ತಾನೇ ಗ್ರೇಟ್ ಎಂದು ಅಹಂಕಾರ ತೋರಿದ ವಾಸುಕಿ. ತಿರುಗಿ ಬಿದ್ದ ಭೂಮಿ ಶೆಟ್ಟಿ ಮಖಕ್ಕೆ ಹೊಡೆದಂತೆ ಹೇಳಿದ್ದೇನು ಗೊತ್ತಾ?

Source Credit RJ News Kannada

ಬಿಗ್ ಬಾಸ್ ಮನೆಯಲ್ಲಿ ವಾಸುಕಿ ವೈಭವ್ ತನ್ನ ಹಾಡುಗಾರಿಕೆ ಪ್ರತಿಭೆಯ ಮೂಲಕ ಜನರ ಮನಸು ಗೆದ್ದಿರುವುದು ಸುಳ್ಳಲ್ಲ.. ಆದರೆ ಅದ್ಯಾಕೋ‌ ಮನೆಯಲ್ಲಿ ಅದರಲ್ಲೂ ಟಾಸ್ಕ್ ವಿಚಾರ ಅಂತ ಬಂದಾಗ ವಾಸುಕಿ ವೈಭವ್ ಡಬಲ್ ಗೇಮ್ ಆಡ್ತಾರೆ ಅನ್ನೋ ಮಾತು ಕೇಳಿ ಬರುತ್ತಿದೆ.. ಈ ಮುನ್ನ ವಾರದ ಕತೆಯಲ್ಲಿ ಕಿಚ್ಚ ಸುದೀಪ್ ಮುಂದೆಯೇ ವಾಸುಕಿ ಡಬಲ್ ಗೇಮ್ ಆಡ್ತಾ ಇದ್ದಾರೆ ಎಂದು ಚಂದನ್ ಆಚಾರ್ ನೇರವಾಗಿ ಹೇಳಿದ್ದರು. ಅಷ್ಟೇ ಅಲ್ಲದೆ ಅಂದು ಬಲೂನ್ ಕಟ್ಟುವ ಟಾಸ್ಕ್ ನಲ್ಲಿ ವಾಸುಕಿ ಬೇಕು ಬೇಕಂತಲೇ ಶೈನ್ ಅವರ ಬಲೂನ್ ಅನ್ನು ಕಟ್ಟಿದ್ದರು ಎಂದಿದ್ದರು..

ಅದನ್ನು ಬಿಟ್ಟು ಕತ್ತಿಯನ್ನು ಹಿಡಿಯುವ ಟಾಸ್ಕ್ ನಲ್ಲಿಯೂ ಕೂಡ ವಾಸುಕಿ ತಾನು ಮೊದಲು ಸೋತೆ ಎಂದು.. ಮಿಕ್ಕ ಯಾವ ಸದಸ್ಯನಿಗೂ ಸಹಾಯಕ್ಕೆ ಬಾರದೆ ಕುಳಿತರು.. ಅದರಲ್ಲೂ ಸ್ನೇಹಿತ ಎನ್ನುತ್ತಿದ್ದ ಶೈನ್ ಸಹಾಯಕ್ಕಾಗಿ ವಾಸುಕಿಯನ್ನು ಕರೆದರೂ ಕೂಡ ವಾಸುಕಿ ಹೋಗದೇ ಇದ್ದದ್ದು ನೋಡುಗರಲ್ಲಿ ಅನುಮಾನ ಮೂಡಿಸಿತ್ತು..

ಅದಾದ ಬಳಿಕ ಇದೀಗ 14ನೇ ವಾರದಲ್ಲಿ ಮನೆಯಲ್ಲಿ ಶೈನ್ ಕ್ಯಾಪ್ಟನ್ ಆದರು.. ಮನೆಯಲ್ಲಿ ಟಾಸ್ಕ್ ಗಾಗಿ ಸದಸ್ಯರು ಎರಡು ತಂಡಗಳನ್ನು ಮಾಡಿಕೊಂಡರು.. ಅದರಲ್ಲಿ ಒಂದು ತಂಡದ ಕ್ಯಾಪ್ಟನ್ ಹರೀಶ್ ರಾಜ್ ಆದರೆ.. ಮತ್ತೊಂದು ತಂಡದ ಕ್ಯಾಪ್ಟನ್ ವಾಸುಕಿ ಆಗಿದ್ದರು..

ಇಬ್ಬರ ತಂಡದ ಸದಸ್ಯರ ಆಯ್ಕೆಯಾದ ನಂತರ.. ವಾಸುಕಿ ಬಂದು ತಮ್ಮ ತಂಡದ ಸದಸ್ಯರಾದ ದೀಪಿಕಾ ಹಾಗೂ ಪ್ರಿಯಾಂಕ ಬಳಿ ಮಾತನಾಡಿದ್ದು ವಾಸುಕಿ ಅವರ ಅಹಂಕಾರವನ್ನು ತೋರುವಂತಿತ್ತು.. ಹೌದು “ನಾನು ಕಿಶನ್ ಇರೋ ತಂಡ ಸೋಲೋದೇ ಇಲ್ಲ” ಎಂದು ಅಹಂ ಭಾವ ತೋರಿದರು.. ಆನಂತರ ತಾನು ಆಡಿದ ಮಾತು ಎಲ್ಲಿ ಕಿಚ್ಚ ಸುದೀಪ್ ಪ್ರಶ್ನಿಸಬಹುದು ಎಂದುಕೊಂಡು ಮತ್ತೆ ಇಲ್ಲ ಇಲ್ಲ ದೀಪಿಕಾ ಪ್ರಿಯಾಂಕ ಇದ್ದರೂ ಸೋಲೋದಿಲ್ಲ ಎಂದು ಮಾತನ್ನು ತಾರಿಸಿದ್ದು ಜನರಿಗೆ ಚೆನ್ನಾಗಿಯೇ ಅರ್ಥವಾಯಿತು..

ಅಹಂಕಾರ ತೋರಿದ್ದಕ್ಕೋ ಏನೋ.. ಮೊದಲ ದಿನವೇ ವಾಸುಕಿಯ ತಂಡ ಸೋತಿತು.. ಇನ್ನು ನಿನ್ನೆಯ ಸಂಚಿಕೆಯಲ್ಲಿ ಮಡಿಕೆ ಹೊಡೆಯುವ ಟಾಸ್ಕ್‌ನಲ್ಲಿ ಕುರಿ ಪ್ರತಾಪ್ ಹಾಗೂ ವಾಸುಕಿ ಮಡಿಕೆ ಹೊಡೆಯಲು ಮುಂದಾದಾಗ ವಾಸುಕಿಯೇ ಮೊದಲು ಮಡಿಕೆ ಹೊಡೆದರು. ಆದರೆ ಮೊದಲ ಬಾರಿ ಮಡಕೆ ಹೊಡೆಯದೆ ಎರಡನೇ ಬಾರಿ ವಾಸುಕಿ ಹೊಡೆಯುವಷ್ಟರಲ್ಲಿ ಅದೇ ಸಮಯಕ್ಕೆ ಕುರಿ ಪ್ರತಾಪ್ ಅವರು ಕೂಡ ಹೊಡೆದರು..

ಇದೇ ವಿಷಯಕ್ಕೆ ಕ್ಯಾಪ್ಟನ್ ಶೈನ್ ಬಿಗ್ ಬಾಸ್ ಬಳಿ ತೀರ್ಪು ನೀಡುವಂತೆ ಮನವಿ ಮಾಡಿದರು.. ಬಿಗ್ ಬಾಸ್ ನ ತೀರ್ಪಿಗಾಗಿ ಕಾಯುತ್ತಿದ್ದ ಸಮಯದಲ್ಲಿ ಎಲ್ಲರೂ ಸುಮ್ಮನಿದ್ದರು.. ಆದರೆ ವಾಸುಕಿ ಮಾತ್ರ ಬಂದು ಹರೀಶ್ ತಂಡದ ಭೂಮಿಯನ್ನು “ನೀನ್ ಹೇಳು ಭೂಮಿ ನಾನ್ ತಾನೆ ಮೊದಲು ಹೊಡೆದಿದ್ದು ಎಂದು ಪದೇ ಪದೇ ಪಕ್ಕಕ್ಕೆ ಕರೆದು ಕೇಳುತ್ತಿದ್ದರು.. ಎಲ್ಲರೂ ಕ್ಯಾಪ್ಟನ್ ನಿರ್ಧಾರಕ್ಕಾಗಿ ಕಾಯುತ್ತಿದ್ದರೆ.. ವಾಸುಕಿ ಮಾತ್ರ ಎಲ್ಲರೆದುರೂ ಭೂಮಿಯನ್ನು ಕೆಟ್ಟವರನ್ನಾಗಿ‌ ಮಾಡುವ ಪ್ರಯತ್ನದಲಿದ್ದರು.. ಇದನ್ನು ಅರ್ಥ ಮಾಡಿಕೊಂಡ ಭೂಮಿ.. ಇಲ್ಲ ನಾನ್ ನೋಡೇ ಇಲ್ಲ ಎಂದರೂ ಕೂಡ ಅದ್ಯಾಕೋ ವಾಸುಕಿ ಬಿಡುತ್ತಲೇ ಇರಲಿಲ್ಲ.. ಕೊನೆಗೆ ಭೂಮಿಯೇ ವಾಸುಕಿ ವಿರುದ್ಧ ತಿರುಗಿ ಬಿದ್ದರು.. ಏನಾದ್ರು ಅಭಿಪ್ರಾಯ ಕೇಳೋದಿದ್ರೆ ಎಲ್ಲರ ಮುಂದೆ ಕೇಳ್ಬೇಕು.. ಟೀಮ್ ಅಂತ ಬಂದಾಗ ಇಲ್ಲಿ ಫ್ರೆಂಡ್ ಶಿಪ್ ತರಬಾರದು.. ನೀನು ಗೆದ್ದೆ ಅಂತ ಹೇಳಿಸೋಕೆ ನನ್ನ ಕೆಟ್ಟವಳನ್ನಾಗಿ ಮಾಡಬಾರದು ಎಂದು ತಿರುಗಿಸಿ ಮಾತನಾಡಿದರು.. ವಾಸುಕಿ ಕೂಡ ತೀರಾ ಕೆಟ್ಟ ಮಟ್ಟದಲ್ಲಿ ಆಟವನ್ನು ಗೆಲ್ಲಲು ಪ್ರಯತ್ನ ಮಾಡಿದ್ದು ಎರಡೂ ತಂಡದ ನಡುವಿನ ಜಗಳಕ್ಕೆ ಕಾರಣವಾಯಿತು..

ಟಾಸ್ಕ್ ಮುಗಿದ ಬಳಿಕ ಇದೇ ವಿಷಯವನ್ನು ಭೂಮಿ ಪ್ರಿಯಾಂಕ ಜೊತೆ ಚರ್ಚಿಸಿ.. ವಾಸುಕಿ ನನ್ನನ್ನು ಮಧ್ಯೆ ಸಿಗಿಸೋದಕ್ಕೋಸ್ಕರ ಹೇಗೆಲ್ಲಾ ಮಾಡ್ದ.. ಅವನ ಬುದ್ದಿ ಅರ್ಥವಾಯಿತು ಎಂದರು..

ಈಗಾಗಲೇ ಚಂದನ ಬಲಿಯಾಗಿದ್ದಾಗಿದೆ.. ಈ ವಾರ ಭೂಮಿ ಬಲಿಯಾಗಬಹುದು ಎಂದುಕೊಳ್ಳುವಷ್ಟರಲ್ಲಿ ಭೂಮಿ ಶೆಟ್ಟಿ ಬುದ್ಧಿ ಕಲಿತಂತೆ ಕಾಣುತ್ತಿದೆ.. ಮುಂದೇನಾಗಬಹುದು ಕಾದು ನೋಡಬೇಕಷ್ಟೆ..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಭಟ್ಕಳದಿಂದ ಉಡುಪಿಗೆ ಬಂದು ಪೇಜಾವರ ಶ್ರೀಗಳಿಗೆ ಶೃದ್ದಾಂಜಲಿ ಸಲ್ಲಿಸಿದ ಮುಸ್ಲೀಂ ಬಾಂಧವರು

Wed Jan 15 , 2020
Source Credit TheMangaloreMirror.in ಭಟ್ಕಳದಿಂದ ಉಡುಪಿಗೆ ಬಂದು ಪೇಜಾವರ ಶ್ರೀಗಳಿಗೆ ಶೃದ್ದಾಂಜಲಿ ಸಲ್ಲಿಸಿದ ಮುಸ್ಲೀಂ ಬಾಂಧವರು ಉಡುಪಿ ಜನವರಿ 15: ಉಡುಪಿಯಲ್ಲೀಗ ರಥೋತ್ಸವಗಳ ಸಂಭ್ರಮ, ಮಕರ ಸಂಕ್ರಾಂತಿ ಹಿನ್ನಲೆ ನಿನ್ನೆ ಉಡುಪಿಯಲ್ಲಿ ವೈಭವದ ಚೂರ್ಣೋತ್ಸವ ನಡೆಯಿತು. ಚೂರ್ಣೋತ್ಸವ ಅಂಗವಾಗಿ ರಾತ್ರಿ 3 ತೇರ ಎಳೆದು ಉತ್ಸವ ನಡೆಯಿತು ಪರ್ಯಾಯ ಫಲಿಮಾರು ಮಠಾಧೀಶರ ಜೊತೆ ಇತರ ಮಠಾಧೀಶರು ಉಪಸ್ಥಿತರಿದ್ದರು. ನಿನ್ನೆ ನಡೆದ ಮಕರ ಸಂಕ್ರಾಂತಿ ಉತ್ಸವದ ವೇಳೆ ಒಂದು ವಿಶಿಷ್ಟ ಘಟನೆ ನಡೆದಿದೆ. Pin it Email https://nirantharanews.com/%e0%b2%a4%e0%b2%be%e0%b2%a8%e0%b3%87-%e0%b2%97%e0%b3%8d%e0%b2%b0%e0%b3%87%e0%b2%9f%e0%b3%8d-%e0%b2%8e%e0%b2%82%e0%b2%a6%e0%b3%81-%e0%b2%85%e0%b2%b9%e0%b2%82%e0%b2%95%e0%b2%be%e0%b2%b0-%e0%b2%a4/#UGVqYXdhcmEuanB ಸಾವಿರಾರು ಜನರು ಸೇರಿದ್ದ ಜಾತ್ರೆಯಲ್ಲಿ ಒಂದಷ್ಟು […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links