0%b3%88%e0%b2%ab%e0%b3%8d-%e0%b2%ac%e0%b2%a6%e0%b2%b2%e0%b2%be%e0%b2%b5%e0%b2%a3%e0%b3%86-%e0%b2%86%e0%b2%97%e0%b2%bf%e0%b2%b2%e0%b3%8d%e0%b2%b2-%e0%b2%ae/#UGhvdG9HcmlkXzE ಹೌದು ಅನುಶ್ರೀ ಅವರು ಈ ಸ್ಥಾನಕ್ಕೆ ಬರಲು ಪಟ್ಟ ಕಷ್ಟಗಳು ಕೆಲವರಿಗೆ ಮಾತ್ರ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links