‘ದಬಾಂಗ್-3’ ಟ್ವಿಟ್ಟರ್ ವಿಮರ್ಶೆ: ಮೊದಲ ಶೋ ನೋಡಿ ಪ್ರೇಕ್ಷಕರು ಹೇಳಿದ್ದೇನು?

Source Credit Kannada.boldsky.com

ಸಿನಿಮಾ ಪೂರ್ತಿ ಅಬ್ಬರಿಸಿರುವ ಸುದೀಪ್

ಸಿನಿಮಾ ನೋಡಿ ಅಭಿಮಾನಿಯೊಬ್ಬರು 4 ಸ್ಟಾರ್ ನೀಡಿದ್ದಾರೆ. ಅಲ್ಲದೆ ದಬಾಂಗ್ ಆಲ್ ಟೈಮ್ ಬ್ಲಾಕ್ ಬಸ್ಟರ್ ಸಿನಿಮಾ ಎಂದು ಹೇಳಿದ್ದಾರೆ. ಸಲ್ಮಾನ್ ಖಾನ್ ಮತ್ತೆ ಬ್ಯಾಂಕ್ ಆಗಿದ್ದಾರೆ. ದಬಾಂಗ್-3 ಅತ್ಯುತ್ತಮವಾದ ಸಿನಿಮಾವಾಗಿದೆ. ಮತ್ತು ಉತ್ತಮ ಮನರಂಜನೆ ಇದೆ. ಪ್ರಭುದೇವ ನಿರ್ದೇಶನ ಅದ್ಭುತ. ಕಿಚ್ಚ ಸುದೀಪ್ ಸಿನಿಮಾ ಪೂರ್ತಿ ಅಬ್ಬರಿಸಿದ್ದಾರೆ. ಎಂದು ಹೇಳಿದ್ದಾರೆ.

ದಬಾಂಗ್-3 ಔಟ್ ಅಂಡ್ ಔಟ್ ಸಲ್ಮಾನ್ ಸಿನಿಮಾ

ಬಾಲಿವುಡ್ ಸಿನಿಮಾ ತಜ್ಞ ತರಣ್ ಆದರ್ಶ್ ದಬಾಂಗ್-3 ಸಿನಿಮಾ ಬಗ್ಗೆ ಒಂದು ಪದದ ವಿಮರ್ಶೆ ಮಾಡಿದ್ದಾರೆ. ಅವರ ಪ್ರಕಾರ ಚಿತ್ರಕ್ಕೆ 3.5 ಸ್ಟಾರ್ ನೀಡಿದ್ದಾರೆ. ಮತ್ತು ದಬಾಂಗ್-3 ಪಕ್ಕ ಮನರಂಜನೆ ಸಿನಿಮಾ. ಚುಲ್ ಬುಲ್ ಪಾಂಡೆ ಮತ್ತೆ ಬ್ಯಾಂಗ್ ಆಗಿದ್ದಾರೆ. ದಬಾಂಗ್-3 ಔಟ್ ಅಂಡ್ ಔಟ್ ಸಲ್ಮಾನ್ ಸಿನಿಮಾ. ನಿರ್ದೇಶಕ ಪ್ರಭುದೇವ ಇಲ್ಲಿ ಮಾಸ್ ಮತ್ತು ಮಸಾಲೆ ಎರಡು ಅಂಶಗಳನ್ನು ಕೇಂದ್ರೀಕರಸಿದ್ದಾರೆ. ಕಿಚ್ಚ ಸುದೀಪ್ ಅದ್ಭುತ ಎಂದು ಬರೆದುಕೊಂಡಿದ್ದಾರೆ.

ಇದು ಪಕ್ಕ ಸಲ್ಮಾನ್ ಖಾನ್ ಸಿನಿಮಾ

ದಬಾಂಗ್-3 ಮಾಸ್ ಆಕ್ಷನ್ ಎಂಟಟೈನರ್ ಸಿನಿಮಾ. ಸಲ್ಮಾನ್ ಅವರ ಫುಲ್ ಮಸಾಲ ಸಿನಿಮಾ. ಸಲ್ಮಾನ್ ಅಭಿಮಾನಿಗಳ ನಿರೀಕ್ಷೆಯಂತೆ ಅಭಿಮಾನಿಗಳಿಗೆ ಬೇಕಾದ ಅಂಶ ಈ ಸಿನಿಮಾದಲ್ಲಿ ಇದೆ. ತರ್ಕ ಕಂಡುಹಿಡಿಯುವವರು ಚಿತ್ರಮಂದಿರಕ್ಕೆ ಹೋಗಬೇಡಿ. ಮತ್ತು ಲಾಜಿಕ್ ಅನ್ನು ನಿರೀಕ್ಷಿಸಬೇಡಿ. ಚುಲ್ ಬುಲ್ ಪಾಂಡೆ ಡೈಲಾಗ್ ಆಕ್ಷನ್ ವೀಕ್ಷಿಸಬಹುದು. ಎಂದು ಹೇಳಿದ್ದಾರೆ.

ಹಾಸ್ಯ ಮತ್ತು ಸಂಭಾಷಣೆ ನಿರಾಸೆ ಮೂಡಿಸಿದೆ

ಒಂದು ಪದದಲ್ಲಿ ಹೇಳಬೇಕೆಂದರೆ ಅತ್ಯುತ್ತಮ ಎಂದು ಹೇಳುತ್ತ 3.5 ಸ್ಟಾರ್ ನೀಡಿದ್ದಾರೆ. ಹಿಂದಿನ ದಬಾಂಗ್ ಸಿನಿಮಾಗೆ ಹೋಲಿಸಿದರೆ ಸಂಭಾಷಣೆ ಮತ್ತು ಹಾಸ್ಯ ನಿರಾಸೆ ಮೂಡಿಸುತ್ತೆ. ಸುದೀಪ್ ಪಾತ್ರ ಭಯಂಕರವಾಗಿದೆ. ಸಲ್ಮಾನ್ ಖಾನ್ ಅಭಿನಯ ಮತ್ತು ಚುಲ್ ಬುಲ್ ಅವರ ಫ್ಲ್ಯಾಶ್ ಬ್ಯಾಕ್ ಭಾಗವು ಅಧ್ಬುತವಾಗಿದೆ. ಕಥೆಯ ಪ್ರಕಾರ ದಬಾಂಗ್ ಸರಣಿಯ ಉತ್ತಮ ಸರಣಿ ಇದಾಗಿದೆ. ಎಂದು ಹೇಳಿದ್ದಾರೆ.

ಬೋರಿಂಗ್ ಆಗಿದೆ ಸಿನಿಮಾ

ಕೆಲವು ಅಭಿಮಾನಿಗಳಿಗೆ ಸಿನಿಮಾ ಇಷ್ಟವಾದರೆ ಇನ್ನು ಕೆಲವರು ಬೇಸರ ಹೊರಹಾಕುತ್ತಿದ್ದಾರೆ. ಚಿತ್ರಮಂದಿರದಲ್ಲಿ ಸಿನಿಮಾ ನೋಡುವಾಗ ಪಬ್ಜಿ ಆಡುವ ಪೋಟೋ ಶೇರ್ ಮಾಡಿ ಸಿನಿಮಾ ಎಷ್ಟು ಬೋರಿ ಆಗಿದೆ ಎನ್ನುವುದಕ್ಕೆ ನಾವು ಪಬ್ಜಿ ಆಡುವ ದೃಶ್ಯಗಳೆ ಸಾಕ್ಷಿ ಎಂದು ಹೇಳಿ ವ್ಯಂಗ್ಯ ಆಗಿದ್ದಾರೆ.

Source Credit Kannada.boldsky.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ರತ್ನಪ್ರಭಾ ನೇಮಕ

Fri Dec 20 , 2019
Source Credit Oneindia.com Pin it Email https://nirantharanews.com/%e0%b2%a6%e0%b2%ac%e0%b2%be%e0%b2%82%e0%b2%97%e0%b3%8d-3-%e0%b2%9f%e0%b3%8d%e0%b2%b5%e0%b2%bf%e0%b2%9f%e0%b3%8d%e0%b2%9f%e0%b2%b0%e0%b3%8d-%e0%b2%b5%e0%b2%bf%e0%b2%ae%e0%b2%b0%e0%b3%8d%e0%b2%b6/#Wg== Karnataka oi-Gururaj S | Updated: Friday, December 20, 2019, 17:02 [IST] ಬೆಂಗಳೂರು, ಡಿಸೆಂಬರ್ 20 : ನಿವೃತ್ತ ಐಎಎಸ್ ಅಧಿಕಾರಿ ಕೆ. ರತ್ನಪ್ರಭಾರನ್ನು ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸರ್ಕಾರ ನೇಮಿಸಿದೆ. 2019ರ ಏಪ್ರಿಲ್‌ನಲ್ಲಿ ರತ್ನಪ್ರಭಾ ಅವರು ಬಿಜೆಪಿ ಸೇರಿದ್ದರು. ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ, ನಿವೃತ್ತ ಐಎಎಸ್ ಅಧಿಕಾರಿ ಕೆ. ರತ್ನಪ್ರಭಾರನ್ನು ಅಧ್ಯಕ್ಷರಾಗಿ ನೇಮಿಸಿ ಮುಖ್ಯಮಂತ್ರಿಗಳು ಆದೇಶ ಹೊರಡಿಸಿದ್ದಾರೆ. ರತ್ನಪ್ರಭಾ ಅವರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links