ಜೆಡಿಎಸ್ ಕಾರ್ಯಕರ್ತ ದೇವೇಗೌಡರ ಕ್ಷಮೆ ಕೋರಿದ್ದೇಕೆ?

Source Credit Oneindia.com

Mandya

lekhaka-Lavakumar b m

|

ಮಂಡ್ಯ, ಡಿಸೆಂಬರ್ 21: ಉಪಚುನಾವಣೆ ಬಳಿಕ ಕೆ.ಆರ್.ಪೇಟೆಯಲ್ಲಿ ಬಿಜೆಪಿ ಗೆಲುವಿಗೆ ಸಂಬಂಧಿಸಿದಂತೆ ಜೆಡಿಎಸ್ ಕಾರ್ಯಕರ್ತ ಕೆರಗೋಡು ತಮ್ಮಣ್ಣ ಎಂಬುವರು ಎಚ್.ಡಿ. ದೇವೇಗೌಡ ಕುಟುಂಬದ ಕುರಿತಂತೆ ಆಕ್ರೋಶದ ಮಾತುಗಳನ್ನಾಡಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಾಯಕರು ತೀವ್ರ ಮುಜುಗರಕ್ಕೊಳಗಾಗಿದ್ದರು.

ಇದೀಗ ಆ ಕುರಿತಂತೆ ಸ್ಪಷ್ಟನೆ ನೀಡಿರುವ ಕೆರಗೋಡು ತಮ್ಮಣ್ಣ ಅವರು, “ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ಜೆಡಿಎಸ್ ಸೋತಿದ್ದಕ್ಕೆ ನನಗೆ ಬೇಸರವಾಗಿ, ಮನನೊಂದು ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣನವರ ಬಗ್ಗೆ ಕಟು ಪದ ಬಳಸಿ ಮಾತನಾಡಿದ್ದೆ” ಎಂದಿದ್ದಾರೆ.

“ಜೆಡಿಎಸ್ ಸೋಲಿನಿಂದ ನಾನು ಮತ್ತು ನನ್ನ ಕುಟುಂಬದವರು ತುಂಬಾ ನೊಂದಿದ್ದೇವೆ. ನನ್ನ ಮಾತುಗಳಿಂದ ದೇವೇಗೌಡರ ಕುಟುಂಬಕ್ಕೆ ನೋವಾಗಿರುವುದು ಸತ್ಯ. ನನ್ನ ತಪ್ಪಿನ ಅರಿವಾಗಿ ಕ್ಷಮೆ ಯಾಚಿಸುತ್ತಿದ್ದು, ಮುಂದೆ ಈ ರೀತಿ ಆಗದಂತೆ ಮುಂಜಾಗ್ರತೆ ವಹಿಸುತ್ತೇನೆ” ಎಂದು ಹೇಳಿದ್ದಾರೆ.

ಕ”ಳೆದ 20 ವರ್ಷಗಳಿಂದ ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿಯುತ್ತಿದ್ದು, ಈಗಲೂ ನನ್ನ ಮನೆಯಲ್ಲಿ ಕುಮಾರಸ್ವಾಮಿಯವರ ಫೋಟೋ ಇಟ್ಟು ಪೂಜೆ ಮಾಡುತ್ತಿದ್ದೇನೆ. ನನ್ನಿಂದ ಏನಾದರೂ ತಪ್ಪು ಆಗಿದ್ದರೆ ತಮ್ಮ ಮನೆಯ ಮಗನೆಂದು ತಿಳಿದು ಕ್ಷಮಿಸಬೇಕು” ಎಂದು ಎಚ್.ಡಿ. ದೇವೇಗೌಡರ ಕುಟುಂಬದಲ್ಲಿ ಕೋರಿದ್ದಾರೆ. ಇವರು ಸ್ಪಷ್ಟನೆ ಕೇಳಿದ ಬಳಿಕ ಈ ವೀಡಿಯೋ ಇನ್ನಷ್ಟು ವೈರಲ್ ಆಗುತ್ತಿರುವುದು ಕಂಡು ಬಂದಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ – ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.

Allow Notifications

You have already subscribed

Source Credit Oneindia.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಮಣಿಪಾಲಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್ ವೈ, ವೀರೇಂದ್ರ ಹೆಗ್ಗಡೆ

Sat Dec 21 , 2019
Source Credit Oneindia.com Pin it Email https://nirantharanews.com/%e0%b2%9c%e0%b3%86%e0%b2%a1%e0%b2%bf%e0%b2%8e%e0%b2%b8%e0%b3%8d-%e0%b2%95%e0%b2%be%e0%b2%b0%e0%b3%8d%e0%b2%af%e0%b2%95%e0%b2%b0%e0%b3%8d%e0%b2%a4-%e0%b2%a6%e0%b3%87%e0%b2%b5%e0%b3%87%e0%b2%97%e0%b3%8c/#Wg== Udupi oi-Abdul Raheem By ಉಡುಪಿ ಪ್ರತಿನಿಧಿ | Updated: Saturday, December 21, 2019, 16:47 [IST] ಉಡುಪಿ, ಡಿಸೆಂಬರ್ 21: ನಿನ್ನೆ ಬೆಳಿಗ್ಗೆ ಉಸಿರಾಟದಲ್ಲಿ ಏರುಪೇರಾದ ಕಾರಣ ಕಸ್ತೂರ ಬಾ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಪೇಜಾವರ ಶ್ರೀಗಳನ್ನು ನೋಡಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ಸಂದರ್ಭ ಮಾತನಾಡಿದ ಅವರು, “ಪೇಜಾವರ ಶ್ರೀಗಳು ಗುಣಮುಖರಾಗಲು ಪ್ರಾರ್ಥಿಸಬೇಕು. ನಿನ್ನೆಗಿಂತ ಇಂದು ಅವರ ಆರೋಗ್ಯದಲ್ಲಿ ಸುಧಾರಣೆ ಆಗಿದೆ. ಅವರು ಗುಣಮುಖರಾಗಿ ಬಂದು […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links