ಗಂಭೀರ ಕಾಯಿಲೆ ಬಗ್ಗೆ ಚರ್ಮ ನೀಡುವ ಎಚ್ಚರಗಳಿವು!

Source Credit Kannada.boldsky.com

ಚರ್ಮವು ಏನನ್ನು ಸೂಚಿಸುವುದು

ದೇಹದಲ್ಲಿನ ಅತೀ ದೊಡ್ಡ ಅಂಗವಾಗಿರುವಂತಹ ಚರ್ಮವು ಆರೋಗ್ಯಕ್ಕೆ ಕೈಗನ್ನಡಿಯಾಗಿದೆ. ಎಲ್ಲಾ ಅಂಗಾಂಗಗಳು ಇದಕ್ಕೆ ಸಂಬಂಧವನ್ನು ಹೊಂದಿದೆ. ದೇಹದಲ್ಲಿ ಏನು ನಡೆಯುತ್ತಿದೆಯೋ ಅದು ಕೆಲವೊಮ್ಮೆ ನಿಮ್ಮ ಚರ್ಮದ ಮೇಲೆ ಪರಿಣಾಮ ಬೀರುವುದು. ಚರ್ಮವನ್ನು ನೋಡಲು ವೈದ್ಯರಿಗೆ ಬೇರೆ ರೀತಿಯ ಸಾಧನವು ಬೇಕಾಗಿಲ್ಲ, ದೇಹದೊಳಗೆ ಮತ್ತು ಆರೋಗ್ಯದಲ್ಲಿ ಏನಾಗುತ್ತಿದೆ ಎಂದು ಅವರು ಚರ್ಮವನ್ನು ನೋಡಿಯೇ ಹೇಳಬಹುದು. ಕೆಲವೊಂದು ಗಂಭೀರ ಕಾಯಿಲೆಗಳ ಬಗ್ಗೆ ಚರ್ಮವು ತೋರಿಸುವ ಲಕ್ಷಣಗಳು ಯಾವುದು ಎಂದು ನಾವು ಇಲ್ಲಿ ತಿಳಿಯುವ.

ಚರ್ಮದ ಮೇಲೆ ಸಣ್ಣ ಚರ್ಮ ಬೆಳೆಯುವುದು

ಈ ಚರ್ಮದ ಬೆಳವಣಿಗೆಯು ಕೆಲವೊಂದು ಸಂದರ್ಭದಲ್ಲಿ ಸಾಮಾನ್ಯವಾಗಿ ಇರುವುದು. ಆದರೆ ಅತಿಯಾಗಿ ಬೆಳವಣಿಗೆ ಆಗುತ್ತಲಿದ್ದರೆ ಆಗ ಇದು ಟೈಪ್ 2 ಮಧುಮೇಹದ ಲಕ್ಷಣವೆಂದು ಹೇಳಬಹುದು. ಇನ್ಸುಲಿನ್ ನ ಕಾರಣದಿಂದಾಗಿ ಇದು ಬೆಳವಣಿಗೆ ಆಗಬಹುದು. ಮಧುಮೇಹದಲ್ಲಿ ಇರುವಂತಹ ಪ್ರೋಟೀನ್ ಈ ಚರ್ಮದ ಅತಿಯಾದ ಬೆಳವಣಿಗೆಯನ್ನು ಉತ್ತೇಜಿಸಬಹುದು. ಇದರೊಂದಿಗೆ ಟೈಪ್ 2 ಮಧುಮೇಹಿಗಳಿಗೆ ಅತಿಯಾದ ಬಾಯಾರಿಕೆ, ಗಾಯವು ನಿಧಾನವಾಗಿ ಒಣಗುವುದು ಮತ್ತು ಅತಿಯಾದ ಹಸಿವು ಕಾಣಿಸಬಹುದು.

ಅತಿಯಾಗಿ ಮೊಡವೆಗಳು ಮೂಡುವುದು

ಹದಿಹರೆಯಕ್ಕೆ ಬಂದ ಮೇಲೆ ಕೆಲವೊಂದು ಸಂದರ್ಭದಲ್ಲಿ ಮೊಡವೆಗಳು ಮೂಡುವುದು ಸಾಮಾನ್ಯ ವಿಚಾರವಾಗಿದೆ. ಆದರೆ ಅತಿಯಾಗಿ ಮೊಡವೆಗಳು ಬೆಳವಣಿಗೆ ಆಗುತ್ತಲಿದ್ದರೆ ಆಗ ನೀವು ಗಮನಹರಿಸಬೇಕು. ಇದು ಯಾವುದಾದರೂ ಒಂದು ಗಂಭೀರ ಸಮಸ್ಯೆಯ ಲಕ್ಷಣವಾಗಿರಬಹುದು. ಇಂತಹ ಬದಲಾವಣೆಗಳು ಕಂಡುಬಂದರೆ ಆಗ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್(ಪಿಸಿಒಎಸ್)ನ ಲಕ್ಷಣವಾಗಿರಬಹುದು. ಇದು ಹಾರ್ಮೋನ್ ಅಸಮತೋಲನದಿಂದಾಗಿ ಕಾಣಿಸಿಕೊಳ್ಳೂವಂತಹ ಕಾಯಿಲೆಯಾಗಿದ್ದು, ವಿಶ್ವ ಮಟ್ಟದಲ್ಲಿ ಇದು 10 ಮಿಲಿಯನ್ ಜನರಲ್ಲಿ ಕಾಣಿಸುವುದು. ಮಹಿಳೆಯರ ದೇಹದಲ್ಲಿ ಆಂಡ್ರೋಜೆನ್ ಎನ್ನುವ ಪುರುಷ ಹಾರ್ಮೋನ್ ಕಾಣಿಸಿಕೊಂಡರೆ ಆಗ ಮೊಡವೆಗಳೂ ಅತಿಯಾಗಿ ಮೂಡುವುದು. ಅಸಾಮಾನ್ಯ ಋತುಚಕ್ರದ ಜತೆಗೆ ಮೊಡವೆಗಳು ಅತಿಯಾಗಿ ಮೂಡುತ್ತಲಿದ್ದರೆ ಆಗ ಇದು ಪಿಸಿಒಎಸ್ ಲಕ್ಷಣ. ಪಿಸಿಒಎಸ್ ಇದಕ್ಕೆ ಕಾರಣವಲ್ಲದೆ ಇದ್ದರೆ ಆಗ ನಿಮ್ಮ ದೇಹದಲ್ಲಿ ಏನಾದರೂ ಬದಲಾವಣೆ ಆಗುತ್ತಲಿದೆ ಎಂದು ಮೊಡವೆಗಳು ಹೇಳುತ್ತವೆ.

ವಿಚಿತ್ರ ದದ್ದುಗಳು

ಕೆಲವೊಂದು ಸಲ ಯಾವುದೇ ಸಾಬೂನು ಅಥವಾ ಬೇರೆ ರಾಸಾಯನಿಕಗಳು ದೇಹದಲ್ಲಿನ ದದ್ದುಗಳಿಗೆ ಕಾರಣವಾಗಿರಬಹುದು. ಆದರೆ ಇಂತಹ ಸಮಸ್ಯೆಯು ಕಾಣಿಸಿದರೆ ಆಗ ನೀವು ತಕ್ಷಣವೇ ಚರ್ಮರೋಗ ತಜ್ಞರನ್ನು ಭೇಟಿ ಮಾಡಿ ಅವರಿಂದ ಪರೀಕ್ಷೆ ಮಾಡಿಸುವುದು ಒಳಿತು. ಕೀಟಗಳ ಕಡಿತದಿಂದಾಗಿ ಕೂಡ ಹೀಗೆ ಆಗಬಹುದು. ಇಂತಹ ಕೀಟಗಳು ಕಡಿದರೆ ಆಗ ದಪ್ಪದ ಗುಳಿ ಕಣ್ಣಿನಂತಹ ದದ್ದುಗಳು ಕಾಣಿಸಬಹುದು. ಇದು ಗುಲಾಬಿ ಬಣ್ಣದ ಸಣ್ಣ ಮಟ್ಟದಿಂದ ಹಿಡಿದು ದೊಡ್ಡ ಗಾತ್ರದ ತನಕ ಇರಬಹುದು. ಇದು ಮೊಣಕೈ, ಕೈಗಳು ಮತ್ತು ಹಿಂಗಾಲುಗಳಲ್ಲಿ ಕಾಣಿಸಬಹುದು. ನೀವು ಹೆಚ್ಚಿನ ಸಮಯವನ್ನು ಹೊರಗಡೆ ಕಳೆಯುತ್ತಲಿದ್ದರೆ ಆಗ ನೀವು ಚರ್ಮದಲ್ಲಿ ಇಂತಹ ಸಮಸ್ಯೆಯು ಕಾಣಿಸಿಕೊಳ್ಳಬಹುದು.

ವಿಚಿತ್ರ ದದ್ದು-2

ಕೆಲವು ಸಲ ಹೊಸ ಔಷಧಿಯಿಂದಲೂ ಅದರ ಅಡ್ಡ ಪರಿಣಾಮಗಳು ದೇಹದ ಮೇಲೆ ಕಾಣಿಸಿಕೊಳ್ಳುವುದು. ಇದರಲ್ಲಿ ಮುಖ್ಯವಾಗಿ ಔಷಧಿಯ ಅಲರ್ಜಿಯಿಂದಾಗಿ ಇಯೊಸಿನೊಫಿಲಿಯಾ, ದೇಹದ ಲಕ್ಷಣಗಳು ಅಥವಾ ಡ್ರೆಸ್ ಸಿಂಡ್ರೋಮ್ ಕಾಣಿಸುವುದು. ಇದು ಯಕೃತ್, ಹೃದಯ ಮತ್ತು ಶ್ವಾಸಕೋಶದ ಉರಿಯೂತದಿಂದಾಗಿ ಕಾಣಿಸಿಕೊಳ್ಳುವಂತಹ ಗಂಭೀರ ರೂಪದ ದದ್ದಿನ ಸಮಸ್ಯೆಯಾಗಿದೆ. ಔಷಧಿಯು ಆರಂಭಿಸಿದ ಎರಡರಿಂದ ಎಂಟು ವಾರಗಳಲ್ಲಿ ಈ ಸಮಸ್ಯೆಯು ಕಾಣಿಸಿಕೊಳ್ಳುವುದು. ಜ್ವರ ಅಥವಾ ದುಗ್ದರಸ ಗ್ರಂಥಿಗಳ ಊದುವಿಕೆಯಿಂದಾಗಿ ಹೀಗೆ ಆಗಿದೆಯಾ ಎಂದು ತಿಳಿಯಿರಿ.

ತುಂಬಾ ತುರಿಕೆ

ಒಣ ಚರ್ಮವಿದ್ದರೆ ಆಗ ಚಳಿಗಾಲದಲ್ಲಿ ದೇಹದಲ್ಲಿ ತುರಿಕೆ ಕಾಣಿಸಿಕೊಳ್ಳುವುದು. ಆದರೆ ಮೊಶ್ಚಿರೈಸ್ ಒದಗಿಸಿದ ಬಳಿಕವೂ ನಿಮಗೆ ಹೀಗೆ ತುರಿಕೆ ಕಾಣಿಸಿಕೊಳ್ಳುತ್ತಲಿದ್ದರೆ, ಆಗ ನಿಮಗೆ ಯಾವುದಾದರೂ ಗಂಭೀರ ಚರ್ಮದ ಸಮಸ್ಯೆ ಇದೆ ಎಂದು ಹೇಳಬಹುದು. ರಕ್ತದ ಕ್ಯಾನ್ಸರ್ ಅಥವಾ ಲಿಂಫೋಮಾದಿಂದಾಗಿ ಹೀಗೆ ಆಗಬಹುದು. ಕಿಡ್ನಿ ಮತ್ತು ಯಕೃತ್ ನ ಕಾಯಿಲೆಯಿಂದಲೂ ಇದು ಬರಬಹುದು. ದೇಹ ಪೂರ್ತಿ ನಿಮಗೆ ತುರಿಕೆ ಕಾಣಿಸಿಕೊಳ್ಳುತ್ತಲಿದ್ದರೆ ಮತ್ತು ರಾತ್ರಿಯ ನಿದ್ರೆಯು ಇದರಿಂದ ಕೆಡುತ್ತಲಿದ್ದರೆ ಆಗ ನೀವು ವೈದ್ಯರನ್ನು ಭೇಟಿ ಮಾಡಿ ಅವರಿಂದ ಸಲಹೆ ಪಡೆಯುವುದು ಅತೀ ಅಗತ್ಯವಾಗಿ ಇರುವುದು. ತುರಿಕೆ, ರಾತ್ರಿ ವೇಳೆ ಬೆವರು, ಜ್ವರ ಮತ್ತು ತೂಕ ಕಳೆದುಕೊಳ್ಳುವುದು ಕೆಲವೊಂದು ಅಪಾಯದ ಲಕ್ಷಣಗಳಾಗಿವೆ.

ಮುಖದ ಮೇಲೆ ಹೊಸ ಮಚ್ಚೆಗಳು

ಮೆಲನೊಮಾದಿಂದಾಗಿ ಮೊದಲ ಕೆಲವು ವಾರ ಅಥವಾ ತಿಂಗಳುಗಳಲ್ಲಿ ಮುಖದ ಮೇಲೆ ಮಚ್ಚೆಗಳು ಮೂಡುವಂತೆ ಮಾಡಬಹುದು. ಆದರೆ ಇದು ಚರ್ಮದ ಕ್ಯಾನ್ಸರ್ ನ ಲಕ್ಷಣವಾಗಿದ್ದರೆ ಆಗ ಅದು ದೀರ್ಘ ಕಾಲದ ತನಕ ಸಣ್ಣ ಮಚ್ಚೆಯಾಗಿ ಹಾಗೆ ಉಳಿಯುವುದಿಲ್ಲ, ಅದು ಬೆಳೆಯುತ್ತಲೇ ಇರುವುದು. ಮಚ್ಚೆಯು ತನ್ನ ಗಾತ್ರ, ಬಣ್ಣ ಮತ್ತು ಆಕಾರದಲ್ಲಿ ಬದಲಾವಣೆಗಳು ಆದರೆ ಆಗ ಖಂಡಿತವಾಗಿಯೂ ಇದು ಚರ್ಮದ ಕ್ಯಾನ್ಸರ್ ನ ಲಕ್ಷಣವೆಂದು ಹೇಳಬಹುದಾಗಿದೆ. ಇದಕ್ಕಾಗಿ ನೀವು ಹೀಗೆ ಆದರೆ ತಕ್ಷಣವೇ ಚರ್ಮರೋಗ ತಜ್ಞರನ್ನು ಭೇಟಿ ಮಾಡಿ. ಮನೆಯಲ್ಲೇ ನೀವು ಯಾವಾಗಲೂ ಚರ್ಮವನ್ನು ಪರೀಕ್ಷೆ ಮಾಡುತ್ತಲಿರಬೇಕು. ಇದರಿಂದ ಯಾವುದೇ ಸಮಸ್ಯೆಗಳಿದ್ದರೂ ತಿಳಿದುಬರುವುದು. ಅಂಗೈ, ಪಾದಗಳು ಮತ್ತು ಬೆರಳಿನ ಮಧ್ಯಭಾಗವನ್ನು ಸರಿಯಾಗಿ ಪರೀಕ್ಷಿಸಬೇಕು.

ಚರ್ಮದ ಅಡಿ ಭಾಗದಲ್ಲಿ ಮೆತ್ತಗಿನ ಕೆಂಪು ಉಬ್ಬುಗಳು

ಹೊಟ್ಟೆ ಮತ್ತು ಚರ್ಮಕ್ಕೆ ನೇರಾನೇರ ಸಂಪರ್ಕವು ಇಲ್ಲದೆ ಇರಬಹುದು. ಆದರೆ ಹೊಟ್ಟೆಯ ಉರಿಯೂತದ ಸಮಸ್ಯೆ(ಐಬಿಡಿ) ಚರ್ಮದ ಮೇಲೆ ಪ್ರಭಾವ ಬೀರಬಹುದು. ಕಾಲುಗಳಲ್ಲಿ ಕೆಲವೊಂದು ಸಲ ಕೆಂಪಾದ ಗಂಟುಗಳು ಕಾಣಿಸಬಹುದು. ಇದು ಚರ್ಮದ ಆಳದ ತನಕ ಹೋಗಬಹುದು. ಈ ಸಮಸ್ಯೆಯನ್ನು ಎರಿಥೆಮಾ ನೋಡೋಸಮ್ ಎಂದು ಕರೆಯಲಾಗುತ್ತದೆ ಮತ್ತು ಇದು ದೇಹದಲ್ಲಿ ರೋಗಲಕ್ಷಣಗಳು ಹೆಚ್ಚಾದಾಗ ಕಾಣಿಸಬಹುದು. ನಿರಂತರ ಅತಿಸಾರ ಮತ್ತು ಮಲದಲ್ಲಿ ರಕ್ತ ಬರುವ ವೇಳೆ ಇದು ಕಾಣಿಸಬಹುದು. ಮಲದಲ್ಲಿ ರಕ್ತವು ನಿಮಗೆ ಚಿಂತೆ ಉಂಟು ಮಾಡಬಹುದು. ಆದರೆ ಇದು ಒಂದು ರೀತಿಯ ಸಾಮಾನ್ಯ ಅರೋಗ್ಯ ಸಮಸ್ಯೆಯಾಗಿದ್ದು, ಯಾವುದೇ ಹಾನಿ ಉಂಟು ಮಾಡದು.

ಚರ್ಮವು ಅತಿಯಾಗಿ ಬೆವರುವುದು ಮತ್ತು ಕೆಂಬಣ್ಣವಾಗುವುದು

ನೀವು ಆರಾಮವಾಗಿದ್ದರೂ ಮತ್ತು ಬೇಸಿಗೆ ಸಮಯವಲ್ಲದೆ ಇದ್ದರೂ ನಿಮಗೆ ಅತಿಯಾಗಿ ಬೆವರುತ್ತಲಿದ್ದರೆ ಆಗ ಇದು ಥೈರಾಯ್ಡ್ ನ ಅತಿಯಾದ ಪ್ರತಿಕ್ರಿಯೆಯಿಂದ ಕಾಣಿಸಿಕೊಂಡ ಲಕ್ಷಣವೆಂದು ಹೇಳಬಹುದು. ಹೈಪರ್ ಥೈರಾಯ್ಡಿಸಮ್ ಇರುವ ಜನರಲ್ಲಿ ಚಯಾಪಚಯ ಕ್ರಿಯೆಯು ಹೆಚ್ಚಾಗುವುದು. ಇದರಿಂದ ಬೆವರು ಮತ್ತು ಜ್ವಾಲೆ ಉಂಟಾಗಬಹುದು. ಥೈರಾಯ್ಡ್ ಗ್ರಂಥಿಗಳು ಸರಿಯಾಗಿ ಕಾರ್ಯನಿರ್ವಹಿಸದೆ ಇರುವ ಬಗ್ಗೆ ನಿಮ್ಮ ವೈದ್ಯರು ಕೆಲವೊಂದು ಪ್ರಶ್ನೆಗಳನ್ನು ಕೇಳಬಹುದು. ಇದರಲ್ಲಿ ಮುಖ್ಯವಾಗಿ ತೂಕ ಕಳೆದುಕೊಳ್ಳುವುದು ಮತ್ತು ನಿದ್ರೆ ಬರದೆ ಇರುವುದು.

ಕಾಲಿನ ಕೆಳಭಾಗದಲ್ಲಿ ಊತ ಮತ್ತು ಕೆಂಪಾಗುವುದು

ಯಾರಾದರೂ ಹೃದಯ ಸ್ತಂಭನ ಸಮಸ್ಯೆಗೆ ಒಳಗಾಗುತ್ತಿದ್ದರೆ ಆಗ ಅವರ ಹೃದಯವು ಗುರುತ್ವಾಕರ್ಷಣೆಗೆ ವಿರುದ್ಧವಾಗಿ ರಕ್ತವನ್ನು ಸರಬರಾಜು ಮಾಡಲು ಸಂಕಷ್ಟಕ್ಕೆ ಸಿಲುಕುವುದು. ಇದರ ಪರಿಣಾಮವಾಗಿ ಕಾಲುಗಳಲ್ಲಿ ರಕ್ತವು ಜಮೆ ಆಗುವುದು. ಕಾಲಿನ ಸಾಕ್ಸ್ ತೆಗೆದ ಬಳಿಕ ಆಳವಾದ ಗೆರೆಗಳು ಕಾಣಿಸಿಕೊಳ್ಳುತ್ತಿದ್ದರೆ ಇದು ಮತ್ತೊಂದು ಲಕ್ಷಣವಾಗಿದೆ. ವಯಸ್ಸಾದವರಲ್ಲಿ ಇಂತಹ ಸಮಸ್ಯೆಯು ಹೆಚ್ಚಾಗಿ ಕಂಡುಬರುವುದು. ನೀವು ಹದಿಹರೆಯದವರಾಗಿದ್ದರೆ ಮತ್ತು ಸಾಕ್ಸ್ ನ ಗೆರೆಗಳು ಕಾಣಿಸುತ್ತಿದ್ದರೆ ಆಗ ನೀವು ತುಂಬಾ ಸಣ್ಣ ಗಾತ್ರದ ಸಾಕ್ಸ್ ಧರಿಸುತ್ತಿದ್ದೀರಿ ಎಂದು ಹೇಳಬಹುದು. ಆದರೂ ನೀವು ಇಂತಹ ಕೆಲವು ಲಕ್ಷಣಗಳ ಬಗ್ಗೆ ತಿಳಿಯಬೇಕು.

ಚರ್ಮದ ಅಡಿಯಲ್ಲಿ ಹಳದಿ ಉಬ್ಬುಗಳು

ಗಂಟುಗಳು, ಕೈ, ಕಾಲುಗಳಲ್ಲಿ ಚರ್ಮದ ಅಡಿಯಲ್ಲಿ ಹಳದಿ ಬಣ್ಣದ ಉಬ್ಬುಗಳು ಕಾಣಿಸಿಕೊಂಡರೆ ಆಗ ಇದು ಕೊಬ್ಬು ಶೇಖರಣೆಯ ಲಕ್ಷಣವಾಗಿದೆ. ಕೊಲೆಸ್ಟ್ರಾಲ್ ಅಥವಾ ರಕ್ತದಲ್ಲಿನ ಕೊಬ್ಬು ಅತಿಯಾಗಿದೆ ಎನ್ನುವುದು ಲಕ್ಷಣ ಇದಾಗಿದೆ. ಇದು ಮಧುಮೇಹ, ಮೇದೋಗ್ರಂಥಿ ಮತ್ತು ಕೆಲವೊಂದು ರೀತಿಯ ಕ್ಯಾನ್ಸರ್ ನ ಲಕ್ಷಣವಾಗಿರಬಹುದು.

ದೊಡ್ಡ ಸಮಸ್ಯೆಯೆಂದು ಭಾವಿಸಬೇಡಿ

ಚರ್ಮದಲ್ಲಿ ಕಾಣಿಸಿಕೊಳ್ಳುವ ಕೆಲವು ಲಕ್ಷಣಗಳು ಗಂಭೀರ ಕಾಯಿಲೆಗಳ ಲಕ್ಷಣಗಳಾಗಿರಬಹುದು. ಆದರಲ್ಲೂ ಒಣ ಚರ್ಮ ಮತ್ತು ತುರಿಕೆಯ ಬಗ್ಗೆ ಗಂಭೀರವಾಗಿ ಗಮನಿಸಬೇಕು. ಆದರೆ ನೀವು ಇದು ಅತೀ ದೊಡ್ಡ ಸಮಸ್ಯೆ ಎಂದು ಭಾವಿಸುವುದು ಬೇಡ. ತುರಿಕೆ ಕಾಣಿಸುತ್ತಲಿದ್ದರೆ ಆಗ ನೀವು ಮೊಶ್ಚಿರೈಸರ್ ಹಚ್ಚಿಕೊಳ್ಳಿ. ದದ್ದುಗಳು ಇದ್ದರೆ ಆಗ ನೀವು ಯಾವುದೇ ಕ್ರೀಮ್ ಬಳಸಿಕೊಳ್ಳಿ. ಸಮಸ್ಯೆಯು ಪರಿಹಾರವಾಗದೆ ಇದ್ದರೆ ಆಗ ನೀವು ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ.

ಯಾವಾಗ ವೈದ್ಯರನ್ನು ಭೇಟಿ ಮಾಡಬೇಕು

ಚರ್ಮದಲ್ಲಿನ ಪ್ರತಿಯೊಂದು ಸಣ್ಣ ಬದಲಾವಣೆಯು ಗಂಭೀರ ಸಮಸ್ಯೆಯ ಲಕ್ಷಣವಲ್ಲ. ಆದರೆ ಯಾವುದೇ ದದ್ದು ಕಾಣಿಸಿಕೊಂಡರೆ ಮತ್ತು ಇದು ಒಂದು ವಾರದಲ್ಲಿ ಹೋಗದೆ ಇದ್ದರೆ, ಜ್ವರ, ಚಳಿ, ನೋವು ಮತ್ತು ಕೀವು ಇದ್ದರೆ ಆಗ ನೀವು ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ.

Source Credit Kannada.boldsky.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಮಂಗಳವಾರದ ದಿನ ಭವಿಷ್ಯ (17-12-2019)

Tue Dec 17 , 2019
Source Credit Kannada.boldsky.com Pin it Email https://nirantharanews.com/%e0%b2%97%e0%b2%82%e0%b2%ad%e0%b3%80%e0%b2%b0-%e0%b2%95%e0%b2%be%e0%b2%af%e0%b2%bf%e0%b2%b2%e0%b3%86-%e0%b2%ac%e0%b2%97%e0%b3%8d%e0%b2%97%e0%b3%86-%e0%b2%9a%e0%b2%b0%e0%b3%8d%e0%b2%ae-%e0%b2%a8/#MS0xNTc2NTE3MDE ಮೇಷ ರಾಶಿ ಇಂದು ನಿಮಗೆ ಹತ್ತಿರವಿರುವ ಯಾರೊಬ್ಬರಿಂದ ನಿಮಗೆ ದೊಡ್ಡ ಆಶ್ಚರ್ಯ ಉಂಟಾಗಬಹುದು, ಅದು ನಿಮಗೆ ತುಂಬಾ ಸಂತೋಷವನ್ನು ನೀಡುತ್ತದೆ. ಇಂದು ನಿಮ್ಮ ಮನಸ್ಥಿತಿ ತುಂಬಾ ಚೆನ್ನಾಗಿರುತ್ತದೆ ಮತ್ತು ಸಾಕಷ್ಟು ಆನಂದವನ್ನು ಹೊಂದಿರುತ್ತೀರಿ. ನಿಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ಇಂದಿನ ಪ್ರಮುಖ ಕೆಲಸವನ್ನು ನಾಳೆ ಮುಂದೂಡುವುದು ನಿಮಗೆ ಸರಿಹೊಂದುವುದಿಲ್ಲ. ನಿಮ್ಮ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡುವುದು ಉತ್ತಮ. ವ್ಯಾಪಾರಿಯಾಗಿದ್ದರೆ ಇಂದು ನೀವು ದೊಡ್ಡ ವ್ಯವಹಾರ ವಹಿವಾಟು ನಡೆಸಬಹುದು. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links