ಗೆಲ್ಲೋ ಟೈಮಲ್ಲಿ ಶೈನ್ ಮಾಡಿಕೊಂಡ ಯಡವಟ್ಟು.. ಯಾಕ್ ಬೇಕಿತ್ತು ಗುರು..

Source Credit RJ News Kannada

ಬಿಗ್ ಬಾಸ್ ಸೀಸನ್ 7 ಇನ್ನೇನು ಕೆಲವೇ ದಿನಗಳಲ್ಲಿ ಮುಕ್ತಾಯಗೊಳ್ಳಲಿದ್ದು ಫಿನಾಲೆಗೆ ಕೆಲವೇ ವಾರಗಳು ಬಾಕಿ ಇವೆ.. ಬಿಗ್ ಬಾಸ್ ವೀಕ್ಷಕರ ಪ್ರಕಾರ ಈ ಸೀಸನ್ ನನ್ನು ಶೈನ್ ಶೆಟ್ಟಿ ಅವರೇ ಗೆಲ್ಲುತ್ತಾರೆ ಎಂದು ಬಹುತೇಕರ ಅಭಿಪ್ರಾಯವೂ ಆಗಿದೆ..

ವಾಸುಕಿ ಕುರಿ ಪ್ರತಾಪ್ ಶೈನ್ ಶೆಟ್ಟಿ ದೀಪಿಕಾ ದಾಸ್ ಚಂದನ್ ಆಚಾರ್ ಈ ಸೀಸನ್ ನ ಫಿನಾಲೆ ಸ್ಪರ್ಧಿಗಳು ಎನ್ನಲಾಗುತ್ತಿದೆ.. ಅದರಲ್ಲೂ ಶೈನ್ ಶೆಟ್ಟಿ ಅವರಿಗೆ ವೀಕ್ಷಕರ ವೋಟಿಂಗ್ ಸಪೋರ್ಟ್ ಹೆಚ್ಚಾಗಿಯೇ ಇದೆ ಎನ್ನಬಹುದು.. ಜೊತೆಗೆ ಟಾಸ್ಕ್ ಗಳಲ್ಲೂ ಕೂಡ ಶೈನ್ 100% ನೀಡುತ್ತಾ ಮನರಂಜನೆ ನೀಡೋದ್ರಲ್ಲೂ ಸೈ ಎನಿಸಿಕೊಂಡಿದ್ದಾರೆ..

ಆದರೆ ಇಂತಹ ಸಮಯದಲ್ಲಿ ಮಾಡಿಕೊಳ್ಳುವ ಸಣ್ಣ ಸಣ್ಣ ಎಡವಟ್ಟುಗಳು ಕೂಡ ಗೆಲುವಿಗೆ ಮ್ಯಾಟರ್ ಆಗುತ್ತವೆ.. ಶೈನ್ ಶೆಟ್ಟಿ ಅವರೂ ಕೂಡ ನಿನ್ನೆ ಇಂತಹ ಸಣ್ಣದೊಂದು ಎಡವಟ್ಟು ಮಾಡಿಕೊಂಡಿದ್ದಾರೆ..

ಹೌದು ಬಿಗ್ ಬಾಸ್ ನಿಯಮದ ಪ್ರಕಾರ ನಾಮಿನೇಷನ್ ಬಗ್ಗೆ ಎಲ್ಲಿಯೂ ಮಾತನಾಡುವಂತಿಲ್ಲ.. ಆದರೆ ಈ ಮುನ್ನ ಶೈನ್ ಜೊತೆಗೆ ವಾಸುಕಿ ಹಾಗೂ ಭೂಮಿ ಇದರ ಬಗ್ಗೆ ಮಾತನಾಡಿ ಈಗಾಗಲೇ ವಾರ್ನಿಂಗ್ ಪಡೆದಿದ್ದರು.. ಇದೀಗ ಮತ್ತೆ ಇದೇ ರೀತಿ ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ‌..

ಈ ವಿಚಾರವನ್ನು ಎಲ್ಲರ ಮುಂದೆ ಕಾಮನ್ ಆಗಿ ಮಾತನಾಡಿದ್ದಿದ್ದರೆ ಇದು ಅಷ್ಟಾಗಿ ಪ್ರಾಮುಖ್ಯತೆ ಪಡೆಯುತ್ತಿರಲಿಲ್ಲ.. ಆದರೆ ವಾಸುಕಿ ಅವರನ್ನು ಡ್ರೆಸಿಂಗ್ ರೂಮಿಗೆ ಕರೆದು ಗೆಲುವಿನ ಲೆಕ್ಕಾಚಾರ ಹಾಕಿರುವುದು ಎಲ್ಲೋ ಒಂದು ಮೂಲೆಯಲ್ಲಿ ಇದನ್ನು ಅವರು ಮಾಡಬಾರದಿತ್ತು ಎನಿಸುತ್ತದೆ..

ನಿನ್ನೆ ಶೈನ್ ಅವರು ವಾಸುಕಿ ಅವರನ್ನು ಡ್ರೆಸ್ಸಿಂಗ್ ರೂಮಿನಲ್ಲಿ ಕರೆದು “ಏನ್ರಿ ಹಿಂಗ್ ಆಗೋಯ್ತು.. ಏನ್ ಕತೆ ಇದು‌.. ಈ ವಾರ ಚಂದನ್ ಆಚಾರ್ ಹೋಗ್ತಾರೆ ಅಂದುಕೊಂಡ್ರೆ.. ಕಳೆದ ವಾರ ಚಂದನ್ ಅತಿ ಹೆಚ್ಚು ವೋಟ್ ಪಡೆದು ಸೇವ್ ಆಗಿದ್ದಾರೆ ಎಂದರೆ ಈ ವಾರ ಎಲಿಮಿನೇಟ್ ಆಗೋದು ಡೌಟ್ ಎಂದು ವಾಸುಕಿ ಅವರೊಡನೆ ಮಾತನಾಡುತ್ತಿದ್ದ ಸಮಯದಲ್ಲಿ ಅತ್ತ ಭೂಮಿ ಪ್ರಿಯಾಂಕ ಇಬ್ಬರು ತಾವು ಮಾಡಿದ ಒಬ್ಬಟ್ಟನ್ನು ತಿನ್ನಲು ಕರೆದು ಮಾತು ಅಲ್ಲಿಗೆ ನಿಂತಿತು.. ಇದೆಲ್ಲವನ್ನು ಟೆಲಿಕಾಸ್ಟ್ ಮಾಡಿದ್ದಾರೆ ಎಂದರೆ ಖಂಡಿತ ಈ ವಾರ ಕಿಚ್ಚ ಸುದೀಪ್ ಅವರು ಶೈನ್ ಅವರ ಬಳಿ ಈ ವಿಚಾರದ ಕುರಿತು ಮಾತನಾಡಬಹುದು ಎನ್ನಲಾಗುತ್ತಿದೆ..

Source Credit RJ News Kannada

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಚಂದನ್ ದೀಪಿಕಾ ನಡುವೆ ಕೈ ತೋರಿಸೋ ಮಟ್ಟಕ್ಕೆ ಜಗಳ.. ನಿಜವಾಗಿ ಅಲ್ಲಿ ನಡೆದದ್ದೇ ಬೇರೆ ವಿಚಾರ..

Tue Jan 7 , 2020
Source Credit RJ News Kannada ಬಿಗ್ ಬಾಸ್ ಮನೆಯಲ್ಲಿ ಇಂದು ಚಂದನ್ ಆಚಾರ್ ಹಾಗೂ ದೀಪಿಕಾ ನಡುವೆ ದೊಡ್ಡ ಜಟಾಪಟಿಯೇ ನಡೆಯಿತು.. ಆದರೆ ಈ ಜಗಳ ನಡೆದಿದ್ದು ಮಾತ್ರ ಒಂದು ಸಣ್ಣ ಚಿತ್ರಾನ್ನ ವಿಷಯಕ್ಕೆ.. ಹೌದು ಇರೋದು 9 ಜನ.. ದಿನಪೂರ್ತಿ ಟಾಸ್ಕ್ ಬಿಟ್ಟರೆ ಬೇರೆನೂ ಕೆಲಸ ಇಲ್ಲ.. ಅಂತದರಲ್ಲಿ ಇವರುಗಳಿಗೆ ಅಡುಗೆ ಮಾಡಿಕೊಂಡು ಊಟ ಮಾಡೋದೆ ಒಂದು ದೊಡ್ಡ ಕೆಲಸದಂತೆ ಕಾಣುತ್ತಿದೆ.. Pin it Email https://nirantharanews.com/%e0%b2%97%e0%b3%86%e0%b2%b2%e0%b3%8d%e0%b2%b2%e0%b3%8b-%e0%b2%9f%e0%b3%88%e0%b2%ae%e0%b2%b2%e0%b3%8d%e0%b2%b2%e0%b2%bf-%e0%b2%b6%e0%b3%88%e0%b2%a8%e0%b3%8d-%e0%b2%ae%e0%b2%be%e0%b2%a1%e0%b2%bf/#UGhvdG9HcmlkXzE ನಾಳೆ ಬೆಳಿಗ್ಗೆ ದೀಪಿಕಾ ವಾಂಗಿ ಬಾತ್ ಮಾಡ್ತಾರೆ ನಾಳಿದ್ದು ಚಂದನ್ ಚಿತ್ರಾನ್ನ ಮಾಡಬೇಕು.. […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links