ಜೊತೆಜೊತೆಯಲಿ ಧಾರಾವಾಹಿಯ ಕೇಶವ್ ಝೇಂಡೆ ನಿಜಕ್ಕೂ ಯಾರು ಗೊತ್ತಾ?

Source Credit RJ News Kannada

ಜೊತೆಜೊತೆಯಲಿ ಧಾರಾವಾಹಿಯಲ್ಲಿ ಪ್ರತಿಯೊಂದು ಪಾತ್ರಕ್ಕೂ ಮಹತ್ವವಿದೆ.. ಆರ್ಯವರ್ಧನ್ ರಿಂದ ಹಿಡಿದು ಅವರ ಆಫೀಸಿನಲ್ಲಿ ಕೆಲಸ ಮಾಡುವ ಎಫ್ ಎಂ ಇರಬಹುದು ಅಥವಾ ಕಮಲಮ್ಮನ ವಠಾರದಲ್ಲಿ ಸದಾ ಕೆಮ್ಮುವ ಕೆಂಪಣ್ಣ ಇರಬಹುದು.. ಪ್ರತಿಯೊಬ್ಬರನ್ನೂ ತೆರೆಯ ಮೇಲೆ ಅವರ ಪಾತ್ರಕ್ಕೆ ಪ್ರಾಮುಖ್ಯತೆ ಕೊಟ್ಟು ತೋರುವ ನಿರ್ದೇಶಕರ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು..

ಇನ್ನು ಧಾರಾವಾಹಿಯಲ್ಲಿ ಆರ್ಯವರ್ಧನ್ ರ ರೈಟ್ ಹ್ಯಾಂಡ್ ಝೇಂಡೆ ಅವರಂತೂ ಸಿಕ್ಕಾಪಟ್ಟೆ ಫೇಮಸ್ ಈಗ.. ಅವರ ಊರಿನ ಕಡೆಯ ಗಾದೆ ಮಾತುಗಳನ್ನು ಕೇಳೋಕೆ ಒಂದು ರೀತಿ ಆನಂದ..

ಇನ್ನು ಸದಾ ಆರ್ಯವರ್ಧನ್ ರ ಬೆನ್ನಿಗೆ ನಿಂತು ಅವರ ಶ್ರೇಯಸ್ಸನ್ನು ಬಯಸುವ ಈ ಕೇಶವ್ ಝೇಂಡೆ ಧಾರಾವಾಹಿಯಲ್ಲಿ ಆರ್ಯವರ್ಧನ್ ರ ಆಪ್ತ ಸ್ನೇಹಿತನೂ ಹೌದು.. ಈ ಕೇಶವ್ ಝೇಂಡೆ ನಿಜಕ್ಕೂ ಯಾರು? ಇಲ್ಲಿದೆ ನೋಡಿ..

ಇವರ ಹೆಸರು ಬಿ.ಎಂ.ವೆಂಕಟೇಶ್.. 90ರ ದಶಕದ ಮಕ್ಕಳಿಗೆ ಚೆನ್ನಾಗಿ ಇವರ ಪರಿಚಯವಿರುತ್ತದೆ.. ಆ ಸಮಯದಲ್ಲಿ ಮಾಂಗಲ್ಯ ಎಂಬ ಧಾರಾವಾಹಿ ದೊಡ್ಡ ಮಟ್ಟದ ಯಶಸ್ಸನ್ನು ಕಂಡಿತ್ತು.. ಅದೇ ಧಾರಾವಾಹಿಯಲ್ಲಿ ವೆಂಕಟೇಶ್ ಅವರು ಪ್ರಮುಖ ಪಾತ್ರವೊಂದನ್ನು ಮಾಡಿದ್ದರು.. ಸತತ 9 ವರ್ಷ ಆ ಧಾರಾವಾಹಿ ಪ್ರಸಾರವಾಗಿತ್ತು.. ವೆಂಕಟೇಶ್ ಅವರಿಗೆ ದೊಡ್ಡ ಹೆಸರನ್ನು ತಂದುಕೊಟ್ಟಿತ್ತು..

ಆನಂತರ ಅನೇಕ ಧಾರಾವಾಹಿ ಸಿನಿಮಾಗಳಲ್ಲಿ ವೆಂಕಟೇಶ್ ಅವರು ಕಾಣಿಸಿಕೊಂಡರು.. ವೆಂಕಟೇಶ್ ಅವರು ನಟ ಮಾತ್ರವಲ್ಲ ನಿರ್ದೇಶಕರು ಹೌದು.. ಸಿನಿಮಾ ಮೇಲಿನ ಪ್ರೀತಿ.. ಕಲಾ ವೃತ್ತಿ ಮೇಲಿನ ಗೌರವ.. ಹೊಸಬರು ಅಥವಾ ಹೊಸ ಧಾರಾವಾಹಿಗಳು ಯಾರೇ ಮಾಡಲಿ ಅದನ್ನು ಪ್ರೋತ್ಸಾಹಿಸುವ ಗುಣ ಇವರದ್ದು..

ಧಾರಾವಾಹಿಯಲ್ಲಿ ಅನು ವಿಷಯದಲ್ಲಿ ಕಠೋರವಾಗಿ ನಡೆದುಕೊಳ್ಳುವ ಝೇಂಡೆ ನಿಜ ಜೀವನದಲ್ಲಿ ಅತ್ಯಂತ ಸರಳ ವ್ಯಕ್ತಿ.. ಸದ್ಯ ಜೊತೆಜೊತೆಯಲಿ ಧಾರಾವಾಹಿ ವೆಂಕಟೇಶ್ ಅವರಿಗೆ ದೊಡ್ಡ ಯಶಸ್ಸನ್ನು ತಂದುಕೊಟ್ಟಿದೆ.. ಪುಟ್ಟ ಮಕ್ಕಳು ಕೂಡ ಝೇಂಡೆ ಎನ್ನುತ್ತಿದ್ದಾರೆ.. ಕನ್ನಡದ ಒಬ್ಬ ಅತ್ಯದ್ಭುತ ಕಲಾವಿದ ವೆಂಕಟೇಶ್ ಅವರ ಮುಂದಿನ ಎಲ್ಲಾ ಪ್ರಾಜೆಕ್ಟ್ ಗಳಿಗೂ ಶುಭವಾಗಲಿ..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಅಮೇರಿಕಾದ ವಿದ್ಯಾರ್ಥಿಗಳು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ

Tue Jan 7 , 2020
Source Credit NewsKannada.com DSK   ¦    Jan 07, 2020 09:41:39 AM (IST) ಬೆಳ್ತಂಗಡಿ: ದಿ ಯುನೈಡೆಡ್ ಮೆಥೊಡಿನಸ್ಸ್ ಚರ್ಚ್ ವತಿಯಿಂದ ಅಮೇರಿಕಾದ ವಿದ್ಯಾರ್ಥಿಗಳು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಡಾ. ಡಿ.ವೀರೇಂದ್ರ ಹೆಗ್ಗಡೆ ಜತೆ ಮಾತುಕತೆ ನಡೆಸಿದರು. ನಂತರ ಮಾತನಾಡಿದ ವೀರೇಂದ್ರ ಹೆಗ್ಗಡೆ, “ಶಿವನನ್ನು ಲಯಕರ್ತ ಎಂದು ಕರೆಯುತ್ತಾರೆ. ಸೃಷ್ಠಿಯಲ್ಲಿ ಎಲ್ಲವೂ ಆದಿಯಿಂದ ಅಂತ್ಯದೆಡೆಗೆ ಹೋಗುತ್ತದೆ. ಶಾಶ್ವತವಾಗಿ ಈ ಪ್ರಪಂಚದಲ್ಲಿ ಯಾವುದೇ ಚರಾ ಚರ ವಸ್ತುಗಳು ಇರಲು ಸಾಧ್ಯವಿಲ್ಲ. ಎಲ್ಲವೂ ನಾಶವಾಗುವುದು ಸ್ವಾಭಾವಿಕ ಇದು ಶಿವನ ತತ್ವ.” ಪ್ರಪಂಚದಲ್ಲಿ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links