ಟ್ವಿಸ್ಟ್ ಕೊಟ್ಟ ಬಿಗ್ ಬಾಸ್ ಈ ವಾರ ಭೂಮಿ ಶೆಟ್ಟಿಯನ್ನು ಹೊರಗೆ ಕಳುಹಿಸಿದ್ರಾ?

Source Credit RJ News Kannada

ಬಿಗ್ ಬಾಸ್ ಕನ್ನಡ ಸೀಸನ್ 7 ರಲ್ಲಿ ಎಂದಿನಂತೆ ಭಿನ್ನ ವಿಭಿನ್ನವಾದ ಸ್ಪರ್ಧಿಗಳು ಮನೆಗೆ ಆಗಮಿಸಿರುವುದು ತಿಳಿದೇ ಇದೆ.

ಇದಾಗಲೇ 8 ವಾರಗಳ ಬಿಗ್ ಬಾಸ್ ಜರ್ನಿ ಮುಗಿದಿದ್ದು ಈ ವಾರ ಬಿಗ್ ಮನೆಯಿಂದ ಹೊರ ಹೋಗಲು ಭೂಮಿ ಶೆಟ್ಟಿ, ಶೈನ್ ಶೆಟ್ಟಿ, ಚಂದನ್ ಆಚಾರ್, ಕಿಶನ್, ರಾಜು ತಾಳಿಕೋಟೆ, ವಾಸುಕಿ, ಚೈತ್ರಾ ಕೊಟ್ಟೂರು ಅವರು ನಾಮಿನೇಟ್ ಆಗಿದ್ದು ಇಂದು ಅವರ ಬಿಗ್ ಬಾಸ್ ಮನೆಯ ಭವಿಷ್ಯ ನಿರ್ಧಾರವಾಗಲಿದೆ.

ಆದರೆ ಇದೆಲ್ಲದರ ನಡುವೆ ಬಿಗ್ ಬಾಸ್ ಮನೆಯಿಂದ ಭೂಮಿ ಶೆಟ್ಟಿಯನ್ನು ಹೊರಗೆ ಕಳುಹಿಸಲಾಗಿದೆಯಾ ಎಂಬ ಮಾತುಗಳು ಕೇಳಿ ಬರುತ್ತಿದೆ.. ಇದಕ್ಕೆ ಕಾರಣ ನಿನ್ನೆ ಬಿಗ್ ಬಾಸ್ ಮನೆಗೆ ಬಂದ ಭೂಮಿ ಅವರ ಮಾವ.. ಹೌದು ನಿನ್ನೆ ಇದ್ದಕ್ಕಿದ್ದ ಹಾಗೆ 4 ವರ್ಷದಿಂದ ಮಾತನಾಡದ ಭೂಮಿ ಅವರ ಮಾವನನ್ನು ಬಿಗ್ ಬಾಸ್ ಮನೆಗೆ ಕಳುಹಿಸಿ ಇಬ್ಬರ ನಡುವಿನ ಮನಸ್ತಾಪವನ್ನು ದೂರ ಮಾಡಲಾಯಿತು.. ನಿನ್ನೆಯ ಸಂಚಿಕೆ ಒಂದು ರೀತಿ ಮನಮುಟ್ಟುವಂತೆಯೂ ಇತ್ತು..

ಆದರೆ ಫ್ಯಾಮಿಲಿ ವೀಕ್ ಅಂತ ಮಾಡಿದರೂ ಕೂಡ ಸೋಮವಾರದಿಂದ ಶುರು ಆಗಬೇಕಿತ್ತು.. ಆದರೆ ಶುಕ್ರವಾರ ಕಳುಹಿಸಲಾಗಿದೆ.. ಎಲಿಮಿನೇಟ್ ಮಾಡುವ ಮುನ್ನ ಒಳಗೆ ಕಳುಹಿಸಿ ಸಂತೋಷ ನೀಡುವ ಉದ್ದೇಶ ಇದ್ದರೂ ಇರಬಹುದು.. ಭೂಮಿ ಅವರನ್ನು ಎಲಿಮಿನೇಟ್ ಮಾಡಲು ಪ್ರಮುಖವಾಗಿ ಇರುವ ಕಾರಣ ಎಂದರೆ ಅದು ನಿಯಮ ಉಲ್ಲಂಘನೆ..

ಹೌದು ಬಿಗ್ ಬಾಸ್ ಮನೆಯಲ್ಲಿ ಹಲವಾರು ಬಾರಿ ಭೂಮಿ ನಿಯಮ ಉಲ್ಲಂಘನೆ ಮಾಡಿದ್ದಾರೆ.. ಎರಡು ಮೂರು ಬಾರಿ ಕನ್ಫೆಷಮ್ ರೂಮಿಗೆ ಕರೆದು ತಿಳಿಸಿದರೂ ಕೂಡ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಕಳ್ಳ ಪೊಲೀಸ್ ಟಾಸ್ಕ್ ನಲ್ಲಿ ನಿಯಮ ಮೀರಿದ್ದರು.. ಮತ್ತೆ ಕಳೆದ ವಾರ ಕೂಡ ಚಟುವಟಿಕೆಯೊಂದರಲ್ಲಿ ಬೀಗ ಬದಲಿಸಲು ಬಿಗ್ ಬಾಸ್ ಕಳುಹಿಸಿಕೊಟ್ಟ ವ್ಯಕ್ತಿಯ ಜೊತೆ ಯಾರೂ ಮಾತನಾಡಬಾರದು ಎಂದು ಸ್ಪಷ್ಟವಾಗಿ ತಿಳಿಸಿದ್ದರೂ ಕೂಡ ಅದನ್ನೂ ಕೂಡ ಮೀರಿ ಆ ವ್ಯಕ್ತಿಯ ಜೊತೆ ಮಾತನಾಡಿದ್ದರು.

ಇದೆಲ್ಲವನ್ನು ಗಮನಿಸಿರುವ ಬಿಗ್ ಬಾಸ್ ಈ ವಾರ ನಾಮಿನೇಟ್ ಆಗಿರುವ ಭೂಮಿಯನ್ನು ಹೊರಗೆ ಕಳುಹಿಸಿರಬಹುದು ಎಂದು ಅಂದಾಜಿಸಲಾಗಿದೆ.. ಅಥವಾ ಇಲ್ಲ ಈ ವಾರ ಅವರ ಮಾವನನ್ನು ಸುಮ್ಮನೆ ಮನೆಯೊಳಗೆ ಕಳುಹಿಸಲಾಗಿತ್ತು ಎನ್ನುವುದಾದರೆ.. ಈಗಾಗಲೇ ಸಾಕಷ್ಟು ಜನರ ಅಭಿಪ್ರಾಯದಂತೆ ಬಿಗ್ ಬಾಸ್ ಮನೆಯಲ್ಲಿ ಭೂಮಿ ಶೆಟ್ಟಿ ಅವರಿಗೆ ಸ್ಪೆಷಲ್ ಪ್ರಾಮುಖ್ಯತೆ ನೀಡಲಾಗುತ್ತಿದೆಯಾ ಎಂದೆನಿಸುತ್ತದೆ.. ಪದೇ ಪದೇ ಮನೆಯ ಮುಖ್ಯ ನಿಯಮ ಮೀರಿದರೂ ಕೂಡ ಅಂತಹ ಕಠಿಣ ಶಿಕ್ಷೆಯೇನೂ ಬಿಗ್ ಬಾಸ್ ಭೂಮಿ ಅವರಿಗೆ ನೀಡಿಲ್ಲವೆನ್ನಬಹುದು..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಸುಳ್ಯದಲ್ಲಿ ಕಾಂಗ್ರೆಸ್ ಪ್ರತಿಭಟನೆ

Sat Dec 14 , 2019
Source Credit NewsKannada.com GK   ¦    Dec 14, 2019 05:43:13 PM (IST) ಸುಳ್ಯ: ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸುಳ್ಯದಲ್ಲಿ  ಶನಿವಾರ ಪ್ರತಿಭಟನೆ  ನಡೆಸಲಾಯಿತು.  ಪ್ರತಿಭಟನೆಯಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯನ್.ಜಯಪ್ರಕಾಶ್ ರೈ, ಪೌರತ್ವ ತಿದ್ದುಪಡಿ ಮಸೂದೆ ಮತ್ತು ರಾಷ್ಟ್ರೀಯ ಪೌರತ್ವ ನೊಂದಣಿಯು ಕೇಂದ್ರ ಸರಕಾರದ ಜನ ವಿರೋಧಿ ನೀತಿಯಾಗಿದ್ದು ಇದನ್ನು ತೀವ್ರವಾಗಿ ಖಂಡಿಸುವುದಾಗಿ  ಹೇಳಿದರು. ಈ ದೇಶದಲ್ಲಿ ಎಲ್ಲರನ್ನೂ ಒಟ್ಟಾಗಿ ಕೊಂಡೊಯ್ಯುವ ಪಕ್ಷ ಕಾಂಗ್ರೆಸ್ ಮಾತ್ರ. ಪೌರತ್ವ ನೀಡುವುದನ್ನು ವಿರೋಧಿಸುವುದಿಲ್ಲ. ಆದರೆ ಅರ್ಹರನ್ನು […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links