ದೀಪಿಕಾ ದಾಸ್ ತನ್ನ ಅಪ್ಪನ ಬಗ್ಗೆ, ಯಶ್ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ.. ಕಾರಣವೇನು ಗೊತ್ತಾ?

Source Credit RJ News Kannada

ಬಿಗ್ ಬಾಸ್ ಕನ್ನಡ ಸೀಸನ್ 7 ರ ಒನ್ ಆಫ್ ದಿ ಬೆಸ್ಟ್ ಸ್ಪರ್ಧಿ ಅಂತ ಹೇಳಲಾಗುತ್ತಿರುವ ದೀಪಿಕಾ ದಾಸ್ ಅವರು ತಮ್ಮ ಖಡಕ್ ನಡವಳಿಕೆ ಇಂದಲೇ ಜನರಿಗಾಗಲಿ ಮನೆಯ ಸದಸ್ಯರಿಗಾಗಲಿ ಇಷ್ಟವಾದವರು.. ಹೊರಗೆ ಬಂದ ರಾಜು ತಾಳಿಕೋಟೆ ಅವರಾಗಿರಬಹುದು.. ರವಿ ಬೆಳೆಗೆರೆ ಅವರಾಗಿರಬಹುದು.. ಜೈಜಗದೀಶ್ ಅವರಾಗಿರಬಹುದು ದೀಪಿಕಾ ದಾಸ್ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು..

ಮನೆಯಲ್ಲಿ ಚೆಲ್ಲು ಚೆಲ್ಲಾಗಿ ಅವರು ಎಂದೂ ಇದ್ದಿಲ್ಲ.. ಎಂದೂ ಕೂಡ ಜೈಜಗದೀಶ್ ಅವರು ದೀಪಿಕಾ ಬಗ್ಗೆ ಹೊಗಳಿದ್ದರು.. ಇಂತಹ ದೀಪಿಕಾ ದಾಸ್ ಅವರು ಬಿಗ್ ಬಾಸ್ ಮನೆಯೊಳಗೆ ತನ್ನ ಅಪ್ಪನ ಬಗ್ಗೆಯಾಗಲಿ ಅಥವಾ ಯಶ್ ಅವರ ಬಗ್ಗೆಯಾಗಲಿ ಎಲ್ಲಿಯೂ ಮಾತನಾಡಿಲ್ಲ ಇದಕ್ಕೆ ಕಾರಣವೂ ಇದೆ.. ಇಲ್ಲಿದೆ ನೋಡಿ..

ಮಾದ್ಯಮದ ಸಂದರ್ಶನವೊಂದರಲ್ಲಿ ಈ ಬಗ್ಗೆ ದೀಪಿಕಾ ದಾಸ್ ಅವರ ತಾಯಿ ಹೇಳಿರುವಂತೆ.. ದೀಪಿಕಾ ದಾಸ್ ಅವರು ಹುಟ್ಟಿದ್ದು ಹಾಸನದಲ್ಲಿ ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿಯೇ.. ತಂದೆ ಎಂದರೆ ದೀಪಿಕಾ ದಾಸ್ ಅವರಿಗೆ ಬಹಳ ಪ್ರೀತಿ.. ಅಪ್ಪನಿಗೂ ಮಗಳು ಎಂದರೆ ಅಚ್ಚುಮೆಚ್ಚು.. ಹೀಗಿರುವಾಗ ದೀಪಿಕಾ 15-16 ನೇ ವಯಸ್ಸಿನಲ್ಲಿರುವಾಗ ಅವರ ತಂದೆ ತೀರಿಹೋಗ್ತಾರೆ.. ಅಪ್ಪ ಹೋದ ಕೊನೆ ಸಮಯದಲ್ಲಿ ದೀಪಿಕಾ ಅವರು ಜೊತೆಯಲ್ಲೇ ಇದ್ದರಂತೆ..

ಅಪ್ಪನ ಕೊನೆ ಕ್ಷಣಗಳನ್ನು ಕಣ್ಣಾರೆ ನೋಡಿದ ದೀಪಿಕಾ ಅದನ್ನು ಅರಗಿಸಿಕೊಳ್ಳಲು ಕೂಡ ಸಾಧ್ಯವಾಗಲಿಲ್ಲವಂತೆ.. ಎಷ್ಟೋ ದಿನಗಳ ಬಳಿಕ ಆ ಘಟನೆ ಇಂದ ಹೊರಬಂದು ಮತ್ತೆಂದೂ ಆ ಘಟನೆಯನ್ನು ನೆನಪು ಮಾಡಿಕೊಳ್ಳಲಿಲ್ಲವಂತೆ.. ಅಪ್ಪನ ಬಗ್ಗೆ ಮಾತನಾಡಿದರೆ ಆ ಕೊನೆ ಕ್ಷಣಗಳು ನೆನಪಾಗುತ್ತವೆ ಎಂಬ ಕಾರಣಕ್ಕೆ ಎಂದೂ ಕೂಡ ಅವರ ವಿಷಯವನ್ನು ಎಲ್ಲಿಯೂ ಮಾತನಾಡೋದಿಲ್ಲ ದೀಪಿಕಾ ದಾಸ್.. ಅಪ್ಪ ಹೋದ ನಂತರ ಆ ಸಂಸಾರ ಬಹಳ ಕಷ್ಟವನ್ನು ಅನುಭವಿಸಿ ಕೊನೆಗೆ ದೀಪಿಕಾ ದಾಸ್ ಆ ಮನೆಗೆ ಬೆನ್ನೆಲುಬಾಗಿ ನಿಂತರಂತೆ..

ಇನ್ನು ದೀಪಿಕಾ ದಾಸ್ ಅವರು ಯಶ್ ಅವರ ತಂಗಿ ಎಂಬ ವಿಚಾರ ಬಹಳಷ್ಟು ಜನರಿಗೆ ತಿಳಿದೇ ಇರಲಿಲ್ಲ..‌ ದೀಪಿಕಾ ದಾಸ್ ಅವರೂ ಕೂಡ ನಾನು ಯಶ್ ತಂಗಿ ಎಂದು ಹೇಳಿಕೊಂಡು ಎಲ್ಲಿಯೂ ತಿರುಗಾಡುವುದಿಲ್ಲ.. ದೀಪಿಕಾ ದಾಸ್ ತಾಯಿ ಹೇಳಿದಂತೆ ಫ್ಯಾಮಿಲಿ ವಿಚಾರಕ್ಕೆ ಬಂದರೆ ಯಶ್ ತುಂಬ ಸಪೋರ್ಟ್ ಮಾಡುತ್ತಾರಂತೆ.. ಯಾವುದೇ ವಿಷಯವಾದರೂ ಜೊತೆಯಲ್ಲಿ ನಿಲ್ಲುತ್ತಾರಂತೆ.. ಆದರೆ ದೀಪಿಕಾ ದಾಸ್ ಪ್ರೊಫೆಷನ್ ವಿಷಯದಲ್ಲಿ ಯಶ್ ತಂಗಿ ಎಂದು ಎಲ್ಲಿಯೂ ಅಡ್ವಾಂಟೇಜ್ ಪಡೆಯೋದಿಲ್ಲ.. ಸ್ವಂತ ಪ್ರತಿಭೆಯಿಂದ ಗುರುತಿಸಿಕೊಳ್ಳಬೇಕು.. ಯಾರಿಗೂ ಕೆಟ್ಟ ಹೆಸರು ತರಬಾರದು ಎನ್ನುತ್ತಾರಂತೆ ದೀಪಿಕಾ ದಾಸ್.. ಅದೇ ಕಾರಣಕ್ಕೆ ಬಿಗ್ ಬಾಸ್ ಮನೆಯಲ್ಲಿಯೂ ಕೂಡ ಯಶ್ ಅವರ ತಂಗಿ‌ ಎಂದು ಹೇಳಿಕೊಂಡಿಲ್ಲ..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

'ಕಂದೀಲು' ಕಾದಂಬರಿ ಕುರಿತು ಧಾರವಾಡದ ರಂಗಾಯಣದಲ್ಲೊಂದು ಚರ್ಚೆ

Sat Dec 28 , 2019
Source Credit Oneindia.com Pin it Email https://nirantharanews.com/%e0%b2%a6%e0%b3%80%e0%b2%aa%e0%b2%bf%e0%b2%95%e0%b2%be-%e0%b2%a6%e0%b2%be%e0%b2%b8%e0%b3%8d-%e0%b2%a4%e0%b2%a8%e0%b3%8d%e0%b2%a8-%e0%b2%85%e0%b2%aa%e0%b3%8d%e0%b2%aa%e0%b2%a8-%e0%b2%ac%e0%b2%97/#Wg== Dharwad oi-Nayana Bj | Published: Friday, December 27, 2019, 13:02 [IST] ಧಾರವಾಡ, ಡಿಸೆಂಬರ್ 27: ಕಾನ್ಕೇವ್ ಮಾಧ್ಯಮ ಮತ್ತು ಪ್ರಕಾಶನ ಸಂಸ್ಥೆಯು ಧಾರವಾಡದ ರಂಗಾಯಣದಲ್ಲಿ ಸೋಮು ರೆಡ್ಡಿ ಅವರ ಕಂದೀಲು ಕಾದಂಬರಿಯ ಬಗ್ಗೆ ‘ಅನುಸಂಧಾನ’ ಚರ್ಚೆಯನ್ನು ಹಮ್ಮಿಕೊಂಡಿದೆ. ಡಿಸೆಂಬರ್ 28ರಂದು ಬೆಳಗ್ಗೆ 10.30ಕ್ಕೆ ಧಾರವಾಡದ ರಂಗಾಯಣದ ಸಾಂಸ್ಕೃತಿಕ ಸಮನ್ವಯ ಭವನದಲ್ಲಿ ಆಯೋಜಿಸಲಾಗಿದೆ. ಲೇಖಕರಾದ ಸೋಮು ರೆಡ್ಡಿ, ಡಾ. ಬಾಳಾ ಸಾಹೇಬ ಲೋಕಾಪುರ, ಡಾ. ಯಲ್ಲಪ್ಪ ಭಜಂತ್ರಿ, ಡಾ. ಮೈತ್ರೇಯಿಣಿ ಗದಿಗೆಪ್ಪಗೌಡ್ರ, […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links