ದಾರಿ ಮಧ್ಯೆ ಚಿರತೆಗಳ ಮಿಲನ; ವೈರಲ್ ಆಯ್ತು ವೀಡಿಯೋ

Source Credit Oneindia.com

Chamarajanagar

oi-Lekhaka

By ಚಾಮರಾಜನಗರ ಪ್ರತಿನಿಧಿ

|

ಚಾಮರಾಜನಗರ, ಜನವರಿ 02: ಚಾಮರಾಜನಗರ ತಾಲೂಕಿನ‌ ಅಮಚವಾಡಿ ಗ್ರಾಮದಲ್ಲಿ ರಾತ್ರಿ ಚಿರತೆಗಳೆರಡು ರಸ್ತೆ ಮಧ್ಯೆ ಕೆಲ ಕಾಲ ಮಿಲನ ನಡೆಸಿರುವ ವಿಡಿಯೋ ಕಾರು ಚಾಲಕನ ಮೊಬೈಲ್​ನಲ್ಲಿ ಸೆರೆಯಾಗಿದ್ದು, ಈ ವೀಡಿಯೋ ಸಾಮಾಜಿಕ‌ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅಮಚವಾಡಿ ಗ್ರಾಮದ ಎಣ್ಣೆಹೊಳೆ ದೇವಸ್ಥಾನದ ಬಳಿ ಬುಧವಾರ ರಾತ್ರಿ 9 ಗಂಟೆ ಸಮಯದಲ್ಲಿ ಎರಡು ಚಿರತೆಗಳು ರಸ್ತೆಯಲ್ಲಿ ಕಾಣಿಸಿಕೊಂಡಿವೆ. ಇದೇ ವೇಳೆ ಕಾರು ಚಾಲಕ ಗಾಬರಿಗೊಂಡು ಕಾರು ನಿಲ್ಲಿಸಿದ್ದಾನೆ. ನಂತರ ಚಿರತೆಗಳು ಮಿಲನ ನಡೆಸುತ್ತಿರುವುದನ್ನು ನೋಡಿ ಮುಂದೆ ಸಾಗಲು ಪರದಾಟ‌ ನಡೆಸಿದ್ದಾನೆ. ಬಳಿಕ ತನ್ನ ಮೊಬೈಲ್​ನಲ್ಲಿ ಚಿರತೆಗಳ ಈ ದೃಶ್ಯವನ್ನು‌ ಸೆರೆ‌ ಹಿಡಿದಿದ್ದಾನೆ. ನಂತರ ಚಿರತೆಗಳು ವಾಹನ ನೋಡಿ ಓಡಿ ಹೋಗಿವೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದ್ದು, ಚಿರತೆಗಳೆರಡರ ಅಪರೂಪದ ದೃಶ್ಯ ಕಂಡು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಈ ರಸ್ತೆಯಲ್ಲೇ ಹಿಂದೊಮ್ಮೆ ಚಿರತೆಯೊಂದು ಕಾಣಿಸಿಕೊಂಡಿತ್ತು. ನಂತರ ಅರಣ್ಯ ಇಲಾಖೆ ಆ ಜಾಗದಲ್ಲಿ ಬೋನುಗಳನ್ನು ಇಟ್ಟಿತ್ತು. ಆದರೆ ಚಿರತೆ ಸೆರೆಯಾಗಿರಲಿಲ್ಲ. ಎಣ್ಣೆ ಹೊಳೆ ಸಮೀಪ ಕೆರೆಗಳಿದ್ದು, ಪೊದೆ, ಗುಡ್ಡಗಳೂ ಇರುವುದರಿಂದ ಚಿರತೆಗಳು ವಾಸಿಸಲು ಸೂಕ್ತವಾಗಿದೆ. ಹೀಗಾಗಿ ಆಗಾಗ ಇಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿರುತ್ತವೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ – ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.

Allow Notifications

You have already subscribed

Source Credit Oneindia.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

PM Modi in Karnataka Live Updates: ತುಮಕೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ

Thu Jan 2 , 2020
Source Credit Oneindia.com Pin it Email https://nirantharanews.com/%e0%b2%a6%e0%b2%be%e0%b2%b0%e0%b2%bf-%e0%b2%ae%e0%b2%a7%e0%b3%8d%e0%b2%af%e0%b3%86-%e0%b2%9a%e0%b2%bf%e0%b2%b0%e0%b2%a4%e0%b3%86%e0%b2%97%e0%b2%b3-%e0%b2%ae%e0%b2%bf%e0%b2%b2%e0%b2%a8-%e0%b2%b5/#Wg== live Karnataka oi-Gururaj S | Updated: Thursday, January 2, 2020, 11:44 [IST] ತುಮಕೂರು, ಜನವರಿ 02: ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಭೇಟಿಗಾಗಿ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಗುರುವಾರ ಮತ್ತು ಶುಕ್ರವಾರ ವಿವಿಧ ಕಾರ್ಯಕ್ರಮಗಳಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ. ಮೋದಿ ಭೇಟಿಯ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಗುರುವಾರ ಮಧ್ಯಾಹ್ನ 1.20ಕ್ಕೆ ನರೇಂದ್ರ ಮೋದಿ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಲಿಸಲಿದ್ದಾರೆ. ತುಮಕೂರು ಮತ್ತು ಬೆಂಗಳೂರಿನಲ್ಲಿ ಜನವರಿ 2 ಮತ್ತು 3ರಂದು ವಿವಿಧ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links