ಕೊಲ್ಲೂರಿನಲ್ಲಿ 80ನೇ ಹುಟ್ಟುಹಬ್ಬ ಆಚರಿಸಿಕೊಂಡ ಗಾಯಕ ಯೇಸುದಾಸ್

Source Credit NewsKannada.com


HSA
  ¦   


Jan 10, 2020 06:02:48 PM (IST)

ಕುಂದಾಪುರ: ಖ್ಯಾತ ಹಿನ್ನೆಲೆ ಗಾಯಕ ಕೆಜೆ ಯೇಸುದಾಸ್ ಅವರು ಶುಕ್ರವಾರ 80ನೇ ಹುಟ್ಟುಹಬ್ಬವನ್ನು ಪ್ರತೀ ವರ್ಷದಂತೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ತನ್ನ ಕುಟುಂಬದೊಂದಿಗೆ ಆಚರಿಸಿಕೊಂಡಿದ್ದಾರೆ.

ಕೆಲವು ದಶಕಗಳಿಂದ ಯೇಸುದಾಸ್ ಅವರು ತನ್ನ ಹುಟ್ಟುಹಬ್ಬದಂದು ಮೂಕಾಂಬಿಕಾ ಸನ್ನಿಧಿಯಲ್ಲಿ ಸಂಗೀತ ಕಛೇರಿಯ ಮೂಲಕ ಆಚರಿಸಿಕೊಳ್ಳುತ್ತಿರುವರು. ಸಂಗೀತ ಮತ್ತು ಕಲೆಗೆ ಮೂಕಾಂಬಿಕಾ ಸನ್ನಿಧಿಯು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ.

ಕಳೆದ ಆರು ದಶಕದಿಂದ ಸಂಗೀತ ಕ್ಷೇತ್ರದಲ್ಲಿ ಇರುವ ಯೇಸುದಾಸ್ ಅವರು ಸುಮಾರು 14 ಭಾಷೆಗಳಲ್ಲಿ 80 ಸಾವಿರ ಹಾಡುಗಳನ್ನು ಹಾಡಿದ್ದಾರೆ. ಇದರಲ್ಲಿ ಅರೇಬಿಕ್, ಲ್ಯಾಟಿನ್ ಮತ್ತು ರಷ್ಯನ್ ಭಾಷೆಯು ಸೇರಿದೆ.

ಯೇಸುದಾಸ್ ಅವರು ಇದುವರೆಗೆ ಎಂಟು ರಾಷ್ಟ್ರ ಪ್ರಶಸ್ತಿ ಹಾಗೂ ಹಲವಾರು ರಾಜ್ಯ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಹಿರಿಯ ಗಾಯಕನನ್ನು ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಯಿಂದ ಗೌರವಿಸಲಾಗಿದೆ.

Source Credit NewsKannada.com

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಜ.25ರಂದು ಯಂತ್ರ ಶ್ರೀಕೃಷಿ ಪದ್ಧತಿಗೆ ಅಧಿಕೃತ ಚಾಲನೆ

Fri Jan 10 , 2020
Source Credit NewsKannada.com ಜ.25ರಂದು ಯಂತ್ರ ಶ್ರೀಕೃಷಿ ಪದ್ಧತಿಗೆ ಅಧಿಕೃತ ಚಾಲನೆ MV   ¦    Jan 10, 2020 07:49:55 PM (IST) Pin it Email https://nirantharanews.com/%e0%b2%95%e0%b3%8a%e0%b2%b2%e0%b3%8d%e0%b2%b2%e0%b3%82%e0%b2%b0%e0%b2%bf%e0%b2%a8%e0%b2%b2%e0%b3%8d%e0%b2%b2%e0%b2%bf-80%e0%b2%a8%e0%b3%87-%e0%b2%b9%e0%b3%81%e0%b2%9f%e0%b3%8d%e0%b2%9f%e0%b3%81/#YmFudHdhbF9mYXJ ಬಂಟ್ವಾಳ: ಜನರ ಸಮಸ್ಯೆಯಿಂದ ಅಳಿವಿನಂಚಿನಲ್ಲಿರುವ ಭತ್ತದ ಕೃಷಿಯನ್ನು ಯಾಂತ್ರೀಕೃತವಾಗಿ  ಬೆಳೆಸುವ ನಿಟ್ಟಿನಲ್ಲಿ ಜ.25ರಂದು ಶಿವಮೊಗ್ಗದಲ್ಲಿ ಯಂತ್ರ ಶ್ರೀ ಕೃಷಿ ಪದ್ದತಿ ಯೋಜನೆಗೆ ಅಧಿಕೃತವಾಗಿ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹಾಗೂ ಸಚಿವರ ಉಪಸ್ಥಿತಿಯಲ್ಲಿ ಚಾಲನೆ ಸಿಗಲಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಪ್ರಾದೇಶಿಕ ನಿರ್ದೇಶಕರಾದ ವಸಂತ ಸಾಲಿಯಾನ್ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links