ಡಿ.5 ರಂದು ಖಾಸಗಿ, ಸರ್ಕಾರಿ ಸಂಸ್ಥೆಗಳಿಗೆ ವೇತನ ಸಹಿತ ರಜೆ ಘೋಷಣೆ

Source Credit Oneindia.com

Karwar

oi-Puttappa Koli

|

ಕಾರವಾರ, ಡಿಸೆಮಬರ್ 03: ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಇದೇ ಡಿಸೆಂಬರ್ 05 ರಂದು ಉಪ ಚುನಾವಣೆ ನಡೆಯಲಿರುವ ಕಾರಣ ಚುನಾವಣಾ ಆಯೋಗವು ಈ ಕ್ಷೇತ್ರದ ಎಲ್ಲಾ ಖಾಸಗಿ ಮತ್ತ ಸರ್ಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ನೌಕರರಿಗೆ ವೇತನ ಸಹಿತ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಲ್ಲಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೊಳಪಟ್ಟ ಪ್ರದೇಶ ಹಾಗೂ ಇತರೆಡೆ ಸರ್ಕಾರಿ, ಖಾಸಗಿ, ವ್ಯಾಪಾರ, ವ್ಯವಹಾರ ಮುಂತಾದ ಕಡೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮತದಾರ ಕಾರ್ಮಿಕರಿಗೆ ಸಂಬಳ ಸಹಿತ ರಜೆ ಕೊಡಬೇಕೆಂದು ಹೇಳಿದ್ದಾರೆ.

ಮತದಾರರು ರಜೆಯ ಸೌಲಭ್ಯವನ್ನು ಪಡೆದುಕೊಂಡು ಡಿಸೆಂಬರ್ 05 ರಂದು ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದು ವಿನಂತಿಸಿಕೊಂಡಿದ್ದಾರೆ.

ಮತದಾನ ಮಾಡುವ ಕಾರ್ಮಿಕರಿಗೆ ಅಥವಾ ನೌಕರರಿಗೆ ಸಂಬಳ ಪಾವತಿಸಿದ ರಜೆ ನಿರಾಕರಿಸುವ ಸಂಸ್ಥೆಯ ಮಾಲೀಕರು/ಮುಖ್ಯಸ್ಥರ ವಿರುದ್ದ ಜನಪ್ರತಿನಿಧಿ ಕಾಯ್ದೆ 1951 ಕಲಂ 135 ಬ ಅನ್ವಯ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಉಪ ಚುನಾವಣೆಯು ಡಿಸೆಂಬರ್ 05 ರಂದು ನಡೆಯಲಿದ್ದು, ಡಿಸೆಂಬರ್ 09 ರಂದು ಫಲಿತಾಂಶ ಪ್ರಕಟವಾಗಲಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ – ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.

Allow Notifications

You have already subscribed

Source Credit Oneindia.com

Niranthara News

Leave a Reply

Your email address will not be published. Required fields are marked *

Next Post

ಕೆಎಸ್ಆರ್‌ಟಿಸಿ ನೌಕರರಿಗೆ ಸಿಹಿಸುದ್ದಿ ನೀಡಿದ ಹೈಕೋರ್ಟ್‌

Thu Dec 5 , 2019
Source Credit Oneindia.com Pin it Email https://nirantharanews.com/%e0%b2%a1%e0%b2%bf-5-%e0%b2%b0%e0%b2%82%e0%b2%a6%e0%b3%81-%e0%b2%96%e0%b2%be%e0%b2%b8%e0%b2%97%e0%b2%bf-%e0%b2%b8%e0%b2%b0%e0%b3%8d%e0%b2%95%e0%b2%be%e0%b2%b0%e0%b2%bf-%e0%b2%b8%e0%b2%82%e0%b2%b8/#Wg== Karnataka oi-Gururaj S | Updated: Thursday, December 5, 2019, 6:14 [IST] ಬೆಂಗಳೂರು, ಡಿಸೆಂಬರ್ 5 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರಿಗೆ ಹೈಕೋರ್ಟ್ ಸಿಹಿ ಸುದ್ದಿ ನೀಡಿದೆ. ನೌಕರರಿಗೆ ಅಧಿಕ ಅವಧಿ ಭತ್ಯೆ ನೀಡುವಂತೆ ನ್ಯಾಯಾಲಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಈ ಕುರಿತು ಆದೇಶ ಹೊರಡಿಸಿದ್ದಾರೆ. ಅಧಿಕ ಅವಧಿ ಭತ್ಯೆ (Overtime Allowance) ನೀಡಬೇಕು ಎಂದು ಆದೇಶಿಸಿದೆ. ಫಾಸ್‌ಟ್ಯಾಗ್ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links