ಟಾಸ್ಕ್ ಗೋಸ್ಕರ ಬಾತ್ ರೂಮಿನಲ್ಲಿ ಕುರಿ ಪ್ರತಾಪ್ ಮುಟ್ಟಿದ್ದೇನು ಗೊತ್ತಾ? ಯಾವ್ ಕರ್ಮ ಗುರು..

Source Credit RJ News Kannada

ಬಿಗ್ ಬಾಸ್ ಸೀಸನ್ 7 ಇನ್ನೇನು ಫಿನಾಲೆ ಹತ್ತಿರ ಬರುತ್ತಿದ್ದಂತೆ ಟಾಸ್ಕ್ ಗಳನ್ನು ಮನೆಯ ಸದಸ್ಯರು ತೀರಾ ಅತಿರೇಕಕ್ಕೆ ತೆಗೆದುಕೊಂಡು ಹೋಗುತ್ತಿದ್ದು ಅತ್ಯಂತ ಕೆಟ್ಟದಾಗಿ ನಡೆದುಕೊಳ್ಳುತಿರೋದು ಅವರುಗಳ ಅನುಭವಕ್ಕೆ ಬಾರದೇ ಇರಬಹುದು ಆದರೆ ನೋಡುಗರ ಕಣ್ಣಿಗೆ ಮಾತ್ರ ಎಲ್ಲದುರ ನೈಜ್ಯ ದರ್ಶನವಾಗುತ್ತಿದೆ..

ಕಳೆದ ವಾರ ಕಿಚ್ಚ ಸುದೀಪ್ ಅವರು ಇನ್ನು ಇರುವಷ್ಟು ದಿನದಲ್ಲಿ ಏನು ಬೇಕಾದರೂ ಆಗಬಹುದು.. ಯಾರು ಬೇಕಾದರೂ ಗೆಲ್ಲಬಹುದು.. ಎಲ್ಲರು ನಿಮ್ಮ ನಿಮ್ಮ ಪ್ರಯತ್ನವನ್ನು ಮಾಡಿ ಎಂದು ಸಲಹೆ ನೀಡಿದ ಕ್ಷಣದಿಂದ ಎಲ್ಲಾ ಸದಸ್ಯರು ಮನಸ್ಸೊಳಗೆ ಲೆಕ್ಕಾಚಾರ ಹಾಕಿಕೊಂಡು ಟಾಸ್ಕ್ ನಲ್ಲಿ ಕಷ್ಟವಾದರೂ ಸಂಪೂರ್ಣ ಶ್ರಮ ಹಾಕಿ ಗೆಲ್ಲಲೇ ಬೇಕೆಂಬ ಪಣ ತೊಟ್ಟಂತೆ ಕಾಣುತ್ತಿದೆ..

ಪ್ರಯತ್ನ ಪಡಬೇಕು ಸರಿ.. ಆದರೆ ಗೆಲ್ಲಬೇಕು ಅಂತ ಕಂಡ ಕಂಡವರ ಗಲೀಜನ್ನೆಲ್ಲಾ ಮುಟ್ಟೋದು ಅದೇನ್ ಸರಿನ್ರಪ್ಪಾ? ಹೌದು ಇಂದು ಬಿಗ್ ಬಾಸ್ ಮನೆಯಲ್ಲಿ ಒಂದು ತಂಡ ಮತ್ತೊಂದು ತಂಡದ ರೂಬಿಕ್ಸ್ ಕ್ಯೂಬ್ ಗಳನ್ನು ಬಚ್ಚಿಡಬೇಕಿತ್ತು.. ಅದನ್ನು ಅವರವರ ತಂಡದವರು ಹುಡುಕ ಬೇಕಿತ್ತು..

ಅದೇ ರೀತಿ ಎರಡೂ ತಂಡದವರು ಮತ್ತೊಂದು ತಂಡದ ರೂಬಿಕ್ಸ್ ಕ್ಯೂಬ್ ಗಳನ್ನು ಬಚ್ಚಿಟ್ಟರು.. ಆದರೆ ಎಲ್ಲಿ ಅದನ್ನು ಹುಡುಕುತ್ತಾರೋ ಅನ್ನೋ ಆತಂಕದಿಂದ ಬಂದೂ ಬಂದೂ ಬಚ್ಚಿಟ್ಟದ್ದನ್ನು ನೋಡುತ್ತಿದ್ದರು..‌

ಆದರೆ ಇದು ಬುದ್ದಿವಂತಿಕೆಯಿಂದ ಆಡುವ ಆಟವಾದರೂ ಕೂಡ ಕೊನೆಗೆ ವಾಸುಕಿ ಹಾಗೂ ಹರೀಶ್ ರಾಜ್ ನಡುವಿನ ಜಗಳಕ್ಕೂ ಕಾರಣವಾಯಿತು..‌ ಹೌದು ಕುರಿ ಪ್ರತಾಪ್ ಹಾಗೂ ಹರೀಶ್ ರಾಜ್ ಅವರು ಬಾತ್ ರೂಮಿನಲ್ಲಿ ತಮ್ಮ ತಂಡದ ರೂಬಿಕ್ಸ್ ಕ್ಯೂಬ್ ಹುಡುಕುವ ಭರದಲ್ಲಿ ಕುರಿ ಅವರಿಗೆ ಡಸ್ಟ್ ಬಿನ್ ನೋಡಿ ಅಂತ ಹರೀಶ್ ರಾಜ್ ಅವರು ಹೇಳಿದ್ರು.. ಹಿಂದು ಮುಂದು ನೋಡದೇ ಕುರಿ ಪ್ರತಾಪ್ ಅವರು ಡಸ್ಟ್ ಬಿನ್ ಒಳಗೆ ಕೈ ಹಾಕಿಯೇ ಬಿಟ್ಟರು.. ಅವರ ಕೈಗೆ ಅದೇನು ಗಲೀಜು ಸಿಕ್ಕಿತೋ ಏನೋ ಥೂ ಅಂತ ಕೈ ಆಚೆ ತೆಗೆದುಬಿಟ್ಟರು..

ಅಲ್ಲಾ ಒಂದು ಟಾಸ್ಕ್ ಗೋಸ್ಕರ ಇದನ್ನೆಲ್ಲಾ ಮುಟ್ಟೋ ಹಣೆಬರಹ ಯಾಕ್ರಯ್ಯಾ ಇವರಿಗೆ.. ಜೊತೆಗೆ ಅದನ್ನು‌ ನೋಡಿದ ವಾಸುಕಿ ಬಾತ್ ರೂಮಿಗೆ ಬಂದು ತಮ್ಮ ತಂಡದ ಕ್ಯೂಬ್ ತೆಗೆದುಕೊಳ್ಳಲು ಮುಂದಾದರು.. ಆ ಕ್ಷಣ ಹರೀಶ್ ರಾಜ್ ಅವರು ತಡೆದು ನಾನು ಬಾತ್ ರೂಮಿಗೆ ಹೋಗಬೇಕೆಂದರು.. ಇಬ್ಬರ ನಡುವೆ ಓ ಪ್ಲೆಸ್.. ಶೇಮ್ ಲೆಸ್.. ಹೀಗೆ ಕೇಳಲು ಕಿವಿಗೆ ಇಂಪು ಕೊಡುವ ಅನೇಕ ಪದಗಳ ಬಳಕೆಯಾದವು.. ಇವರುಗಳ ಪ್ರತಿಭೆಗೆ ಕಲಾವೃತ್ತಿಗೆ ಹೊರಗೆ ಜನರು ಎಷ್ಟು ಗೌರವ ನೀಡುತ್ತಾರೆ ಅನ್ನೋದನ್ನು ಇವರುಗಳು ಮರೆತು.. ವ್ಯಕ್ತಿತ್ವವನ್ನು ಕಳೆದುಕೊಂಡು ಟಾಸ್ಕ್ ಮಾಡುತ್ತಿದ್ದಾರೆ ಎಂದು ನೋಡುಗರಿಗೆ ಭಾಸವಾಗುತ್ತಿರುವುದಂತೂ ಸುಳ್ಳಲ್ಲ..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಐಟಿ ಅಧಿಕಾರಿಗಳ ಮುಂದೆ ಹಾಜರಾದ ರಶ್ಮಿಕಾ ಮಂದಣ್ಣ

Fri Jan 17 , 2020
Source Credit Oneindia.com Pin it Email https://nirantharanews.com/%e0%b2%9f%e0%b2%be%e0%b2%b8%e0%b3%8d%e0%b2%95%e0%b3%8d-%e0%b2%97%e0%b3%8b%e0%b2%b8%e0%b3%8d%e0%b2%95%e0%b2%b0-%e0%b2%ac%e0%b2%be%e0%b2%a4%e0%b3%8d-%e0%b2%b0%e0%b3%82%e0%b2%ae%e0%b2%bf%e0%b2%a8/#Wg== Madikeri oi-Gururaj S | Updated: Thursday, January 16, 2020, 23:36 [IST] ಕೊಡಗು, ಜನವರಿ 16 : ನಟಿ ರಶ್ಮಿಕಾ ಮಂದಣ್ಣ ನಿವಾಸದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಪರಿಶೀಲನೆ ಮುಂದುವರೆದಿದೆ. ಚೆನ್ನೈನಿಂದ ರಶ್ಮಿಕಾ ಮಂದಣ್ಣ ವಿರಾಜಪೇಟೆಗೆ ಆಗಮಿಸಿದ್ದು, ಅಧಿಕಾರಿಗಳ ಮುಂದೆ ಹಾಜರಾದರು. ಗುರುವಾರ ರಾತ್ರಿ ವಿರಾಜಪೇಟೆಯ ನಿವಾಸಕ್ಕೆ ರಶ್ಮಿಕಾ ಮಂದಣ್ಣ ಆಗಮಿಸಿದರು. ಆದಾಯ ತೆರಿಗೆ ಇಲಾಖೆಯ 10 ಅಧಿಕಾರಿಗಳ ತಂಡ ಅವರ ವಿಚಾರಣೆಯನ್ನು ನಡೆಸುತ್ತಿದ್ದಾರೆ. ಬೆಳಗ್ಗೆಯಿಂದ ಸಂಗ್ರಹಿಸಿದ ದಾಖಲೆಗಳ ಬಗ್ಗೆ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links