ಗೊಂದಲ ಮೂಡಿಸಿದ ಚಿಕ್ಕಮಗಳೂರು ಪೊಲೀಸ್ ಇಲಾಖೆ ನೋಟಿಸ್

Source Credit Oneindia.com

Chikkamagaluru

oi-Chetan BP

By ಚಿಕ್ಕಮಗಳೂರು ಪ್ರತಿನಿಧಿ

|

ಚಿಕ್ಕಮಗಳೂರು, ಜನವರಿ 12: ಶೃಂಗೇರಿಯಲ್ಲಿ ನಡೆದ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬ್ರೇಕ್ ಬಿದ್ದ ಮೇಲೂ ಸಾಮಾಜಿಕ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.

ಚಿಕ್ಕಮಗಳೂರು ಪೊಲೀಸ್ ಇಲಾಖೆ ನೀಡಿದ ನೋಟಿಸ್ ಸಾಕಷ್ಟು ವಿವಾದ ಹುಟ್ಟು ಹಾಕಿದೆ. ಸಮ್ಮೇಳನ ಪರವಾಗಿ ಇರುವವರು ಮತ್ತು ಸಮ್ಮೇಳನ ವಿರೋಧಿಸುವವರಿಂದ ವಿರೋಧ ವ್ಯಕ್ತವಾಗಿದೆ.

ಪೊಲೀಸ್ ಇಲಾಖೆ ನೀಡಿರುವ ನೋಟೀಸ್ ನಲ್ಲಿ ಸಾಹಿತ್ಯ ಸಮ್ಮೇಳನವನ್ನು ಅಕ್ರಮ ಕೂಟ ಎಂದು ಕರೆದು, ಮತ್ತೆ ಪೆಟ್ರೋಲ್ ಬಾಂಬ್ ಪತ್ತೆ ಎನ್ನುವ ಅಂಶ ದಾಖಲಿಸಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

ಪೊಲೀಸ್ ಮಾಡಿರುವ ಈ ಎಡವಟ್ಟಿನಿಂದ ಇಕ್ಕಟ್ಟಿನಲ್ಲಿ ಸಿಲುಕಿದೆ. ನೋಟಿಸ್ ಸಾಕಷ್ಟು ವಿವಾದ ಸೃಷ್ಟಿಸಿದ್ದು, ಸಮ್ಮೇಳನ ನಿಂತ ಮೇಲೂ ಸಾಮಾಜಿಕ ಜಾಲ ತಾಣದಲ್ಲಿ ಇದರ ಬಗ್ಗೆ ಚರ್ಚೆ ನಡೆತಿದೆ.

ಕನ್ನಡ ನುಡಿ ಜಾತ್ರೆಗೆ ಬಲಪಂಥೀಯ ಉಗ್ರರು ಬಾಂಬ್ ದಾಳಿ ಬೆದರಿಕೆ ಹಾಕಿದ್ದಾರೆ, ಪೊಲೀಸರು ರಕ್ಷಣೆ ಕೊಡೋದು ಬಿಟ್ಟು ಸಮ್ಮೇಳನ ಮುಂದೂಡುವಂತೆ ಮಾಡಿದ್ದಾರೆ. ಕೂಡಲೇ ಅವರ ವಿರುದ್ದ ಕ್ರಮ ಜರುಗಿಸಿ ಎಂದು ಸಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಸಮ್ಮೇಳನ ವಿರೋಧಿಸಿದವರು ಮತ್ತು ಸಮ್ಮೇಳನದ ಆಯೋಜಕರು ಇಬ್ಬರೂ ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶಗೊಂಡಿದ್ದಾರೆ. ಎರಡು ರೀತಿಯ ಅರ್ಥವನ್ನು ಮೂಡಿಸಿರುವುದು ವಿವಾದ ಹುಟ್ಟುಹಾಕಿದೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ನಡೆದ 16 ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು. ಇದಕ್ಕೆ ಕೆಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಆದರೂ ಪೊಲೀಸ್ ಭದ್ರತೆಯಲ್ಲಿ ಸಮ್ಮೇಳನ ಉದ್ಘಾಟನೆಗೊಂಡಿತ್ತು. ನಂತರ ಎರಡನೆಯ ದಿನದ ಕಾರ್ಯಕ್ರಮವನ್ನು ರದ್ದುಪಡಿಸಿ, ಮುಂದೂಡಲಾಗಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ – ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.

Allow Notifications

You have already subscribed

Source Credit Oneindia.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ನಾಡೋಜ ಚಿದಾನಂದ ಮೂರ್ತಿಯವರ ಹುಟ್ಟೂರಿನಲ್ಲಿ ನೀರವ ಮೌನ...

Mon Jan 13 , 2020
Source Credit Oneindia.com Pin it Email https://nirantharanews.com/%e0%b2%97%e0%b3%8a%e0%b2%82%e0%b2%a6%e0%b2%b2-%e0%b2%ae%e0%b3%82%e0%b2%a1%e0%b2%bf%e0%b2%b8%e0%b2%bf%e0%b2%a6-%e0%b2%9a%e0%b2%bf%e0%b2%95%e0%b3%8d%e0%b2%95%e0%b2%ae%e0%b2%97%e0%b2%b3%e0%b3%82%e0%b2%b0/#Wg== Davanagere oi-Lekhaka By ದಾವಣಗೆರೆ ಪ್ರತಿನಿಧಿ | Updated: Sunday, January 12, 2020, 10:28 [IST] ದಾವಣಗೆರೆ, ಜನವರಿ 11: ಹಿರಿಯ ಸಂಶೋಧಕ ಹಾಗೂ ಸಾಹಿತಿ ಪ್ರೊ.ಡಾ. ಚಿದಾನಂದ ಮೂರ್ತಿಯವರು (88) ಬೆಂಗಳೂರಿನಲ್ಲಿ ಇಂದು ಬೆಳಗಿನ ಜಾವ 3.30ಕ್ಕೆ ನಿಧನರಾಗಿದ್ದಾರೆ. ಸಾವಿನ ಸುದ್ದಿ ತಿಳಿದು ಅವರ ಸ್ವಗ್ರಾಮ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹಿರೇಕೋಗಲೂರು ಗ್ರಾಮದಲ್ಲೀಗ ನೀರವ ಮೌನ ಆವರಿಸಿದೆ. ಚಿದಾನಂದ ಮೂರ್ತಿಯವರು ಹುಟ್ಟಿದ್ದು 1931ರ ಮೇ 10ರಂದು ಚನ್ನಗಿರಿ ತಾಲೂಕಿನ ಹಿರೇಕೋಗಲೂರು […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links