ದೀಪಿಕಾ ತಾಯಿ ಇಂಡೈರೆಕ್ಟ್ ಆಗಿ ಹೇಳಿದ ಮಾತು ಅರ್ಥ ಆಯ್ತಾ.. ಇಲ್ಲಿದೆ ನೋಡಿ..

Source Credit RJ News Kannada

ಬಿಗ್ ಬಾಸ್ ಮನೆಯಲ್ಲಿ ಕಳೆದ ಕೆಲವು ವಾರಗಳಿಂದ ಮನೆಯ ಸದಸ್ಯರ ಫ್ಯಾಮಿಲಿ ಮೆಂಬರ್ ಗಳು ಬರ್ತಾ ಇರೋದು ತಿಳಿದೇ ಇದೆ.. ಅದರಂತೆ ಮೊನ್ನೆ ಚಂದನ ಅವರ ತಾಯಿ ಮನೆಗೆ ಬಂದು ಹೋದರೆ.. ನಿನ್ನೆ ದೀಪಿಕಾ ಅವರ ತಾಯಿ ಬಂದಿದ್ದರು..

ಆದರೆ ಬರು ಬರುತ್ತಲೇ ಅದ್ಯಾಕೋ ಕೊಂಚ ಗರಂ ಆದವರಂತೆ ಕಂಡರು.. ಮಗಳನ್ನು ನೋಡಲು ಬರುವಾಗ ಕೈಯಲ್ಲೊಂದು ಡಬ್ಬಿಯನ್ನೂ ತಂದಿದ್ದರು.. ಮನೆಗೆ ಬಂದು ದೀಪಿಕಾರನ್ನು ತಬ್ಬಿಕೊಂಡಾಗ.. ಅವರಿಗೆ ಕಷ್ಟವಾಗುತ್ತದೆ ಎಂದು ಶೈನ್ ಹತ್ತಿರ ಬಂದು ಡಬ್ಬಿಯನ್ನು ತೆಗೆದುಕೊಳ್ಳಲು ಮುಂದಾದರು..

ಆದರೆ ಅದ್ಯಾಕೋ ನಮ್ ದೀಪಿಕಾ ಅವರ ತಾಯಿ ಬೇಡ ಎಂದು ದೂರ ಕಳುಹಿಸಿದರು.. ನೋಡಲು ತೀರಾ ಮುಜುಗರದಂತೆ ಕಂಡುಬಂತು.. ಆನಂತರ ಮನೆಯಲ್ಲಿ ಇದ್ದಷ್ಟೂ ಸಮಯ ಮಗಳಿಗೆ ಶೈನ್ ವಿಚಾರವನ್ನೇ ಇಂಡೈರೆಕ್ಟ್ ಆಗಿ ಹೇಳುತ್ತಲೇ ಇದ್ದರು.. ಮನೆಯಿಂದ ಹೊರ ಬಂದ ನಂತರ ನೀನು ಹೇಳಿದಾಗೆ ಮಾಡ್ತೀವಿ.. ಆದರೆ ಇಲ್ಲಿ ಇರುವಷ್ಟು ದಿನ ಮರ್ಯಾದೆ ಕಾಪಾಡಬೇಕಿರುವುದು ನಿನ್ನ ಜವಬ್ದಾರಿ.. ಹೀಗೆ ಇದೊಂದು ಬಿಟ್ಟು ಮಿಕ್ಕ ಮಾತುಗಳನ್ನಾಡಿದ್ದು ಕಡಿಮೆ ಎನ್ನಬಹುದು..

ದೀಪಿಕಾ ಪರಿಪರಿಯಾಗಿ ವಿವರಿಸುತ್ತಲೇ ಇದ್ದರು.. ಇದೆಲ್ಲಾ ತಮಾಷೆಗಾಗಿಯಷ್ಟೇ.. ಇಲ್ಲಿ ನಡೆಯೋದನ್ನು ಸೀರಿಯಸ್ ಆಗಿ ತಗೋಬೇಡ.. ನಾನು ಏನು ಅಂತ ನಿಂಗ್ ಗೊತ್ತಿಲ್ವಾ ಅಂತೆಲ್ಲಾ ಹೇಳಿದರೂ ಕೂಡ ಅವರ ತಾಯಿ ಅದನ್ನೇ ಪದೇ ಪದೇ ಹೇಳಿದ್ರು.. ತಾಯಿಯ ಮನಸ್ಸು, ಕಾಳಜಿ ಹೆಚ್ಚು ಎಂದುಕೊಂಡರೂ ಕೂಡ.. ದೀಪಿಕಾ ತಾನೇ ಕೊನೆಗೆ “ಇಷ್ಟೊಂದ್ ಹೇಳಿ ಭಯ ಪಡಿಸಬೇಡ” ಎಂದಾಗ ಅವರ ತಾಯಿ ಹಾಗೆನಿಲ್ಲಾ ಚೆನ್ನಾಗಿ ಆಡು ಎಂದು ಸುಮ್ಮನಾದರು..

ಆದರೆ ಶೈನ್ ಮಾಡುವುದು ತಮಾಷೆಗೆ ಎಂಬುದು ಅವರಿಗೂ ಗೊತ್ತು.. ದೀಪಿಕಾಗೂ ಗೊತ್ತು.. ಜನರಿಗೂ ಗೊತ್ತು.. ಆದರೆ ಮನೆಯೊಳಗೆ ಬಂದ ದೀಪಿಕಾ ತಾಯಿ ಮಾಡಿದ್ದು ಶೈನ್ ಗೆ ಕೊಂಚ ಮುಜುಗರ ತರುವಂತಾಯಿತು.. ಮನಸ್ಸಿನಲ್ಲಿ ನೋವಾದರೂ ಕೂಡ ಅದನ್ನು ಮುಖದಲ್ಲಿ ತೋರಿಸಿಕೊಳ್ಳದೇ, ಬಲೂನ್ ಟಾಸ್ಕ್ ಮುಗಿಸಿ.. ಮತ್ತೆ ಕೊನೆಯಲ್ಲಿ ಮಾತನಾಡಿಸಿ ಕಳುಹಿಸಿದರು..

ಆದರೆ ನಂತರ ದೀಪಿಕಾರಿಗೆ ತಿಳುವಳಿಕೆಯ ಮಟ್ಟ ಹೆಚ್ಚಿರುವುದರಿಂದ ಶೈನ್ ಬಳಿ ಮಾತನಾಡಿ.. ಅಲ್ಲಲ್ಲೇ ಎಲ್ಲವನ್ನೂ ತಮಾಷೆಯಾಗಿ ಸಾಲ್ವ್ ಮಾಡಿದರು..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಸರಣಿ ಟ್ವೀಟ್‌ಗಳ ಮೂಲಕ ಮೋದಿ ಕೆಣಕಿದ ಕರ್ನಾಟಕ ಕಾಂಗ್ರೆಸ್

Thu Jan 2 , 2020
Source Credit Oneindia.com We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links