ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನ; ತಮ್ಮನ್ನು ವಿರೋಧಿಸಿದವರಿಗೆ ಕಲ್ಕುಳಿ ವಿಠಲ್ ಹೆಗಡೆ ಕೊಟ್ಟ ಉತ್ತರವೇನು?

Source Credit Oneindia.com

Chikkamagaluru

oi-Chetan BP

By ಚಿಕ್ಕಮಗಳೂರು ಪ್ರತಿನಿಧಿ

|

ಸಿಟಿ ರವಿ ಕನ್ನಡ ಜಾತ್ರೆಯಲ್ಲಿ ರಾಜಕೀಯ ಮಾಡೋದು ಬೇಡ ಎಂದ ವಿಠ್ಠಲ್ ಭಟ್ | VITAL BHAT | ONEINDIA KANNADA

ಚಿಕ್ಕಮಗಳೂರು, ಜನವರಿ 10: ಆರಂಭಕ್ಕೂ ಮುನ್ನವೇ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸಾಕಷ್ಟು ವಿವಾದಕ್ಕೆ ಸಿಲುಕಿದೆ. ಈ ವಿವಾದಗಳ ನಡುವೆಯೂ ಸದ್ಯಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಇಂದು, ನಾಳೆ ಶೃಂಗೇರಿಯಲ್ಲಿ ನಡೆಯಲಿರುವ ಸಮ್ಮೇಳನಕ್ಕೆ ಬೃಹತ್ ವೇದಿಕೆ, ಭವ್ಯ ಮಂಟಪ ನಿರ್ಮಾಣವಾಗಿದೆ.

ಈ ನಡುವೆ ಸಮ್ಮೇಳನಾಧ್ಯಕ್ಷರ ವಿಚಾರವಾಗೇ ಸಮ್ಮೇಳನಕ್ಕೆ ವಿರೋಧ ವ್ಯಕ್ತವಾಗಿದ್ದು, ಈ ಕುರಿತು ಸಮ್ಮೇಳನಾಧ್ಯಕ್ಷ ಕಲ್ಕುಳಿ ವಿಠಲ್ ಹೆಗಡೆ ಮಾತನಾಡಿದ್ದಾರೆ. “ವಿವಾದಕ್ಕೆ ಕಾರಣವೇ ಇಲ್ಲ. ಸಾಹಿತ್ಯ ಪರಿಷತ್ ಸ್ವಾಯತ್ತ ಸಂಸ್ಥೆ. ವಿವಾದ ಮಾಡಲು ಹೊರಟಿರುವವರು ಸರ್ಕಾರದ ಆಡಳಿತದಲ್ಲಿರುವವರು. ತಮ್ಮ ಮೂಗಿನ ನೇರಕ್ಕೆ ಸಮ್ಮೇಳನ ನಡೆಯದಿದ್ದಕ್ಕೆ ಸಮ್ಮೇಳನದಲ್ಲಿ ಗೊಂದಲ ಎಬ್ಬಿಸಿದ್ದಾರೆ. ಸರ್ವಾಧಿಕಾರಿ ಧೋರಣೆ ಅನುಸರಿಸಲಾಗುತ್ತಿದೆ” ಎಂದು ಹೇಳಿದ್ದಾರೆ.

“ಸಚಿವ ಸಿ.ಟಿ.ರವಿಯವರೇ ಸಮ್ಮೇಳನದ ದಿನಾಂಕ ನಿಗದಿ ಮಾಡಿದ್ದು. ಕಸಾಪ ನಿಗದಿ ಮಾಡಿದ ದಿನಾಂಕ ಅಲ್ಲ. ಈ ಸಮ್ಮೇಳನದಲ್ಲಿ ಕನ್ನಡಿಗರಿಗೆ, ಕನ್ನಡಕ್ಕೆ ಬಂದ ಸಂಕಷ್ಟಗಳ ಬಗ್ಗೆ ಚರ್ಚೆ ಆಗಬೇಕಿತ್ತು. ಆದರೆ ಸಾಹಿತ್ಯ ಸಮ್ಮೇಳನದ ಬಗ್ಗೆಯೇ ಚರ್ಚೆ ಆಗುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಸರ್ಕಾರ ಅನುದಾನ ನೀಡದೇ ಇರಬಹುದು ಆದ್ರೆ ಕನ್ನಡದ ಅಭಿಮಾನಿಗಳು ಇದನ್ನು ಸವಾಲಾಗಿ ತೆಗೆದುಕೊಂಡಿದ್ದಾರೆ. ಸಚಿವರು ಮಾಡಿರುವ ಆರೋಪಗಳು ಈ ಹಿಂದೆಯೇ ತೀರ್ಮಾನವಾಗಿದೆ.

ಇವರ ಬಳಿ ದಾಖಲೆಗಳಿಲ್ಲ. ಸಚಿವ ಸಿ.ಟಿ ರವಿ ಹಾಗೂ ಶೋಭಾ ಕರಂದ್ಲಾಜೆ ವೈಯುಕ್ತಿಕ ದ್ವೇಷದಿಂದ ಹೇಳಿಕೆ ಕೊಡ್ತಾ ಇದ್ದಾರೆ. ಇವ್ಯಾವುದಕ್ಕೂ ಆಧಾರ ಇಲ್ಲ” ಎಂದು ತಿಳಿಸಿದ್ದಾರೆ.

ಹಿಂದುಪರ ಸಂಘಟನೆಗಳಿಂದ ನಿನ್ನೆ ಶೃಂಗೇರಿ ಬಂದ್ ಗೆ ಕರೆ ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಎಸ್ಪಿ ಹರೀಶ್ ಪಾಂಡೆ ಶೃಂಗೇರಿಯಲ್ಲಿ ಮೊಕ್ಕಾಂ ಹೂಡಿದ್ದಾರೆ. ಸಮ್ಮೇಳನಕ್ಕೆ ಶೃಂಗೇರಿ ಮಠದಿಂದ ಬೆಂಬಲ ದೊರೆತಿದ್ದು, ಮಠದಿಂದ ಊಟದ ಸಾಮಗ್ರಿಗಳನ್ನು ನೀಡಲಾಗುತ್ತಿದೆ.

ಶೃಂಗೇರಿ ಪಟ್ಟಣದ ಶಾರದಾ ನಗರದಲ್ಲಿರುವ ಸಮ್ಮೇಳನಾಧ್ಯಕ್ಷ ವಿಠಲ ಹೆಗಡೆ ಅವರ ಮನೆಗೂ ಭಾರೀ ಪೊಲೀಸ್ ಬಂದೋಬಸ್ತ್ ನೀಡಲಾಗಿದೆ. ಸಮ್ಮೇಳನಕ್ಕೆ 2 ಕೆಎಸ್.ಆರ್.ಪಿ ತುಕಡಿ ಸೇರಿದಂತೆ 60ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ – ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.

Allow Notifications

You have already subscribed

Source Credit Oneindia.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಬಾಲ್ಯದ ಕಷ್ಟದ ದಿನಗಳನ್ನು ನೆನೆದ ದಾವಣಗೆರೆ ಜಿಲ್ಲಾಧಿಕಾರಿ

Fri Jan 10 , 2020
Source Credit Oneindia.com Pin it Email https://nirantharanews.com/%e0%b2%9a%e0%b2%bf%e0%b2%95%e0%b3%8d%e0%b2%95%e0%b2%ae%e0%b2%97%e0%b2%b3%e0%b3%82%e0%b2%b0%e0%b3%81-%e0%b2%9c%e0%b2%bf%e0%b2%b2%e0%b3%8d%e0%b2%b2%e0%b2%be-%e0%b2%b8%e0%b2%be%e0%b2%b9%e0%b2%bf-2/#Wg== Davanagere oi-Puttappa Koli | Published: Thursday, January 9, 2020, 17:08 [IST] ದಾವಣಗೆರೆ, ಜನವರಿ 09: ಬಾಲ್ಯದಲ್ಲಿ ತಾನು ಅನುಭವಿಸಿದ ಬಡತನ ಹಾಗೂ ಕಷ್ಟದ ದಿನಗಳನ್ನು ನೆನೆದು ಭಾವುಕರಾಗಿದ್ದಾರೆ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ. Pin it Email https://nirantharanews.com/%e0%b2%9a%e0%b2%bf%e0%b2%95%e0%b3%8d%e0%b2%95%e0%b2%ae%e0%b2%97%e0%b2%b3%e0%b3%82%e0%b2%b0%e0%b3%81-%e0%b2%9c%e0%b2%bf%e0%b2%b2%e0%b3%8d%e0%b2%b2%e0%b2%be-%e0%b2%b8%e0%b2%be%e0%b2%b9%e0%b2%bf-2/#eDQ4MA== ಕೋಟಿ ಸಿಕ್ಕಿದ್ದೇ ತಡ ವಿಂಡೀಸ್ ಬ್ಯಾಟ್ಸ್ ಮೆನ್ ಫುಲ್ ಸ್ಟೆಪ್. ನಾನು 5 ವರ್ಷದ ವಯಸ್ಸಿನವನಾಗಿದ್ದಾಗ ನನ್ನ ತಂದೆ ಅಕಾಲಿಕ ಮರಣ ಹೊಂದಿದ ಸಂದರ್ಭದಲ್ಲಿ, ನಮಗೆ ಕಿತ್ತು ತಿನ್ನುವ ಬಡತನ. […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links