ದಾಖಲೆಗೋಸ್ಕರ 5700 ಕೆಜಿ ಕೇಕ್ ಏನೋ ಮಾಡುದ್ರು.. ಆದ್ರೆ ಆಮೇಲೆ ಆ ಕೇಕ್ ಏನಾಯ್ತು ಗೊತ್ತಾ?

Source Credit RJ News Kannada

ನಿನ್ನೆಯಷ್ಟೇ ನ್ಯಾಷನಲ್ ಸ್ಟಾರ್ ಸ್ಯಾಂಡಲ್ವುಡ್ ನ ರಾಕಿಂಗ್ ಸ್ಟಾರ್ ಯಶ್ ಅವರ 34ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು ವಿಜೃಂಭಣೆಯಿಂದ ಆಚರಿಸಿದ್ದು, 5700 ಕೆಜಿ ಕೇಕ್ ತಯಾರಿಸಿ ದಾಖಲೆ ಮಾಡಿದ್ದಾರೆ.. ಅಷ್ಟೇ ಅಲ್ಲದೆ 234 ಅಡಿ ಕಟೌಟ್ ಅನ್ನು ಕೂಡ ನಿರ್ಮಾಣ ಮಾಡಿ ರಾಕಿ ಬಾಯ್ ಗೆ ಅಭಿಮಾನದ ಉಡುಗೊರೆ ನೀಡಿದ್ದಾರೆ.

ಆದರೆ ದಾಖಲೆಯಾದ ನಂತರ ಆ ಕೇಕ್ ಏನಾಯ್ತು? ಅಷ್ಟೊಂದು ಖರ್ಚು ಮಾಡಿ ಎಲ್ಲವೂ ವೇಸ್ಟ್ ಆಯ್ತಾ? ದಾಖಲೆ ಮಾಡೋದರ ಬದಲು ಬಡವರಿಗೆ ದಾನ ಮಾಡಬಹುದಿತ್ತು.. ಹೀಗೆ ಹತ್ತು ಹಲವು ಪ್ರಶ್ನೆಗಳು ಹಾಗೂ ಟೀಕೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.. ಆದರೆ ನಿಜಕ್ಕೂ ಆ 5700 ಕೆಜಿ ಕೇಕ್ ಏನಾಯ್ತು? ಇದೆಲ್ಲದಕ್ಕೂ ಉತ್ತರ ಇಲ್ಲಿದೆ ನೋಡಿ..

ಹುಟ್ಟು ಹಬ್ಬ ಆಚರಣೆಗೂ ಮುನ್ನ ಈ ರೀತಿ ದೊಡ್ಡ ಮಟ್ಟದಲ್ಲಿ ಕೇಕ್ ಮಾಡುತ್ತಿರುವುದಾಗಿ ಯಶ್ ಅವರಿಗೆ ವೇಣು ಗೌಡ ಅವರು ಯಶ್ ಅವರಿಗೆ ತಿಳಿಸಿದ ಕೂಡಲೇ ಯಶ್ ಅವರು ಎಲ್ಲಾ ನಿಮ್ಮ ಖುಷಿ ಏನ್ ಬೇಕಾದರೂ ಮಾಡಿ.. ಆದರೆ ತಯಾರಿಸಿದ ಆ ಕೇಕ್ ಅನ್ನ ಏನು ಮಾಡ್ತೀರಾ ಅದನ್ನ ಮೊದಲು ನನಗೆ ಹೇಳಿ ಎಂದು ಕೇಳಿದ್ದಾರೆ.. ಆಗ ವೇಣು ಗೌಡ ಅವರು ಯಶ್ ಅವರಿಗೆ ಈ ಎಲ್ಲಾ ಕೇಕ್ ಅನ್ನು ನೀಟ್ ಆಗಿ ಪ್ಯಾಕ್ ಮಾಡಿ ಆಶ್ರಮಗಳಿಗೆ ತಲುಪಿಸುವ ಜವಾಬ್ದಾರಿ ಕೂಡ ನಮ್ಮದೇ ಎಂದು ಭರವಸೆ ನೀಡಿದ್ದರು.. ಆ ಮಾತುಗಳನ್ನು ಕೇಳಿ ಯಶ್ ಅವರು ಕೇಕ್ ಮಾಡಲು ಒಪ್ಪಿಗೆ ಸೂಚಿಸಿದ್ದರು..

ಮೊನ್ನೆ ಅದರಂತೆ 50 ಕೆಜಿ ಡ್ರೈ ಫ್ರೂಟ್ಸ್.. 1500 ಕೆಜಿ ಹಿಟ್ಟು.. 1150 ಕೆಜಿ ಸಕ್ಕರೆ.. 1750 ಕೆಜಿ ಬಟರ್ ಕ್ರೀಮ್.. 50 ಕೆಜಿ ತುಪ್ಪ.. 22,500 ಮೊಟ್ಟೆ ಯನ್ನು ಬಳಸಿ ಬರೋಬ್ಬರಿ 5700 ಕೆಜಿ ಕೇಕ್ ಅನ್ನು ಶ್ರೀ ರಾಮ್ ಭವನ್ ಸ್ವೀಟ್ಸ್ ಮತ್ತು ಬೇಕರಿಯ 20 ಜನರ ತಂಡ ತಯಾರು ಮಾಡಿತ್ತು..

ಅಂದುಕೊಂಡಂತೆ ಯಶ್ ಹಾಗೂ ರಾಧಿಕಾ ಅವರು ಮಧ್ಯರಾತ್ರಿಯಲ್ಲೇ ಬಂದು ಕೇಕ್ ಕಟ್ ಮಾಡಿ ಅಭಿಮಾನಿಗಳೊಂದಿಗೆ ಹುಟ್ಟು ಹಬ್ಬ ಆಚರಿಸಿಕೊಂಡರು.. ಅದೇ ದಿನ ವರ್ಲ್ಡ್ ರೆಕಾರ್ಡ್ ಕೂಡ ದಾಖಲಾಯಿತು..

ದಾಖಲೆ ಮಾಡಿದ ಬಳಿಕ ಸಂಪೂರ್ಣ ಕೇಕ್ ನ ವೀಡಿಯೋ ಚಿತ್ರಣ ಮಾಡಿಕೊಂಡು ನಂತರ ಮರುದಿನ ಬೆಳಿಗ್ಗೆಯೇ 50 ಜನರ ತಂಡ ಸಂಪೂರ್ಣ ಕೇಕ್ ಅನ್ನು ನೀಟ್ ಆಗಿ ಕಟ್ ಮಾಡಿ ಅದನ್ನು ಪ್ಯಾಕ್ ಮಾಡಿ ಆಶ್ರಮಗಳಿಗೆ ತಲುಪಿಸಿದೆ.. ದಾಖಲೆಗೋಸ್ಕರ ತಿನ್ನುವ ಆಹಾರವನ್ನು ವೇಸ್ಟ್ ಮಾಡದೇ ಆಶ್ರಮಗಳಿಗೆ ತಲುಪಿಸಿರುವುದು ನಿಜಕ್ಕೂ ಮೆಚ್ಚುವಂತದ್ದು..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಚಂದನ್ ಗೆ ಒಂದ್ ತುತ್ತು ಊಟ ಇಡದೆ ಇವರೆಲ್ಲಾ ಮಾಡಿದ್ದ್ ಸರೀನಾ..

Thu Jan 9 , 2020
Source Credit RJ News Kannada ಬಿಗ್ ಬಾಸ್ ಮನೆಯಲ್ಲಿ ನಿನ್ನೆ ಮನೆಯ ಸದಸ್ಯರ ಎರಡು ಮುಖಗಳು ಪರಿಚಯವಾದವು.. ಹೌದು ಮೊನ್ನೆಯಷ್ಟೇ ಚಂದನ್ ಆಚಾರ್ ಹಾಗೂ ದೀಪಿಕಾ ಅವರ ನಡುವೆ ಒಂದು ಸಣ್ಣ ಅಡುಗೆ ವಿಚಾರಕ್ಕೆ ಜಗಳ ಆಗಿತ್ತು.. Pin it Email https://nirantharanews.com/%e0%b2%a6%e0%b2%be%e0%b2%96%e0%b2%b2%e0%b3%86%e0%b2%97%e0%b3%8b%e0%b2%b8%e0%b3%8d%e0%b2%95%e0%b2%b0-5700-%e0%b2%95%e0%b3%86%e0%b2%9c%e0%b2%bf-%e0%b2%95%e0%b3%87%e0%b2%95%e0%b3%8d-%e0%b2%8f%e0%b2%a8/#UGhvdG9HcmlkXzE ಆನಂತರ ರಾತ್ರಿ ಚಂದನ್ ಆಚಾರ್ ಊಟ ಮಾಡದೇ ಹಾಗೆ ಮಲಗಿದರು..‌ ಮನೆಯ ಕ್ಯಾಪ್ಟನ್ ಕಿಶನ್ ಹಾಗೂ ಕುರಿ ಪ್ರತಾಪ್ ಅವರು ಬಂದು ಚಂದನ್ ಆಚಾರ್ ಅವರನ್ನು ಊಟ ಮಾಡಲು ಬಹಳಷ್ಟು ಬಾರಿ ಕರೆದರು. ಆದರೆ ಚಂದನ್ ಇಲ್ಲಾ ಸರ್ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links