ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಹೀಗೊಂದು ಗಾಸಿಪ್: ನಿಜವಾದರೆ ಖುಷಿ ಪಡ್ತೀರಾ.?

Source Credit Filmibeat.com

ಕನ್ನಡ ಕಿರುತೆರೆಗೆ ಎಂಟ್ರಿಕೊಡುತ್ತಾರಂತೆ ದರ್ಶನ್.!

ಕನ್ನಡ ಕಿರುತೆರೆ ಲೋಕಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂಟ್ರಿಕೊಡುತ್ತಾರಂತೆ. ಖಾಸಗಿ ವಾಹಿನಿಯ ಒಂದು ಅದ್ಧೂರಿ ಶೋಗೆ ದರ್ಶನ್ ನಿರೂಪಣೆ ಮಾಡಲಿದ್ದಾರಂತೆ. ದರ್ಶನ್ ರನ್ನ ಕಿರುತೆರೆಗೆ ಕರೆದುಕೊಂಡು ಬರಲು ಸಕಲ ಪ್ರಯತ್ನ ನಡೆಯುತ್ತಿದೆಯಂತೆ ಎಂಬ ಅಂತೆ-ಕಂತೆ ಗಾಂಧಿನಗರದ ತುಂಬೆಲ್ಲಾ ರೆಕ್ಕೆ-ಪುಕ್ಕ ಕಟ್ಟಿಕೊಂಡು ಹರಿದಾಡುತ್ತಿದೆ.

ದರ್ಶನ್ ಗೆ ಕಿರುತೆರೆ ಹೊಸದಲ್ಲ.!

ಇಂದು ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಆಗಿರುವ ದರ್ಶನ್ ಗೆ ಕನ್ನಡ ಕಿರುತೆರೆ ಹೊಸದೇನಲ್ಲ. ದರ್ಶನ್ ಮೊದಲು ಬಣ್ಣ ಹಚ್ಚಿ ಕ್ಯಾಮರಾ ಮುಂದೆ ನಿಂತಿದ್ದು, ಎಸ್.ನಾರಾಯಣ್ ನಿರ್ದೇಶನದ ‘ಚಂದ್ರಿಕಾ’ ಸೀರಿಯಲ್ ಗಾಗಿ. ಈ ಧಾರಾವಾಹಿಯಲ್ಲಿ ಉತ್ತಮವಾಗಿ ಅಭಿನಯಿಸಿದ ಬಳಿಕ ದರ್ಶನ್ ಗೆ ಎಸ್.ನಾರಾಯಣ್ ‘ಮಹಾಭಾರತ’ ಚಿತ್ರಕ್ಕೆ ಆಫರ್ ನೀಡಿದರು. ಅಲ್ಲಿಂದ, ‘ದೇವರ ಮಗ’, ‘ಎಲ್ಲರ ಮನೆ ದೋಸೆನೂ’ ಚಿತ್ರಗಳಲ್ಲಿ ನಟಿಸಿದ ದರ್ಶನ್ ಮುಂದೆ ‘ಮೆಜೆಸ್ಟಿಕ್’ ಮೂಲಕ ಹೀರೋ ಆಗಿ ಗ್ರ್ಯಾಂಡ್ ಎಂಟ್ರಿಕೊಟ್ಟಿದ್ದು ಈಗ ಇತಿಹಾಸ.

ಮತ್ತೆ ಕಿರುತೆರೆಗೆ ಬರ್ತಾರಾ ದರ್ಶನ್.?

ಹೀರೋ ಆದ್ಮೇಲೆ ಕಿರುತೆರೆ ಕಡೆಗೆ ದರ್ಶನ್ ಮುಖ ಮಾಡಿಲ್ಲ. ‘ವೀಕೆಂಡ್ ವಿತ್ ರಮೇಶ್’, ‘ಮಜಾ ಟಾಕೀಸ್’ ಸೇರಿದಂತೆ ಕೆಲ ರಿಯಾಲಿಟಿ ಶೋಗಳಲ್ಲಿ ದರ್ಶನ್ ಅತಿಥಿಯಾಗಿ ಮಾತ್ರ ಕಾಣಿಸಿಕೊಂಡಿದ್ದಾರೆ. ಅಷ್ಟು ಬಿಟ್ಟರೆ, ಶೋ ನಡೆಸಿಕೊಡುವ ಸಾಹಸಕ್ಕೆ ಅವರು ಕೈಹಾಕಿಲ್ಲ.

ದರ್ಶನ್ ಬಳಿ ಇದೆ ಒಂದು ಕಂಡೀಷನ್

”ಸಮಾಜಕ್ಕೆ ಒಳ್ಳೆಯದು ಮಾಡುವುದು ನನ್ನ ಆದ್ಯ ಕರ್ತವ್ಯ. ನನ್ನ ದಾನ ಧರ್ಮದ ನಿಬಂಧನೆಗಳಿಗೆ ಯಾವುದೇ ಚಾನೆಲ್ ಒಪ್ಪಿದ್ದಲ್ಲಿ ನಾನು ರಿಯಾಲಿಟಿ ಶೋನಲ್ಲಿ ಭಾಗವಹಿಸಲು ಸಿದ್ಧ” ಎಂದು ಈ ಹಿಂದೆ ಟ್ವಿಟ್ಟರ್ ನಲ್ಲಿ ದರ್ಶನ್ ಬರೆದುಕೊಂಡಿದ್ದರು. ಹಾಗಾದ್ರೆ, ಇದೇ ಕಂಡೀಷನ್ ಮೇಲೆ ದರ್ಶನ್ ಈಗ ಕಿರುತೆರೆಗೆ ಬಂದರೆ.?

ಸ್ಟಾರ್ ನಟರೇ ನಿರೂಪಕರು.!

‘ಬಿಗ್ ಬಾಸ್’ ಕಾರ್ಯಕ್ರಮಕ್ಕೆ ಸುದೀಪ್, ‘ಕನ್ನಡದ ಕೋಟ್ಯಧಿಪತಿ’, ‘ಫ್ಯಾಮಿಲಿ ಪವರ್’ ಶೋಗೆ ಪುನೀತ್ ರಾಜ್ ಕುಮಾರ್, ‘ಸೂಪರ್ ಮಿನಿಟ್’ಗೆ ಗಣೇಶ್, ‘ವೀಕೆಂಡ್ ವಿತ್ ರಮೇಶ್’ಗಾಗಿ ರಮೇಶ್ ಅರವಿಂದ್ ಸೇರಿದಂತೆ ಹಲವು ಸ್ಟಾರ್ ನಟರು ಕಿರುತೆರೆಯಲ್ಲಿ ಶೋ ನಿರೂಪಣೆ ಮಾಡುತ್ತಿದ್ದಾರೆ. ಇನ್ನೂ ಜಗ್ಗೇಶ್, ರಕ್ಷಿತಾ ಪ್ರೇಮ್, ರವಿಚಂದ್ರನ್, ರಚಿತಾ ರಾಮ್ ಶೋಗಳಿಗೆ ತೀರ್ಪುಗಾರರಾಗಿರುವುದು ನಿಮಗೆಲ್ಲಾ ಗೊತ್ತೇ ಇದೆ. ಇದೀಗ ಇದೇ ಲಿಸ್ಟ್ ಗೆ ದರ್ಶನ್ ಸೇರ್ಪಡೆಗೊಂಡು ಶೋವೊಂದನ್ನು ನಿರೂಪಣೆ ಮಾಡ್ತಾರಾ.? ಈ ಪ್ರಶ್ನೆಗೆ ಕಾಲವೇ ಉತ್ತರ ಕೊಡಬೇಕು.

Source Credit Filmibeat.com

Niranthara News

Leave a Reply

Your email address will not be published. Required fields are marked *

Next Post

ಜೋಡೆತ್ತಿಗೆ ಟಾಂಗ್ ಕೊಟ್ಟರಾ ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್?

Thu Dec 12 , 2019
Source Credit Oneindia.com Pin it Email https://nirantharanews.com/%e0%b2%9a%e0%b2%be%e0%b2%b2%e0%b3%86%e0%b2%82%e0%b2%9c%e0%b2%bf%e0%b2%82%e0%b2%97%e0%b3%8d-%e0%b2%b8%e0%b3%8d%e0%b2%9f%e0%b2%be%e0%b2%b0%e0%b3%8d-%e0%b2%a6%e0%b2%b0%e0%b3%8d%e0%b2%b6%e0%b2%a8%e0%b3%8d/#Wg== Ramanagara oi-Rajashekhar Myageri | Published: Thursday, December 12, 2019, 20:59 [IST] ರಾಮನಗರ, ಡಿಸೆಂಬರ್.12: ನಾನೂ ಕೂಡ ಈ ಜಿಲ್ಲೆಯವನೆ. ಈ ಜಿಲ್ಲೆಯ ಮನೆ ಮಗನಾಗಲು ಪ್ರಯತ್ನ ಮಾಡುತ್ತೇನೆ ಎಂದು ಉಪ ಮುಖ್ಯಮಂತ್ರಿ ಆಶ್ವಥ್ ನಾರಾಯಣ್ ಹೇಳಿದ್ದಾರೆ. ಆ ಮೂಲಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೆಸರು ಹೇಳದೇ ಟಾಂಗ್ ನೀಡಿದರು. ರಾಮನಗರ ಜಿಲ್ಲೆ ಮಾಗಡಿಯ ಕೋಟೆ ಮೈದಾನದಲ್ಲಿ ಕೆಂಪೇಗೌಡ ಅಭಿವೃದ್ಧಿ ಸಮಿತಿ ವತಿಯಿಂದ ನಾಡಪ್ರಭು ಕೆಂಪೇಗೌಡರ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links