ಜೊತೆಜೊತೆಯಲಿ ಧಾರಾವಾಹಿಯ ಮಾನ್ಸಿ ನಿಜಕ್ಕೂ ಯಾರು ಗೊತ್ತಾ?

Source Credit RJ News Kannada

ಜೊತೆಜೊತೆಯಲಿ ಧಾರಾವಾಹಿಯಲ್ಲಿ ಪ್ರತಿಯೊಂದು ಪಾತ್ರವೂ.. ಆ ಪಾತ್ರ ಮಾಡುತ್ತಿರುವ ಕಲಾವಿದರಿಗೆ ಹೇಳಿ ಮಾಡಿಸಿದಂತಿದೆ.. ಅನಿರುದ್ಧ್ ಅವರನ್ನು ಬಿಟ್ಟರೆ ಮತ್ಯಾರನ್ನೂ ಕೂಡ ಆರ್ಯವರ್ಧನ್ ಆಗಿ ನೆನೆಸಿಕೊಳ್ಳಲೂ ಕೂಡ ಸಾಧ್ಯವಿಲ್ಲ..

ಅದೇ ರೀತಿಯಾಗಿ ವಿಜಯಲಕ್ಷ್ಮಿ ಸಿಂಗ್ ಅವರು, ಅನು ಆಗಿರಬಹುದು, ಸುಬ್ಬು, ಪುಷ್ಪ, ಮೀರಾ, ಝೇಂಡೆ, ಎಫ್ ಎಂ, ಹರ್ಷವರ್ಧನ್, ರಮ್ಯ, ಸಂಪತ್ ಹೀಗೆ ಪ್ರತಿಯೊಂದು ಪಾತ್ರವೂ ಕೂಡ ಮನಮುಟ್ಟುವಂತೆ ತೆರೆಯ ಮೇಲೆ ಪ್ರಸಾರವಾಗುತ್ತಿರುವುದು ಕಲಾವಿದರ ಶ್ರದ್ಧೆಯ ಪ್ರತಿಫಲ ಎನ್ನಲೇ ಬೇಕು..

ಅದೇ ರೀತಿ ಮತ್ತೊಂದು ಪಾತ್ರ ಸದ್ಯ ಸಖತ್ ಸೌಂಡ್ ಮಾಡುತ್ತಿದೆ.. ತಮ್ಮದೇ ವಿಭಿನ್ನ ಶೈಲಿಯ ಮ್ಯಾನರಿಸಂ ನಿಂದ ಆರ್ಯವರ್ಧನ್ ಅವರು ಹಾಗೂ ಅವರ ತಾಯಿಯನ್ನು ಇಂಗ್ಲೀಷ್ ನಲ್ಲಿ ಕರೆಯುವ ಶೈಲಿಯಿಂದ ಜನರ ಮನಗೆದ್ದ ಮಾನ್ಸಿ ಅವರು..

ಹೌದು ಧಾರಾವಾಹಿಗೆ ಸ್ವಲ್ಪ ಲೇಟ್ ಆಗಿ ಎಂಟ್ರಿ ಕೊಟ್ಟರೂ ಕೂಡ ಲೇಟೆಸ್ಟ್ ಆಗಿ ಬಂದವರು ಮಾನಸಿ.. ಅಯ್ಯೋ ಮಾನಸಿ ಅಲ್ಲ… ಮಾನ್ಸಿ.. ಧಾರಾವಾಹಿಯಲ್ಲಿ ಆಗರ್ಭ ಶ್ರೀಮಂತ ಆರ್ಯವರ್ಧನ್ ರ ಮುದ್ದಿನ ತಮ್ಮ ಹರ್ಷವರ್ಧನ್ ರ ಮಡದಿಯಾಗಿರುವ ಈ ಮಾನ್ಸಿ ನಿಜಕ್ಕೂ ಯಾರು? ಇಲ್ಲಿದೆ ನೋಡಿ..

ಮಾನ್ಸಿ ಅವರ ನಿಜವಾದ ಹೆಸರು ಶಿಲ್ಪಾ ಅಯ್ಯರ್.. ಶಿಲ್ಪಾ ಅಯ್ಯರ್ ಅವರು ಬಿಕಾಂ ನಲ್ಲಿ ಪದವಿ ಪಡೆದು ನಂತರ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟರು.. ಇವರನ್ನು ಸಕಲ ಕಲಾ ವಲ್ಲಭೆ ಎಂದರೂ ತಪ್ಪಾಗಲಾರದು.. ಕಾರಣ ಇವರು ಕರ್ನಾಟಕ ಸಂಗೀತ ಅಭ್ಯಾಸ ಮಾಡಿದ್ದಾರೆ.. ಅಷ್ಟೇ ಅಲ್ಲದೆ ಅಧ್ಬುತ ಡ್ಯಾನ್ಸರ್ ಕೂಡ ಹೌದು..

ಹಲವಾರು ಚಾನಲ್ ಗಳಲ್ಲಿ ನಿರೂಪಕಿಯಾಗಿಯೂ ಕೆಲಸ ಮಾಡಿರುವ ಶಿಲ್ಪಾ ಅಯ್ಯರ್ ಅವರು ಅನೇಕ ಧಾರಾವಾಹಿ ಹಾಗೂ ಕೆಲ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ..

ಆದರೆ ಸದ್ಯಕ್ಕೆ ಜೊತೆಜೊತೆಯಲಿ ಧಾರಾವಾಹಿಯ ಮಾನ್ಸಿ ಪಾತ್ರದ ಮೂಲಕ ಸಖತ್ ಫೇಮಸ್ ಆಗಿದ್ದು ತಮ್ಮ ನಟನೆಯ ಮೂಲಕ ಜನರಿಗೆ ಬಹಳ ಹತ್ತಿರವಾಗಿದ್ದಾರೆನ್ನಬಹುದು.. ಶಿಲ್ಪಾ ಅಯ್ಯರ್ ಅವರ ಮುಂದಿನ ಎಲ್ಲಾ ಪ್ರಾಜೆಕ್ಟ್ ಗಳಿಗೂ ಶುಭವಾಗಲಿ..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಮತ್ತೊಮ್ಮೆ ಶಾಕ್ ಕೊಟ್ಟು ಹೋದ ಚೈತ್ರಾ ಕೊಟ್ಟೂರ್..

Mon Dec 30 , 2019
Source Credit RJ News Kannada ಬಿಗ್ ಬಾಸ್ ಮನೆಯಲ್ಲಿ 11ನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಈ ವಾರ ಚೈತ್ರಾ ಕೊಟ್ಟೂರ್ ಅವರು ಬಿಗ್ ಬಾಸ್ ಜರ್ನಿ ಮುಗಿಸಿ ಹೊರ ಬಂದಿದ್ದಾರೆ. ಇದು ಚೈತ್ರಾ ಕೊಟ್ಟೂರ್ ಅವರ ಎರಡನೇ ಎಲಿಮಿನೇಷನ್..‌ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದ ಚೈತ್ರಾ ಕೊಟ್ಟೂರ್ ಅವರು 11 ವಾರದಲ್ಲಿಯೇ ಪಯಣ ಮುಗಿಸಿದ್ದಾರೆ.. Pin it Email https://nirantharanews.com/%e0%b2%9c%e0%b3%8a%e0%b2%a4%e0%b3%86%e0%b2%9c%e0%b3%8a%e0%b2%a4%e0%b3%86%e0%b2%af%e0%b2%b2%e0%b2%bf-%e0%b2%a7%e0%b2%be%e0%b2%b0%e0%b2%be%e0%b2%b5%e0%b2%be%e0%b2%b9%e0%b2%bf%e0%b2%af-%e0%b2%ae%e0%b2%be/#UGhvdG9HcmlkXzE ಆದರೆ ಮೊದಲ ಬಾರಿ ಬಿಗ್ ಬಾಸ್ ಮನೆಯಿಂದ ಹೋಗುವ ಮುನ್ನ..‌ ಸುದೀಪ್ ಅವರ ಜೊತೆ ಮಾತನಾಡುವಾಗ ನನ್ನ ಅರ್ಧ ಸೀರೆಯನ್ನು […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links