ಕೊನೆ ಕ್ಷಣದ ಬದಲಾವಣೆಗಳನ್ನು ಹೊರತುಪಡಿಸಿ

Source Credit Vishwavani.news

ರಾಂ ಎಲ್ಲಂಗಳ 

ಇತಿಹಾಸ ಮರುಕಳಿಸುತ್ತದೆ ಎನ್ನಲಾಗುತ್ತದೆ. ಪ್ರಸ್ತುತ ಮಹಾರಾಷ್ಟ್ರದಲ್ಲಾಗುತ್ತಿಿರುವ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದರೆ ಅದು ಹೌದೆನಿಸುತ್ತದೆ. ಯಥಾವತ್ತಾಾಗಿ ಅಲ್ಲದೇ ಹೋದರೂ ಗತ ವರ್ಷದಲ್ಲಿ ನಮ್ಮ ರಾಜ್ಯದಲ್ಲಿ ನಡೆದ ಪ್ರಹಸನ ಪ್ರಸ್ತುತ ಮಹಾರಾಷ್ಟ್ರದಲ್ಲಿ ಮರುಸೃಷ್ಟಿಿ ಕಾಣುತ್ತಿಿದೆ. ಸರಕಾರ ರಚನೆ ಸರ್ಕಸ್ಸು, ಮೈತ್ರಿಿ ಕಸರತ್ತು, ಕುದುರೆ ವ್ಯಾಾಪಾರ ಎಲ್ಲ ವಿಚಾರಗಳಲ್ಲೂ ಅಷ್ಟೇ . 2018ರಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆದು ಮೇ 15ರಂದು ಫಲಿತಾಂಶ ಹೊರಬಿತ್ತು. ಆದರೆ, ಫಲಿತಾಂಶ ಅಂದುಕೊಂಡಂತೆ ಇರಲಿಲ್ಲ. ಬಿಜೆಪಿಗೆ ನಿರೀಕ್ಷಿತ ಸ್ಥಾಾನ ಸಿಗಲಿಲ್ಲ. 104 ಸ್ಥಾಾನಗಳೊಂದಿಗೆ ಅತ್ಯಧಿಕ ಸ್ಥಾಾನ ಪಡೆದ ಪಕ್ಷವಾಗಿ ಹೊರಹೊಮ್ಮಿಿತು. ಕಾಂಗ್ರೆೆಸ್ ಪಕ್ಷ 78 ಸ್ಥಾಾನ ಗೆದ್ದುಕೊಂಡಿತು. ಜೆಡಿಎಸ್ 38 ಸ್ಥಾಾನ ಪಡೆಯಿತು. ಯಾವ ಪಕ್ಷವೂ ಸ್ಪಷ್ಟ ಬಹುಮತ ಕಾಣದೆ ಸರಕಾರ ರಚನೆ ಸಮಸ್ಯೆೆ ತಲೆದೋರಿತು. ಕೊನೆಗೂ ಇದ್ದುದರಲ್ಲೇ ದೊಡ್ಡ ಪಕ್ಷ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವ ಸಲುವಾಗಿ ಕಾಂಗ್ರೆೆಸ್ ಜೆಡಿಎಸ್ ಜತೆಗೂಡಿ ಸರಕಾರ ರಚಿಸಿ ಮಿಕ್ಕ ರಾಜಕೀಯ ಪಕ್ಷಗಳಲ್ಲಿ ಮೈತ್ರಿಿ ಕನಸು ಚಿಗುರೊಡೆಯುವಂತೆ ಮಾಡಿದ್ದೂ ದುರದೃಷ್ಟವಶಾತ್ ವರ್ಷದೊಳಗಾಗಿ ಪತನಗೊಂಡಿದ್ದೂ ಇದೀಗ ಇತಿಹಾಸ.

ಮಹಾರಾಷ್ಟ್ರವಿಂದು ಕರ್ನಾಟಕವನ್ನೇ ಮಾದರಿಯಾಗಿಟ್ಟುಕೊಂಡು ಅಡಿಯಿಟ್ಟಿಿರುವುದು ಅಚ್ಚರಿ. ಅಲ್ಲಿ 2019ರ ಅಕ್ಟೋೋಬರ್ 21 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಅದುವರೆಗೆ ಮೈತ್ರಿಿ ಮಾಡಿಕೊಂಡಿದ್ದ ಬಿಜೆಪಿ ಶಿವಸೇನೆ ಮೈತ್ರಿಿಕೂಟಕ್ಕೆೆ ನಿರೀಕ್ಷಿತ ಸ್ಥಾಾನ ಗಳಿಸಲಾಗಲಿಲ್ಲ. ಬಿಜೆಪಿ ಈ ಹಿಂದೆ 288ರಲ್ಲಿ 122 ಸ್ಥಾಾನ ಗಳಿಸಿದ್ದರೆ ಈ ಬಾರಿ 105 ಸ್ಥಾಾನಗಳನ್ನಷ್ಟೇ ಗೆಲ್ಲಲು ಶಕ್ತವಾಯಿತು. ಶಿವಸೇನೆ 56 ಸ್ಥಾಾನಗಳನ್ನು ಎನ್‌ಸಿಪಿ 56 ಸ್ಥಾಾನಗಳನ್ನು ಕಾಂಗ್ರೆೆಸ್ 44 ಸ್ಥಾಾನಗಳನ್ನು ಪಡೆದುಕೊಂಡಿತು. ಈ ಹಿಂದಿನಂತೆ ಬಿಜೆಪಿ ಶಿವಸೇನೆ ಮೈತ್ರಿಿ ಸರಕಾರ ರಚಿಸಬಹುದಿತ್ತು. ಆದರೆ, ಶಿವಸೇನೆಯ ಕುರ್ಚಿ ಕನಸು ಅದಕ್ಕೆೆ ಮುಳುವಾಯಿತು. ಅದು ಅಧಿಕಾರ ಹಂಚಿಕೆ ವಿಚಾರವಾಗಿ ಪಟ್ಟು ಹಿಡಿದುದರ ಪರಿಣಾಮವಾಗಿ ಬಿಜೆಪಿ ಸರಕಾರ ರಚನೆಯಿಂದ ಹಿಂದೆ ಸರಿಯಿತು. ಶಿವಸೇನೆ ಮಿಕ್ಕ ಪಕ್ಷಗಳೊಂದಿಗೆ ಕೈ ಜೋಡಿಸಿ ಯಾದರೂ ಸರಕಾರ ರಚಿಸುವ ಕಸರತ್ತು ಕೈಗೊಂಡಿತು. ಈ ನಡುವೆ ರಾಷ್ಟ್ರಪತಿ ಆಳ್ವಿಿಕೆ ಏರಿಕೆಯಾದರೂ ಅದು ಮಿಕ್ಕ ಪಕ್ಷಗಳ ಕದ ತಟ್ಟಿಿತು. ಸರಕಾರ ರಚನೆ ದಿನದಿಂದ ದಿನಕ್ಕೆೆ ಕಗ್ಗಂಟು ಎನಿಸತೊಡಗಿತು. ತಿಂಗಳು ಉರುಳಿದರೂ ಪ್ರಹಸನಕ್ಕೆೆ ಇನ್ನೂ ತೆರೆಬಿದ್ದಿಲ್ಲ.

ಅಕ್ಕಪಕ್ಕದ ರಾಜ್ಯಗಳೆರಡರದ್ದೂ ಒಂದೇ ಕಥೆ. ಸರಕಾರ ರಚಿಸಲು ಬಹುಮತದ ಕೊರತೆ. ಮೊದಲು ಇದ್ದುದರಲ್ಲಿಯೇ ದೊಡ್ಡ ಪಕ್ಷ ಬಿಜೆಪಿ ಸರಕಾರ ರಚಿಸಲಾರದೆ ಪಕ್ಕಕ್ಕೆೆ ಸರಿದುದೇ ಉಭಯ ರಾಜ್ಯಗಳಲ್ಲಿ ಕಂಡು ಬರುವ ಸಾಮ್ಯತೆಗಳಲ್ಲೊಂದು. ಎರಡೂ ಕಡೆ ಅಧಿಕಾರ ಹಿಡಿಯಲು ಪಕ್ಷಗಳು ತಮ್ಮ ಸೈದ್ಧಾಾಂತಿಕತೆಯನ್ನು ಬದಿಗೊತ್ತಲು ಮುಂದಾದವು. ಮಹಾರಾಷ್ಟ್ರದಲ್ಲಂತೂ ಶಿವಸೇನೆ ವರಿಷ್ಠ ಉದ್ಧವ್ ಠಾಕ್ರೆೆ ಅಧಿಕಾರಕ್ಕಾಾಗಿ ಮೂರು ದಶಕಗಳ ಮೈತ್ರಿಿ ಮುರಿದು ಹೊಸ ಮೈತ್ರಿಿಗೆ ಮುಂದಾದರು. ಈ ಭರಾಟೆಯಲ್ಲಿ ತಮ್ಮ ಹಿಂದುತ್ವದ ಅಜೆಂಡಾವನ್ನೇ ಕೈಬಿಡುವಷ್ಟರ ಮಟ್ಟಿಿಗೆ ಬಂದರು. ಎನ್‌ಸಿಪಿಯೊಂದಿಗೆ ಕೈಗೂಡುವ ಸಲುವಾಗಿ ಎನ್‌ಡಿಎ ಮೈತ್ರಿಿಕೂಟದಿಂದ ಹೊರ ನಡೆದರು. ಪಕ್ಷದ ಸಂಸದ ಅರವಿಂದ ಸಾವಂತ್ ಮೋದಿ ಸಚಿವ ಸಂಪುಟದಿಂದ ಹೊರನಡೆದು ಇದ್ದ ಸ್ಥಾಾನಮಾನವನ್ನೂ ಕಳಕೊಂಡರು.

ಉಭಯ ರಾಜ್ಯಗಳ ಪ್ರಸ್ತುತ ಚುನಾವಣೋತ್ತರ ವಿದ್ಯಮಾನಗಳಲ್ಲಿ ಸಾಮ್ಯತೆ ಇರುವಂತೆ ಒಂದಿಷ್ಟು ಭಿನ್ನತೆಗಳೂ ಇವೆ. ರಾಜ್ಯದಲ್ಲೇನಿದ್ದರೂ ಮೂರು ಪಕ್ಷಗಳ ಸುತ್ತ ಸುತ್ತುವ ತ್ರಿಿಕೋನ ಕಥೆ. ಆದರೆ, ಮಹಾರಾಷ್ಟ್ರದಲ್ಲಿ ನಾಲ್ಕು ಪಕ್ಷಗಳ ನಡುವಣ ವಿಚಾರ. ಸರಕಾರ ರಚನೆಯ ಸರ್ಕಸನ್ನು ಕಗ್ಗಂಟಾಗಿಸಲು ಮೂರರೊಂದಿಗೆ ಮತ್ತೊೊಂದು ಕೈಯೂ ಸೇರಿದಂತಾಗಿದೆ. ಬಿಜೆಪಿಯೊಂದಿಗಿನ ಮೈತ್ರಿಿ ಮುರಿದುಕೊಂಡ ಶಿವಸೇನೆ ಎನ್‌ಸಿಪಿಯತ್ತ ಮುಖ ಮಾಡಿತು. ಅಲ್ಲೂ ಬೇಳೆ ಬೇಯಿಸಿಕೊಳ್ಳಲಾರದೆ ಹೋಯಿತು. ಕೊನೆಗೆ ಶಿವಸೇನೆ ಎನ್‌ಸಿಪಿ ಮತ್ತು ಕಾಂಗ್ರೆೆಸ್ ಮೂರೂ ಸೇರಿ ಸರಕಾರ ರಚಿಸುವ ಪ್ರಯತ್ನ ನಡೆಯಿತು. ಮಹಾಮೈತ್ರಿಿ ಸರಕಾರವೊಂದು ಅಸ್ತಿಿತ್ವಕ್ಕೆೆ ಬರುವ ಹಂತಕ್ಕೆೆ ಬಂತು. ಎಲ್ಲವೂ ಅಂದುಕೊಂಡಂತೆ ಆಗಿದ್ದಲ್ಲಿ ನವೆಂಬರ್ 22ರಂದು ಶಿವಸೇನೆಯ ಉದ್ಧವ್ ಠಾಕ್ರೆೆ ಮುಖ್ಯಮಂತ್ರಿಿಯಾಗಿ ಪ್ರಮಾಣವಚನ ಸ್ವೀಕರಿಸಬೇಕಿತ್ತು. ಅದಕ್ಕೆೆ ಅಧಿಕೃತ ಘೋಷಣೆಯೊಂದೇ ಉಳಿದಿತ್ತು.

ಅಲ್ಲಾದುದೇ ಬೇರೆ. ರಾತ್ರಿಿ ಬೆಳಗಾಗುವುದರೊಳಗೆ ಕ್ಷಿಪ್ರ ಬದಲಾವಣೆಯೊಂದು ನಡೆದಿತ್ತು. ಬಿಜೆಪಿ-ಎನ್‌ಸಿಪಿ ಅಜಿತ್ ಪವಾರ್ ಅವರೊಂದಿಗೆ ಕೈಜೋಡಿ ಸರಕಾರ ರಚಿಸಿತ್ತು. ನವೆಂಬರ್ 22ರ ಮುಂಜಾವ 5.47 ಕ್ಕೆೆ ರಾಷ್ಟ್ರಪತಿ ಆಳ್ವಿಿಕೆ ಹಿಂಪಡೆಯಲಾಗಿ 8.05 ಕ್ಕೆೆ ಮುಖ್ಯಮಂತ್ರಿಿಯಾಗಿ ದೇವೇಂದ್ರ ಫಡ್ನವೀಸ್ ಹಾಗೂ ಉಪಮುಖ್ಯಮಂತ್ರಿಿಯಾಗಿ ಅಜಿತ್ ಪವಾರ್ ಪ್ರಮಾಣ ವಚನ ಸ್ವೀಕಾರವೂ ನಡೆದು ಹೋಗಿತ್ತು. ಅಜಿತ್ ಪವಾರ್‌ಗೆ ಅಧಿಕಾರ ಬೇಕಿತ್ತು. ಬಿಜೆಪಿಗೆ ಸರಕಾರ ರಚನೆಗೆ ಬೆಂಬಲ ಬೇಕಿತ್ತು. ರೋಗಿ ಬಯಸಿದ್ದೂ ಹಾಲನ್ನ. ವೈದ್ಯ ಕೊಟ್ಟದ್ದೂ ಹಾಲನ್ನ. ಆದರೆ,

ಉಳಿದ ಪಕ್ಷದವರು ಎಂದಿನಂತೆ ಪ್ರಜಾಪ್ರಭುತ್ವದ ಕಗ್ಗೊೊಲೆ ಆಯಿತೆಂದು ಕೂಗಾಡಿದರು. ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಿಯಾಯಿತೆಂದು ರಾಜ್ಯಪಾಲರ ಕ್ರಮದ ವಿರುದ್ಧ ಸುಪ್ರೀಂ ಕೋರ್ಟಿನ ಮೆಟ್ಟಿಿಲೇರಿದರು. ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ನಡೆಯಿತು. ಅಜಿತ್ ಪವಾರ್ ಪರ ವಕೀಲ ಮಣಿಂದರ್ ಸಿಂಗ್ ರಾಜ್ಯಪಾಲರ ನಡೆಯನ್ನು ಸಮರ್ಥಿಸಿಕೊಂಡರು. ಮಹಾಮೈತ್ರಿಿಪರ ವಕೀಲ ಕಪಿಲ್ ಸಿಬಲ್ ರಾಜ್ಯಪಾಲರು ವಿವೇಚನಾಧಿಕಾರ ಮೀರಿದ್ದಾರೆ ಎಂದರು. ವಿಚಾರಣೆ ಮುಗಿದು ಬಹುಮತ ಸಾಬೀತುಪಡಿಸುವಂತೆ ಕೋರ್ಟ್ ತೀರ್ಪು ಹೊರಬಿತ್ತು. ಫಡ್ನವೀಸ್ ಸರಕಾರ ಪ್ರಮಾಣ ವಚನ ಸ್ವೀಕರಿಸಿದ ನಾಲ್ಕೇ ದಿನಗಳಲ್ಲಿ ಬಹುಮತ ಸಾಬೀತಿಗೆ ಮುನ್ನವೇ ಪತನಗೊಂಡಿತು. ಒಂದರ್ಥದಲ್ಲಿ ಅತಿ ದೊಡ್ಡ ಹಿನ್ನಡೆ ಅನುಭವಿಸಿತು. ಉದ್ದವ್ ಠಾಕ್ರೆೆಗೆ ಮುಖ್ಯಮಂತ್ರಿಿಯಾಗುವ ಅವಕಾಶ ಬಂದೊದಗಿತು.

ಚುನಾವಣೆ ಮುಗಿದು ತಿಂಗಳು ಉರುಳಿದರೂ ಮಹಾರಾಷ್ಟ್ರದಲ್ಲಿ ಇನ್ನೂ ಅಸ್ಥಿಿರತೆ ಕೊನೆಗೊಂಡಿಲ್ಲ. ಅತೃಪ್ತಿಿ ಅಧಿಕಾರ ದಾಹಗಳು ಯಾವ ಮುಲಾಮಿಗೂ ವಾಸಿಯಾಗದ ಅರ್ಬುದ ರೋಗ. ಅದು ಮುಂದೆಯೂ ಕಾಡದಿರುವ ಭರವಸೆಯಿಲ್ಲ. ಪರಿಣಾಮವಾಗಿ ಸರಕಾರ ರಚನೆಯ ಪ್ರಹಸನ ದಿನಕ್ಕೊೊಂದು ದಿಕ್ಕು ಬದಲಾವಣೆ ಕಂಡು ಬೃಹನ್ನಾಾಟಕವಾಗಿ ರೂಪುಗೊಳ್ಳುತ್ತಾಾ ಸಾಗಿದರೂ ಅಚ್ಚರಿಯಿಲ್ಲ. ಇದೀಗ ಸರಕಾರ ರಚನೆಯ ಸರದಿ ಎನ್‌ಸಿಪಿ, ಶಿವಸೇನೆ, ಕಾಂಗ್ರೆೆಸ್ ಮಹಾಮೈತ್ರಿಿಕೂಟದ್ದು. ಮೈತ್ರಿಿ ಸರಕಾರ ರಚನೆಗೆ ಕರ್ನಾಟಕ ಪ್ರೆೆರಣೆ ಇದ್ದಿರಬಹುದು. ಆದರೆ ಪತನಕ್ಕೂ ಅದು ಪ್ರೇರಣೆಯಾಗದಿದ್ದರೆ ಸಾಕು.
ಅಂತೂ ಸರಕಾರ ರಚನೆ ಈಗೀಗ ಮುಗಿಯದ ಕಥೆ. 2018ರಲ್ಲಿ ಕರ್ನಾಟಕದಲ್ಲಿ 2019ರಲ್ಲಿ ಮಹಾರಾಷ್ಟ್ರದಲ್ಲಿ. ಕರ್ನಾಟಕದಲ್ಲಿ ಸದ್ಯದಲ್ಲೆ 15 ವಿಧಾನಸಭಾ ಸ್ಥಾಾನಗಳಿಗೆ ಉಪಚುನಾವಣೆ ನಡೆಯಲಿದ್ದು ಸರಕಾರದ ಅಳಿವು ಉಳಿವು ಅದರ ಫಲಿತಾಂಶವನ್ನು ಅವಲಂಬಿಸಿದೆ. ಮಹಾರಾಷ್ಟ್ರದಲ್ಲಿನ ವಿದ್ಯಮಾನ ಸದ್ಯ ನೂತನ ಮಹಾಮೈತ್ರಿಿ ರಚನೆ ಹಂತಕ್ಕೆೆ ಬಂದು ನಿಂತಿದೆ. ಯಾವ ಕ್ಷಣದಲ್ಲಿ ಯಾವ ಬದಲಾವಣೆಯಾಗುವುದು ಹೇಳಲಾಗದು. ಪತ್ರಿಿಕೆಗಳಲ್ಲಿ ದೂರದರ್ಶನದಲ್ಲಿ ಇಂದು ಅಂತ ಕಾರ್ಯಕ್ರಮದ ಪಟ್ಟಿಿ ಕೊಟ್ಟು ಕೊನೆಯಲ್ಲಿ ಕೊನೆ ಕ್ಷಣದ ಬದಲಾವಣೆಗಳನ್ನು ಹೊರತುಪಡಿಸಿ ಅನ್ನುವ ಸಾಲನ್ನು ಸೇರಿಸುವುದಿತ್ತು. ಈಗ ಇಲ್ಲೂ ಸೇರಿಸಲೇ-ಕೊನೆ ಕ್ಷಣದ ಬದಲಾವಣೆಗಳನ್ನು ಹೊರತುಪಡಿಸಿ..

Source Credit Vishwavani.news

Niranthara News

Leave a Reply

Your email address will not be published. Required fields are marked *

Next Post

ರಾಜ್ಯಪಾಲ ವಜುಭಾಯಿ ವಾಲಾ ಆಸ್ಪತ್ರೆಗೆ ದಾಖಲು

Wed Nov 27 , 2019
Source Credit Oneindia.com Pin it Email https://nirantharanews.com/%e0%b2%95%e0%b3%8a%e0%b2%a8%e0%b3%86-%e0%b2%95%e0%b3%8d%e0%b2%b7%e0%b2%a3%e0%b2%a6-%e0%b2%ac%e0%b2%a6%e0%b2%b2%e0%b2%be%e0%b2%b5%e0%b2%a3%e0%b3%86%e0%b2%97%e0%b2%b3%e0%b2%a8%e0%b3%8d%e0%b2%a8%e0%b3%81/#Wg== Karnataka oi-Gururaj S | Updated: Wednesday, November 27, 2019, 12:39 [IST] ಬೆಂಗಳೂರು, ನವೆಂಬರ್ 27 : ಕರ್ನಾಟಕದ ರಾಜ್ಯಪಾಲ ವಜುಭಾಯಿ ವಾಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಆಸ್ಪತ್ರೆಗೆ ಭೇಟಿ ನೀಡಿದ್ದು, ಆರೋಗ್ಯ ವಿಚಾರಿಸಿದರು. 80 ವರ್ಷದ ವಜುಭಾಯಿ ವಾಲಾ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿದೆ. ಯಡಿಯೂರಪ್ಪ ಬುಧವಾರ ಆಸ್ಪತ್ರೆಗೆ ಭೇಟಿ ನೀಡಿದರು. ರಾಜ್ಯಪಾಲರು ದಾಖಲಾಗಿರುವ ಹಿನ್ನಲೆಯಲ್ಲಿ ಆಸ್ಪತ್ರೆ ಸುತ್ತಮುತ್ತ […]

Now Available on

Play Store

Niranthara News is ready to serve you with all the updates happening around in all regions. Stay tuned with niranthara news and get all the news in one touch.

Quick Links