ನನ್ನ ಮಗಳ ವಿಷಯದಲ್ಲಿ ಇಂತಾ ಕೆಲಸ ಯಾರೂ ಮಾಡಬೇಡಿ.. ಚಿನ್ನದಂತ ಮಾತನಾಡಿದ ಯಶ್..

Source Credit RJ News Kannada

ರಾಕಿಂಗ್ ಸ್ಟಾರ್ ಯಶ್ ಮೊನ್ನೆ ಮೊನ್ನೆಯಷ್ಟೇ ತಮ್ಮ ಮಗಳ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದು ಇಡೀ ಸ್ಯಾಂಡಲ್ವುಡ್ ಒಂದೆಡೆ ಸೇರಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿತ್ತು..

ಇನ್ನು ಯಶ್ ಹಾಗೂ ರಾಧಿಕಾ ಅವರ ಬಳಿ ಎಲ್ಲರೂ ಐರಾ ಬಗ್ಗೆಯೇ ವಿಚಾರಿಸುತ್ತಿದ್ದರು.. ಮೊನ್ನೆ ಕಾರ್ಯಕ್ರಮವೊಂದರಲ್ಲಿ ಯಶ್ ಅವರು ಈ ಬಗ್ಗೆ ಮಾತನಾಡಿದ್ದಾರೆ. ಹೌದು ಇಷ್ಟು ದಿನ ಎಲ್ಲಿಗೆ ಹೋದರೂ ನನ್ನ ಬಗ್ಗೆ ಅಥವಾ ರಾಧಿಕಾ ಬಗ್ಗೆ ಕೇಳುತ್ತಿದ್ದರು.. ಆದರೆ ಈಗ ಐರಾ ಬಗ್ಗೆ ಕೇಳುತ್ತಿದ್ದಾರೆ..

ಯಾವ ಕಾರ್ಯಕ್ರಮಕ್ಕೆ ಹೋದರೂ ಐರಾ ಐರಾ ಎನ್ನುತ್ತಾರೆ… ಐರಾಳನ್ನು ನೋಡಲು ಅಭಿಮಾನಿಗಳು ಮನೆಗೂ ಕೂಡ ಹುಡುಕಿಕೊಂಡು ಬಂದಿದ್ದಾರೆ… ಇದು ನಿಜಕ್ಕೂ ತಪ್ಪು.. ಇಂತಹ ತಪ್ಪನ್ನು ಯಾರೂ ಮಾಡಬೇಡಿ.. ಸೆಲಿಬ್ರೆಟಿಗಳ ಮಕ್ಕಳು ಅಂತ ಯಾರೂ ಗೌರವ ಕೊಡಬೇಡಿ..

ಸೆಲಿಬ್ರೆಟಿ ಆಗಲಿ ಅಥವಾ ಇನ್ಯಾರಾದರೂ ಆಗಲಿ ಮಕ್ಕಳು‌ ಮಕ್ಕಳಷ್ಟೇ.. ಅವರಾಗಿಯೇ ಏನಾದರೂ ಸಾಧನೆ ಮಾಡಿದ ನಂತರ ಅವರಿಗೆ ಗೌರವ ನೀಡಿ.. ಅವರು ಮುಂದೆ ಮಾಡುವ ಕೆಲಸವನ್ನು ನೋಡಿ ನಂತರ ಅವರಿಗೆ ಗೌರವ ಕೊಡಿ.. ನನ್ನ ಮಕ್ಕಳಾದರೂ ಅಷ್ಟೇ.. ಬೆಳೆದು ದೊಡ್ಡವರಾದ ಮೇಲೆ ಏನಾದರೂ ಸಾಧನೆ ಮಾಡಿದಾಗ ಮಾತ್ರ ಅವರನ್ನು ಗೌರವಿಸಿ.. ಎಲ್ಲಾ ಮಕ್ಕಳು ಕೂಡ ಒಂದೇನೆ.. ಎಲ್ಲಾ ಮಕ್ಕಳಿಗೂ ಪ್ರೀತಿಯನ್ನು ಕೊಡಿ ಅಷ್ಟೇ ಎಂದಿದ್ದಾರೆ..

ನಿಜಕ್ಕೂ ಯಶ್ ಆಡಿದ ಮಾತು ನೂರಕ್ಕೆ ನೂರು ಸತ್ಯ… ಮೈಸೂರಿನ ಮನೆಯೊಂದರ ಜಗಲಿ‌ ಮೇಲೆ ಮಲಗಿ ಕನಸು ಕಂಡು ಅದನ್ನು ಸಾಕಾರಗೊಳಿಸುವ ಸಲುವಾಗಿ ಹಗಲು ರಾತ್ರಿ ಶ್ರಮವಹಿಸಿದ ಪರಿಣಾಮ ಇಂದು ಯಶ್ ಎಂದರೆ ಇಡೀ ಭಾರತವೇ ಗುರುತಿಸುವಂತಾಗಿದೆ.. ಅದೇ ರೀತಿ ಅವರ ಮಕ್ಕಳು ಕೂಡ ಸಾಧನೆ ಮಾಡಲಿ ಎಂದು ಹಾರೈಸಬೇಕೆ ಹೊರತು.. ಪುಟ್ಟ ವಯಸ್ಸಿಗೆ ಗೌರವ ಕೊಟ್ಟು ತಪ್ಪು ಮಾಡುವುದು ಬೇಡ..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಜನರಲ್ಲಿ ಹೊಸ ಕನಸು ಬಿತ್ತಿದ ಮಲ್ಲಿಪಟ್ಟಣ ಏತ ನೀರಾವರಿ ಯೋಜನೆ

Sun Dec 15 , 2019
Source Credit Oneindia.com Pin it Email https://nirantharanews.com/%e0%b2%a8%e0%b2%a8%e0%b3%8d%e0%b2%a8-%e0%b2%ae%e0%b2%97%e0%b2%b3-%e0%b2%b5%e0%b2%bf%e0%b2%b7%e0%b2%af%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%87%e0%b2%82%e0%b2%a4%e0%b2%be-%e0%b2%95/#Wg== Hassan oi-Gururaj S | Published: Sunday, December 15, 2019, 16:06 [IST] ಹಾಸನ, ಡಿಸೆಂಬರ್ 15 : ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣ ಬಳಿ ಆರಂಭವಾಗಿರುವ ಏತನೀರಾವರಿ ಯೋಜನೆ ತಾಲೂಕಿನ ಸುಮಾರು 79 ಹಳ್ಳಿಗಳ ರೈತರಲ್ಲಿ ಹೊಸ ಕನಸು ಮೂಡಿಸಿದೆ. 150 ಕೆರೆಗಳು ಹಾಗೂ 50 ಕಟ್ಟೆಗಳಿಗೆ ಕುಡಿಯುವ ನೀರಿಗಾಗಿ ನೀರು ತುಂಬಿಸುವ ಯೋಜನೆ ಇದಾಗಿದೆ. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಕಟ್ಟೇಪುರ ಗ್ರಾಮದ ಬಳಿ ಹೇಮಾವತಿ ನದಿಯಿಂದ ನೀರನ್ನು […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links