ಜ.25ರಂದು ಯಂತ್ರ ಶ್ರೀಕೃಷಿ ಪದ್ಧತಿಗೆ ಅಧಿಕೃತ ಚಾಲನೆ

Source Credit NewsKannada.com

ಜ.25ರಂದು ಯಂತ್ರ ಶ್ರೀಕೃಷಿ ಪದ್ಧತಿಗೆ ಅಧಿಕೃತ ಚಾಲನೆ


MV
  ¦   


Jan 10, 2020 07:49:55 PM (IST)

ಬಂಟ್ವಾಳ: ಜನರ ಸಮಸ್ಯೆಯಿಂದ ಅಳಿವಿನಂಚಿನಲ್ಲಿರುವ ಭತ್ತದ ಕೃಷಿಯನ್ನು ಯಾಂತ್ರೀಕೃತವಾಗಿ  ಬೆಳೆಸುವ ನಿಟ್ಟಿನಲ್ಲಿ ಜ.25ರಂದು ಶಿವಮೊಗ್ಗದಲ್ಲಿ ಯಂತ್ರ ಶ್ರೀ ಕೃಷಿ ಪದ್ದತಿ ಯೋಜನೆಗೆ ಅಧಿಕೃತವಾಗಿ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹಾಗೂ ಸಚಿವರ ಉಪಸ್ಥಿತಿಯಲ್ಲಿ ಚಾಲನೆ ಸಿಗಲಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಪ್ರಾದೇಶಿಕ ನಿರ್ದೇಶಕರಾದ ವಸಂತ ಸಾಲಿಯಾನ್ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದಿ ಯೋಜನೆ ಬಿ ಸಿ ಟ್ರಸ್ಟ್ (ರಿ )ಬಂಟ್ವಾಳ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ ಬಂಟ್ವಾಳ ತಾಲ್ಲೂಕು ಇದರ ಸಂಯುಕ್ತ ಆಶ್ರಯ ದಲ್ಲಿ ಬಿಸಿರೋಡ್ ವಲಯದ ಕೇಳ್ದೋಡಿ ಒಕ್ಕೂಟದ ಪ್ರಗತಿ ಬಂಧು ಸಂಘದ ಸದಸ್ಯರು ಸೇರಿಕೊಂಡು ಬಿಸಿರೋಡ್ ಮಯ್ಯರಬೈಲ್ ನಲ್ಲಿ ಸುಮಾರು ನಾಲ್ಕೂವರೆ ಎಕ್ರೆ ಹಡಿಲು ಬಿದ್ದ ಗದ್ದೆಯನ್ನು ನಾಟಿ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಶ್ರೀ ಪದ್ದತಿ ಗೆ ಪೂರಕವಾಗಿ ಯಂತ್ರಶ್ರೀಕೃಷಿ ಪದ್ದತಿಯನ್ನು ಈ ವರ್ಷದಿಂದ ಕರ್ನಾಟಕದಲ್ಲಿ ಜಾರಿಗೆ ತರಲಾಗಿದ್ದು ಯೋಜನೆಗೆ ಅಧಿಕೃತ ವಾಗಿ ಚಾಲನೆ ಸಿಗುವ ಮೊದಲು ಗ್ರಾಮ, ತಾಲೂಕು ಗಳಲ್ಲಿ ಕೃಷಿಯ ಬಗ್ಗೆ ಮಾಹಿತಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಅವರು ಹೇಳಿದರು.

ಭತ್ತದ ಕೃಷಿ ಇಳಿಮುಖ ಕಾಣುತ್ತಿರುವ ಇಂದಿನ ದಿನಗಳಲ್ಲಿ ಜನರನ್ನು ಬಳಸದೆ ಕೇವಲ ಯಂತ್ರಗಳನ್ನು ಮಾತ್ರ ಬಳಸಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಯನ್ನುವ ಪಡೆಯಬಹುದು ಎಂಬ ಉದ್ದೇಶದಿಂದ ಈ ಪದ್ದತಿಯನ್ನು ಜಾರಿಗೆ ತರಲಾಗಿದೆ.

ನೇಜಿ ಹಾಕುವುದರಿಂದ ಹಿಡಿದು ನಾಟಿ ಮಾಡುವುದು, ನೇಜಿನ ಕಳೆ ಕೀಳುವದು ಹಾಗೂ ಭತ್ತದ ಕಟಾವು ಮಾಡಿದ ಬಳಿಕ ಭತ್ತ ಮತ್ತು ಬೈಹುಲ್ಲನ್ನು ಮನೆಗೆ ಸಾಗಿಸುವ ವರೆಗೆ ಎಲ್ಲವನ್ನೂ ಮೆಷಿನ್ ಮೂಲಕ ಮಾಡಿ ಹೆಚ್ಚು ಲಾಭ ಗಳಿಸುವುದು ಇದರ ಉದ್ದೇಶ ವಾಗಿದೆ.

ಯಂತ್ರ ಶ್ರೀ ಕೃಷಿ ಪದ್ದತಿ ಗೆ ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜಂಟಿಯಾಗಿ ಕೃಷಿಗೆ ಬೇಕಾದ ಯಂತ್ರೋಪಕರಣಗಳನ್ನು ಖರೀದಿ ಮಾಡಿದೆ. ಖರೀದಿ ಮಾಡಿದ ಯಂತ್ರಗಳ ಸಮರ್ಪಕವಾದ ನಿರ್ವಹಣೆಯನ್ನು ಯೋಜನೆ ಮಾಡುತ್ತಿದೆ.

ಕೃಷಿಕರಿಗೆ ಲಾಭವಾಗುವ ನಿಟ್ಟಿನಲ್ಲಿ ಕಡಮೆ ಬಾಡಿಗೆಗೆ ಒಟ್ಟು 150  ಕೃಷಿ ಬಾಡಿಗೆ ಸೇವಾ ಕೇಂದ್ರ ಗಳ ಮೂಲಕ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಈ ವರ್ಷದಲ್ಲಿ ಕರ್ನಾಟಕ ರಾಜ್ಯದ ಲ್ಲಿ ಸಾಗುವಳಿ ಇರುವ ಕಡೆಗಳಲ್ಲಿ ತಾಲೂಕಿನಲ್ಲಿ  ಕನಿಷ್ಟ 1 ಸಾವಿರ ಹೆಕ್ಟೇರ್ ಭತ್ತದ ಬೇಸಾಯ ಆಗಬೇಕಾಗಿದೆ ಎಂಬುದು ಹೆಗ್ಗಡೆ ಯವರ ಚಿಂತನೆ ಎಂದು ಅವರು ತಿಳಿಸಿದರು.

ಭತ್ತದ ಬೇಸಾಯ ಮಾನವ ದಿನಗಳನ್ನು ಅವಲಂಭಿಸಿದ್ದರಿಂದ ಇಳಿಮುಖವಾಗುತ್ತಾ ಬಂತು.

ಪ್ರಸ್ತುತ ಕೃಷಿ ಉಳಿಯಬೇಕಾದರೆ ಯಂತ್ರಗಳ ಅವಲಂಬಿಸಿ  ಕೃಷಿ ಚಟುವಟಿಕೆಗಳು ನಡೆಯಬೇಕಾಗಿದೆ ಎಂಬ ನಿಟ್ಟಿನಲ್ಲಿ ಗ್ರಾಮಾಭಿವೃದ್ದಿ ಯೋಜನೆ ಎಲ್ಲಾ ಯಂತ್ರಗಳನ್ನು ಖರೀದಿಸಿದೆ. ಪ್ರಗತಿ ಬಂಧು ಸಂಘದ ಸದಸ್ಯರು ಗುಂಪು ಚಟುವಟಿಕೆಯ ಮೂಲಕ ಹಡಿಲು ಬಿದ್ದಿದ್ದ ಮಯ್ಯರಬೈಲು ಗದ್ದೆಯಲ್ಲಿ ಭತ್ತದ ಬೇಸಾಯ ಮಾಡಿ ಇತರರಿಗೆ ಕೃಷಿಯಲ್ಲಿ ಲಾಭ ಪಡೆಯಲು ಸಾಧ್ಯವಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಮುಂದಿನ ದಿನಗಳಲ್ಲಿ ಪ್ರತಿಯೊಂದು ಗ್ರಾಮದಲ್ಲಿಯೂ ಇಂತಹ ಕೃಷಿ ಚಟುವಟಿಕೆ ಗಳು ನಡೆಯಬೇಕಾಗಿದೆ ಎಂದು ಅವರು ತಿಳಿಸಿದರು.

Source Credit NewsKannada.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಸಾಯ್ತೀನಿ ಅಂತ ಗೊತ್ತಾಗಿ ಕೊನೆ ಘಳಿಗೆಯಲ್ಲಿ ತನ್ನ ಆಸೆ ತೀರಿಸಿಕೊಳ್ಳುತ್ತಿರುವ ಮಹಿಳೆ..

Fri Jan 10 , 2020
Source Credit RJ News Kannada ಮನುಷ್ಯ ಒಂದಲ್ಲಾ ಒಂದು ದಿನ ಈ ಲೋಕ ಬಿಟ್ಟು ಹೋಗಬೇಕು.. ಆದರೆ ನಮ್ಮ ಹುಟ್ಟಾಗಲಿ ಅಥವಾ ಸಾವಾಗಲೀ ನಮಗೆ ತಿಳಿದಿರೋದಿಲ್ಲ.. ಆದರೆ ಕೆಲವರಿಗೆ ಮಾತ್ರ ಇಂತಹ ನೋವಿನ ಸತ್ಯ ತಿಳಿದು ಬಿಡುತ್ತದೆ.. ಅದೇ ರೀತಿ ಇಲ್ಲೊಬ್ಬ ಮಹಿಳೆಗೆ ತಾನು ಸಾಯುವ ವಿಚಾರ ತಿಳಿದು ಕೊನೆ ಕ್ಷಣದಲ್ಲಿ ತನ್ನ ಕೊನೆ ಆಸೆಯನ್ನು ಪೂರೈಸಿಕೊಂಡಿದ್ದಾರೆ.. ಹೌದು ಈ ಮಹಿಳೆಯ ಹೆಸರು ಶೃಚಿ ವಡಲಿಯಾ.. ಗುಜರಾತಿನ ಸೂರತ್ ನಲ್ಲಿ ವಾಸಿಸುತ್ತಿದ್ದಾರೆ.. ಇವರಿಗೆ ಬ್ರೈನ್ ಟ್ಯೂಮರ್ ಕಾಯಿಲೆ ಇದೆ.. ಅದೂ ಕೂಡ ಕೊನೆಯ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links