ತಡ ರಾತ್ರಿಯಲ್ಲಿ ಐ ಟಿ ಅಧಿಕಾರಿಗಳನ್ನು ಮನವಿ ಮಾಡಿಕೊಂಡ ರಶ್ಮಿಕಾ.. ಅಧಿಕಾರಿಗಳು ಮಾಡಿದ್ದೇನು ಗೊತ್ತಾ?

Source Credit RJ News Kannada

ನಿನ್ನೆ ಬೆಳ್ಳಂಬೆಳ್ಳಿಗೆ ಐ ಟಿ ಅಧಿಕಾರಿಗಳು ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಅವರ ಮನೆ ಮೇಲೆ ದಾಳಿ ನಡೆಸಿದ್ದು, ಶೋಧ ಕಾರ್ಯವನ್ನು ನಡೆಸುತ್ತಿದ್ದರು.. ಕೊಡಗು ಜಿಲ್ಲೆ ವಿರಾಜಪೇಟೆಯಲ್ಲಿನ ರಶ್ಮಿಕಾ ಅವರ ಬಂಗಲೆಗೆ ಐ ಟಿ ಅಧಿಕಾರಿಗಳು ನಾವು ರಶ್ಮಿಕಾ ಅವರ ಅಭಿಮಾನಿಗಳು ಅವರಿಗೆ ಸನ್ಮಾನ ಮಾಡಬೇಕೆಂದಿದ್ದೇವೆ ಎಂದು ರಶ್ಮಿಕಾ ಅವರ ತಂದೆ ಬಳಿ ಹೇಳಿದರು.. ಅವರು ಮನೆಯೊಳಗೆ ಬರಲು ತಿಳಿಸಿದರು.. ಮನೆಯೊಳಕ್ಕೆ ಪ್ರವೇಶ ಪಡೆದ ಬಳಿಕವಷ್ಟೇ ಅವರು ಐ ಟಿ ಅಧಿಕಾರಿಗಳು ಎಂಬುದನ್ನು ತಿಳಿಸಿದ್ದಾರೆ.. ನಂತರ ಮನೆಯಲ್ಲಿ ಸಂಪೂರ್ಣ ಶೋಧ ಕಾರ್ಯ ನಡೆಸಿದ್ದಾರೆ… ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ..

ಆ ಸಮಯದಲ್ಲಿ ರಶ್ಮಿಕಾ ಅವರನ್ನು ವಿಚಾರಿಸಿದ್ದಾರೆ.. ಅವರು ಹೈದರಾಬಾದ್ ನಲ್ಲಿ ಇರುವುದಾಗಿ ತಂದೆ ತಿಳಿಸಿದ್ದಾರೆ.‌. ತಕ್ಷಣ ಐ ಟಿ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿದ್ದು ಈ ಕೂಡಲೇ ವಿಚಾರಣೆಗೆ ಹಾಜರಾಗಬೇಕೆಂದು ತಿಳಿಸಿದ್ದಾರೆ..

ನಂತರ ಮನೆಗೆ ತೆರಳಿದ್ದ 10 ಜನರ ತಂಡದಲ್ಲಿ ಮತ್ತೊಂದು ತಂಡ ಮಾಡಿಕೊಂಡು ವಿರಾಜಪೇಟೆ ಟೌನ್ ನಲ್ಲಿನ ರಶ್ಮಿಕಾ ಅವರ ಸೆರೆನಿಟಿ ಹಾಲ್ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದಾರೆ.. ರಶ್ಮಿಕಾ ಹಾಗೂ ರಕ್ಷಿತ್ ನಿಶ್ಚಿತಾರ್ಥ ನಡೆದ ಹಾಲ್ ಅದು..

ನಂತರ ರಾತ್ರಿವರೆಗೂ ದಾಖಲೆಗಳ ಪರಿಶೀಲನೆ ನಡೆಯುತ್ತಲೇ ಇತ್ತು.. ಆ ಸಮಯದಲ್ಲಿ ರಶ್ಮಿಕಾ ಅವರು ವಿರಾಜಪೇಟೆಗೆ ಆಗಮಿಸಿದ್ದು ಮನೆಗೆ ತೆರಳಿದ್ದಾರೆ.. ಹೊರಗೆ ಮಾದ್ಯಮದವರಿಗೆ ಪ್ರತಿಕ್ರಿಯೆ ನೀಡದಂತೆ ಪೊಲೀಸರು ಮನೆಯೊಳಗೆ ಕರೆದುಕೊಂಡು ಹೋಗಿದ್ದಾರೆ..

ಇನ್ನು ಅಧಿಕಾರಿಗಳು ಹೊಟೆಲ್ ನಿಂದ ಊಟ ತರಿಸಿಕೊಂಡು ದಾಖಲೆಗಳ ಪರಿಶೀಲನೆಯನ್ನು ಮುಂದುವರೆಸಿದ್ದರು.. ನಂತರ ರಶ್ಮಿಕಾ ಮಂದಣ್ಣ ವಿಚಾರಣೆಗೆ ಹಾಜರಾದರು.. 10 ಮಂದಿ ಅಧಿಕಾರಿಗಳ ತಂಡ ಒಂದಾದರ ಮೇಲೆ ಒಂದರಂತೆ ರಶ್ಮಿಕಾ ಅವರಿಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರುದಿದೆ.. ಸಂಭಾವನೆ ಎಷ್ಟು..‌ ಎಷ್ಟು ಸಿನಿಮಾ ಮಾಡಿದ್ದೀರಾ? ಎಷ್ಟಕ್ಕೆ ಸಹಿ ಮಾಡಿ ಅಡ್ವಾನ್ಸ್ ಪಡೆದಿದ್ದೀರಾ? ನಿಮ್ಮ ಬಳಿ ಇರುವ ಕಾರ್ ಗಳಿಗೆ ಟ್ಯಾಕ್ಸ್ ಕಟ್ಟಿರುವ ಬಿಲ್ ಗಳು ಎಲ್ಲಿ? ಸಿನಿಮಾ ಬಿಟ್ಟು ಬೇರೆ ಆಸ್ತಿಗಳ ವಿವರ ತಿಳಿಸಿ.. ನಿಮ್ಮ ಹೆಸರಿನಲ್ಲಿ ಇರುವ ಆಸ್ತಿಯೆಲ್ಲಾ ನೀವೆ ಸಂಪಾದಿಸಿದ್ದ? ಹೀಗೆ 10 ಮಂದಿ ಅಧಿಕಾರಿಗಳು ರಶ್ಮಿಕಾ ಅವರಿಗೆ ಪ್ರಶ್ನೆಗಳ ಸುರಿಮಳೆ ಗರೆದಿದ್ದು, ಕೆಲವೊಂದಕ್ಕೆ ಉತ್ತರ ನೀಡಿರುವ ರಶ್ಮಿಕಾ ಕೆಲವೊಂದು ತಿಳಿದಿಲ್ಲ ಸಮಯ ಕೊಡಿ ದಾಖಲೆ ಒದಗಿಸುವೆ ಎಂದಿದ್ದಾರಂತೆ..

ಇನ್ನು ತಡ ರಾತ್ರಿ ಆದರೂ ಕೂಡ ರಶ್ಮಿಕಾ ಅವರ ವಿಚಾರಣೆ ನಡೆಯುತ್ತಲೇ ಇದ್ದ ಸಮಯದಲ್ಲಿ ರಶ್ಮಿಕಾ ಅವರು ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದು, ವಿಚಾರಣೆ ಎದುರಿಸಲು ಸಾಧ್ಯವಾಗುತ್ತಿಲ್ಲ.. ಬೆಳಿಗ್ಗೆ ಮುಂದುವರೆಸಿ ಎಂದು ಮನವಿ ಮಾಡಿದ್ದಾರೆ.. ವ್ಯಕ್ತಿಯ ಆರೋಗ್ಯ ಸರಿಯಿಲ್ಲದೇ ವಿಚಾರಣೆ ಎದುರಿಸಲು ಸಮರ್ಥರಿಲ್ಲದಾಗ ಐ ಟಿ ಅಧಿಕಾರಿಗಳು ವಿಚಾರಣೆ ಮಾಡುವುದಿಲ್ಲ‌. ಅದೇ ರೀತಿ ರಶ್ಮಿಕಾ ಮಂದಣ್ಣ ಅವರ ಮನವಿಗೆ ಸ್ಪಂದಿಸಿ ವಿಚಾರಣೆಯನ್ನು ಇಂದು ಮುಂದುವರೆಸಲಿದ್ದಾರೆ..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಕುರಿ ಪ್ರತಾಪ್ ನಡವಳಿಕೆ ಬಗ್ಗೆ ಸತ್ಯ ಬಿಚ್ಚಿಟ್ಟ ಶ್ವೇತಾ ಚಂಗಪ್ಪ.

Fri Jan 17 , 2020
Source Credit RJ News Kannada ಬಿಗ್ ಬಾಸ್ ಮನೆಯ ಕುರಿ ಪ್ರತಾಪ್ ಇತ್ತೀಚಿನ ದಿನಗಳಲ್ಲಿ ಟಾಸ್ಕ್ ವಿಷಯಗಳಲ್ಲಿ ಪ್ರಬಲ ಪೈಪೋಟಿ ನೀಡುತ್ತಿದ್ದು, ಬಿಗ್ ಬಾಸ್ ಟ್ರೋಫಿ ಗೆಲ್ಲಲು ಬಹಳ ಹತ್ತಿರವಾಗಿದ್ದಾರೆನ್ನಬಹುದು.. ಇನ್ನು ಬಿಗ್ ಬಾಸ್ ಮನೆಯಲ್ಲಿ ಕುರಿ ಪ್ರತಾಪ್ ಅವರ ನಡೆದುಕೊಳ್ಳುವ ರೀತಿ ಸಂಪೂರ್ಣ ನಾಟಕ.. ಇಷ್ಟೊಂದು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ಆದರೂ ಈ ರೀತಿ ತಬ್ಬಿಬ್ಬಾಗೋ ರೀತಿ ನಡೆದುಕೊಳ್ಳೋದೇಕೆ.. ಅವರು ಫೇಕ್ ಎಂಬೆಲ್ಲಾ ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗಿದ್ದವು.. Pin it Email https://nirantharanews.com/%e0%b2%a4%e0%b2%a1-%e0%b2%b0%e0%b2%be%e0%b2%a4%e0%b3%8d%e0%b2%b0%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%90-%e0%b2%9f%e0%b2%bf-%e0%b2%85%e0%b2%a7%e0%b2%bf%e0%b2%95%e0%b2%be/#UGhvdG9HcmlkXzE ಅಷ್ಟೇ ಅಲ್ಲದೆ ಮನೆಯೊಳಗಿನ ಕೆಲ ಸದಸ್ಯರೂ ಕೂಡ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links