ಚಿಕ್ಕಬಳ್ಳಾಪುರ; ಬಿಜೆಪಿಯ ಡಾ.ಕೆ.ಸುಧಾಕರ್ ಗೆಲುವಿನ ನಗೆ

Source Credit Oneindia.com

Chikkaballapur

oi-Manjunath Bhadrashetti

|

ಚಿಕ್ಕಬಳ್ಳಾಪುರ, ಡಿಸೆಂಬರ್ 9: ಚಿಕ್ಕಬಳ್ಳಾಪುರ ಉಪ ಚುನಾವಣೆಯ ಮತ ಎಣಿಕೆ ಕಾರ್ಯ ಮುಗಿದಿದ್ದು, ಕಾಂಗ್ರೆಸ್ ನಿಂದ ಬಿಜೆಪಿ ಗೆ ಹೋಗಿದ್ದ ಡಾ.ಕೆ.ಸುಧಾಕರ್ ಅವರು ಗೆಲುವಿನ ನಗೆ ಬೀರಿದ್ದಾರೆ.

ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಎಂ ಆಂಜಿನಪ್ಪ ಅವರನ್ನು 31,831 ಮತಗಳ ಅಂತರದಿಂದ ಸೋಲಿಸಿ, ಮತ್ತೊಮ್ಮೆ ವಿಧಾನಸಭೆ ಪ್ರವೇಶಿಸುತ್ತಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ನಡೆದ ಮತ ಎಣಿಕೆ ಕಾರ್ಯ ಅಂತಿಮಗೊಂಡಿದ್ದು, ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಯವರು ಸುಧಾಕರ್ ಅವರ ಗೆಲುವನ್ನು ಅಧಿಕೃತವಾಗಿ ಘೋಷಿಸಬೇಕಿದೆ. ಕೆ.ಸುಧಾಕರ್ ಅವರು, 76,582 ಮತಗಳನ್ನು ಪಡೆದರೆ, ಎಂ.ಆಂಜಿನಪ್ಪ ಅವರು, 44,751 ಮತಗಳನ್ನು ಪಡೆದರು. ಜೆಡಿಎಸ್ ನ ಎನ್ ರಾಧಾಕೃಷ್ಣ ಅವರು 31,350 ಮತಗಳನ್ನು ಪಡೆಯುವಲ್ಲಿ ಸಫಲವಾದರು.

ಕೆ.ಸುಧಾಕರ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮೇಲೆ ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಕಾಂಗ್ರೆಸ್ ನಾಯಕರು ಕೂಡ ಸುಧಾಕರ್ ಅವರನ್ನು ಸೋಲಿಸಬೇಕು ಎಂದು ಪಣ ತೊಟ್ಟಿದ್ದರು. ಪ್ರಚಾರ ವೇಳೆ ಆಂಜಿನಪ್ಪ ಅವರು ಸುಧಾಕರ ವಿರುದ್ಧ ಏಕವಚನದಲ್ಲಿವಾಗ್ದಾಳಿ ನಡೆಸಿ, ಪ್ರಚಾರ ನಡೆಸಿದ್ದರು. ಕಡೆಗೂ ಸುಧಾಕರ್ ಗೆಲ್ಲುವಲ್ಲಿ ಸಫಲವಾಗಿದ್ದಾರೆ. ಸುಧಾಕರ್ ಅವರು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ – ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.

Allow Notifications

You have already subscribed

Source Credit Oneindia.com

Niranthara News

Leave a Reply

Your email address will not be published. Required fields are marked *

Next Post

ರಾಣೇಬೆನ್ನೂರು ಉಪ ಚುನಾವಣೆ: ಗೆಲುವಿನ ದಡ ಸೇರಿದ ಬಿಜೆಪಿಯ ಪೂಜಾರ್

Mon Dec 9 , 2019
Source Credit Oneindia.com We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links