ಚಿಕ್ಕಬಳ್ಳಾಪುರ ಕ್ಷೇತ್ರ ಉಪಚುನಾವಣೆ: ಜಾತಿ ಲೆಕ್ಕಾಚಾರ ಏನು?

Source Credit Oneindia.com

Chikkaballapur

oi-Manjunatha C

|

ಚಿಕ್ಕಬಳ್ಳಾಪುರ, ಡಿಸೆಂಬರ್ 05: ಹದಿನೈದು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಮತದಾನ ಇಂದು ನಡೆಯುತ್ತಿದ್ದು, ಮತದಾನದ ದಿನವೇ ಗೆಲುವಿನ ಲೆಕ್ಕಾಚಾರಗಳೂ ಪ್ರಾರಂಭವಾಗಿವೆ.

ಕುತೂಹಲ ಕೆರಳಿಸಿರುವ ಉಪಚುನಾವಣೆಯ ಪ್ರಮುಖ ಕ್ಷೇತ್ರಗಳಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರವೂ ಒಂದಾಗಿದ್ದು. ಇಲ್ಲಿನ ಜಾತಿ ಲೆಕ್ಕಾಚಾರ ಚುನಾವಣಾ ಗೆಲುವಿನ ಮೇಲೆ ನೇರ ಪರಿಣಾಮ ಬೀರಲಿದೆ.

ಒಕ್ಕಲಿಗರು ಮತ್ತು ಬಲಿಜಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ ಈ ಎರಡೂ ಸಮುದಾಯಗಳು ಯಾವ ಅಭ್ಯರ್ಥಿಗೆ ಬೆಂಬಲ ನೀಡುತ್ತಾರೋ ಅವರಿಗೆ ಗೆಲುವು ಸರಳ. ಆದರೆ ಈ ಬಾರಿ ಕಣದಲ್ಲಿರುವ ಮೂವರು ಅಭ್ಯರ್ಥಿಗಳು ಘಟಾನುಘಟಿ ಅಭ್ಯರ್ಥಿಗಳೇ ಆಗಿರುವ ಕಾರಣ ಸಮುದಾಯದ ಮತಗಳು ಒಡೆಯುವ ಸಾಧ್ಯತೆ ಇದೆ.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆ ಬಯಸಿ ಬಿಜೆಪಿಯಿಂದ ‘ಅನರ್ಹ’ ಸುಧಾಕರ್ ಕಣಕ್ಕೆ ಇಳಿದಿದ್ದಾರೆ. ಇವರು ಈ ಮುನ್ನಾ ಕಾಂಗ್ರೆಸ್‌ ನಲ್ಲಿದ್ದರು. ಕಾಂಗ್ರೆಸ್‌ ಪಕ್ಷದಿಂದ ಹಿರಿಯ ಆಂಜಿನಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ. ಇನ್ನು ಜೆಡಿಎಸ್‌ ನಿಂದ ಅನಿತಾ ಕುಮಾರಸ್ವಾಮಿ ಅವರ ಸೋದರ ಸಂಬಂಧಿ ರಾಧಾಕೃಷ್ಣ ಅವರಿಗೆ ಟಿಕೆಟ್ ನೀಡಲಾಗಿದೆ. ಈ ಮೂವರ ನಡುವೆ ತುರುಸಿನ ಪೈಪೋಟಿ ಇದೆ.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 200218, ಇದರಲ್ಲಿ ಮಹಿಳಾ ಮತದಾರರು 100747,

ಪುರುಷ ಮತದಾರರು 99449. ಇತರೆ 22, ಸರ್ವೀಸ್ ವೋಟರ್ಸ್ 46 ಇದ್ದಾರೆ.

ಕ್ಷೇತ್ರದ ಜಾತಿವಾರು ಲೆಕ್ಕಾಚಾರ ಇಂತಿದೆ.

ಒಕ್ಕಲಿಗರು-50000

ಬಲಿಜಿಗರು-30000

ಕುರುಬರು-15000

ಅಲ್ಪಸಂಖ್ಯಾತರು-15000

ಪರಿಶಿಷ್ಟ ಜಾತಿ-50000 ಪರಿಶಿಷ್ಟ ಪಂಗಡ-25000

ಇತರೆ ಸಮುದಾಯ-20000 (ಅಂದಾಜು)

ವಾರ್ಡ್‌ ಮತ್ತು ಹೋಬಳಿ

ಚಿಕ್ಕಬಳ್ಳಾಪುರ ನಗರಸಭೆ

ಕಸಬಾ ಹೋಬಳಿ

ಮಂಚೇನಹಳ್ಳಿ

ನಂದಿ

ಮಂಡಿಕಲ್ಲು

ಕನ್ನಡ ಮ್ಯಾಟ್ರಿಮೋನಿಯಲ್ಲಿ – ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.

Allow Notifications

You have already subscribed

Source Credit Oneindia.com

Niranthara News

Leave a Reply

Your email address will not be published. Required fields are marked *

Next Post

ಯಲ್ಲಾಪುರ ಕ್ಷೇತ್ರ ಉಪಚುನಾವಣೆ: ಗೆಲ್ಲುವ ಹಠದಲ್ಲಿ ಹೆಬ್ಬಾರ್, ನಾಯ್ಕ

Thu Dec 5 , 2019
Source Credit Oneindia.com Pin it Email https://nirantharanews.com/%e0%b2%9a%e0%b2%bf%e0%b2%95%e0%b3%8d%e0%b2%95%e0%b2%ac%e0%b2%b3%e0%b3%8d%e0%b2%b3%e0%b2%be%e0%b2%aa%e0%b3%81%e0%b2%b0-%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0-%e0%b2%89%e0%b2%aa/#Wg== Karwar oi-Devaraj Naik By ಕಾರವಾರ ಪ್ರತಿನಿಧಿ | Published: Thursday, December 5, 2019, 10:08 [IST] ಉಪ ಚುನಾವಣೆ ನಡೆಯುತ್ತಿರುವ ಹದಿನೈದು ಕ್ಷೇತ್ರಗಳ ಪೈಕಿ ಯಲ್ಲಾಪುರ ಕ್ಷೇತ್ರ ಕೂಡ ಒಂದು. 2018ರಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಗೆಲುವು ಪಡೆದುಕೊಂಡಿದ್ದ ಶಿವರಾಮ್ ಹೆಬ್ಬಾರ್ ರಾಜೀನಾಮೆ ನೀಡಿ ಅನರ್ಹರಾಗಿದ್ದರಿಂದ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನಡೆಯುತ್ತಿದೆ. ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ಈ ಬಾರಿ ಬಿಜೆಪಿ ಅಭ್ಯರ್ಥಿ. ಶಿವರಾಮ ಹೆಬ್ಬಾರ್ ಹಾಗೂ ಕಾಂಗ್ರೆಸ್ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links