ಚೈತ್ರಾ ಕೊಟ್ಟೂರ್ ಅವರಿಗೆ ಸಿಕ್ತು ರವಿ ಬೆಳೆಗೆರೆ ಅವರಿಂದ ಭರ್ಜರಿ ಉಡುಗೊರೆ..

Source Credit RJ News Kannada

ಬಿಗ್ ಬಾಸ್ ಸೀಸನ್ 7 ರಲ್ಲಿ ಎರಡನೇ ಸ್ಪರ್ಧಿಯಾಗಿ ಬಿಗ್ ಮನೆಗೆ ಎಂಟ್ರಿ ಕೊಟ್ಟಿದ್ದ ರವಿ ಬೆಳೆಗೆರೆ ಅವರು ಇದ್ದದ್ದು ಒಂದೇ ವಾರವಾದರೂ ಮನೆಯ ಎಲ್ಲಾ ಸದಸ್ಯರಿಗೆ ಬಹಳ ಕ್ಲೋಸ್ ಆಗಿದ್ದರು.. ಆರೋಗ್ಯ ಸಮಸ್ಯೆ ಇದ್ದ ಕಾರಣ ಸದಸ್ಯರಾಗಿ ಬಂದವರು ಅಥಿತಿಯಾಗಿ ಒಂದೇ ವಾರಕ್ಕೆ ಮರಳಿದರು..

ಇನ್ನು ಇದ್ದ ಒಂದು ವಾರದಲ್ಲಿ ತಮ್ಮ ಜೀವನದ ಅನೇಕ ಅನುಭವಗಳನ್ನು ಸ್ಟಾರ್ ನಟರ ಜೀವನ ಕತೆಗಳನ್ನು ಹಂಚಿಕೊಂಡಿದ್ದರು.. ಮನೆಯ ಸದಸ್ಯರೂ ಕೂಡ ರವಿ ಬೆಳೆಗೆರೆ ಅವರನ್ನು ಬಹಳ ಪ್ರೀತಿ ಕಾಳಜಿಯಿಂದ ನೋಡಿಕೊಂಡಿದ್ದರು..

ಇನ್ನು ರವಿ ಬೆಳೆಗೆರೆ ಅವರು ಮನೆಯಿಂದ ಹೊರ ಬರುವ ಸಮಯದಲ್ಲಿ ಬಹಳ ಭಾವುಕರಾಗಿದ್ದರು.. ನನ್ನ ಬಳಿ ಸಾಕಷ್ಟು ಇದೆ.. ನೀವೆಲ್ಲಾ ಹೊರಗೆ ಬಂದ ನಂತರ ನನ್ನನ್ನು ಭೇಟಿ ಮಾಡಿ.. ಜೀವನದಲ್ಲಿ ತೊಂದರೆ ಇರೋರು ಅನೇಕರು ಇದ್ದೀರಾ.. ನನ್ನನ್ನು ಸಹಾಯ ಕೇಳಲು ಸಂಕೋಚ ಪಡಬೇಡಿ ಎಂದಿದ್ದರು..

ಚೈತ್ರಾ ಕೊಟ್ಟೂರ್, ಭೂಮಿ, ದೀಪಿಕಾ, ಪ್ರಿಯಾಂಕ ಅವರು ರವಿ ಬೆಳೆಗೆರೆ ಅವರನ್ನು ಬಹಳ ಕಾಳಜಿ ಮಾಡಿದ್ದರು.. ಹೊರಗೆ ಬಂದ ನಂತರ ತಪ್ಪದೇ ಭೇಟಿ ಆಗಬೇಕೆಂದು ತಿಳಿಸಿದ್ದರು..

ಇದೀಗ ಅದೇ ಮಾತಿನಂತೆ ರವಿ ಬೆಳೆಗೆರೆ ಅವರನ್ನು ಚೈತ್ರಾ ಕೊಟ್ಟೂರ್ ಅವರು ಭೇಟಿ ಮಾಡಿದ್ದು ಚೈತ್ರಾ ಅವರಿಗೆ ಭರ್ಜರಿ ಉಡುಗೊರೆಯೊಂದನ್ನು ನೀಡಿದ್ದಾರೆ.. ಹೌದು ಅವರು ಬಿಗ್ ಮನೆಯಲ್ಲಿ ಇದ್ದಾಗಲೇ ಹೇಳಿದ ಪ್ರಕಾರ ಜೀವನ ಕಟ್ಟಿಕೊಳ್ಳಲು ನಾನು ಯಾವ ರೀತಿಯ ಸಹಾಯ ಬೇಕಿದ್ರೂ ಮಾಡ್ತೀನಿ ಎಂದಿದ್ದರು..

ಇದೀಗ ರವಿ ಬೆಳೆಗೆರೆ ಅವರು ತಮ್ಮ ಕೃತಿ ಒಂದರ ಆಧಾರದ ಮೇಲೆ ಸಿನಿಮಾ ಮಾಡಬೇಕೆಂದುಕೊಂಡಿದ್ದು, ಆ ಸಿನಿಮಾಗೆ ಚೈತ್ರಾ ಕೊಟ್ಟೂರ್ ಅವರಿಗೆ ಕೆಲಸ ಮಾಡಲು ತಿಳಿಸಿದ್ದಾರೆ ಎನ್ನಲಾಗುತ್ತಿದೆ..

ಈ ಮೂಲಕ ಸಿನಿಮಾ ಒಂದರಲ್ಲಿ ನಿರ್ದೇಶನ ಮಾಡಬೇಕೆಂದುಕೊಂಡ ಚೈತ್ರಾ ಕೊಟ್ಟೂರ್ ಕನಸು ನನಸಾಗಲಿದ್ದು, ಸ್ಕ್ರಿಪ್ಟ್ ವರ್ಕ್ ಮಾಡ್ತಾರೋ ಅಥವಾ ನಿರ್ದೇಶನ ಮಾಡ್ತಾರೋ ಕಾದು ನೋಡಬೇಕಿದೆ.. ಅಷ್ಟೇ ಅಲ್ಲದೆ ಸಿನಿಮಾಗೆ ಬಿಗ್ ಬಾಸ್ ಸದಸ್ಯರನ್ನೇ ಕಲಾವಿದರನ್ನಾಗಿ ತೆಗೆದುಕೊಳ್ತಾರೋ ಅಥವಾ ಹೊರಗಿನ ಕಲಾವಿದರನ್ನು ತೆಗೆದುಕೊಳ್ತಾರೋ ಕಾದು ನೋಡಬೇಕಿದೆ..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಟಾಸ್ಕ್ ಗೋಸ್ಕರ ಬಾತ್ ರೂಮಿನಲ್ಲಿ ಕುರಿ ಪ್ರತಾಪ್ ಮುಟ್ಟಿದ್ದೇನು ಗೊತ್ತಾ? ಯಾವ್ ಕರ್ಮ ಗುರು..

Thu Jan 16 , 2020
Source Credit RJ News Kannada ಬಿಗ್ ಬಾಸ್ ಸೀಸನ್ 7 ಇನ್ನೇನು ಫಿನಾಲೆ ಹತ್ತಿರ ಬರುತ್ತಿದ್ದಂತೆ ಟಾಸ್ಕ್ ಗಳನ್ನು ಮನೆಯ ಸದಸ್ಯರು ತೀರಾ ಅತಿರೇಕಕ್ಕೆ ತೆಗೆದುಕೊಂಡು ಹೋಗುತ್ತಿದ್ದು ಅತ್ಯಂತ ಕೆಟ್ಟದಾಗಿ ನಡೆದುಕೊಳ್ಳುತಿರೋದು ಅವರುಗಳ ಅನುಭವಕ್ಕೆ ಬಾರದೇ ಇರಬಹುದು ಆದರೆ ನೋಡುಗರ ಕಣ್ಣಿಗೆ ಮಾತ್ರ ಎಲ್ಲದುರ ನೈಜ್ಯ ದರ್ಶನವಾಗುತ್ತಿದೆ.. Pin it Email https://nirantharanews.com/%e0%b2%9a%e0%b3%88%e0%b2%a4%e0%b3%8d%e0%b2%b0%e0%b2%be-%e0%b2%95%e0%b3%8a%e0%b2%9f%e0%b3%8d%e0%b2%9f%e0%b3%82%e0%b2%b0%e0%b3%8d-%e0%b2%85%e0%b2%b5%e0%b2%b0%e0%b2%bf%e0%b2%97%e0%b3%86-%e0%b2%b8/#UGhvdG9HcmlkXzE ಕಳೆದ ವಾರ ಕಿಚ್ಚ ಸುದೀಪ್ ಅವರು ಇನ್ನು ಇರುವಷ್ಟು ದಿನದಲ್ಲಿ ಏನು ಬೇಕಾದರೂ ಆಗಬಹುದು.. ಯಾರು ಬೇಕಾದರೂ ಗೆಲ್ಲಬಹುದು.. ಎಲ್ಲರು ನಿಮ್ಮ ನಿಮ್ಮ ಪ್ರಯತ್ನವನ್ನು ಮಾಡಿ ಎಂದು ಸಲಹೆ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links