ಚಂದನ್ ದೀಪಿಕಾ ನಡುವೆ ಕೈ ತೋರಿಸೋ ಮಟ್ಟಕ್ಕೆ ಜಗಳ.. ನಿಜವಾಗಿ ಅಲ್ಲಿ ನಡೆದದ್ದೇ ಬೇರೆ ವಿಚಾರ..

Source Credit RJ News Kannada

ಬಿಗ್ ಬಾಸ್ ಮನೆಯಲ್ಲಿ ಇಂದು ಚಂದನ್ ಆಚಾರ್ ಹಾಗೂ ದೀಪಿಕಾ ನಡುವೆ ದೊಡ್ಡ ಜಟಾಪಟಿಯೇ ನಡೆಯಿತು.. ಆದರೆ ಈ ಜಗಳ ನಡೆದಿದ್ದು ಮಾತ್ರ ಒಂದು ಸಣ್ಣ ಚಿತ್ರಾನ್ನ ವಿಷಯಕ್ಕೆ..

ಹೌದು ಇರೋದು 9 ಜನ.. ದಿನಪೂರ್ತಿ ಟಾಸ್ಕ್ ಬಿಟ್ಟರೆ ಬೇರೆನೂ ಕೆಲಸ ಇಲ್ಲ.. ಅಂತದರಲ್ಲಿ ಇವರುಗಳಿಗೆ ಅಡುಗೆ ಮಾಡಿಕೊಂಡು ಊಟ ಮಾಡೋದೆ ಒಂದು ದೊಡ್ಡ ಕೆಲಸದಂತೆ ಕಾಣುತ್ತಿದೆ..

ನಾಳೆ ಬೆಳಿಗ್ಗೆ ದೀಪಿಕಾ ವಾಂಗಿ ಬಾತ್ ಮಾಡ್ತಾರೆ ನಾಳಿದ್ದು ಚಂದನ್ ಚಿತ್ರಾನ್ನ ಮಾಡಬೇಕು.. ಇಷ್ಟೇ ವಿಷಯ ಇದ್ದದ್ದು.. ಆದರೆ ಇಬ್ಬರ ನಡುವೆ ಮಾತು ಮಾತ್ರ ಹೋಯ್ತು ಹೋಯ್ತು ಕೊನೆಗೆ ಇಬ್ಬರು ಕೈ ತೋರಿ ಮಾತನಾಡುವ ಮಟ್ಟಕ್ಕೆ ಬಂದು ನಿಂತಿತು..

ಆದರೆ ಇಂದು ನಡೆದ ಜಗಳದಲ್ಲಿ ನಿಜವಾಗಿ ತಪ್ಪು ಯಾರದ್ದು? ಮನೆಯ ಕ್ಯಾಪ್ಟನ್ ಕಿಶನ್ ಮನೆಯ ಇತರೆ ಸದಸ್ಯರನ್ನ ನಾಳೆ ವಾಂಗಿ ಬಾತ್ ಬೇಕಾ ಚಿತ್ರಾನ್ನ ಬೇಕಾ ಎಂದು ಕೇಳಿದ್ರು ಮನೆಯ ಸದಸ್ಯರು ಯಾವುದಾದರೂ ಓಕೆ ಎಂದು ಸುಮ್ಮನಾದರು.. ಅದರಂತೆ ಚಂದನ್ ನಾಳೆ ನೀವು ವಾಂಗಿ ಬಾತ್ ಮಾಡಿ‌.. ನಾಳಿದ್ದು ನಾನು ಚಿತ್ರಾನ್ನ ಮಾಡ್ತೀನಿ ಎಂದು ದೀಪಿಕಾ ಅವರಿಗೆ ಹೇಳಿದ್ರು.. ಮಾತು ಅಲ್ಲಿಗೆ ಮುಗಿದಿದ್ದರೆ ಒಳ್ಳೆಯದಿತ್ತು..

ಆದರೆ ದೀಪಿಕಾ ಅವರು ಮತ್ತೆ ಎರಡು ಬಾರಿ ನಾಳೆ ಚಿತ್ರಾನ್ನ ಮಾಡಿದ್ರೆ ಒಳ್ಳೇದಿತ್ತು ಅಲ್ವಾ ಎಂದು ಮನೆಯ ಸದಸ್ಯರ ಬಳಿ ಹೇಳಿದ್ರು.. 5 ನಿಮಿಷಕ್ಕೆ ಮುನ್ನ.. ನಾಳೆ ವಾಂಗಿಬಾತ್ ಮಾಡೋಣ ಚೇಂಜ್ ಇರಲಿ ಎಂದು ದೀಪಿಕಾ ಅವರೇ ಹೇಳಿದ್ರು.. ಇದು ಚಂದನ್ ಅವರನ್ನು ಟ್ರಿಗರ್ ಮಾಡಿತು.. ಇಷ್ಟೇ ವಿಚಾರ ಆಗಿದ್ದರೆ ಅಲ್ಲಿಗೆ ಮುಗಿಯುತಿತ್ತು.. ಆದರೆ ಚಂದನ್ ಹಾಗೂ ದೀಪಿಕಾ ಅವರ ನಡುವೆ ಮೊದಲಿನಿಂದಲೂ ಅಷ್ಟಕಷ್ಟೇ.. ಇಬ್ಬರ ನಡುವೆ ಒಳಗೊಳಗೇ ಅಸಮಾಧಾನ ಹಾಗೂ ದ್ವೇಷ ಬೂದಿ ಮುಚ್ಚಿದ ಕೆಂಡದಂತಿತ್ತು.. ಈ ಸಂದರ್ಭದಲ್ಲಿ ಅದು ಭುಗಿಲೆದ್ದಿತು..

ಈ ಮುನ್ನ ದೀಪಿಕಾ ಅವರನ್ನು ವಿಷ ತುಂಬಿಕೊಂಡಿದ್ದಾರೆ ಎಂದೂ ಕೂಡ ಚಂದನ್ ಅವರು ಹೇಳಿದ್ರು.. ದೀಪಿಕಾ ಅವರೂ ಕೂಡ ಸಾಕಷ್ಟು ಬಾರಿ ಚಂದನ್ ಮೇಲೆ ಅಸಮಾಧಾನ ವ್ಯಕ್ತ ಪಡಿಸಿದ್ದರು.. ಇಬ್ಬರಿಗೂ ಮೊದಲಿನಿಂದಲೂ ಆಗಿ ಬರುತ್ತಿರಲಿಲ್ಲ.. ಇಂದು ದೀಪಿಕಾ ಅವರು ಮೊದಲೇ ಸುಮ್ಮನಾಗಿ ಬಿಟ್ಟಿದ್ದರೆ ಎಲ್ಲವೂ ಸರಿ ಇರುತಿತ್ತು.. ಆದರೆ ಅದ್ಯಾಕೋ ಇಂದು ದೀಪಿಕಾ ಅವರೇ ಕೊಂಚ ತಾಳ್ಮೆ ಕಳೆದುಕೊಂಡರೆನ್ನಬಹುದು.. ಕೊನೆಯಲ್ಲಿ ನನಗೆ ಒಳಗೊಂದು ಹೊರಗೊಂದು ಇರೋಕೆ ಬರಲ್ಲ.. ನನಗೆ ಸಂಸ್ಕಾರ ಇದೆ ಎಂದು ಚಂದನ್ ಹೇಳಿದರು..

ಆ ತಕ್ಷಣ ದೀಪಿಕಾ ಅಲ್ಲಿಂದ ಹೊರ ನಡೆದರು.. ಅಲ್ರಯ್ಯಾ ತಿನ್ನಕ್ ಇಲ್ದೆ ಕಷ್ಟ ಪಡೋ ಎಷ್ಟೋ ಜನರಿದ್ದಾರೆ.. ಅಂತದ್ರಲ್ಲಿ ಒಳ್ಳೆಯ ಅವಕಾಶ ಸಿಕ್ಕಿದೆ.. ಒಳ್ಳೆಯ ದುಡ್ಡನ್ನು ಕೊಡ್ತಾರೆ.. ಅಡುಗೆ ಸಾಮಾಗ್ರಿಗಳನ್ನು ತಂದು ಮುಂದೆ ಇಡ್ತಾರೆ.. ಅಂತದ್ರಲ್ಲಿ ಮಾಡ್ಕೊಂಡ್ ತಿನ್ನೋಕೆ ಈ ರೀತಿ ಜಗಳ ಆಡುದ್ರೆ ಉದ್ಧಾರ ಅನ್ನೋದು ಸದ್ಯ ಪ್ರೇಕ್ಷಕರ ಮಾತು..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಯಶ್ ಹುಟ್ಟುಹಬ್ಬಕ್ಕೆ ಮಧ್ಯರಾತ್ರಿಯಲ್ಲೇ ಸರ್ಪ್ರೈಸ್ ಕೊಟ್ಟ ರಾಧಿಕಾ ಪಂಡಿತ್..

Wed Jan 8 , 2020
Source Credit RJ News Kannada ಸ್ಯಾಂಡಲ್ವುಡ್ ನ ರಾಕಿಂಗ್ ಸ್ಟಾರ್.. ಈಗ ನ್ಯಾಷನಲ್ ಸ್ಟಾರ್.. ಯಶ್ ಅವರ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳು ಮಧ್ಯರಾತ್ರಿಯಲ್ಲೇ ಹುಟ್ಟು ಹಬ್ಬ ಆಚರಿಸಿ ಅದ್ಧೂರಿಯಾಗಿ ಸಂಭ್ರಮಾಚರಣೆ ಮಾಡಿದ್ದಾರೆ.. ಈ ವರ್ಷ ಯಶ್ ಅವರ ಹುಟ್ಟುಹಬ್ಬವನ್ನು ಬೆಂಗಳೂರಿನ ನಾಯಂಡಳ್ಳಿಯಲ್ಲಿನ ನಂದಿ ಲಿಂಕ್ ಗ್ರೌಂಡ್ಸ್ ನಲ್ಲಿ ಆಚರಿಸಲು ನಿರ್ಧರಿಸಲಾಗಿತ್ತು.. ಕೆಲ ದಿನಗಳಿಂದ ಅಭಿಮಾನಿಗಳಿಂದ ಭರ್ಜರಿ ತಯಾರಿಯೂ ನಡೆದಿತ್ತು.. Pin it Email https://nirantharanews.com/%e0%b2%9a%e0%b2%82%e0%b2%a6%e0%b2%a8%e0%b3%8d-%e0%b2%a6%e0%b3%80%e0%b2%aa%e0%b2%bf%e0%b2%95%e0%b2%be-%e0%b2%a8%e0%b2%a1%e0%b3%81%e0%b2%b5%e0%b3%86-%e0%b2%95%e0%b3%88-%e0%b2%a4%e0%b3%8b%e0%b2%b0/#UGhvdG9HcmlkXzE ಯಶ್ ಅವರ ಅತಿ ಎತ್ತರದ 216 ಅಡಿ ಕಟೌಟ್ ಅನ್ನು ನಿಲ್ಲಿಸಲಾಗಿತ್ತು‌.. ಜೊತೆಗೆ ಐದು ಸಾವಿರ ಕೆಜಿ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links