‘ತಾನಾಜಿ’: ಭಾರತೀಯ ಚಿತ್ರರಂಗದ ಮಾಸ್ಟರ್ ಪೀಸ್ ಎಂದು ಕೊಂಡಾಡಿದ ಟ್ವೀಟಿಗರು.!

Source Credit Kannada.boldsky.com

ನೆನಪಿನಲ್ಲಿ ಉಳಿಯುವಂಥ ಚಿತ್ರ

”ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ತೆರೆಕಂಡ ಅತ್ಯುತ್ತಮ ಚಿತ್ರಗಳ ಸಾಲಿನಲ್ಲಿ ‘ತಾನಾಜಿ: ದಿ ಅನ್ ಸಂಗ್ ವಾರಿಯರ್’ ಸಿನಿಮಾ ಖಂಡಿತ ನೆನಪಿನಲ್ಲಿ ಉಳಿಯುವಂಥದ್ದು. ಅಜಯ್ ದೇವ್ಗನ್ ಮುಡಿಗೆ ಈ ಚಿತ್ರದಿಂದ ಹೊಸ ಗರಿ ಲಭಿಸಿದೆ. ಚಿತ್ರದ ಆಕ್ಷನ್ ಸನ್ನಿವೇಶಗಳು ಮೈನವಿರೇಳಿಸುವಂತಿದೆ” ಎಂದು ರೋಹಿತ್ ಜೈಸ್ವಾಲ್ ಟ್ವೀಟ್ ಮಾಡಿ 4 ಸ್ಟಾರ್ಸ್ ಕೊಟ್ಟಿದ್ದಾರೆ.

ಮಾಸ್ಟರ್ ಪೀಸ್.!

”ತಾನಾಜಿ’ ಚಿತ್ರದಲ್ಲಿ ಯಾವುದೇ ತಪ್ಪುಗಳಿಲ್ಲ. ಅಸಂಬದ್ಧ ಸನ್ನಿವೇಶಗಳಿಲ್ಲ. ಸ್ಕ್ರಿಪ್ಟ್, ಸ್ಕ್ರೀನ್ ಪ್ಲೇ, ಡೈರೆಕ್ಷನ್, ಆಕ್ಷನ್.. ಎಲ್ಲವೂ ಪರ್ಫೆಕ್ಟ್ ಆಗಿ ಇರುವುದರಿಂದ ಸಿನಿಮಾ ‘ಮಾಸ್ಟರ್ ಪೀಸ್’ ಆಗಿದೆ. ಅಜಯ್ ದೇವ್ಗನ್ ರಾಷ್ಟ್ರ ಪ್ರಶಸ್ತಿಗೆ ಅರ್ಹವಾದ ನಟನೆ. ಸೈಫ್ ನಟನೆ ಕೂಡ ಬ್ರಿಲ್ಲಿಯೆಂಟ್” ಎಂದು ಬಾಬನ್ ಝೆಂಡೆ ಎಂಬುವರು ಟ್ವೀಟ್ ಮಾಡಿ 4.5 ಸ್ಟಾರ್ಸ್ ಕೊಟ್ಟಿದ್ದಾರೆ.

ದ್ವಿತೀಯಾರ್ಧ ಕೊಂಚ ಸ್ಲೋ

”ತಾನಾಜಿ’ ಚಿತ್ರವನ್ನು ತೆರೆಗೆ ತಂದಿರುವ ರೀತಿ ಚೆನ್ನಾಗಿದೆ. ಸಿನಿಮಾದ ಮೊದಲಾರ್ಧ ಅತ್ಯುತ್ತಮವಾಗಿದೆ. ಚಿತ್ರದ ದ್ವಿತೀಯಾರ್ಧ ಕೊಂಚ ನಿಧಾನಗತಿಯಲ್ಲಿ ಸಾಗುತ್ತದೆ. ವಿಷುವಲ್ ಎಫೆಕ್ಟ್ಸ್ ಉತ್ತಮವಾಗಿ ಮೂಡಿಬಂದಿದೆ. ಎಲ್ಲಾ ನಟರ ಅಭಿನಯ ಸೂಪರ್” ಎಂದು ತನ್ಮಯ್ ಎಂಬವರು ಟ್ವೀಟ್ ಮಾಡಿದ್ದಾರೆ.

ತಾನಾಜಿ ಬ್ಲಾಕ್ ಬಸ್ಟರ್ ಚಿತ್ರ

”ತಾನಾಜಿ’ ಬ್ಲಾಕ್ ಬಸ್ಟರ್ ಚಿತ್ರ. ಈ ಸಿನಿಮಾನ ನೀವು ಮಿಸ್ ಮಾಡಿಕೊಳ್ಳಬೇಡಿ. ಅಜಯ್ ದೇವಗನ್ ಪವರ್ ಪ್ಯಾಕ್ಡ್ ಪರ್ಫಾಮೆನ್ಸ್ ಕೊಟ್ಟಿದ್ದಾರೆ. ತೆರೆಮೇಲೆ ಕಾಜೋಲ್ ಸುಂದರವಾಗಿ ಕಾಣ್ತಾರೆ. ಸೈಫ್ ಅಲಿ ಖಾನ್ ಅಭಿನಯ ಕೂಡ ಉತ್ತಮವಾಗಿ ಮೂಡಿಬಂದಿದೆ” ಎಂದು ಗುರು ಎಂಬುವರು ಟ್ವೀಟ್ ಮಾಡಿದ್ದಾರೆ.

ಮೈನವಿರೇಳಿಸುವ ಚಿತ್ರ

”ತಾನಾಜಿ’ ಚಿತ್ರದಲ್ಲಿ ಇರುವ ಕ್ಲೈಮ್ಯಾಕ್ಸ್ ಅಜಯ್ ದೇವ್ಗನ್ ವೃತ್ತಿ ಜೀವನದಲ್ಲಿಯೇ ದಿ ಬೆಸ್ಟ್ ಕ್ಲೈಮ್ಯಾಕ್ಸ್. ನಿಮ್ಮೆಲ್ಲರ ಮೈನವಿರೇಳಿಸುವ ಚಿತ್ರ ಇದು. ‘ತಾನಾಜಿ’ ಚಿತ್ರ ಮತ್ತು ಅಜಯ್ ದೇವ್ಗನ್ ನಟನೆ ರಾಷ್ಟ್ರ ಪ್ರಶಸ್ತಿಗೆ ಅರ್ಹವಾಗಿದೆ. ಸಿನಿಮಾದ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಚೆನ್ನಾಗಿದೆ” ಅಂತ ಲಾಲು ಮಖೀಜಾ ಎಂಬುವರು ಟ್ವೀಟ್ ಮಾಡಿದ್ದಾರೆ.

Source Credit Kannada.boldsky.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

'ಚಪಾಕ್' ನೋಡಿ ದೀಪಿಕಾ ಪಡುಕೋಣೆಗೆ ಸಲ್ಯೂಟ್ ಹೊಡೆದ ಟ್ವೀಟಿಗರು.!

Tue Jan 14 , 2020
Source Credit Kannada.boldsky.com Pin it Email https://nirantharanews.com/%e0%b2%a4%e0%b2%be%e0%b2%a8%e0%b2%be%e0%b2%9c%e0%b2%bf-%e0%b2%ad%e0%b2%be%e0%b2%b0%e0%b2%a4%e0%b3%80%e0%b2%af-%e0%b2%9a%e0%b2%bf%e0%b2%a4%e0%b3%8d%e0%b2%b0%e0%b2%b0%e0%b2%82%e0%b2%97%e0%b2%a6/#MS1jaGhhcGFhay1 ನಿರೀಕ್ಷೆ ಮಟ್ಟಕ್ಕಿಂತ ಹೆಚ್ಚಿದೆ.! ”ಚಪಾಕ್’ ಚಿತ್ರ ನನ್ನ ನಿರೀಕ್ಷೆ ಮಟ್ಟಕ್ಕಿಂತ ಹೆಚ್ಚಿದೆ. ತಮ್ಮ ವೃತ್ತಿ ಜೀವನದಲ್ಲಿ ದೀಪಿಕಾ ಪಡುಕೋಣೆ ದಿ ಬೆಸ್ಟ್ ಪರ್ಫಾಮೆನ್ಸ್ ಕೊಟ್ಟಿದ್ದಾರೆ. ಈ ಚಿತ್ರ ಸಮಾಜಕ್ಕೆ ಹಿಡಿದಿರುವ ಕೈಗನ್ನಡಿ. ವಿಕ್ರಾಂತ್ ಸೇರಿದಂತೆ ಹಲವು ನಟರು ಉತ್ತಮ ನಟನೆ ಮಾಡಿದ್ದಾರೆ” ಎಂದು ಇಂದ್ರಜಿತ್ ಎಂಬುವರು ಟ್ವೀಟ್ ಮಾಡಿ ಚಿತ್ರಕ್ಕೆ 4.5 ಸ್ಟಾರ್ಸ್ ರೇಟಿಂಗ್ ಕೊಟ್ಟಿದ್ದಾರೆ. ‘ಚಪಾಕ್’ ಚಿತ್ರದಲ್ಲಿ ಆಸಿಡ್ ಎರಚಿದವನ ಹೆಸರು ರಾಜೇಶ್ ಅಲ್ಲ: ಬಷೀರ್ ಖಾನ್.! Pin it Email https://nirantharanews.com/%e0%b2%a4%e0%b2%be%e0%b2%a8%e0%b2%be%e0%b2%9c%e0%b2%bf-%e0%b2%ad%e0%b2%be%e0%b2%b0%e0%b2%a4%e0%b3%80%e0%b2%af-%e0%b2%9a%e0%b2%bf%e0%b2%a4%e0%b3%8d%e0%b2%b0%e0%b2%b0%e0%b2%82%e0%b2%97%e0%b2%a6/#ZGlzcGxheS1jaGh […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links