ಡಿ.ರತ್ನವರ್ಮ ಹೆಗ್ಗಡೆ ಸ್ಮಾರಕ ವಿವಿ ಮಟ್ಟದ ಚರ್ಚಾಸ್ಪರ್ಧೆ

Source Credit NewsKannada.com

ಡಿ.ರತ್ನವರ್ಮ ಹೆಗ್ಗಡೆ ಸ್ಮಾರಕ ವಿವಿ ಮಟ್ಟದ ಚರ್ಚಾಸ್ಪರ್ಧೆ


HSA
  ¦   


Jan 17, 2020 04:36:13 PM (IST)

ಉಜಿರೆ: ಉತ್ತಮ ವ್ಯಕ್ತಿಯಾಗಿ, ಒಳ್ಳೆಯ ಆಲೋಚನೆ ಮಾಡುವುದರ ಜೊತೆಗೆ ಶ್ರಧ್ದೆಯಿಂದ ಕೆಲಸ ಮಾಡುವುದು ಅತೀ ಮುಖ್ಯ. ಇದೇ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದ ಧರ್ಮಸ್ಥಳದ ಧರ್ಮಾಧಿಕಾರಿಗಳಾಗಿದ್ದ ದಿ. ಡಿ. ರತ್ನವರ್ಮ ಹೆಗ್ಗಡೆಯವರು ಕುಗ್ರಾಮವಾಗಿದ್ದ ಉಜಿರೆಯ ಅಭಿವೃದ್ಧಿಗಾಗಿ ಶ್ರಮಿಸಿದರು. ಇತರರು ಆಡಿದ ವಿಶ್ವಾಸ ಕುಗ್ಗಿಸುವ ಮಾತುಗಳಿಗೆ ಕಿವಿಗೊಡದೆ ವಿದ್ಯಾಸಂಸ್ಥೆ ಸ್ಥಾಪಿಸಿ ಹಲವಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಸಹಕಾರಿಯಾದರ ಎಂದು ಉಜಿರೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ. ಎಸ್. ಪ್ರಭಾಕರ್ ಹೇಳಿದರು.

ಅವರು ಉಜಿರೆಯ ಎಸ್.ಡಿ.ಎಂ ಕಾಲೇಜಿನ ಸೆಮಿನಾರ್ ಹಾಲ್‍ನಲ್ಲಿ ಆಯೋಜಿಸಲಾಗಿದ್ದ, ಡಿ ರತ್ನವರ್ಮ ಹೆಗ್ಗಡೆ ಸ್ಮಾರಕ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ ಕಾಲೇಜು ಕನ್ನಡ ಚರ್ಚಾ ಸ್ವರ್ಧೆ ಉದ್ಘಾಟಿಸಿ ಮಾತನಾಡಿದರು.

ಎಸ್.ಡಿ.ಎಂ ಕಾಲೇಜು ಇಂತಹ ಉತ್ತಮ ಚರ್ಚಾ ಸ್ಪರ್ಧೆಗೆ ಅವಕಾಶ ಕಲ್ಪಿಸಿ ಕೊಟ್ಟಿದೆ. ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಪ್ರತಿನಿಧಿಗಳಾಗಿ ಸ್ಪರ್ಧಿಸುತ್ತಿರುವುದು ಸಂತಸದ ವಿಷಯ. ಛಲ ವiತ್ತು ಆಸಕ್ತಿಯಿಂದ ಭಾಗವಹಿಸಿದರೆ ಮಾತ್ರ ಗೆಲುವು ಗಳಿಸಲು ಸಾಧ್ಯ ಎಂದು ಅವರು ಹೇಳಿದರು.

ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ. ನರಸಿಂಹ ಮೂರ್ತಿ, ಬೆಳ್ತಂಗಡಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ  ಡಾ. ಕೆ. ಸುಬ್ರಮಣ್ಯ ಭಟ್, ಮತ್ತು ಆಳ್ವಾಸ್ ಕಾಲೇಜಿನ ಉಪನ್ಯಾಸಕ ಡಾ. ಯೋಗೀಶ್ ಸ್ಪರ್ಧೆಯ ತೀರ್ಪುಗಾರರಾಗಿ ಉಪಸ್ಥಿತರಿದ್ದರು.

ವಿಶ್ವವಿದ್ಯಾನಿಲಯ ವ್ಯಾಪ್ತಿಯ ಹಲವು ಕಾಲೇಜುಗಳ ವಿದ್ಯಾರ್ಥಿಗಳು ಸ್ಪರ್ಧಿಗಳಾಗಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಗಣಿತ ವಿಭಾಗದ ನಿವೃತ್ತ ಪ್ರಾಧ್ಯಾಪಕಿ ಪ್ರೊ. ಜಯಲಕ್ಷ್ಮಿ, ರಾಮಕುಂಜ ಕಾಲೇಜಿನ ಪ್ರಾಂಶುಪಾಲ ಸಂಕೇತ್ ಹೆಬ್ಬಾರ್, ಡಾ ಸಂಪತ್ ಕುಮಾರ್ ಮತ್ತು ಪ್ರಾಧ್ಯಾಪಕಿ ಶಕುಂತಲಾ ಉಪಸ್ಥಿತರಿದ್ದರು. ಎಸ್.ಡಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಸ್. ಸತೀಶ್ಚಂದ್ರ ಸ್ವಾಗತಿಸಿ, ಸುಧೀರ್ ಕೆ.ವಿ ವಂದಿಸಿ, ಕಾಲೇಜಿನ ಕನ್ನಡ ಪ್ರಾಧ್ಯಾಪಕ ದಿವ ಕೊಕ್ಕಡ ನಿರೂಪಿಸಿದರು.

Source Credit NewsKannada.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಅಮ್ಮನಿಗೆ ಶೈನ್ ಬಗ್ಗೆ ಮಾತನಾಡಬೇಡ ಎಂದು ಕೈ ಸನ್ನೆ ಮಾಡಿದ ವಾಸುಕಿ.. ಕ್ಯಾಮರಾದಲ್ಲಿ ಎಲ್ಲವೂ ರೆಕಾರ್ಡ್ ಆಗಿ ಹೋಯ್ತು..

Fri Jan 17 , 2020
Source Credit RJ News Kannada ಬಿಗ್ ಬಾಸ್ ಸೀಸನ್ 7 ರಲ್ಲಿ ಈ ಬಾರಿ ಎಲ್ಲರೂ ಸೆಲಿಬ್ರೆಟಿಗಳೇ ಆದರೂ ಕೂಡ ಅನೇಕರು ಬಿಗ್ ಮನೆಗೆ ಬಂದ ಮೇಲಷ್ಟೇ ಬಹುತೇಕರಿಗೆ ಅವರುಗಳು ಸೆಲಿಬ್ರೆಟಿಗಳು ಎಂದು ತಿಳಿಯಿತು.. ಈಗಾಗಲೇ ಈ ಸೀಸನ್ 13 ವಾರಗಳನ್ನು ಯಶಸ್ವಿಯಾಗಿ ಪೂರೈಸಿದ್ದು, 14ನೇ ವಾರವು ಇನ್ನೇನು ಮುಗಿಯುವ ಹಂತದಲ್ಲಿದೆ.. Pin it Email https://nirantharanews.com/%e0%b2%a1%e0%b2%bf-%e0%b2%b0%e0%b2%a4%e0%b3%8d%e0%b2%a8%e0%b2%b5%e0%b2%b0%e0%b3%8d%e0%b2%ae-%e0%b2%b9%e0%b3%86%e0%b2%97%e0%b3%8d%e0%b2%97%e0%b2%a1%e0%b3%86-%e0%b2%b8%e0%b3%8d%e0%b2%ae%e0%b2%be/#UGhvdG9HcmlkXzE ಈಗಾಗಲೇ ಬಿಗ್ ಬಾಸ್ ಮನೆಗೆ ಎಲ್ಲಾ ಸದಸ್ಯರ ಕುಟುಂಬದವರ ಆಗಮನವಾಗಿದ್ದು, ಈ ವಾರ ಕುರಿ ಪ್ರತಾಪ್ ಅವರ ಹೆಂಡತಿ ಮಕ್ಕಳು.. ಪ್ರಿಯಾಂಕ ಅವರ ತಾಯಿ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links