‘ದಬಾಂಗ್’ ಬಳಿಕ ತಮಿಳು ಸ್ಟಾರ್ ನಟನ ಚಿತ್ರದಲ್ಲಿ ಸುದೀಪ್ ವಿಲನ್!

Source Credit Filmibeat.com

ಸಿಂಬು ಚಿತ್ರಕ್ಕೆ ಸುದೀಪ್ ವಿಲನ್!

ಕಾವೇರಿ ವಿವಾದದ ಸಂದರ್ಭದಲ್ಲಿ ಉತ್ತಮ ನಿರ್ಧಾರ ಘೋಷಿಸಿ ಕರ್ನಾಟಕದ ಗಮನ ಸೆಳೆದಿದ್ದ ತಮಿಳು ನಟ ಸಿಂಬು ಅವರ ಮುಂದಿನ ಚಿತ್ರದಲ್ಲಿ, ಕನ್ನಡ ನಟ ಕಿಚ್ಚ ಸುದೀಪ್ ವಿಲನ್ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಈ ಕುರಿತು ಮಾತುಕತೆ ಮುಗಿದಿದ್ದು, ಅಧಿಕೃತವಾಗಿ ಪ್ರಕಟಿಸಬೇಕಾಗಿದೆ ಎನ್ನಲಾಗಿದೆ.

‘ಪುಲಿ’ ಬಳಿಕ ಮತ್ತೊಂದು ಚಿತ್ರ

ಈ ಹಿಂದೆ ಇಳಯದಳಪತಿ ವಿಜಯ್ ನಟಿಸಿದ್ದ ಪುಲಿ ಸಿನಿಮಾದಲ್ಲಿ ಸುದೀಪ್ ವಿಲನ್ ಪಾತ್ರ ಮಾಡಿದ್ದರು. ಅದಾದ ಬಳಿಕ ಈಗ ಮತ್ತೊಂದು ತಮಿಳು ಚಿತ್ರದಲ್ಲಿ ಪೂರ್ಣ ಪ್ರಮಾಣದ ವಿಲನ್ ಆಗಿ ನಟಿಸುವ ಆಫರ್ ಬಂದಿದೆಯಂತೆ. ಆದರೆ, ಇದು ಅಧಿಕೃತವಾಗದೆ ಇರುವುದು ಕುತೂಹಲ ಮೂಡಿಸಿದೆ.

ಸುದೀಪ್ ಮಾಡ್ತಾರಾ?

ಸಲ್ಮಾನ್ ಖಾನ್ ದಬಾಂಗ್ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿ, ಎಲ್ಲರ ಗಮನ ಸೆಳೆಯುತ್ತಿರುವ ಸುದೀಪ್, ಸಿಂಬು ಚಿತ್ರದಲ್ಲಿ ಖಳನಾಯಕನಾಗಲು ಗ್ರೀನ್ ಸಿಗ್ನಲ್ ಕೊಡ್ತಾರಾ ಎನ್ನುವುದು ಸದ್ಯಕ್ಕೆ ಅನುಮಾನ. ಆದರೆ, ತಮಿಳು ಚಿತ್ರರಂಗದಲ್ಲಿ ಇಂತಹದೊಂದು ಸುದ್ದಿ ಮಾತ್ರ ಸದ್ದು ಮಾಡ್ತಿದೆ.

ಕೋಟಿಗೊಬ್ಬ-3 ಮಾಡಬೇಕಿದೆ

ದಬಾಂಗ್ ಸಿನಿಮಾ ರಿಲೀಸ್ ಆದ ಬಳಿಕ ಕೋಟಿಗೊಬ್ಬ 3 ಸಿನಿಮಾ ಮುಗಿಸಲಿದ್ದಾರೆ. ಈ ನಡುವೆ ಅನೂಪ್ ಭಂಡಾರಿ ಜೊತೆ ಫ್ಯಾಂಟಮ್ ಎಂಬ ಸಿನಿಮಾ ಘೋಷಿಸಿದ್ದಾರೆ. ಅದಾದ ಮೇಲೆ ಬಿಲ್ಲಾ ರಂಗ ಬಾದ್ ಶಾ ಚಿತ್ರ ಘೋಷಣೆಯಾಗಿದೆ. ರಕ್ಷಿತ್ ಶೆಟ್ಟಿ ಜೊತೆಯಲ್ಲೂ ಒಂದು ಸಿನಿಮಾ ಮಾಡುವುದಾಗಿ ಹೇಳಿಕೊಂಡಿದ್ದಾರೆ.

Source Credit Filmibeat.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಶಾಂತಿ ಕಾಪಾಡುವಂತೆ ಶಾಸಕ ವೇದವ್ಯಾಸ್ ಕಾಮತ್ ಮನವಿ

Thu Dec 19 , 2019
Source Credit TheMangaloreMirror.in ಶಾಂತಿ ಕಾಪಾಡುವಂತೆ ಶಾಸಕ ವೇದವ್ಯಾಸ್ ಕಾಮತ್ ಮನವಿ ಮಂಗಳೂರು ಡಿಸೆಂಬರ್ 19: ಮಂಗಳೂರಿನಲ್ಲಿ ಉಂಟಾದ ಘರ್ಷಣೆಯ ಕುರಿತು ಶಾಸಕ ಕಾಮತ್ ಸಾರ್ವಜನಿಕರಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದಾರೆ. Pin it Email https://nirantharanews.com/%e0%b2%a6%e0%b2%ac%e0%b2%be%e0%b2%82%e0%b2%97%e0%b3%8d-%e0%b2%ac%e0%b2%b3%e0%b2%bf%e0%b2%95-%e0%b2%a4%e0%b2%ae%e0%b2%bf%e0%b2%b3%e0%b3%81-%e0%b2%b8%e0%b3%8d%e0%b2%9f%e0%b2%be%e0%b2%b0%e0%b3%8d/#VmVkYXZ5YXNhLUt ಕಳೆದ ಒಂದೂವರೆ ವರ್ಷಗಳಿಂದ ಶಾಂತವಾಗಿದ್ದ ಮಂಗಳೂರಿನಲ್ಲಿ ಮತ್ತೆ ಅಶಾಂತಿ ಸೃಷ್ಟಿಯಾಗುವುದು ಬೇಡ. ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುವಂತಹ ಯಾವುದೇ ಕೃತ್ಯಗಳಲ್ಲಿ ತೊಡಗಿಸಿಕೊಳ್ಳಬೇಡಿ. ಶಾಂತಿ ಸಮನ್ವಯ ಬೆಳೆಸುವ ನಿಟ್ಟಿನಲ್ಲಿ ಯಾರೂ ಕೂಡ ವದಂತಿಗಳಿಗೆ ಹಾಗೂ ಪ್ರಚೋದನೆಗೆ ಒಳಗಾಗದೆ ಶಾಂತಿಯಿಂದಿರಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಹಾಗೂ ಇಲಾಖೆಯ ಅಧಿಕಾರಿಗಳೂ ಕೂಡ ಸಾರ್ವಜನಿಕರಿಗೆ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links