ಕ್ರೇಜಿಸ್ಟಾರ್ ರವಿಚಂದ್ರನ್ ಮನಗೆದ್ದ ಕಲಾವಿದ ಕರಣ್..!

Source Credit Filmibeat.com

ನೀವು ಬೆಂಗಳೂರಿಗೆ ಬರಲು ಕಾರಣವಾದ ಅಂಶಗಳೇನು?

ನಾನು ಬೆಂಗಳೂರಲ್ಲೇ ಬೆಳೆಯಬೇಕು ಎನ್ನುವ ಕನಸನ್ನು ಮೊದಲಿನಿಂದಲೂ ಹೊಂದಿದ್ದೆ. ಹಾಗೆ ಬೆಂಗಳೂರಿನಲ್ಲಿ ಕಲೆಗೆ ಹೆಚ್ಚು ಅವಕಾಶವಿದೆ ಎಂದು ಹಿಂದೊಮ್ಮೆ ಬಂದಿದ್ದಾಗ ವೃತ್ತಿಪರ ತರಬೇತಿ ಪಡೆದಿಲ್ಲ ಎನ್ನುವ ಕಾರಣದಿಂದಾಗಿ ಒಳ್ಳೆಯ ಕೆಲಸ ದೊರಕದೇ ಹೋಯಿತು. ಬಳಿಕ ಮಂಗಳೂರಿನ ಇನ್ಫೋಟೆಕ್ನಲ್ಲಿ ಇ ಲರ್ನಿಂಗ್ ಇಲೆಕ್ಚರಿಂಗ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದೆ. ಇದರ ನಡುವೆ ಅನಿಮೇಟೆಡ್ ಮೊದಲಾದ ರಚನೆಗಳನ್ನು ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡುವ ಮೂಲಕ ಅವಕಾಶಗಳಿಗಾಗಿ ಕಾಯುತ್ತಿದ್ದೆ. ಕುಂಬ್ಳೆಯಲ್ಲಿ ಆರ್ಯನ್ಸ್ ಎನ್ನುವ ಸಮಾಜ ಸೇವಾ ಸಂಘಟನೆಗೆ ನಾನು ರಚಿಸಿದಂಥ ಹನುಮಂತನ ಮುಖವೇ ಬಳಿಕ ಉಗ್ರರೂಪಿ ಆಂಜನೇಯನಾಗಿ ಜನಪ್ರಿಯವಾಯಿತು. ಮಂಗಳೂರಿನಲ್ಲಿದ್ದುಕೊಂಡೇ `ಗಂಧದ ಕುಡಿ’ ಎಂಬ ಚಿತ್ರವೊಂದರ ಸ್ಟೋರಿ ಬೋರ್ಡ್ಗೆ ಚಿತ್ರಕಲಾವಿದನಾಗಿ ಕೆಲಸ ಮಾಡಿದೆ. ಆದರೆ ಸಿನಿಮಾಗಳಿಗೆ ಕೆಲಸ ಮಾಡುವುದಾದರೆ ಬೆಂಗಳೂರೇ ಸೂಕ್ತ ಎನ್ನುವ ಕಾರಣದಿಂದ ಇದೀಗ ಬೆಂಗಳೂರಲ್ಲೇ ಮನೆ ಮಾಡಿದ್ದೇನೆ.

ಇಲ್ಲಿ ನಿಮ್ಮ ಕನಸು ನನಸಾಗುವ ಕಡೆಗಿನ ಪಯಣ ಹೇಗಿದೆ?

ಬಂದ ಸ್ವಲ್ಪ ಸಮಯದಲ್ಲೇ ಕನ್ನಡದ ಖ್ಯಾತ ತಾರೆಯರ ಚಿತ್ರಗಳ ಪೋಸ್ಟರ್ ಡಿಸೈನ್ ಮಾಡುವ ಅವಕಾಶ ದೊರಕಿದೆ. ಇತ್ತೀಚೆಗೆ ತೆರೆಕಂಡ `ಮುಂದಿನ ನಿಲ್ದಾಣ’ ಚಿತ್ರದ ಪೋಸ್ಟರ್ ಸೇರಿದಂತೆ `ಕಥಾ ಸಂಗಮ’ ಚಿತ್ರಕ್ಕಾಗಿ ಪುಟ್ಟಣ್ಣ ಕಣಗಾಲ್ ಅವರ ಅನಿಮೇಶನ್ ಚಿತ್ರವನ್ನು ಮಾಡಿದ್ದೇನೆ. ಏಳು ಭಾಷೆಯಲ್ಲಿ ತೆರೆ ಕಾಣಲಿರುವ ರಿಯಲ್ ಸ್ಟಾರ್ ಉಪೇಂದ್ರರ `ಕಬ್ಜ’ ಚಿತ್ರದ ಪೋಸ್ಟರ್ ಕೂಡ ನಾನೇ ಡಿಸೈನ್ ಮಾಡಿದ್ದೇನೆ. ಎಲ್ಲವೂ ಅಂದುಕೊಂಡಂತೆ ಆದರೆ ಮಹಾಭಾರತವನ್ನು ಅನಿಮೇಟೆಡ್ ಧಾರಾವಾಹಿ ಮಾಡುವ ಯೋಜನೆಯೂ ಇದೆ. ಇದಲ್ಲದೆ ಒಂದಷ್ಟು ಪರಭಾಷೆಯ ಚಿತ್ರಗಳಿಗೂ ಪೋಸ್ಟರ್ ಡಿಸೈನ್ ಮಾಡಿದ್ದೇನೆ. ಆದರೆ ಕನ್ನಡ ಚಿತ್ರರಂಗದಲ್ಲಿ ಈಗಲೂ ಕೂಡ ಬಹಳ ಮಂದಿಗೆ ನಾನು ಇಂಥದೊಂದು ವೃತ್ತಿ ಮಾಡುತ್ತಾ ಬೆಂಗಳೂರಲ್ಲಿರುವುದು ಗೊತ್ತೇ ಇಲ್ಲ.

ಇತ್ತೀಚೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ನಿಮ್ಮ ಚಿತ್ರವನ್ನು ಮೆಚ್ಚಿಕೊಂಡ ಬಗ್ಗೆ ಹೇಳಿ?

ಹೌದು, ಅದು ಒಂದು ಮರೆಯಲಾಗದ ಘಟನೆ. ಖಾಸಗಿ ಸಂಸ್ಥೆಯೊಂದರ ಉದ್ಘಾಟನೆಗೈದ ಅವರಿಗೆ ಕೊಡುಗೆಯಾಗಿ ನನ್ನ ಚಿತ್ರರಚನೆಯನ್ನು ನೀಡಲಾಗಿತ್ತು. ಆ ಸಂಸ್ಥೆಯ ಮಂದಿ ನನ್ನನ್ನು ಆಹ್ವಾನಿಸಿದ್ದರು. ಆದರೆ ನನಗೆ ಬಿಡುವಿರದ ಕಾರಣ ಅಲ್ಲಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಅದು ರವಿ ಬೋಪಣ್ಣ ಸಿನಿಮಾದಲ್ಲಿ ರವಿಚಂದ್ರನ್ ಅವರ ಮುಖದ ಗೆಟಪ್ ಇರುವ ಪೋಸ್ಟರ್ ನ ಚಿತ್ರವಾಗಿತ್ತು. ಚಿತ್ರ ನೋಡಿ ಮೆಚ್ಚಿಕೊಂಡ ಅವರು ಅದನ್ನು ಪ್ರಸ್ತುತ ತಮ್ಮ ವಾಟ್ಸಾಪ್ ಡಿಪಿಯಾಗಿ ಬಳಸುತ್ತಿರುವುದು ತಿಳಿದಾಗ ಖುಷಿಯಾಯಿತು. ಸಿನಿಮಾದಲ್ಲಿಯೂ ಆ ಚಿತ್ರವನ್ನು ಬಳಸಿಕೊಳ್ಳುವುದಾಗಿ ಅವರು ಹೇಳಿದ್ದು, ನನ್ನೊಂದಿಗೆ ಮಾತನಾಡಬೇಕು ಎಂದು ನಂಬರ್ ಪಡೆದುಕೊಂಡಿದ್ದಾಗಿ ತಿಳಿದಾಗ ಖುಷಿಯಾಯಿತು.

ನಿಮ್ಮ ಕುಟುಂಬದ ಕುರಿತಾದ ವಿಶೇಷಗಳನ್ನು ಹಂಚಿಕೊಳ್ಳಿ?

ನನ್ನ ತಂದೆ ದಯಾನಂದ ಆಚಾರ್ಯ ಮರದ ಕೆತ್ತನೆಯ ಮೂಲಕ ಕಲೆಯನ್ನು ವಿನ್ಯಾಸಗೊಳಿಸುವಲ್ಲಿ ನಿಪುಣರಾಗಿದ್ದರು. ಆದರೆ ಅವರು ಇಂದು ನಮ್ಮೊಂದಿಗಿಲ್ಲ ಎನ್ನುವ ನೋವಿದೆ. ಅಮ್ಮನ ಹೆಸರು ಮಂಜುಳಾ. ಅವರು ನನ್ನ ಬಾಲ್ಯದಲ್ಲೇ ಆನೆ, ಗಣೇಶ ಮೊದಲಾದ ಸ್ಕೆಚಸ್ ಗಳನ್ನು ಹಾಕಿ ನನ್ನಲ್ಲಿ ಕಲಾಸಕ್ತಿ ಮೂಡಿಸಿದವರು. ಎರಡು ವರ್ಷಗಳ ಹಿಂದೆ ಕಲಾವಿದೆಯನ್ನೇ ಪೂಜಾ ಎನ್ನುವ ಕಲಾವಿದೆಯನ್ನೇ ವರಿಸಿದ್ದೇನೆ. ಪ್ರಸ್ತುತ `ಪರಿಧಿ ಮೀಡಿಯಾ ವರ್ಕ್ಸ್’ ಮೂಲಕ ನನ್ನೊಂದಿಗೆ ಆಕೆಯೂ ಕಲಾ ವಿಭಾಗದ ಕೆಲಸಗಳಲ್ಲಿ ನಿರತಳಾಗಿದ್ದಾಳೆ. ಈ ಹಿಂದೆ ಹನುಮಾನ್ ಚಿತ್ರ ಅಂತಾರಾಷ್ಟ್ರೀಯವಾಗಿ ಜನಪ್ರಿಯಗೊಂಡರೂ, ಅದರ ಕಾಪಿ ರೈಟ್ಸ್ ಗಳಿಲ್ಲದ ಕಾರಣ ನಮಗೆ ಯಾವುದೇ ಆರ್ಥಿಕ ಲಾಭಗಳಾಗಲಿಲ್ಲ! ಆದರೆ ಈಗ ಕಾಪಿರೈಟ್ಸ್ ಬಗ್ಗೆ ತಲೆಕೆಡಿಸಿಕೊಂಡು ಕೆಲಸ ಮಾಡುತ್ತಿದ್ದೇನೆ. ಇತ್ತೀಚೆಗೆ ಟೀಶರ್ಟ್ ಸಂಸ್ಥೆಯೊಂದು ಅದನ್ನು ಬಳಸಿಕೊಳ್ಳುವ ಬಗ್ಗೆ ಮಾತನಾಡಿದೆ. ಹಾಗಾಗಿ ಹೊಸ ನಿರೀಕ್ಷೆಗಳು ಹುಟ್ಟಿಕೊಂಡಿವೆ.

Source Credit Filmibeat.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಎಲ್ಲಮ್ಮನ ಸನ್ನಿಧಾನದಲ್ಲಿ ಆರ್ಯ ಅನು ಮುಖಾಮುಖಿ.. ಆದರೆ ಆರ್ಯವರ್ಧನ್ ಹೀಗ್ಯಾಕೆ ಮಾಡಿಬಿಟ್ರು..

Thu Dec 19 , 2019
Source Credit RJ News Kannada ಜೊತೆಜೊತೆಯಲಿ ಅಭಿಮಾನಿಗಳಿಗೆ ಕುತೂಹಲ ತಡೆಯಲಾಗದ ಮಟ್ಟಕ್ಕೆ ತಂದು ನಿಲ್ಲಿಸಿ ದಿನಕ್ಕೊಂದು ಹೊಸ ತಿರುವು ನೀಡಿ, ನಿಜ ಜೀವನದಲ್ಲಿ ನಮ್ಮ ನಡುವೆಯೇ ಈ ಕತೆ ನಡೆಯುತ್ತಿದೆಯೇನೋ ಎನ್ನುವಷ್ಟರ ಮಟ್ಟಕ್ಕೆ ಧಾರಾವಾಹಿ ಸಾಗುತ್ತಿದೆ.. Pin it Email https://nirantharanews.com/%e0%b2%95%e0%b3%8d%e0%b2%b0%e0%b3%87%e0%b2%9c%e0%b2%bf%e0%b2%b8%e0%b3%8d%e0%b2%9f%e0%b2%be%e0%b2%b0%e0%b3%8d-%e0%b2%b0%e0%b2%b5%e0%b2%bf%e0%b2%9a%e0%b2%82%e0%b2%a6%e0%b3%8d%e0%b2%b0%e0%b2%a8%e0%b3%8d/#UGhvdG9HcmlkXzE ಇದೀಗ ಅನು ಕೊಟ್ಟ ಚಾಲೆಂಜ್ ನಲ್ಲಿ ಇನ್ನು ಅರ್ಧ ಗಂಟೆಯಷ್ಟೇ ಉಳಿದಿದ್ದು ಇಂದಿನ ಸಂಚಿಕೆಗಾಗಿ ಪ್ರತಿಯೊಬ್ಬರೂ ಕಾದು ಕುಳಿತಿರುವಂತೆ ಮಾಡಿದ್ದಾರೆ.. ಅತ್ತ ಅನು ಕೂಡ ಎಲ್ಲಮನ ಸನ್ನಿಧಾನಕ್ಕೆ ಉಡಿ ತುಂಬಲು ಬಂದಿದ್ದು.. ಇತ್ತ ಆರ್ಯವರ್ಧನ್ ಕೂಡ ಅಮ್ಮನೊಂದಿಗೆ ದೇವಸ್ಥಾನಕ್ಕೆ ಬಂದಿದ್ದು.. […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links