ಚಂದನ್ ಆಚಾರ್ ಬಟ್ಟೆಯನ್ನು ದೀಪಿಕಾ ಬಿಸಾಡಲು ಅಸಲಿ ಕಾರಣ ಬೇರೆಯೇ ಇದೆ..

Source Credit RJ News Kannada

ಬಿಗ್ ಬಾಸ್ ನಿನ್ನೆಯ ಸಂಚಿಕೆಯಲ್ಲಿ ಮನೆಯಲ್ಲಿ ಇದ್ದ ರಾಕ್ಷಸ ಹಾಗೂ ಗಂಧರ್ವ ತಂಡಗಳು ಅದಲು ಬದಲಾದವು‌. ಗಂಧರ್ವರಾಗಿದ್ದ ದೀಪಿಕಾ ಶೈನ್ ಹರೀಶ್ ರಾಜ್ ಕುರಿ ಪ್ರತಾಪ್ ಪ್ರಿಯಾಂಕ ರಾಕ್ಷಸರಾದರೆ.. ರಾಕ್ಷಸರಾಗಿದ್ದ ಭೂಮಿ ರಾಜು ತಾಳಿಕೋಟೆ ವಾಸುಕಿ ಚಂದನ್ ಆಚಾರ್ ಕಿಶನ್ ಗಂಧರ್ವರಾದರು..

ದೀಪಿಕಾ ಅವರು ರಾಕ್ಷಸರಾಗುತ್ತಿದ್ದಂತೆಯೇ ಚಂದನ್ ಆಚಾರ್ ಅವರ ಬಟ್ಟೆಗಳನ್ನು ತಂದು ಸ್ವಿಮ್ಮಿಂಗ್ ಪೂಲ್ ನಲ್ಲಿ ಎಸೆದರು.. ಇದು ಕೇವಲ ರಾಕ್ಷಸರಾಗಿ ಟಾಸ್ಕ್ ಮಾಡಬೇಕು ಎಂದಲ್ಲ.. ಇದಕ್ಕೆ ಅಸಲಿ ಕಾರಣ ಬೇರೆಯೇ ಇದೆ..

ಹೌದು ಈ ಮೊದಲು ಚಂದನ್ ಆಚಾರ್ ರಾಕ್ಷಸನಾಗಿದ್ದಾಗ ಮನೆಯ ಡಸ್ಟ್ ಬಿನ್ ನಲ್ಲಿ ಇದ್ದ ಕಸವನ್ನು ಊಟದ ಬಳಿ ಹಾಕಿದ್ದರು.. ಮೊಟ್ಟೆಯ ಒಡಕುಗಳನ್ನು ಅಡುಗೆ ಮನೆಯಲ್ಲೆಲ್ಲಾ, ಗ್ಯಾಸ್ ಸ್ಟವ್ ಮೇಲೆಲ್ಲಾ ಹರಡಿದ್ದರು.. ದೀಪಿಕಾ ಎಷ್ಟೇ ಮನವಿ ಮಾಡಿದ್ದರೂ ಕೂಡ ಚಂದನ್ ಆಚಾರ್ ನಿಲ್ಲಿಸಲಿಲ್ಲ.. ಕೊನೆಗೆ ಚಪ್ಪಲಿಯನ್ನೂ ಕೂಡ ಊಟವಿದ್ದ ಜಾಗದಲ್ಲಿ ತಂದು ಹಾಕಿದ್ದರು.. ಇದು ದೀಪಿಕಾ ಅವರಿಗಷ್ಟೇ ಅಲ್ಲದೆ ಮನೆಯ ಇತರ ಸದಸ್ಯರಿಗೂ ಕೂಡ ಅಸಹ್ಯ ಮೂಡಿಸಿತ್ತು..ha

ಇದೆಲ್ಲವನ್ನು ಒಂದು ಪಕ್ಷ ದೀಪಿಕಾ ಅವರು ಕ್ಷಮಿಸಿದರೇನೋ.. ಆದರೆ ಚಂದನ್ ಆಚಾರ್ ಮಾಡಿದ ಮತ್ತೊಂದು ಕೆಲಸ ದೀಪಿಕಾ ಅವರಿಗೆ ಬಹಳಷ್ಟು ನೋವನ್ನುಂಟು ಮಾಡಿತು.. ಆ ನೋವು ಚಂದನ್ ಮೇಲಿನ ಕೋಪವಾಗಿ ಪರಿವರ್ತನೆಯಾಯಿತು.. ಹೌದು ದೀಪಿಕಾ ಅವರು ಪ್ರತಿದಿನ ತಮ್ಮ ಮೇಕಪ್ ಕಿಟ್ ಗೆ ಕೈ ಮುಗಿದು ನಮಸ್ಕಾರ ಮಾಡಿ ನಂತರ ಉಳಿದ ಕೆಲಸ ಮಾಡುತ್ತಿದ್ದರು. ಇದು ಬಿಗ್ ಬಾಸ್ ಮನೆ ಮಾತ್ರವಲ್ಲ ತಮ್ಮ ದಿನನಿತ್ಯದ ಜೀವನದಲ್ಲಿಯೂ ಇದೇ ಅಭ್ಯಾಸ ಅವರಿಗಿತ್ತು..

ಇದು ದೀಪಿಕಾ ಅವರಿಗೆ ಸೀಮಿತವಲ್ಲ.. ಬಹುತೇಕ ಎಲ್ಲಾ ಕಲಾವಿದರು ತಮ್ಮ ಮೇಕಪ್ ಕಿಟ್ ಗೆ ಬಹಳ ಗೌರವದಿಂದ ನಮಸ್ಕಾರ ಮಾಡಿ ತಮ್ಮ ವೃತ್ತಿಯನ್ನು ಆರಂಭಿಸುತ್ತಾರೆ.. ಏಕೆಂದರೆ ಅನ್ನ ನೀಡುವ ಯಾವ ವಸ್ತುವಾದರೇನು ಅದು ಅವರಿಗೆ ದೇವರ ಸಮಾನವೇ.. ಅದೇ ರೀತಿ ದೀಪಿಕಾ ಅವರು ಕೂಡ ತಮ್ಮ ಮೇಕಪ್ ಕಿಟ್ ಅನ್ನು ಪ್ರತಿದಿನ ನಮಸ್ಕಾರ ಮಾಡಿ ಮುಂದಿನ ಕೆಲಸ ಮಾಡುತ್ತಿದ್ದರು..

ಈ ವಿಷಯ ಚಂದನ್ ಆಚಾರ್ ಗೆ ಗೊತ್ತಿದ್ದರೂ ಕೂಡ ದೀಪಿಕಾ ಅವರ ಮೇಕಪ್ ಕಿಟ್ ಅನ್ನು ತೆಗೆದುಕೊಂಡು ಹೋಗಿ ಚಪ್ಪಲಿಯ ಬಳಿ ಬಿಸಾಡಿದ್ದರು.. ಇದು ದೀಪಿಕಾ ಅವರಿಗೆ ಸಾಕಷ್ಟು ನೋವನ್ನುಂಟು ಮಾಡಿತ್ತು.. ಕೊನೆಗೆ ದೀಪಿಕಾ ಅವರಿಗೂ ಸರಿಯಾದ ಸಮಯ ಬಂತು.. ರಾಕ್ಷಸರೆಲ್ಲಾ ಗಂಧರ್ವರಾದರು.. ಗಂಧರ್ವರು ರಾಕ್ಷಸರಾದರು.. ಆಗ ತಮ್ಮಲ್ಲಿದ್ದ ಕೋಪವನ್ನೆಲ್ಲಾ ಚಂದನ್ ಆಚಾರ್ ಅವರ ಬಟ್ಟೆಯನ್ನು ತಂದು ಸ್ವಿಮ್ಮಿಂಗ್ ಪೂಲ್ ನಲ್ಲಿ ಹಾಕಿ ತೀರಿಸಿಕೊಂಡರು..

Source Credit RJ News Kannada

Niranthara News

Leave a Reply

Your email address will not be published. Required fields are marked *

Next Post

ಉಪ ಚುನಾವಣೆ ಸೋಲಿನ ಬಳಿಕ ಜೆಡಿಎಸ್ ಹುದ್ದೆ ತೊರೆದ ಶಾಸಕನ ಪುತ್ರ

Thu Dec 12 , 2019
Source Credit Oneindia.com Pin it Email https://nirantharanews.com/%e0%b2%9a%e0%b2%82%e0%b2%a6%e0%b2%a8%e0%b3%8d-%e0%b2%86%e0%b2%9a%e0%b2%be%e0%b2%b0%e0%b3%8d-%e0%b2%ac%e0%b2%9f%e0%b3%8d%e0%b2%9f%e0%b3%86%e0%b2%af%e0%b2%a8%e0%b3%8d%e0%b2%a8%e0%b3%81-%e0%b2%a6/#Wg== Yadgir oi-Nayana Bj | Updated: Thursday, December 12, 2019, 8:15 [IST] ಯಾದಗಿರಿ, ಡಿಸೆಂಬರ್ 12: ಉಪ ಚುನಾವಣೆಯಲ್ಲಿ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡುವ ಪರ್ವ ಜೆಡಿಎಸ್‌ನಲ್ಲೂ ಆರಂಭವಾಗಿದೆ. ಜೆಡಿಎಸ್ ರಾಜ್ಯ ಯು ಘಟಕದ ಪ್ರಧಾನ ಕಾರ್ಯದರ್ಶಿ ಶರಣಗೌಡ ಕಂದಕೂರು ರಾಜೀನಾಮೆ ನೀಡಿದ್ದಾರೆ.ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಕುಟುಂಬಕ್ಕೆ ಆಪ್ತರಾಗಿರುವುದರಿಂದ ಶರಣಗೌಡ ಕಂದಕೂರ ಅವರಿಗೆ ಯುವ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ಸ್ಥಾನ ನೀಡಲಾಗಿತ್ತು. ಈಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links