ದೊಡ್ಡಗುಣ ತೋರಿದ ಕುರಿ ಪ್ರತಾಪ್.. ಸರ್ ಎಂದು ಗೌರವ ಕೊಟ್ಟ ಪ್ರಿಯಾಂಕಳಿಗೆ ಕುರಿ ಪ್ರತಾಪ್ ಹೇಳಿದ್ದೇನು ಗೊತ್ತಾ?

Source Credit RJ News Kannada

ಬಿಗ್ ಬಾಸ್ ಮನೆಯಲ್ಲಿ ಇದ್ದ ಅಷ್ಟೂ ಸ್ಪರ್ಧಿಗಳು ಎಲ್ಲರೂ ಸಮಾನರು.. ಆದರೆ ಮನೆಯಿಂದ ಹೊರ ಬಂದರೆ ಅವರದ್ದೇ ಆದ ಸ್ಥಾನ.. ಗೌರವವಿದೆ.. ಅದರಲ್ಲಿ ಕುರಿ ಪ್ರತಾಪ್ ಕೂಡ ಒಬ್ಬರು.. ಹೊರಗೆ ಅಷ್ಟೆಲ್ಲಾ ಹೆಸರು ಮಾಡಿದ್ದರೂ ಕೂಡ ಸ್ವಲ್ಪವೂ ಅಹಂಕಾರವಿಲ್ಲದೆ ಎಲ್ಲರ ಜೊತೆ ಇದ್ದ ರೀತಿ ಮೆಚ್ಚುವಂತದ್ದು..

ಬಿಗ್ ಬಾಸ್ ಜರ್ನಿ ಮುಗಿಸಿ ಹೊರ ಬಂದ ನಂತರ ಕುರಿ ಪ್ರತಾಪ್ ಅವರು ಯಾರ ಕೈಗೂ ಸಿಗಲಿಲ್ಲ ಅನ್ನೋ ಮಾತಿದೆ.. ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಯಾವ ಚಾನಲ್ ನ ಸಂದರ್ಶನದಲ್ಲೂ ಕುರಿ ಪ್ರತಾಪ್ ಪಾಲ್ಗೊಳ್ಳಲಿಲ್ಲ.. ಇದಕ್ಕೆ ಕಾರಣ ಅವರ ಜವಾಬ್ದಾರಿಗಳು.

ಹೌದು ಪೊಗರು ಸಿನಿಮಾದ ಶೂಟಿಂಗ್ ನಲ್ಲಿ ಪಾಲ್ಗೊಳ್ಳಬೇಕಿದ್ದ ಕುರಿ ಪ್ರತಾಪ್ ಅವರು ಬಿಗ್ ಬಾಸ್ ಮುಗಿಸಿ ಎರಡೇ ದಿನಕ್ಕೆ ಶೂಟಿಂಗ್ ಗೆ ಹಾಜರಾದರು.. ಇತ್ತ ಎಲ್ಲಾ ಸ್ಪರ್ಧಿಗಳು ಮಾದ್ಯಮದಲ್ಲಿ ಸಂದರ್ಶನ ಕೊಡೋದ್ರಲ್ಲಿ ಬ್ಯುಸಿ ಇದ್ದರು.. ಶೈನ್ ದೀಪಿಕಾ ವಾಸುಕಿ ಭೂಮಿ ಆಗಾಗ ಭೇಟಿಯಾಗುತ್ತಲೇ ಇದ್ದರು..

ಕುರಿ ಪ್ರತಾಪ್ ಅವರು ಮಾತ್ರ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಇದ್ದರು.. ಆದರೆ ಅವರು ಕೂಡ ಅವರ ಬಿಗ್ ಬಸ್ ಸ್ನೇಹವನ್ನು ಮರೆಯಲಿಲ್ಲ.. ಹೌದು ಶೂಟಿಂಗ್ ನಡುವೆಯೇ ಕುರಿ ಪ್ರತಾಪ್ ಅವರು ಪ್ರಿಯಾಂಕ ಅವರ ಮನೆಗೆ ಭೇಟಿ‌ ನೀಡಿ ಮಾತನಾಡಿಸಿಕೊಂಡು ಬಂದಿದ್ದಾರೆ.. ಅಷ್ಟೇ ಅಲ್ಲದೆ ಪ್ರಿಯಾಂಕ ಅವರೂ ಕೂಡ ಒಮ್ಮೆ ಶೂಟಿಂಗ್ ಜಾಗಕ್ಕೆ ಹೋಗಿ ಕುರಿ ಪ್ರತಾಪ್ ಅವರನ್ನು ಭೇಟಿಯಾಗಿ ಬಂದಿದ್ದಾರೆ..

ಹೆಸರು ಮಾಡಿರುವ ನಟ ನಾನು.. ನಾನ್ಯಾಕೆ ಅವರ ಮನೆಗೆ ಹೋಗಬೇಕೆನ್ನದೆ ಶೂಟಿಂಗ್ ನಡುವೆಯೂ ಹೋಗಿ ಪ್ರಿಯಾಂಕರನ್ನು ಭೇಟಿ ಮಾಡಿ ಬಂದದ್ದಿ ಕುರಿ ಅವರ ಸರಳತೆಯನ್ನು ತೋರುತ್ತದೆ.. ಫ್ರೆಂಡ್ ಶಿಪ್ ಅನ್ನೋದು ಕೇವಲ ಬಿಗ್ ಬಾಸ್ ಗೆ ಅಲ್ಲಿ ಅನುಕೂಲ ಮಾಡಿಕೊಳ್ಳಲು ಮಾತ್ರವಲ್ಲ ಎಂಬುದನ್ನು ಕುರಿ ತೋರಿಸಿಕೊಟ್ಟಿದ್ದಾರೆ.. ಅಷ್ಟೇ ಅಲ್ಲದೆ ಬಿಗ್ ಬಾಸ್ ಮನೆಯಲ್ಲಿ ಸಲುಗೆಯಿಂದ ಕುರಿ ಕುರಿ ಎನ್ನುತ್ತಿದ್ದ ಪ್ರಿಯಾಂಕ ಅವರು ಹೊರಗೆ ಬಂದ ನಂತರ ಆ ರೀತಿ ಕರೆಯೋದು ತಪ್ಪೆನಿಸಿ ಸರ್ ಎಂದು ಕರೆದಾಗ.. ಪರವಾಗಿಲ್ಲ ಹಾಗೆ ಕುರಿ ಅಂತಾನೆ ಮಾತನಾಡಿಸಿ ಎಂದಿದ್ದಾರೆ.. ಕುರಿ ಪ್ರತಾಪ್ ಅವರ ಒಳ್ಳೆಯ ಮನಸ್ಸು.. ಸ್ನೇಹಕ್ಕೆ ಕೊಡುವ ಬೆಲೆ ನಿಜಕ್ಕೂ ಮೆಚ್ಚುವಂತದ್ದು..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಮಲ್ಪೆ ಮೀನುಗಾರರ ಬಲೆಗೆ ಬಿದ್ದ ಅಪರೂಪದ ಡೆವಿಲ್ ಫಿಶ್

Sat Feb 15 , 2020
Source Credit TheMangaloreMirror.in ಮಲ್ಪೆ ಮೀನುಗಾರರ ಬಲೆಗೆ ಬಿದ್ದ ಅಪರೂಪದ ಡೆವಿಲ್ ಫಿಶ್ ಉಡುಪಿ ಫೆಬ್ರವರಿ 15: ಅಪರೂಪದ ದೊಡ್ಡ ಗಾತ್ರದ ದೆವ್ವ ಮೀನೊಂದು ಉಡುಪಿ ಮಲ್ಪೆಯ ಮೀನುಗಾರರ ಬಲೆಗೆ ಬಿದ್ದಿದೆ. ಸುಮಾರು ಐದು ಅಡ್ಡಿ ಉದ್ದವಿರುವ ಈ ಮೀನು ಆರು ಕೆಜಿಯಷ್ಟು ತೂಕವಿದೆ. Pin it Email https://nirantharanews.com/%e0%b2%a6%e0%b3%8a%e0%b2%a1%e0%b3%8d%e0%b2%a1%e0%b2%97%e0%b3%81%e0%b2%a3-%e0%b2%a4%e0%b3%8b%e0%b2%b0%e0%b2%bf%e0%b2%a6-%e0%b2%95%e0%b3%81%e0%b2%b0%e0%b2%bf-%e0%b2%aa%e0%b3%8d%e0%b2%b0%e0%b2%a4/#eUg1QkFFQUFBQUF ಒಮ್ಮೆಗೆ ಕಂಡರೆ ದೆವ್ವದಂತೆ ಭಾಸವಾಗುವ ಅಪರೂಪದ ಜಾತಿಯ ಮೀನಿದು. ಸಾಮಾನ್ಯ ಭಾಷೆಯಲ್ಲಿ ಹೇಳೋದಾದರೆ ಇದೊಂದು ಜಾತಿಯ ಆಕ್ಟೋಪಸ್. ಇದರ ವೈಜ್ಞಾನಿಕ ಹೆಸರು ಬಿಗ್ ಬ್ಲೂ ಆಕ್ಟೋಪಸ್ , ಡೆವಿಲ್ ಫಿಶ್ ಎಂದೇ ಈ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links