ತಮಿಳು ಸ್ಟಾರ್ ಸಿನಿಮಾದಲ್ಲಿ ಅವಕಾಶ ಪಡೆದ ಸಂಹಿತಾ ಶಾ ವಿಶೇಷ

Source Credit Filmibeat.com

ನಿಮ್ಮ ಚಿತ್ರರಂಗದ ಪ್ರವೇಶ ಆಗಿದ್ದು ಹೇಗೆ?

ನನ್ನದು ಮೂಲತಃ ಬೆಂಗಳೂರು. ಎಂಬಿಎ ವಿದ್ಯಾರ್ಥಿನಿಯಾಗಿರುವಾಗಲೇ ಎಲ್ ವಿ ಡಿಎಸ್ ಎನ್ನುವ ಡ್ಯಾನ್ಸ್ ಸ್ಕೂಲ್ ನಲ್ಲಿ ನೃತ್ಯ ತರಬೇತಿ ಪಡೆಯುತ್ತಿದ್ದೆ. ಅಲ್ಲಿ ನನ್ನನ್ನು ಗಮನಿಸಿದ ಸಿನಿಮಾ ಕೊರಿಯೋಗ್ರಾಫರ್ ಒಬ್ಬರು ಮೊದಲ ಅವಕಾಶ ನೀಡಿದರು. ಅದು ನವನಾಯಕನೋರ್ವ ಜತೆಗೆ 143 ಎನ್ನುವ ಚಿತ್ರದ ಡ್ಯುಯೆಟ್ ಸಾಂಗಲ್ಲಿ ಹೆಜ್ಜೆ ಹಾಕುವುದಾಗಿತ್ತು. ಹಾಗೆ ಇಟ್ಟ ಹೆಜ್ಜೆ ಇಂದು ನಾಯಕಿಯಾಗುವ ತನಕ ತಂದು ನಿಲ್ಲಿಸಿದೆ.

ಇದುವರೆಗೆ ನಟಿಸಿರುವ ಚಿತ್ರಗಳ ಬಗ್ಗೆ ಹೇಳಿ

ದೆವ್ವದ ಚಿತ್ರಗಳ ಟ್ರೆಂಡ್ ಹುಟ್ಟಿಕೊಂಡಾಗ ಬಂದಂಥ ಚಿತ್ರ `ಮತ್ತೆ ಶ್!’ ಅದರಲ್ಲಿ ವಿಜಯ್ ಚೆಂಡೂರ್ ಗೆ ಜೋಡಿಯಾಗಿ ನಟಿಸಿದೆ. ರವಿಶಂಕರ್ ಅವರೊಂದಿಗೆ ಡಿಸೆಂಬರ್ 16 ಎನ್ನುವ ಸಿನಿಮಾದಲ್ಲಿ ನಟಿಸಿದೆ. `ಪಟ್ಟಾಭಿಷೇಕ’ ಚಿತ್ರದಲ್ಲಿ ಯುವರಾಜ್ ಕಲ್ಯಾಣ್ ಕುಮಾರ್ ಅವರಿಗೆ ಒನ್ ಆಫ್ ದಿ ಹೀರೋಯಿನ್ ಆದೆ. `ಎ ಒನ್’ ನ ಚಿತ್ರದ ಮೂಲಕ ಒನ್ ಆ್ಯಂಡ್ ಓನ್ಲಿ ನಾಯಕಿಯಾಗುವ ಅವಕಾಶ ಲಭಿಸಿತು. ಚಿತ್ರದ ನಾಯಕ ನಿರ್ದೇಶಕರಾದ ಎಆರ್ ರಮೇಶ್ ಅವರೊಂದಿಗೆ `ನಂದೇ ಆಟ’ ಎನ್ನುವ ಹೊಸ ಚಿತ್ರದಲ್ಲಿಯೂ ನಟಿಸುತ್ತಿದ್ದೇನೆ. ಇದರೊಂದಿಗೆ ರಾಜುದೇವಸಂದ್ರ ನಿರ್ದೇಶನದ `ಕತ್ಲೆಕಾಡು’ ಸಿನಿಮಾದಲ್ಲಿ ಕೂಡ ನಟಿಸಿದ್ದು, ಅದರ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ

‘ಕತ್ಲೆಕಾಡು’ ಚಿತ್ರ ನೀಡಿದ ವಿಶೇಷ ಅನುಭವ ಏನು?

ಚಿತ್ರಕ್ಕಾಗಿ ಕಾಡಿನಲ್ಲಿ ಶೂಟಿಂಗ್ ಮಾಡಲಾಗಿದೆ. ಆಗ ಇದುವರೆಗೆ ಮೃಗಾಲಯಗಳಲ್ಲಿ ಮಾತ್ರ ನೋಡಿದ್ದಂಥ ಪ್ರಾಣಿಗಳನ್ನು ಕಾಡಿನಲ್ಲೇ ನೇರವಾಗಿ ನೋಡುವ ಅವಕಾಶ ನನಗೆ ಲಭಿಸಿತು. ಆನೆ, ಚಿರತೆ, ಜಿಂಕೆ, ಗೂಬೆ.. ಹೀಗೆ ವೈವಿಧ್ಯಮಯವಾದ ಪ್ರಾಣಿಗಳನ್ನು ನೋಡಿ ತುಂಬ ಖುಷಿಯಾಯಿತು. ಈ ಚಿತ್ರವನ್ನು ನೋಡಿದವರಿಗೂ ಅಷ್ಟೇ, ಪ್ರಕೃತಿ ಬಗ್ಗೆ ಹೆಚ್ಚು ಆಸಕ್ತಿ ಮೂಡುವುದು ಸಹಜ.

ಇವೆಲ್ಲವುಗಳ ಜತೆ ಪರಭಾಷಾ ಸಿನಿಮಾಗಳಲ್ಲಿ ಕೂಡ ನಟಿಸಿದ್ದೀರಂತೆ?

ನನ್ನ ಮೊದಲ ಅನ್ಯಭಾಷಾ ಚಿತ್ರ ಕರ್ನಾಟಕದಲ್ಲೇ ಆಯಿತು. ಅದು `ರಂಗ್ ರಂಗ್ ದ ದಿಬ್ಬಣ’ ಎನ್ನುವ ತುಳುಭಾಷೆಯ ಚಿತ್ರ. ತೆಲುಗಲ್ಲಿ `ನಕ್ಷತ್ರಂ’ ಎನ್ನುವ ಚಿತ್ರದಲ್ಲಿ ನಟಿಸಿದ್ದೇನೆ. ತಮಿಳಲ್ಲಿ `ನಾ ವೇರೆ ಮಾದಿರಿ’ ಮತ್ತು `ಏಳಾಂ ಪಿರೈ’ ಎಂಬ ಎರಡು ಚಿತ್ರಗಳಲ್ಲಿ ನಟಿಸಿದ್ದೇನೆ. ತಮಿಳಿನಲ್ಲಿ ಒಂದು ದೊಡ್ಡ ಬ್ಯಾನರ್ ಸಿನಿಮಾದಲ್ಲಿ ನಟಿಸಿದ್ದೇನೆ. ಚಿತ್ರದ ಇಬ್ಬರು ನಾಯಕಿಯರಲ್ಲಿ ಒಬ್ಬಳಾಗಿ ನಾನು ನಟಿಸಿದ್ದೇನೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು ಅದರಲ್ಲಿ ಎರಡು ಹಾಡುಗಳಲ್ಲಿ ನಾನಿದ್ದೇನೆ. ಚಿತ್ರದ ನಾಯಕರಾಗಿ ಸ್ಟಾರ್ ನಟರೊಬ್ಬರು ಅಭಿನಯಿಸುತ್ತಿದ್ದು ತಾವಾಗಿಯೇ ಮಾಧ್ಯಮದ ಮುಂದೆ ಹೇಳುವ ತನಕ ಚಿತ್ರದ ಬಗ್ಗೆ ಮಾಧ್ಯಮಗಳಿಗೆ ತಿಳಿಸದಂತೆ ಕಾಂಟ್ರ್ಯಾಕ್ಟ್ ಮಾಡಿಕೊಂಡಿದ್ದಾರೆ.

ನಿಮಗೆ ಕೌಟುಂಬಿಕವಾಗಿ ಸಿಗುವ ಪ್ರೋತ್ಸಾಹ ಹೇಗಿದೆ?

ತಂದೆ ತಾಯಿಗೆ ನಾವು ನಾಲ್ಕು ಮಂದಿ ಮಕ್ಕಳು. ನನಗೆ ಇಬ್ಬರು ಅಣ್ಣಂದಿರು. ನಾನೊಬ್ಬಳೇ ಹೆಣ್ಣು ಮಗುವಾದ ಕಾರಣ ಮುದ್ದಿನಿಂದ ಬೆಳೆದೆ. ಹಾಗಾಗಿಯೇ ಆರಂಭದಲ್ಲಿ ಸಿನಿಮಾ ಕ್ಷೇತ್ರಕ್ಕೆ ಹೋಗಿ ಕಷ್ಟಪಡುವುದು ಬೇಡ ಎಂದೇ ಹೇಳುತ್ತಿದ್ದರು. ಆದರೆ ನನ್ನ ನಿರಂತರ ಉತ್ಸಾಹ ಮತ್ತು ಸಿಗುತ್ತಿರುವ ಅವಕಾಶಗಳನ್ನು ನೋಡಿ ಮನಸು ಬದಲಿಸಿದ್ದಾರೆ. ನಿಜ ಹೇಳಬೇಕೆಂದರೆ ತಮಿಳಿನ ಸ್ಟಾರ್ ಚಿತ್ರದಲ್ಲಿ ಅವಕಾಶ ದೊರಕಿದ್ದು ನನ್ನ ತಂದೆಯ ಮೂಲಕವೇ ಎಂದು ಹೇಳಬಹುದು.

Source Credit Filmibeat.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

Exclusive Interview: ಕನ್ನಡದಲ್ಲಿ ಅತಿ ಹೆಚ್ಚು ಬೇಡಿಕೆಯ ಸ್ವಿಲ್ ಫೋಟೋಗ್ರಾಫರ್ ಇವರೇ

Thu Jan 9 , 2020
Source Credit Filmibeat.com Pin it Email https://nirantharanews.com/%e0%b2%a4%e0%b2%ae%e0%b2%bf%e0%b2%b3%e0%b3%81-%e0%b2%b8%e0%b3%8d%e0%b2%9f%e0%b2%be%e0%b2%b0%e0%b3%8d-%e0%b2%b8%e0%b2%bf%e0%b2%a8%e0%b2%bf%e0%b2%ae%e0%b2%be%e0%b2%a6%e0%b2%b2%e0%b3%8d%e0%b2%b2%e0%b2%bf/#MS0xNTc4MzkwNDA ಸಿನಿಮಾಗಾಗಿ ಸರ್ಕಾರಿ ಕೆಲಸ ಬಿಟ್ಟೆ ”ನನ್ನ ಹೆಸರು ರಾಘವೇಂದ್ರ ಬಿ ಕೋಲಾರ. ಕೋಲಾರದ ಒಂದು ಹಳ್ಳಿಯವನು. ಬಿಎಂಟಿಸಿಯಲ್ಲಿ ಸರ್ಕಾರಿ ನೌಕರನಾಗಿ ಕೆಲಸ ಮಾಡುತ್ತಿದೆ. ಆದರೆ, ಸಿನಿಮಾಗೆ ಬರುವ ಆಸೆ ತುಂಬ ಇತ್ತು. ಆಗ ನಮ್ಮ ಅಣ್ಣ ಸೆಟ್ ಕೆಲಸಕ್ಕೆ ಸೇರಿಸಿದರು. 2008ರಲ್ಲಿ ಸೀರಿಯಲ್ ಗೆ ಕಸ ಹೊಡೆಯಲು ಸೇರಿಕೊಂಡು, ಅಲ್ಲಿಂದ ನನ್ನ ಚಿತ್ರರಂಗದ ಜರ್ನಿ ಶುರು ಮಾಡಿದೆ. ‘ಮುಗಿಲು’ ನನ್ನ ಮೊದಲ ಧಾರಾವಾಹಿ. ಆಗೆಲ್ಲ 30 ರಿಂದ 40 ರೂಪಾಯಿ ಸಿಗುತ್ತಿತ್ತು ಅಷ್ಟೇ.” Pin […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links