ಟಾಟಾ ವೆಂಚರ್- ಓಮ್ನಿ ಅಪಘಾತ: ಓರ್ವ ಸಾವು

Source Credit NewsKannada.com

ಟಾಟಾ ವೆಂಚರ್- ಓಮ್ನಿ ಅಪಘಾತ: ಓರ್ವ ಸಾವು


MK
  ¦   


Jan 15, 2020 08:59:27 AM (IST)

ಬಂಟ್ವಾಳ: ಟಾಟಾ ವೆಂಚರ್ ಹಾಗೂ ಓಮ್ನಿ ನಡುವೆ ಡಿಕ್ಕಿ ಸಂಭವಿಸಿದ್ದರಿಂದ ಓರ್ವ ಮೃತಪಟ್ಟಿದ್ದು, ಮಕ್ಕಳು ಸಹಿತ ೯ ಮಂದಿ ಗಾಯಗೊಂಡ ಘಟನೆ ವಿಟ್ಲ ಸಾಲೆತ್ತೂರು ರಸ್ತೆಯ ಕೊಡುಂಗಾಯಿ ಸಮೀಪದ ರಾಧುಕಟ್ಟೆಯಲ್ಲಿ ಮಂಗಳವಾರ ನಡೆದಿದೆ. 

ಕುಂಡಡ್ಕ ನಿವಾಸಿಗಳಾದ ಅಬ್ದುಲ್ಲಾ ಹಾಜಿ (೬೫) ಮೃತಪಟ್ಟವರು. ಅವರ ಪುತ್ರ ಓಮ್ನಿ ಚಲಾಯಿಸುತ್ತಿದ್ದ ಅಶ್ರಫ್ (೪೦), ಆಸಿಯಮ್ಮ (೬೦), ಮೈಮುನಾ (೩೦), ಉಕ್ಕುಡ ನಿವಾಸಿ ಕೌಲಿಯತ್ (೨೮), ಐದು ವರ್ಷದ ಮಗು, ಆರು ತಿಂಗಳ ಇಬ್ಬರು ಮಕ್ಕಳು ಗಾಯಗೊಂಡಿದ್ದು, ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 ವೆಂಚರ್ ಚಲಾಯಿಸುತ್ತಿದ್ದ ಮಂಚಿ ಮೂಲದ ಆನಂದ (೩೨), ರಾಮಚಂದ್ರ ನಾಯಕ್ (೪೫) ಗಾಯಗೊಂಡು ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗೆ ವರ್ಗಾವಣೆಯಾಗಿದ್ದಾರೆ.

ದೇರಳಕಟ್ಟೆ ಆಸ್ಪತ್ರೆಗೆ ತೆರಳಿ ಸಾಲೆತ್ತೂರು ಮೂಲಕ ವಿಟ್ಲಕ್ಕೆ ಬರುತ್ತಿದ್ದ ಓಮ್ನಿಗೆ ವಿಟ್ಲ ಭಾಗದಿಂದ ಬಂದ ವೆಂಚರ್ ವಾಹನ ಡಿಕ್ಕಿ ಹೊಡೆದಿದೆ. ಓಮ್ನಿಯಲ್ಲಿದ್ದ ೮ ಮಂದಿ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, ವೆಂಚರ್ ಏಕಾಏಕಿಯಾಗಿ ಬಲಕ್ಕೆ ಬಂದಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

Source Credit NewsKannada.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಅದಮಾರು ಶ್ರೀಗಳು ಮೂಡುಬಿದಿರೆ ಜೈನ ಮಠಕ್ಕೆ ಭೇಟಿ

Wed Jan 15 , 2020
Source Credit NewsKannada.com ಅದಮಾರು ಶ್ರೀಗಳು ಮೂಡುಬಿದಿರೆ ಜೈನ ಮಠಕ್ಕೆ ಭೇಟಿ DSK   ¦    Jan 15, 2020 09:53:45 AM (IST) Pin it Email https://nirantharanews.com/%e0%b2%9f%e0%b2%be%e0%b2%9f%e0%b2%be-%e0%b2%b5%e0%b3%86%e0%b2%82%e0%b2%9a%e0%b2%b0%e0%b3%8d-%e0%b2%93%e0%b2%ae%e0%b3%8d%e0%b2%a8%e0%b2%bf-%e0%b2%85%e0%b2%aa%e0%b2%98%e0%b2%be%e0%b2%a4-%e0%b2%93/#bWRiX21haW5fbmV ಮೂಡುಬಿದಿರೆ: ಉಡುಪಿ ಪರ್ಯಾಯ ಶ್ರೀ ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು  ಶ್ರೀ ಕೃಷ್ಣ ಪೂಜಾ ಕೈಂಕರ್ಯ ಮತ್ತು ಸರ್ವಜ್ಞಪೀಠ ಪೀಠಾರೋಹಣ ಮಾಡಲಿರುವ ಶುಭಾವಸರದಲ್ಲಿ ಮಕರ ಸಂಕ್ರಾಂತಿಯ ದಿನವಾದ ಮಂಗಳವಾರ ಇಲ್ಲಿನ ಜೈನಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಜೈನಮಠದ ಚಾರುಕರ್ತೀ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅದಮಾರು ಶ್ರೀಗಳನ್ನು ಮಠದ ವತಿಯಿಂದ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links