ಚಳಿಗಾಲದಲ್ಲಿ ಈ ಟ್ರೆಂಡಿಂಗ್ ಹೇರ್‌ಸ್ಟೈಲ್‌ಗಳನ್ನೂ ಟ್ರೈ ಮಾಡಿ

Source Credit Kannada.boldsky.com

ಕುದುರೆ ಜುಟ್ಟು ಹಾಗೂ ಹೇರ್ ಬ್ಯಾಂಡ್‌

ಇದೀಗ ಹೊಳೆಯುವ ಕೂದಲು ಮತ್ತೆ ಟ್ರೆಂಡ್‌ ಆಗಿದೆ. ಕೂದಲು ಒರಟು-ಒರಟಾಗಿ ಕಾಣುವುದು ಯಾರಿಗೂ ಇಷ್ಟವಾಗುವುದಿಲ್ಲ. ಕೂದಲು ಹೊಳಪಿನಿಂದ ಕೂಡಿದರೆ ನೋಡಲು ಕೂಡ ಆಕರ್ಷಕವಾಗಿ ಕಾಣುವುದು. ಹೊಳಪಿನ ಕೂದಲಿಗಾಗಿ ಕೆಲವರು ಕೆರಾಟಿನ್ ಮೊರೆ ಹೋದರೆ, ಮತ್ತೆ ಕೆಲವರು ಸೆರಮ್‌ ಬಳಸುತ್ತಾರೆ. ಕೂದಲು ಗಿಡ್ಡವಾಗಿರಲಿ, ಉದ್ದವಾಗಿರಲಿ ಹೊಳಪಿನಿಂದ ಕೂಡಿದ್ದರೆ ನೋಡಲು ಆಕರ್ಷಕವಾಗಿ ಕಾಣುವುದು.

ಮರುಕಳಿಸಿದ 60ರ ಫ್ಯಾಷನ್

ನೀವು 60 ದಶಕದಲ್ಲಿ ನಟಿಯರು ಮಾಡುತ್ತಿದ್ದ ಹೇರ್‌ಸ್ಟೈಲ್‌ ಗಮನಿಸಿರಬಹುದು, ಇದೀಗ ಅದೇ ರೀತಿಯ ಹೇರ್‌ಸ್ಟೈಲ್‌ ಟ್ರೆಂಡ್ ಮತ್ತೆ ಚಾಲ್ತಿಗೆ ಬಂದಿದೆ. ಸ್ವಲ್ಪ ಬೋಲ್ಡ್‌ ಲುಕ್‌ನಿಂದಕಾಣ ಬಯಸುವವರಿಗೆ ಈ ಹೇರ್‌ ಸ್ಟೈಲ್‌ ಹೇಳಿ ಮಾಡಿಸಿದಂತಿದೆ. ಈ ಹೇರ್‌ ಸ್ಟೈಲ್‌ ಡೆನಿಮ್‌ ಡ್ರೆಸ್ಸಿಂಗ್‌ಗೆ ಆಕರ್ಷಕವಾಗಿ ಕಾಣುವುದು. ಈ ಹೇರ್‌ ಸ್ಟೈಲ್ ಕೂದಲು ಸ್ಟ್ರೈಟ್‌ ಇರಬೇಕು. ಕೂದಲನ್ನು ಮೇಲಕ್ಕೆ ಎತ್ತಿ, ಅರ್ಧ ಕೂದಲನ್ನು ಬಿಟ್ಟು ನೆತ್ತಿಯ ಮೇಲ್ಭಾಗಕ್ಕೆ ಜುಟ್ಟು ಹಾಕುವುದು. ಹದಿ ಹರೆಯದ ಹೆಣ್ಮಕ್ಕಳಿಗೆ ಹೇಳಿ ಮಾಡಿಸಿದ ಹೇರ್‌ ಸ್ಟೈಲ್ ಇದಾಗಿದೆ.

ಶೈನಿ ಕೂದಲು

ಇದೀಗ ಹೊಳೆಯುವ ಕೂದಲು ಮತ್ತೆ ಟ್ರೆಂಡ್‌ ಆಗಿದೆ. ಕೂದಲು ಒರಟು-ಒರಟಾಗಿ ಕಾಣುವುದು ಯಾರಿಗೂ ಇಷ್ಟವಾಗುವುದಿಲ್ಲ. ಕೂದಲು ಹೊಳಪಿನಿಂದ ಕೂಡಿದರೆ ನೋಡಲು ಕೂಡ ಆಕರ್ಷಕವಾಗಿ ಕಾಣುವುದು. ಹೊಳಪಿನ ಕೂದಲಿಗಾಗಿ ಕೆಲವರು ಕೆರಾಟಿನ್ ಮೊರೆ ಹೋದರೆ, ಮತ್ತೆ ಕೆಲವರು ಸೆರಮ್‌ ಬಳಸುತ್ತಾರೆ. ಕೂದಲು ಗಿಡ್ಡವಾಗಿರಲಿ, ಉದ್ದವಾಗಿರಲಿ ಹೊಳಪಿನಿಂದ ಕೂಡಿದ್ದರೆ ನೋಡಲು ಆಕರ್ಷಕವಾಗಿ ಕಾಣುವುದು.

ಸ್ಟೈಲಿಷ್‌ ಹೇರ್ ಕ್ಲಿಪ್ ಬಳಸುವುದು

ನೀವು ಅಲಂಕಾರ ಪ್ರಿಯರಾಗದ್ದರೆ ಈಗೀನ ಟ್ರೆಂಡ್‌ ನಿಮ್ಮ ಅಲಂಕಾರಕ್ಕೆ ಪೂರಕವಾಗಿದೆ. ಪ್ಲೇನ್‌ ಹೇರ್‌ ಕ್ಲಿಪ್‌ ಬದಲಿಗೆ ಕಲರ್ ಫುಲ್, ಫಂಕಿ ಹೇರ್‌ ಕ್ಲಿಪ್‌ಗಳದ್ದೇ ಕಾರುಬಾರು. ಈ ಹೇರ್‌ ಕ್ಲಿಪ್‌ಗಳು ಗಿಡ್ಡ ಕೂದಲಿನಿಂದ ಹಿಡಿದು, ಉದ್ದ ಕೂದಲಿನವರೆಗೆ ಆಕರ್ಷಕವಾಗಿ ಕಾಣುತ್ತದೆ. ತುಂಬಾ ಕಲರ್‌ಫುಲ್‌ ಬ್ಯಾಂಡ್‌ಗಳು ಟ್ರೆಂಡ್‌ನಲ್ಲಿ ಇಲ್ಲ ಎಂದು ಹಾಗೇ ಇಟ್ಟಿದ್ದರೆ ಅದನ್ನು ತೆಗೆದು ಬಳಸುವ ಸಮಯ ಬಂದಿದೆ ನೋಡಿ.

ಹೇರ್ ಕಲರ್‌

ಹೇರ್‌ ಕಲರ್ ಟ್ರೆಂಡ್‌ ಮತ್ತೆ ಮರುಕಳಿಸಿದೆ. ಹೇರ್‌ ಕಲರ್‌ ಮಾಡಿಸುವಾಗ ತಮ್ಮ ತ್ವಚೆ ಬಣ್ಣಕ್ಕೆ ಹೊಂದುವಂಥ ಹೇರ್ ಕಲರ್ ಹಾಕಿಸುವುದು ಒಳ್ಳೆಯದು. ಭಾರತೀಯರ ಮೈ ಬಣ್ಣಕ್ಕೆ ಕೆಂಪು, ಹಳದಿ ಈ ರೀತಿಯ ಬಣ್ಣಗಳು ಆಕರ್ಷಕವಾಗಿ ಕಾಣುವುದಿಲ್ಲ, ಈ ರೀತಿಯ ಬಣ್ಣ ಹಾಕಿಸಿದರೆ ವಿಚಿತ್ರವಾಗಿ ಕಾಣುವುದು, ತೆಳು ಕೆಂಚು ಬಣ್ಣ, ಕಂದು ಬಣ್ಣ ಕೂದಲಿಗೆ ಆಕರ್ಷಕವಾಗಿ ಕಾಣುತ್ತದೆ.

ಹೇರ್‌ಪಿನ್ ಲುಕ್‌

ಈ ಹೇರ್‌ಪಿನ್‌ ಲುಕ್‌ಗೆ ದೊಡ್ಡ-ದೊಡ್ಡ ಹೇರ್‌ಪಿನ್ ಬದಲಿಗೆ ಚಿಕ್ಕ ಹೇರ್‌ಪಿನ್‌ ಬಳಸಿ ಹೇರ್‌ಸ್ಟೈಲ್‌ ಮಾಡಿದರೆ ಕೂದಲಿಗೆ ನೋವಾಗುವುದಿಲ್ಲ ಹಾಗೂ ತುಂಬಾ ಆಕರ್ಷಕವಾಗಿ ಕಾಣುವುದು. ಫ್ರೀ ಹೇರ್‌ ಬಿಟ್ಟು ಮುಂದೆ ಹೇರ್‌ ಪಿನ್‌ನಿಂದ ಬ್ಯಾಂಡ್‌ ರೀತಿಯಲ್ಲಿ ಸ್ಟೈಲ್ ಮಾಡಿ. ನಿಮ್ಮ ನ್ಯೂ ಲುಕ್ ಎಲ್ಲರಿಗೆ ಇಷ್ಟವಾಗುವುದು ನೋಡಿ. ಈ ಹೇರ್‌ಪಿನ್‌ ಲುಕ್ ಹದಿಹರೆಯದ ಕಾಲೇಜು ಹೆಣ್ಮಕ್ಕಳಿಗೆ ತುಂಬಾ ಆಕರ್ಷಕವಾಗಿ ಕಾಣುವುದು.

ಫ್ರೀ ಕರ್ಲಿಹೇರ್‌ ಲುಕ್‌

ಗುಂಗುರು ಕೂದಲು ಇಷ್ಟಪಡುವುದಾದರೆ ಈ ಕರ್ಲಿಹೇರ್‌ ಲುಕ್(ಗುಂಗುರು ಕೂದಲಿನ) ಟ್ರೈ ಮಾಡಬಹುದು. ಈ ಹೇರ್‌ ಸ್ಟೈಲ್‌ ನಿಮಗೆ ಡಿಫರೆಂಟ್ ಲುಕ್ ನೀಡುತ್ತದೆ ಎನ್ನುವುದರಲ್ಲಿ ನೋ ಡೌಟ್. ಬಾಬ್‌ ಹೇರ್‌ ಇರುವ ಗುಂಗುರು ಕೂದಲಿನವರು ಈ ಹೇರ್‌ ಸ್ಟೈಲ್ ಟ್ರೈ ಮಾಡಬಹುದು

ಮಕ್ಕಳಿಗೆ ಹೇರ್‌ಲುಕ್‌

ಇನ್ನು ಮಕ್ಕಳಿಗಾದರೆ ಭಿನ್ನ ಹೇರ್‌ ಸ್ಟೈಲ್ ಮಾಡಿದಷ್ಟು ಮುದ್ದು-ಮುದ್ದಾಗಿ ಕಾಣುತ್ತಾರೆ. ನಿಮ್ಮ ಮಗಳ ಕೂದಲು ಉದ್ದವಿದ್ದರೆ ಈ ಹೇರ್‌ ಸ್ಟೈಲ್ ಸ್ಟ್ರೈ ಮಾಡಿ. ತುಂಬಾ ಸರಳವಾಗಿದ್ದು ಎರಡು ಜುಟ್ಟುಗೆ ಎರಡು ಬಣ್ಣದ ಬ್ಯಾಂಡ್‌ ಹಾಕಲಾಗಿದೆ. ಎಲ್ಲಾ ಬಗೆಯ ಡ್ರೆಸ್ಸಿಂಗ್‌ಗೆ ಸೂಟ್‌ ಆಗುವ ಹೇರ್‌ ಸ್ಟೈಲ್ ಇದು.

Source Credit Kannada.boldsky.com

Niranthara News

Leave a Reply

Your email address will not be published. Required fields are marked *

Next Post

'ಕಥಾ ಸಂಗಮದ ಒಳಗಿದೆ ನನ್ನ ಸಂಭ್ರಮ':– ಕಿರಣ್ ರಾಜ್

Tue Nov 12 , 2019
Source Credit Filmibeat.com Pin it Email https://nirantharanews.com/%e0%b2%9a%e0%b2%b3%e0%b2%bf%e0%b2%97%e0%b2%be%e0%b2%b2%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%88-%e0%b2%9f%e0%b3%8d%e0%b2%b0%e0%b3%86%e0%b2%82%e0%b2%a1%e0%b2%bf%e0%b2%82%e0%b2%97%e0%b3%8d/#a2lyYW4tMS0xNTc `ಕಬ್ಬಿನ ಹಾಲು’ ಕಿರುಚಿತ್ರ ನಿಮ್ಮನ್ನು ಬೆಂಗಳೂರಿಗನನ್ನಾಗಿಸಿದ ಬಗೆ ಹೇಗೆ? ಡಾ.ವಿಷ್ಣುವರ್ಧನ್ ಅವರ ಮೂರನೇ ಪುಣ್ಯತಿಥಿಯಾರ್ಥ ಬೆಂಗಳೂರಿನಲ್ಲಿ ಕಿರುಚಿತ್ರ ಸ್ಪರ್ಧೆ ಏರ್ಪಡಿಸಲಾಗಿತ್ತು. ಅದರಲ್ಲಿ ನನ್ನ `ಕಬ್ಬಿನ ಹಾಲು’ ಕಿರುಚಿತ್ರಕ್ಕೆ ಪ್ರಥಮ ಸ್ಥಾನ ದೊರಕಿತ್ತು. ಅದರ ತೀರ್ಪುಗಾರರರಲ್ಲೊಬ್ಬರಾಗಿದ್ದ ನಿರ್ದೇಶಕ ಜಯತೀರ್ಥ ಅವರು, ತಮ್ಮ `ಟೋನಿ’ ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗುವಂತೆ ನನ್ನನ್ನು ಆಹ್ವಾನಿಸಿದರು. ಅವರ ಜತೆಗಿದ್ದ ನನ್ನನ್ನು ಪರಿಚಯ ಮಾಡಿಕೊಂಡ ಇಮ್ರಾನ್ ಸರ್ದಾರಿಯ ಅವರು ನನ್ನನ್ನು ತಮ್ಮ `ಎಂದೆಂದಿಗೂ’ ಚಿತ್ರಕ್ಕೆ ಅಸಿಸ್ಟೆಂಟ್ ಆಗಿ ನೇಮಿಸಿಕೊಂಡರು. ಆ ಚಿತ್ರದ ಬಳಿಕ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links