ಡೈರಕ್ಟರ್ ಆಗುವೆ ಎಂದು ಧೈರ್ಯವಾಗಿ ಹೇಳುವ ಅಂಗವಿಕಲ

Source Credit Filmibeat.com

ರಾಯಚೂರಿನ ಹುಡುಗ ರಮೇಶ್

ಪ್ರೇಮಕವಿ ರಮೇಶ್ ಮೂಲತಃ ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕು, ಹರ್ವಾಪೂರ ಎಂಬ ಪುಟ್ಟ ಗ್ರಾಮದವರು. ಪೋಲಿಯೋದಿಂದ ಹುಟ್ಟಿನಿಂದ ಕಾಲು ಕಳೆದುಕೊಂಡರು. ಹೀಗಿದ್ದ ರಮೇಶ್ 15 ವರ್ಷ ಇರುವಾಗಲೇ ಸಿನಿಮಾದಿಂದ ಸ್ಫೂರ್ತಿ ಪಡೆದು, ಸಿನಿಮಾದಲ್ಲಿಯೇ ಕೆಲಸ ಮಾಡುವ ಗುರಿ ಹೊಂದಿದರು. ನಿರ್ದೇಶಕರಾಗಬೇಕು ಎಂದು ನಿರ್ಧಾರ ಮಾಡಿದರು.

2007ರಲ್ಲಿ ಬೆಂಗಳೂರಿಗೆ ಬಂದೆ

2007ರಲ್ಲಿ 7ನೇ ಕ್ಲಾಸ್ ಓದುವಾಗ ರಮೇಶ್ ಬೆಂಗಳೂರಿಗೆ ಬಂದರು. ಬೆಂಗಳೂರಿಗೆ ಬಂದು ಒಂದು ಸಂಸ್ಥೆಯಲ್ಲಿ ಇದ್ದ ರಮೇಶ್ ರಿಗೆ, 10 ವರ್ಷ ಏನು ಮಾಡಲು ಆಗಲಿಲ್ಲವಂತೆ. ಮುಂದೆ ಕಾಲೇಜಿಗೆ ಹೋಗುವಾಗ ಒಳ್ಳೆಯ ಸ್ನೇಹಿತರು ಸಿಕ್ಕರು. ಅಲ್ಲಿಂದ ಬೆಂಗಳೂರು ಸುತ್ತಾಟ ನಡೆಯಿತು. ಮುಂದೆ ಎಲ್ಲರ ಪರಿಚಯ, ಎಲ್ಲದರ ಬಗ್ಗೆ ತಿಳುವಳಿಕೆ ಶುರುವಾಯಿತು ಎಂದರು ರಮೇಶ್.

ಕಿರುಚಿತ್ರದ ಬಿಡುಗಡೆ ಆಗಬೇಕಿದೆ

ರಮೇಶ್ ‘ಕರಾಟೆ’ ಎನ್ನುವ ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಕಿರುಚಿತ್ರದ ಬಿಡುಗಡೆ ಆಗಬೇಕಾಗಿದೆ. ಚಿತ್ರದ ಕೊನೆಯ ಹಂತದ ಕೆಲಸ ನಡೆಯುತ್ತಿದೆ. ನಾಲ್ಕು ಭಾಷೆಯಲ್ಲಿ ಈ ಕಿರುಚಿತ್ರ ಬರಲಿದೆಯಂತೆ. ತನ್ನ ಹಣ ಕೂಡು ಹಾಕಿ ಈ ಕಿರುಚಿತ್ರವನ್ನು ಮಾಡಿದ್ದಾರಂತೆ. ‘ಕರಾಟೆ’ ಕರಾಟೆ ಕಲೆಯ ಬಗ್ಗೆ ಇದೆ. ಜೊತೆಗೆ ಒಂದು ಲವ್ ಸ್ಟೋರಿ ಇರುತ್ತದೆ. ಇದರ ಟೀಸರ್ ಸದ್ಯದಲ್ಲಿಯೇ ಬರುತ್ತದೆ.

ಉಪೇಂದ್ರ, ಧ್ರುವ ಸರ್ಜಾ, ಯಶ್ ಭೇಟಿ

ಸ್ಟಾರ್ ನಟರ ಹುಟ್ಟುಹಬ್ಬ ಹಾಗೂ ಇತರ ಕಾರ್ಯಕ್ರಮದಲ್ಲಿ ಅವರನ್ನು ರಮೇಶ್ ಭೇಟಿ ಮಾಡುತ್ತಾ ಇರುತ್ತಾರೆ. ಹೀಗಾಗಿ ಅವರ ಸ್ನೇಹ ಕೂಡ ಸಿಕ್ಕಿದೆಯಂತೆ. ಧ್ರುವ ಸರ್ಜಾ ತಮ್ಮ ಕಿರುಚಿತ್ರದ ಟೀಸರ್ ಬಿಡುಗಡೆ ಮಾಡಿಕೊಡುವುದಾಗಿ ಹೇಳಿದ್ದಾರಂತೆ. ಉಪೇಂದ್ರ, ಯಶ್, ದುನಿಯಾ ವಿಜಯ್ ಹೀಗೆ ಅನೇಕರನ್ನು ರಮೇಶ್ ಮೀಟ್ ಮಾಡಿದ್ದಾರೆ.

ಚಲನಚಿತ್ರಕ್ಕಾಗಿ ಕಥೆ ಸಿದ್ಧವಾಗುತ್ತಿದೆ

ಕಿರುಚಿತ್ರದ ನಂತರ ದೊಡ್ಡ ಸಿನಿಮಾ ಮಾಡುವ ಪ್ಲಾನ್ ರಮೇಶ್ ಅವರದ್ದಾಗಿದೆ. ಈಗಾಗಲೇ ಒಂದು ಕಥೆ ಮಾಡಿಕೊಂಡಿದ್ದಾರಂತೆ. ಕನ್ನಡದ ಒಬ್ಬ ದೊಡ್ಡ ನಟನಿಗೆ ಸಿನಿಮಾ ಮಾಡಬೇಕು ಎನ್ನುವುದು ಅವರ ಕನಸ್ಸಾಗಿದೆ. ಆ ಕನಸನ್ನು ನನಸು ಮಾಡಿಕೊಳ್ಳುವ ದಾರಿಯಲ್ಲಿ ಅವರು ಹೋಗುತ್ತಿದ್ದಾರೆ.

Source Credit Filmibeat.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಶೃಂಗೇರಿಯಲ್ಲಿ ದೇವೇಗೌಡರಿಂದ ಸಹಸ್ರ ಚಂಡಿಕಾ ಯಾಗ: ಪಕ್ಷದ ಬಲವರ್ಧನೆಗೆ ಮುಂದಾದರಾ ಎಚ್ ಡಿಡಿ

Fri Jan 17 , 2020
Source Credit Oneindia.com Pin it Email https://nirantharanews.com/%e0%b2%a1%e0%b3%88%e0%b2%b0%e0%b2%95%e0%b3%8d%e0%b2%9f%e0%b2%b0%e0%b3%8d-%e0%b2%86%e0%b2%97%e0%b3%81%e0%b2%b5%e0%b3%86-%e0%b2%8e%e0%b2%82%e0%b2%a6%e0%b3%81-%e0%b2%a7%e0%b3%88%e0%b2%b0%e0%b3%8d/#Wg== Chikkamagaluru oi-Chetan BP By ಚಿಕ್ಕಮಗಳೂರು ಪ್ರತಿನಿಧಿ | Published: Friday, January 17, 2020, 10:35 [IST] ಚಿಕ್ಕಮಗಳೂರು, ಜನವರಿ 17: ಸತತ ಸೋಲು ಕಂಡ ನಂತರ ರಾಜಕೀಯವಾಗಿ ಪಕ್ಷದ ಬಲವರ್ಧನೆ, ರಾಜಕೀಯ ಭವಿಷ್ಯ, ಕುಟುಂಬದ ಶ್ರೇಯೋಭಿವೃದ್ಧಿಗಾಗಿ ಶಕ್ತಿ ದೇವತೆ ಶೃಂಗೇರಿ ಶಾರದೆಯ ಮೊರೆ ಹೋಗಿದ್ದಾರೆ ಎಚ್ ಡಿ ದೇವೇಗೌಡರು. ನಿನ್ನೆ ಗುರುವಾರವೇ ಪತ್ನಿ ಚನ್ನಮ್ಮ ಅವರೊಂದಿಗೆ ಶೃಂಗೇರಿಗೆ ಆಗಮಿಸಿರುವ ದೇವೇಗೌಡರು ಹಲವು ಹೋಮ ಹವನಗಳನ್ನು ನೆರವೇರಿಸಲಿದ್ದಾರೆ. ಪಕ್ಷ ಉಳಿವಿಗಾಗಿ ಶೃಂಗೇರಿ ಶಾರದೆ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links