ಕೊರೋನಾ ವೈರಸ್: ಚೀನಾದಿಂದ ಭಾರತಕ್ಕೆ ಬರುವವರಿಗೆ ಇ-ವೀಸಾ ಸೌಲಭ್ಯ ತಾತ್ಕಾಲಿಕ ಸ್ಥಗಿತ

Source Credit Kannada Prabha

Source : The New Indian Express

ಬೀಜಿಂಗ್: ಚೀನಾದಿಂದ ಬರುವ ಪ್ರಯಾಣಿಕರು ಹಾಗೂ ವಿದೇಶಿಗರಿಗೆ ಇ-ವೀಸಾ ಸೌಲಭ್ಯವನ್ನು ಭಾರತ ಸರ್ಕಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. 

ಚೀನಾದಲ್ಲಿ ಈ ವರೆಗೆ ಕೊರೋನಾ ವೈರಸ್ ಗೆ 300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 14,562 ಜನರು ಸೋಂಕು ಪೀಡಿತರಾಗಿದ್ದಾರೆ. ಭಾರತ, ಅಮೆರಿಕ, ಬ್ರಿಟನ್ ಸೇರಿದಂತೆ 25 ರಾಷ್ಟ್ರಗಳಲ್ಲಿ ಕೊರೋನಾ ವೈರಸ್ ಹರಡಿದೆ. 

ಇತ್ತೀಚಿನ ಕೆಲವು ಬೆಳವಣಿಗೆಗಳಿಂದ ಇ-ವೀಸಾಗಳ ಮೂಲಾ ಭಾರತಕ್ಕೆ ಪ್ರಯಾಣ ಮಾಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಭಾರತೀಯ ರಾಯಭಾರಿ ಕಚೇರಿ ಘೋಷಿಸಿದೆ.

ಚೀನಾದಲ್ಲಿರುವ ಬೇರೆ ದೇಶದವರು ಹಾಗೂ ಚೀನಾ ಪಾಸ್ಪೋರ್ಟ್ ಗಳನ್ನು ಹೊಂದಿರುವವರಿಗೆ ಈ ನಿಯಮ ಅನ್ವಯವಾಗಲಿದೆ.  ಈಗಾಗಲೇ ಇ-ವೀಸಾಗಳನ್ನು ಹೊಂದಿರುವವರದ್ದೂ ಅಸಿಂಧುಗೊಳ್ಳಲಿದೆ.

Source Credit Kannada Prabha

“This story was auto-published from a syndicated feed & Website. No part of the story has been edited by Niranthara News”

Niranthara News

Leave a Reply

Your email address will not be published. Required fields are marked *

Next Post

ಪಾಕಿಸ್ತಾನದ ಮೊಟ್ಟ ಮೊದಲ ಸಿವಿಲ್ ಜಡ್ಜ್ ಆಗಿ ದಾಖಲೆ ಬರೆದ ಹಿಂದೂ ಯುವತಿ

Mon Feb 3 , 2020
Source Credit Kannada Prabha Source : Online Desk ಕರಾಚಿ: ಪಾಕಿಸ್ತಾನದಲ್ಲಿ ಮೊಟ್ಟ ಮೊದಲ ಸಿವಿಲ್ ಜಡ್ಜ್ ಆಗಿ ಹಿಂದೂ ಯುವತಿಯೊಬ್ಬಳು ನೇಮಕವಾಗುವ ಮೂಲಕ ದಾಖಲೆ ನಿರ್ಮಿಸಿದ್ದಾಳೆ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರುವ ಸುಮನ್ ಪವನ್ ಬೋಡಾನಿ ತನ್ನ ಸಮುದಾಯದ ಮೊಟ್ಟ ಮೊದಲ ಜಡ್ಜ್ ಆಗಿ ನೇಮಕಗೊಂಡಿದ್ದಾರೆ. ಸುಮನ್ ಸಿಂಧ್ ಪ್ರಾಂತ್ಯಕ್ಕೆ ಸೇರಿರುವ ಶಹದಾದ್ ಕೋಟ್ ನಿವಾಸಿಯಾಗಿದ್ದಾರೆ. ಸಿವಿಲ್ ಜಡ್ಜ್ ಗಳ ಶ್ರೇಯಾಂಕ ಪಟ್ಟಿಯಲ್ಲಿ ಸುಮನ್ 54ನೇ ಸ್ಥಾನ ಪಡೆದುಕೊಂಡಿದ್ದಾರೆ.  ಸುಮನ್ ಅವರು ಭಾರತದ ಹೈದ್ರಾಬಾದ್ ನಲ್ಲಿ LLB ಪದವಿ ಪಡೆದಿದ್ದು, ಬಳಿಕ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links