ದಕ್ಷ IPS ಅಧಿಕಾರಿ ಅಣ್ಣಾಮಲೈ ಚಿತ್ರರಂಗಕ್ಕೆ ಎಂಟ್ರಿ: ಸಂಭಾವನೆ ಕೇಳಿದ್ರೆ ಅಚ್ಚರಿ ಪಡುತ್ತೀರಿ

Source Credit Filmibeat.com

ಕೋಚ್ ಪತ್ರದಲ್ಲಿ ದಕ್ಷ ಅಧಿಕಾರಿ

‘ಅರಬ್ಬಿ’ ಎನ್ನುವ ಚಿತ್ರದಲ್ಲಿ ಅಣ್ಣಾಮಲೈ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ‘ಅರಬ್ಬಿ’ ಪ್ಯಾರಾ ಈಜುಪಟು ಕೆ ಎಸ್ ವಿಶ್ವಸ್ ಜೀವನಾಧಾರಿತ ಸಿನಿಮಾ. ಚಿತ್ರದಲ್ಲಿ ವಿಶ್ವಾಸ್ ಪಾತ್ರದಲ್ಲಿ ಅವರೇ ಕಾಣಿಸಿಕೊಳ್ಳುತ್ತಿದ್ದಾರೆ. ವಿಶ್ವಾಸ್ ಕೋಚರ್ ಆಗಿ ಅಣ್ಣಾಮಲೈ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ವಿದ್ಯುತ್ ಸ್ಪರ್ಶಕ್ಕೆ ಕೈಗಳನ್ನು ಕಳೆದುಕೊಂಡಿರುವ ವಿಶ್ವಾಸ್

ಪ್ಯಾರಾ ಸ್ವಿಮ್ಮಿಂಗ್ ನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಪ್ರತಿಭೆ. ಹತ್ತನೆ ವಯಸ್ಸಿನಲ್ಲಿ ಮನೆಯಲ್ಲಿ ಹೈಟೆನ್ಷನ್ ವೈರ್ ಮೇಲೆ ಬಿದ್ದು ಎರಡು ತಿಂಗಳು ಕೋಮದಲ್ಲಿ ಇದ್ದರು. ವಿದ್ಯುತ್ ಸ್ಪರ್ಶಕ್ಕೆ ತನ್ನ ಎರಡು ಕೈಗಳನ್ನು ಕಳೆದುಕೊಂಡರು. ವಿಶ್ವಾಸ್ ಕಾಪಾಡಲು ಮುಂದಾದ ತಂದೆ ವಿದ್ಯುತ್ ಶಾಕ್ ನಿಂದ ನಿಧನಹೊಂದಿದರು. ಎರಡು ಕೈ ಕಳೆದುಕೊಂಡು ವಿಶ್ವಾಸ್ ಚಲ ಬಿಡದೆ ಏನಾದರು ಮಾಡಬೇಕು ಎಂದು ಮುನ್ನುಗ್ಗುತ್ತಿರುವಾಗ ತಾಯಿಯನ್ನು ಕಳೆದುಕೊಳ್ಳುತ್ತಾರೆ.

ಒಂದು ರೂಪಾಯಿ ಸಂಭಾವನೆ

ಪವರ್ ಫುಲ್ ಅಧಿಕಾರವನ್ನು ತೊರೆದು ಸಾಮಾಜಿಕ ಕಾರ್ಯ ಮಾಡುತ್ತಿರುವ ಅಣ್ಣಾಮಲೈ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಎಂದರೆ ಅವರ ಸಂಭಾವನೆ ಎಷ್ಟಿರ ಬಹುದು ಎನ್ನುವ ಕುತೂಹಲ ಚಿತ್ರಾಭಿಮಾನಿಗಳಲ್ಲಿ ಇರುತ್ತೆ. ಆದರೆ ಅಣ್ಣಾಮಲೈ ಪಡೆದ ಸಂಭಾವನೆ ಕೇಳಿದರೆ ನಿಜಕ್ಕು ಅಚ್ಚರಿ ಪಡುತ್ತೀರಿ. ಅರಬ್ಬಿ ಚಿತ್ರಕ್ಕಾಗಿ ಅಣ್ಣಾಮಲೈ ಕೇವಲ ‘1’ ರೂಪಾಯಿ ಪಡೆದಿದ್ದಾರಂತೆ.

ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ

ಕೆನಡಾ ಮತ್ತು ಜರ್ಮನಿಯಲ್ಲಿ ನಡೆದ ಪ್ಯಾರಾ ಈಜು ಸ್ಪರ್ಧೆಯಲ್ಲಿ ಚಿನ್ನ ಹಾಗೂ ಕಂಚು ಗೆದ್ದು ಭಾರತಕ್ಕೆ ಕೀರ್ತಿ ತಂದು ಕೊಟ್ಟಿದ್ದಾರೆ. ಹೆಮ್ಮೆಯ ಭಾರತೀಯ ಕುವರ ವಿಶ್ವಾಸ್ ಜೀವನಾಧಾರಿತ ಚಿತ್ರದಲ್ಲಿ ಅಣ್ಣಾಮಲೈ ಕಾಣಿಸಿಕೊಳ್ಳುತ್ತಿರುವುದು ಚಿತ್ರಾಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಪೊಲೀಸ್ ಅಧಿಕಾರಿಯಾಗಿ ನೋಡಿದ್ದ ಜನತೆಗೆ ತೆರೆ ಮೇಲೆ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ.

Source Credit Filmibeat.com

Niranthara News

Leave a Reply

Your email address will not be published. Required fields are marked *

Next Post

ಕರ್ನಾಟಕ ಸರ್ಕಾರದ 2020ರ ಸರ್ಕಾರಿ ರಜೆ ದಿನಗಳ ಪಟ್ಟಿ

Fri Nov 22 , 2019
Source Credit Oneindia.com Pin it Email https://nirantharanews.com/%e0%b2%a6%e0%b2%95%e0%b3%8d%e0%b2%b7-ips-%e0%b2%85%e0%b2%a7%e0%b2%bf%e0%b2%95%e0%b2%be%e0%b2%b0%e0%b2%bf-%e0%b2%85%e0%b2%a3%e0%b3%8d%e0%b2%a3%e0%b2%be%e0%b2%ae%e0%b2%b2%e0%b3%88-%e0%b2%9a%e0%b2%bf/#Wg== Karnataka oi-Gururaj S | Published: Friday, November 22, 2019, 20:41 [IST] ಬೆಂಗಳೂರು, ನವೆಂಬರ್ 22 : ಕರ್ನಾಟಕ ಸರ್ಕಾರ 2020ನೇ ಸಾಲಿನ ಸಾಮಾನ್ಯ ರಜೆ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹಲವು ಹಬ್ಬಗಳು ಭಾನುವಾರ ಬಂದಿದ್ದು, ಇದರಿಂದಾಗಿ ಕೆಲವು ಹಬ್ಬಗಳ ರಜೆಗೆ ಕತ್ತರಿ ಬಿದ್ದಿದೆ. ಶುಕ್ರವಾರ ಕರ್ನಾಟಕ ಸರ್ಕಾರದ ಪರವಾಗಿ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ಅಪರ ಕಾರ್ಯದರ್ಶಿ ರಜೆ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಎಲ್ಲಾ ಭಾನುವಾರ, […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links