ಗಳಿಸಿದ ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ: ಸ್ವಾಮಿ ಧರ್ಮಬಂಧುಜಿ

Source Credit NewsKannada.com

ಗಳಿಸಿದ ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ: ಸ್ವಾಮಿ ಧರ್ಮಬಂಧುಜಿ


YK
  ¦   


Feb 13, 2020 05:12:25 PM (IST)

ಮೂಡುಬಿದರೆ:  ಜೀವನದಲ್ಲಿ ಕಲಿತ ಜ್ಞಾನವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದರಿಂದ ಯಶಸ್ಸನ್ನು ಗಳಿಸಬಹುದು  ಎಂದು ಗುಜರಾತಿನ ರಾಷ್ಟ್ರಕಥಾ ಶಿಬಿರದ ಸಂಸ್ಥಾಪಕ ಸ್ವಾಮಿ ಧರ್ಮಬಂಧುಜಿ ತಿಳಿಸಿದರು. 

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ  ರೋಸ್ಟ್ರಂ ಸ್ಪೀಕರ್ಸ್ ಕ್ಲಬ್ ವತಿಯಿಂದ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

 ಅವಿವೇಕದಿಂದ ಯಾವುದನ್ನು ನಂಬದೆ, ಬೌದ್ದಿಕ ಮಟ್ಟದಲ್ಲಿ ವಿಚಾರ ಮಾಡುವುದರ ಮೂಲಕ ವಿಷಯವನ್ನು ಅರಿಯಬೇಕು.   ತಾವು ಗಳಿಸಿದ ಜ್ಞಾನವನ್ನು ತಮ್ಮಲ್ಲೇ ಇಟ್ಟುಕೊಳ್ಳದೇ, ಎಲ್ಲರಿಗೂ ಧಾರೆಯೆರೆಯಬೇಕು.   ತಮ್ಮ ತಪ್ಪನ್ನು ಒಪ್ಪಿಕೊಳ್ಳದೇ ವಿನಾ ಜೀವನದಲ್ಲಿ ಸುಧಾರಣೆ ಸಾಧ್ಯವಿಲ್ಲ ಎಂದು ಹೇಳಿದರು.

 ಆಳ್ವಾಸ್ ಕಾಲೇಜಿನ ಮ್ಯಾನೆಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ  ಮತಾನಾಡಿ, ವಿದ್ಯಾರ್ಥಿಗಳು ಜ್ಞಾನಾರ್ಜನೆಗೆ ಶಿಕ್ಷಣ ಸಂಸ್ಥೆ ಹಾಗೂ ಶಿಕ್ಷಕರ ಮೇಲೆ ಮಾತ್ರ ಅವಲಂಬಿತರಾಗದೆ ತಮ್ಮನ್ನು ತಾವು ತೊಡಗಿಸಿಕೊಳ್ಳವುದರಿಂದ  ಕಲಿಯಲು ಸಾಧ್ಯ ಎಂದು ಹೇಳಿದರು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. 

ಕಾರ್ಯಕ್ರಮದಲ್ಲಿ ರೋಸ್ಟ್ರಂ ಕ್ಲಬ್‍ನ ಸಂಯೋಜಕ ದೀಪಕ್ ರಾಜ್ ಉಪಸ್ಥಿತರಿದ್ದರು.  ನಿತಿನ್ ಸ್ವಾಗತಿಸಿದರು. ರಕ್ಷಿತಾ ಕಾರ್ಯಕ್ರಮವನ್ನು ನಿರೂಪಿಸಿದರು

 

 

Source Credit NewsKannada.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಮರ ಕಡಿಯುವಾಗ ಆಕಸ್ಮಿಕವಾಗಿ ಹಗ್ಗ ಕುತ್ತಿಗೆ ಸಿಲುಕಿ ವ್ಯಕ್ತಿಯೋರ್ವ ಮರದಲ್ಲೇ ಸಾವು

Thu Feb 13 , 2020
Source Credit TheMangaloreMirror.in ಮರ ಕಡಿಯುವಾಗ ಆಕಸ್ಮಿಕವಾಗಿ ಹಗ್ಗ ಕುತ್ತಿಗೆ ಸಿಲುಕಿ ವ್ಯಕ್ತಿಯೋರ್ವ ಮರದಲ್ಲೇ ಸಾವು ಪುತ್ತೂರು ಫೆಬ್ರವರಿ 13: ಮರದ ಕೊಂಬೆ ಕಡಿಯುವ ಸಂದರ್ಭದಲ್ಲಿ ಕೊಂಬೆ ಕಡಿಯಲು ಉಪಯೋಗಿಸುವ ಹಗ್ಗ ಕುತ್ತಿಗೆಗೆ ಬಿಗಿದು ವ್ಯಕ್ತಿಯೋರ್ವ ಮರದಲ್ಲೇ ಸಾವನ್ನಪ್ಪಿದ ಘಟನೆ ಸುಬ್ರಹ್ಮಣ್ಯ ಸಮೀಪದ ನೂಚಿಲ ಎಂಬಲ್ಲಿ ನಡೆದಿದೆ. Pin it Email https://nirantharanews.com/%e0%b2%97%e0%b2%b3%e0%b2%bf%e0%b2%b8%e0%b2%bf%e0%b2%a6-%e0%b2%9c%e0%b3%8d%e0%b2%9e%e0%b2%be%e0%b2%a8%e0%b2%b5%e0%b2%a8%e0%b3%8d%e0%b2%a8%e0%b3%81-%e0%b2%9c%e0%b3%80%e0%b2%b5%e0%b2%a8%e0%b2%a6%e0%b2%b2/#eUg1QkFFQUFBQUF ಸಾವಿಗೀಡಾದ ವ್ಯಕ್ತಿಯನ್ನು ಸುನಿಲ್ ಅರಂಪಾಡಿ ಎಂದು ಗುರುತಿಸಲಾಗಿದ್ದು, ಬೃಹದಾಕಾರದ ಮರದ ಕೊಂಬೆ ಕತ್ತರಿಸಲು ಮರವೇರಿದ್ದ ಸಂದರ್ಭದಲ್ಲಿ ಈ ಘಟನೆ ನೆಡೆದಿದೆ‌. ಸಾವನ್ನಪ್ಪಿದ ಕಾರಣ ಮರದಲ್ಲೇ ಆತನ ಶವ ನೇತಾಡುತ್ತಿದ್ದು, ಘಟನೆಯನ್ನು […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links