ನಟಿ ಹೇಮಾ ಕಾಲಿಗೆ ನಮಸ್ಕಾರ ಮಾಡಿದ್ದರು ರಾಜ್ ಕುಮಾರ್!

Source Credit Filmibeat.com

ಹೇಮ ಸಿನಿಮಾ ಎಂಟ್ರಿಗೆ ಕಾರಣ ರಾಜ್ ಕುಮಾರ್

ರಾಜ್ ಕುಮಾರ್ ರಿಗೆ ಹೇಮಾ ಕುಟುಂಬದ ತುಂಬ ವರ್ಷಗಳಿಂದ ಪರಿಚಯ ಇತ್ತು. ಹೇಮ ಚಿಕ್ಕ ವಯಸ್ಸಿನ ಹುಡುಗಿ ಆಗಿದ್ದಾಗಿನಿಂದ ಅವರನ್ನು ರಾಜ್ ಕುಮಾರ್ ನೋಡಿಕೊಂಡು ಬಂದಿದ್ದರು. ಅಲ್ಲದೆ ಹೇಮಾ ಸಿನಿಮಾ ಎಂಟ್ರಿಗೆ ಸಹ ಅವರೇ ಕಾರಣರಾದರು. ನೃತ್ಯ, ನಾಟಕದಲ್ಲಿ ಇದ್ದ ಹೇಮಾ ‘ಜೀವನ ಚೈತ್ರ’ ಸಿನಿಮಾದಲ್ಲಿ ಸಣ್ಣ ಪಾತ್ರ ಮಾಡುವ ಮೂಲಕ ಚಿತ್ರರಂಗಕ್ಕೆ ಬಂದರು.

ಹೇಮಾ ಕಾಲಿಗೆ ರಾಜ್ ನಮಸ್ಕಾರ

‘ಜೀವನ ಚೈತ್ರ’ ಸಿನಿಮಾದ ‘ನಾದ ಮಯ..’ ಹಾಡಿನಲ್ಲಿ ಸರಸ್ವತಿ ಪಾತ್ರದಲ್ಲಿ ಹೇಮ ಕಾಣಿಸಿಕೊಂಡಿದ್ದರು. ಸರಸ್ವತಿ ವೇಷ ತೊಟ್ಟು ವೀಣೆ ಹಿಡಿದು ಹೇಮ ಕುಳಿತಿದ್ದರು. ಆ ವೇಳೆ ರಾಜ್ ಕುಮಾರ್ ಹೇಮಾ ಕಾಲಿಗೆ ನಮಸ್ಕಾರ ಮಾಡಿದರು. ಆ ಕ್ಷಣ ಹೇಮಾಗೆ ಏನು ಮಾಡುವುದು ತಿಳಿಯಲಿಲ್ಲ, ಆಗ ತಕ್ಷಣ ತಾವು ಕೂಡ ರಾಜ್ ಕುಮಾರ್ ಕಾಲಿಗೆ ಬಿದ್ದರು.

ಸರಸ್ವತಿ ಪಾತ್ರ

ತನ್ನ ಕಾಲಿಗೆ ನಮಸ್ಕಾರ ಮಾಡಿದ ಹೇಮಾರನ್ನು ರಾಜ್ ಕುಮಾರ್ ಮೇಲೆ ಎತ್ತಿದ್ದರು. ನೀನು ಯಾರ ಕಾಲಿಗೂ ನಮಸ್ಕಾರ ಮಾಡಬಾರದು. ನೀನು ಸರಸ್ವತಿ ಪಾತ್ರ ಮಾಡುತ್ತಿದ್ದೀಯಾ. ಆ ಪಾತ್ರಕ್ಕೆ ಬೆಲೆ ನೀಡಬೇಕು. ನಿನ್ನ ಮನಸ್ಸಿನ ಒಳಗೆ ನೀನೆ ಸರಸ್ವತಿ ಎಂದುಕೊಳ್ಳಬೇಕು ಎಂದು ಹೇಳಿದರು. ನಾನು ನಮಸ್ಕಾರ ಮಾಡಿದ್ದು ಸರಸ್ವತಿಗೆ ಎಂದರು.

ಪಾತ್ರದ ಮಹತ್ವ ತಿಳಿದ ಹೇಮಾ

ರಾಜ್ ಕುಮಾರ್ ತಮ್ಮ ಕಾಲಿಗೆ ನಮಸ್ಕಾರ ಮಾಡಿದಾಗ ಹೇಮಾ ನಡುಗಿರು. ಆದರೆ, ಆ ನಂತರ ಅದರ ಕಾರಣವನ್ನು ರಾಜ್ ಕುಮಾರ್ ತಿಳಿಸಿದರು. ಆ ನಂತರ ಒಂದು ಪಾತ್ರದ ಮಹತ್ವವನ್ನು ಹೇಮ ಅರ್ಥ ಮಾಡಿಕೊಂಡರಂತೆ. ಪಾತ್ರ ಎಂದರೆ ನಾವು ಧರಿಸುವ ಬಟ್ಟೆಯಲ್ಲ.. ಅದು ನಮ್ಮ ಮನಸ್ಸಿನ ಒಳಗೂ ಇರಬೇಕು ಎಂದು ತಿಳಿದರಂತೆ.

Source Credit Filmibeat.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

"ಮಿಣಿಮಿಣಿ ಪೌಡರ್' ಹೇಳಿಕೆ ಟ್ರೋಲ್ ಮಾಡಿದ್ದಕ್ಕೆ ಎಚ್ಡಿಕೆ ಸಿಡಿಮಿಡಿ

Mon Jan 27 , 2020
Source Credit Oneindia.com Pin it Email https://nirantharanews.com/%e0%b2%a8%e0%b2%9f%e0%b2%bf-%e0%b2%b9%e0%b3%87%e0%b2%ae%e0%b2%be-%e0%b2%95%e0%b2%be%e0%b2%b2%e0%b2%bf%e0%b2%97%e0%b3%86-%e0%b2%a8%e0%b2%ae%e0%b2%b8%e0%b3%8d%e0%b2%95%e0%b2%be%e0%b2%b0-%e0%b2%ae/#Wg== Ramanagara oi-Ramesh Ramakirshna By ರಾಮನಗರ ಪ್ರತಿನಿಧಿ | Updated: Monday, January 27, 2020, 19:01 [IST] ರಾಮನಗರ, ಜನವರಿ 27: ಇತ್ತೀಚಿಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಮಂಗಳೂರು ಸ್ಪೋಟಕದ ಬಗ್ಗೆ ಮಾತನಾಡುವಾಗ, “ಮಿಣಿಮಿಣಿ ಪೌಡರ್’ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಅಗುವುದರ ಜೊತೆಗೆ ಅದನ್ನು ವಿವಿಧ ರೀತಿಯಲ್ಲಿ ಟ್ರೋಲ್ ಮಾಡಲಾಗಿತ್ತು. ಇಂದು ರಾಮನಗರದ ಚನ್ನಪಟ್ಟಣದಲ್ಲಿ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ, ಮಿಣಿಮಿಣಿ ಹೇಳಿಕೆಯನ್ನು ಟ್ರೋಲ್ ಮಾಡಿರುವ ಬಿಜೆಪಿ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links