ಚಂದನ್ ಗೆ ಒಂದ್ ತುತ್ತು ಊಟ ಇಡದೆ ಇವರೆಲ್ಲಾ ಮಾಡಿದ್ದ್ ಸರೀನಾ..

Source Credit RJ News Kannada

ಬಿಗ್ ಬಾಸ್ ಮನೆಯಲ್ಲಿ ನಿನ್ನೆ ಮನೆಯ ಸದಸ್ಯರ ಎರಡು ಮುಖಗಳು ಪರಿಚಯವಾದವು.. ಹೌದು ಮೊನ್ನೆಯಷ್ಟೇ ಚಂದನ್ ಆಚಾರ್ ಹಾಗೂ ದೀಪಿಕಾ ಅವರ ನಡುವೆ ಒಂದು ಸಣ್ಣ ಅಡುಗೆ ವಿಚಾರಕ್ಕೆ ಜಗಳ ಆಗಿತ್ತು..

ಆನಂತರ ರಾತ್ರಿ ಚಂದನ್ ಆಚಾರ್ ಊಟ ಮಾಡದೇ ಹಾಗೆ ಮಲಗಿದರು..‌ ಮನೆಯ ಕ್ಯಾಪ್ಟನ್ ಕಿಶನ್ ಹಾಗೂ ಕುರಿ ಪ್ರತಾಪ್ ಅವರು ಬಂದು ಚಂದನ್ ಆಚಾರ್ ಅವರನ್ನು ಊಟ ಮಾಡಲು ಬಹಳಷ್ಟು ಬಾರಿ ಕರೆದರು. ಆದರೆ ಚಂದನ್ ಇಲ್ಲಾ ಸರ್ ಹೊಟ್ಟೆ ಸರಿಯಿಲ್ಲಾ.. ಅದೇ ಊಟನಾ ನಾನು ಬೆಳಿಗ್ಗೆ ಮಾಡ್ತೇನೆ.. ಊಟದ ವಿಷಯದಲ್ಲಿ ನಾನು ಅಹಂಕಾರ ಆಡೋದಿಲ್ಲ ಎಂದರು..

ಆಗ ಚಂದನ್ ಆಚಾರ್ ಅವರ ಊಟವನ್ನು ಕಿಶನ್ ಫ್ರಿಡ್ಜ್ ನಲ್ಲಿ ಎತ್ತಿಟ್ಟಿದ್ದರು.. ನಂತರ ಮಾರನೆಯ ದಿನ ಬೆಳಿಗ್ಗೆ ಮನೆಯಲ್ಲಿ ಈರುಳ್ಳಿ ಬಾತೋ ವಾಂಗೀ ಬಾತೋ ಮಾಡಿದ್ದರು.. ಆದರೆ ಚಂದನ್ ರಾತ್ರಿಯ ಊಟ ವೇಸ್ಟ್ ಆಗಬಾರದೆಂದು ಇದ್ದ ಎರಡು ಚಪಾತಿಯನ್ನು ಮೊದಲು ತಿಂದು ಆನಂತರ ಈರುಳ್ಳಿ ಬಾತ್ ತಿನ್ನೋಣ ಎಂದುಕೊಂಡು.. ಮೊದಲು ಚಪಾತಿ ತಿಂದು ನಂತರ ಬಂದು ಅಡುಗೆ ಪಾತ್ರೆ ನೋಡಿದರೆ.. ಸಂಪೂರ್ಣ ಖಾಲಿಯಾಗಿತ್ತು.. ಆನಂತರ ಅಡುಗೆ ಮನೆಯಲ್ಲಿದ್ದವರು.. ಹೋ ನೀವು ರಾತ್ರಿದು ತಿಂದ್ರಲ್ಲಾ ಅಂದುಕೊಂಡ್ ಎಲ್ಲಾ ಖಾಲಿ ಆಯ್ತು ಎಂದರು..

ಸ್ವಲ್ಪ ಬೇಜಾರ್ ಆದರೂ ಚಂದನ್ ಇರಲಿ ಬಿಡಿ ಎಂದು ಸುಮ್ಮನಾದರು.. ಆದರೆ ಅದೇ ಕ್ಷಣ ಸದಸ್ಯರ ಮತ್ತೊಂದು ಮುಖದ ಪರಿಚಯವೂ ಆಯಿತು.. ಹೌದು ಚಂದನ್ ಊಟ ಕೇಳಿದ ತಕ್ಷಣ ಹಿಂದಿನ ದಿನ ಜಗಳ ಆಡಿದ್ದ ಅದೇ ದೀಪಿಕಾ ಅವರು ಮನಸ್ಸಿನಲ್ಲಿ ಏನೂ ಇಟ್ಟುಕೊಳ್ಳದೆ.. ಪಾತ್ರೆಯಲ್ಲಿ ಇದ್ದದ್ದನ್ನೆಲ್ಲಾ ಒಟ್ಟುಗೂಡಿಸಿ ಒಂದು ಪ್ಲೇಟ್ ಗೆ ಹಾಕಿದರು.. ನಂತರ ತಮ್ಮ ತಟ್ಟೆಯಲ್ಲಿ ಇದ್ದ ಊಟವನ್ನು ಹಾಕಿ ನಂತರ ಎಲ್ಲರ ಬಳಿಯೂ ಸ್ವಲ್ಪ ತೆಗೆದು ಶೇರ್ ಮಾಡಿ ಕೊನೆಗೆ ಚಂದನ್ ಗೆ ಕೊಟ್ಟರು.. ಊಟದ ಮುಂದೆ ಅಹಂಕಾರ ತೋರದ ಚಂದನ್ ಅದನ್ನು ತೆಗೆದುಕೊಂಡು ತಿಂದರು..

ಚಂದನ್ ಊಟ ಕೇಳಿದ ನಂತರ ದೀಪಿಕಾ ಅವರು ಮಾಡಿದ್ದು ಒಳ್ಳೆಯದು.. ಅದು ಅವರ ದೊಡ್ಡ ಗುಣ ನಿಜ.. ಆದರೆ ಬೆಳಿಗ್ಗೆ ಅಡುಗೆ ಮಾಡಿದ ನಂತರ ಎಲ್ಲಾ ಸದಸ್ಯರು ಬಡಿಸಿಕೊಳ್ಳುವಾಗ ಚಂದನ್ ಗೂ ಇಡಬೇಕಿತ್ತು.. ರಾತ್ರಿದು ತಿಂತಾನೆ ಅಂತ ಪಾತ್ರೆ ಪೂರ ತಿಂದದ್ದು ಸರಿ ಇಲ್ಲ ಎಂಬುದು ನೋಡುಗರ ಅಭಿಪ್ರಾಯವಾಗಿದೆ..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ಒಂದೂವರೆ ಕೆ ಜಿ ಚಿನ್ನ ವಶ

Thu Jan 9 , 2020
Source Credit TheMangaloreMirror.in ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ಒಂದೂವರೆ ಕೆ ಜಿ ಚಿನ್ನ ವಶ ಮಂಗಳೂರು ಜನವರಿ 9: ಮೂರು ಪ್ರತ್ಯೇಕ ಪ್ರಕರಣದಲ್ಲಿ ಮಂಗಳೂರು‌ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಒಂದೂವರೆ ಕೆ ಜಿ ಚಿನ್ನವನ್ನು ಕಸ್ಟಂ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಚಿನ್ನದ ಒಟ್ಟು ಮೌಲ್ಯ 63 ಲಕ್ಷ 73 ಸಾವಿರ ಎಂದು ಅಂದಾಜಿಸಲಾಗಿದೆ. ಈ ಮೂರು ಪ್ರಕರಣದಲ್ಲಿ ಆರೋಪಿಗಳು ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಾಟಕ್ಕೆ ಯತ್ನಿಸಿ ಸಿಕ್ಕಿ ಬಿದ್ದಿದ್ದಾರೆ. Pin it Email https://nirantharanews.com/%e0%b2%9a%e0%b2%82%e0%b2%a6%e0%b2%a8%e0%b3%8d-%e0%b2%97%e0%b3%86-%e0%b2%92%e0%b2%82%e0%b2%a6%e0%b3%8d-%e0%b2%a4%e0%b3%81%e0%b2%a4%e0%b3%8d%e0%b2%a4%e0%b3%81-%e0%b2%8a%e0%b2%9f-%e0%b2%87%e0%b2%a1/#cGppbWFnZS00Lmp ಜನವರಿ 6 […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links