ದೀಪಿಕಾ ಹಾಗೂ ಶೈನ್ ಶೆಟ್ಟಿಗೆ ವಾರ್ನಿಂಗ್ ಕೊಟ್ಟ ಕಿಚ್ಚ ಸುದೀಪ್..

Source Credit RJ News Kannada

ಬಿಗ್ ಬಾಸ್ ಸೀಸನ್ 7 ರ ಹನ್ನೆರೆಡು ವಾರಗಳು ಯಶಸ್ವಿಯಾಗಿ ಪೂರ್ಣಗೊಂಡಿದ್ದು. ಈ ವಾರ ಮನೆಯಿಂದ ಚಂದನ ಎಲಿಮಿನೇಟ್ ಆಗಿ ಮನೆಯಿಂದ ಹೊರಬಂದಿದ್ದಾರೆ..

ಇನ್ನು ವಾರದ ಕತೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಸಾಕಷ್ಟು ಸ್ಪೆಷಲ್ ಸಂಗತಿಗಳು ಈ ವಾರ ನಡೆದವು‌. ಅತಿ ಹೆಚ್ಚು ವೋಟ್ ಪಡೆದು ಚಂದನ್ ಆಚಾರ್ ಮೊದಲು ಸೇಫ್ ಆದರು.. ಇನ್ನು ಈ ವಾರ ಕಿಚ್ಚನ ಮೆಚ್ಚುಗೆಯ ಚಪ್ಪಾಳೆಯೂ ಕೂಡ ಚಂದನ್ ಆಚಾರ್ ಗೆ ಲಭಿಸಿತು..

ಇನ್ನು ಈ ವಾರ ದೀಪಿಕಾ ಹಾಗೂ ಶೈನ್ ಶೆಟ್ಟಿ ಅವರು ದೀಪಿಕಾ ಅವರ ತಾಯಿ ಬಂದ ನಂತರ ಒಂದೆರೆಡು ದಿನಗಳು ಕೊಂಚ ದೂರವೇ ಇದ್ದರು‌.. ದೀಪಿಕಾ ತಾಯಿ ಬಂದಾಗ ನಡೆದ ಘಟನೆಯನ್ನು ಸುದೀಪ್ ಅವರು ಚರ್ಚಿಸಿದರು.. ಅದನ್ನು ಬಿಟ್ಟು ಶೈನ್ ಹಾಗೂ ದೀಪಿಕಾ ಇಬ್ಬರಿಗೂ ಕಿಚ್ಚ ಸುದೀಪ್ ವಾರ್ನಿಂಗ್ ನೀಡಿದರು..

ಹೌದು ಈ ವಾರದ ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ದೀಪಿಕಾ ಅವರು ಆಡಿದ ರೀತಿ.. 100 % ಎಫರ್ಟ್ ಹಾಕದೇ ಪ್ರಿಯಾಂಕರಿಗೆ ಸಪೋರ್ಟ್ ಮಾಡಿ ಅವರನ್ನು ಗೆಲ್ಲಿಸಿದ್ದರ ಬಗ್ಗೆ ಗಂಭೀರವಾಗಿ ಮಾತನಾಡಿ ವಾರ್ನಿಂಗ್ ನೀಡಿದರು.. ಈಗ ಮಾತ್ರವಲ್ಲ ಬಹಳಷ್ಟು ವಾರಗಳಿಂದ ಇದೇ ರೀತಿ ಕ್ಯಾಪ್ಟನ್ಸಿ ಟಾಸ್ಕ್ ಗಳಲ್ಲಿ ಬೇಕು ಅಂತಲೇ ಆಟ ಬಿಡ್ತಾ ಇದ್ದೀರಾ ಎಂದೂ ಕೂಡ ತಿಳಿಸಿದರು..

ಇನ್ನು ಶೈನ್ ಶೆಟ್ಟಿ ಅವರು ಮೊನ್ನೆ ಬಲೂನ್ ಕಟ್ಟುವ ಟಾಸ್ಕ್ ನಲ್ಲಿ ಕೊನೆಯ ಬಲೂನ್ ಕಟ್ಟುವಾಗ ನೆಗೆದು ಬರುವಾಗ ತಲೆ ಕಬ್ಬಿಣದ ಕಂಬಿಗೆ ಹೊಡೆದಿತ್ತು.. ಆ ಸಮಯದಲ್ಲಿ ದೀಪಿಕಾ ಅವರು ಶೈನ್ ಅವರಿಗೆ ಜಂಪ್ ಮಾಡಲು ಸಹಾಯ ಮಾಡಿದ್ದರು.. ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ಕತ್ತು ಮುರಿಯುವ ಸಂಭವವಿತ್ತು.. ಈ ವಿಚಾರ ತೆಗೆದು ಜೀವಕ್ಕಿಂತ ಟಾಸ್ಕ್ ಮುಖ್ಯ ಅಲ್ಲ.. ನಮ್ಮ ಜೀವನ ಇದ್ರೆ ಮಾತ್ರ ಟಾಸ್ಕ್ ಆಡಬಹುದು.. ಮುಂದೆಂದೂ ಕೂಡ ಇಂತಹ ತಪ್ಪನ್ನು ಮಾಡಬೇಡಿ ಎಂದು ಸುದೀಪ್ ವಾರ್ನಿಂಗ್ ನೀಡಿದರು..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಸರ್ಕಾರಿ ಶಾಲೆ ಊರಿಗೆ ಕಲಶವಿದ್ದಂತೆ: ಜಯಂತ್ ಕೋಟ್ಯಾನ್

Sun Jan 5 , 2020
Source Credit NewsKannada.com ಸರ್ಕಾರಿ ಶಾಲೆ ಊರಿಗೆ ಕಲಶವಿದ್ದಂತೆ: ಜಯಂತ್ ಕೋಟ್ಯಾನ್ DA   ¦    Jan 05, 2020 02:47:21 PM (IST) Pin it Email https://nirantharanews.com/%e0%b2%a6%e0%b3%80%e0%b2%aa%e0%b2%bf%e0%b2%95%e0%b2%be-%e0%b2%b9%e0%b2%be%e0%b2%97%e0%b3%82-%e0%b2%b6%e0%b3%88%e0%b2%a8%e0%b3%8d-%e0%b2%b6%e0%b3%86%e0%b2%9f%e0%b3%8d%e0%b2%9f%e0%b2%bf%e0%b2%97/#a3VrcmFiZXR0dV9 ಬೆಳ್ತಂಗಡಿ: ಸರ್ಕಾರಿ ಶಾಲೆಗಳು ಊರಿನ ಕಲಶ ಇದ್ದಂತೆ. ಅವುಗಳನ್ನು ಉಳಿಸಿ, ಬೆಳೆಸುವುದು ಊರವರ, ಹಳೆವಿದ್ಯಾರ್ಥಿಗಳ ಆದ್ಯ ಕರ್ತವ್ಯವಾಗಿದೆ ಎಂದು ಕೂಕ್ರಬೆಟ್ಟು ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿಯ ಅಧ್ಯಕ್ಷ ಜಯಂತ ಕೋಟ್ಯಾನ್ ಹೇಳಿದರು. ಮರೋಡಿ ಗ್ರಾಮದ ಕೂಕ್ರಬೆಟ್ಟು ಸರ್ಕಾರಿ ಶಾಲೆಯ ವಜ್ರಮಹೋತ್ಸವ ಪ್ರಯುಕ್ತ ಶಾಲಾ ಮಕ್ಕಳಿಗೆ, ಊರವರಿಗೆ ಆಯೋಜಿಸಿದ್ದ ವಿವಿಧ ಸ್ಪರ್ಧೆಯ ವಿಜೇತರಿಗೆ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links